‘ಮೌನ ಆಲಾಪನ’ ಕೃತಿ ಪರಿಚಯ

ಓದಿ ಮುಗಿಸಿದ ಮೇಲೆ ಮನಸ್ಸು ಮೌನವಾಗುತ್ತೆ. ಮೋಹನ್ ಮಂದಾಕಿನಿ ಮನಸ್ಸಿನಲ್ಲಿ ಉಳಿದು ಬಿಡುತ್ತಾರೆ. ಸಾಯಿಸುತೆ ಅವರ ‘ಮೌನ ಆಲಾಪನ’ ಕೃತಿಯ ಕುರಿತು ಅರ್ಚನಾ ರವಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕಾದಂಬರಿ : ಮೌನ ಆಲಾಪನ
ಲೇಖಕರು : ಸಾಯಿಸುತೆ

ಹಳ್ಳಿಯಿಂದ ಬಂದ ಮುಗ್ಧ ಮಂದಾಕಿನಿ ಮಂಗಳೂರು ಎಂಬ ನಗರ ಸೇರಿದ ಮೇಲೆಯೂ ಅವಳ ಮುಗ್ಧತೆ ಮರೆಯಾಗಲಿಲ್ಲ. ಪೇಟೆಯ ಸೊಬಗಿಗೆ ಸೆರೆಯಾಗಲಿಲ್ಲ, ಆದರೆ ಪ್ರೌಢತೆ ಒಂದು ಮನಸಲ್ಲಿ ಹುಟ್ಟಿದೆ ಎಂಬ ಭಾವ ಅವಳ ಮಾತುಗಳಲ್ಲಿ ಕಾಡುವುದು ನಿಜ.

ಚಿದಾನಂದ ಮೂರ್ತಿಗಳ ಜೊತೆ ಮಂಗಳೂರು ಎಂಬ ಮಹಾನಗರ ಕಾಲಿಡುವ ಮಂದಾಕಿನಿ ಮೊದಲು ಕಾಣುವ ಕನಸಿನ ಸೊಬಗು ಹರೆಯದ ಪ್ರತಿಯೊಂದು ಹೆಣ್ಣು ಕಾಣುವ ಕನಸು.
ಮತ್ತೊಬ್ಬ ಹೆಣ್ಣನ್ನು ನೋಡಿ ಇರಬಹುದು. ಇಷ್ಟು ಸ್ವತಂತ್ರ ನಮಗೆ ಸಿಗಲು ಸಾಧ್ಯವಾ ಎಂದು.ಆ ಸ್ವತಂತ್ರ ಬಯಸಿದ್ದು ಓದಿಗೆ ಎನ್ನುವುದು ನಿಜ. ಅವಳ ಓದಿಗೆ ಎಲ್ಲೂ ಸಹಾಯ ಸಿಕ್ಕದೆ ಹೋದಾಗ. ಹಳೆ ಶಿಷ್ಯನ ನೆನಪಾಗಿ ಚಿದಾನಂದ ಮೂರ್ತಿಗಳು ಮೋಹನ್ ಎಂಟರ್ಪ್ರೈಸಸ್ ಮಾಲೀಕ. ಮೋಹನ್ ಮನೆಗೆ ಬಂದಿದ್ದು. ಮೋಹನ್ ನಾನು ಭಾವನೆಗಳೇ ಇಲ್ಲದ ಮನುಷ್ಯ ಎಂದು ತಿಳಿದುಕೊಂಡಿದ್ದ. ಅವನು ಒಬ್ಬ ಪರ್ಫೆಕ್ಟ್ ಜೆಂಟಲ್ ಮ್ಯಾನ್. ಹೀಗೆ ಅನಿಸುತ್ತೆ ಓದಿ ಮುಗಿಸಿದ ಮೇಲೆ.

ಅವರು ಬಂದ ಉದ್ದೇಶ ಬೇರೆಯಾದರೂ. ಮಂದಾಕಿನಿಗೆ ಸಹಾಯ ಮಾಡಲು ಒಪ್ಪಿಕೊಂಡಿದ್ದು ಒಂದು ಅನಿವಾರ್ಯ ಕಾರಣಕ್ಕೆ.. ಸಂಬಂಧಗಳಿಂದ ನೋವೇ ಪಡೆದಿರುವ ಅವನು ಸಂಬಂಧಗಳನ್ನು ಬೆಸೆಯಲು ಹೆದರುತ್ತಾನೆ. ಪ್ರೀತಿ ಪ್ರೇಮ ಹೆಣ್ಣಿನ ಬಗ್ಗೆ ಅವನೇದೇ ಆದ ಧೋರಣೆಗಳಿದೆ. ಆದರೂ ಮಂದಾಕಿನಿಗೆ ಸಹಾಯ ಮಾಡುತ್ತಾನೆ. ಚಿದಾನಂದ ಮೂರ್ತಿಗಳು, ಅಚ್ಚಮ ಒಮ್ಮೆ ಮಂದಾಕಿನಿ ವಿಷಯದಲ್ಲಿ ಓದುಗರ ಕಣ್ಣಿಗೆ ಮೇಲು ಮಟ್ಟಕ್ಕೆ ಕಂಡರು. ಮತ್ತೊಮ್ಮೆ ದೊಡ್ಡ ಸ್ವಾರ್ಥಿಗಳು ಅನಿಸುತ್ತಾರೆ. ರುಕ್ಮಿಣಿ ಸ್ವಾರ್ಥಿ ಹೆಣ್ಣೆಂಬ ಭಾವನೆ ಕಾಡುತ್ತೆ.
ಶಂಕರ್ ಒಳ್ಳೆ ವ್ಯಕ್ತಿ ಮಂದಾಕಿನಿಯನ್ನು ಅರ್ಥ ಮಾಡಿಕೊಂಡ. ನಳಿನಿ ಒಳ್ಳೆ ಸ್ನೇಹಿತೆಯಾಗಿದ್ದಳು ಮಂದಾಕಿನಿಗೆ.

ಪರಂಧಾಮಯ್ಯ ಖಳನಾಯಕ ಆ ಪಾತ್ರ ಬಂದಾಗೆಲ್ಲ ಹೇಸಿಗೆ ಹುಟ್ಟಿಸುತ್ತೆ. ಮಗಳ ವಯಸ್ಸಿನ ಹೆಣ್ಣಿನ ಮೇಲೆ ಅದೆಂತ ಮೋಹ…? ಶ್ರೀಕಾಂತ್ ತಮ್ಮನ ಬಗ್ಗೆ ಪ್ರೀತಿ ಅದೆಷ್ಟು ಚಂದ ಆದರೆ ಎಲ್ಲಿವರೆಗೆ…? ಜಾಗೀರ್ದಾರ್ ಶ್ಯಾಮಲಾ ಬರುವವರೆಗೆ. ಆಮೇಲೆ ಸಂಪೂರ್ಣ ಮರೆತೇಬಿಟ್ಟ ಮೋಹನ್ ಸಂಪೂರ್ಣ ಅನಾಥನಾಗಿದ್ದ ಅಂದು ಮದುವೆ, ಹೆಣ್ಣು ಎಂದರೆ ಅವನ ಮನಸ್ಸು ಕಠೋರ ಆಗುವಷ್ಟು. ಅವನ ಹುಟ್ಟಿದ ಹಬ್ಬಕ್ಕೆ ರಾಧಾ ಯಿಂದ ಬರುವ ಪತ್ರ ಅವನಲ್ಲಿ ಹೊಸ ಭಾವನೆಗಳು ಹುಟ್ಟು ಹಾಕುತ್ತದೆ ನಿಜ. ಯಾರು ಇರಬಹುದು ಈ ರಾಧೆ ಯಾರು ಎಂಬ ಕುತೂಹಲ ನಮ್ಮಲ್ಲೂ ಹುಟ್ಟು ಹಾಕುತ್ತದೆ. ಕೊನೆಯ ಪುಟದ ಅಂತ್ಯ ಮನಸ್ಸು ಅಚ್ಚಾಗಿ ಉಳಿಯುತ್ತದೆ.

ಕಲ್ಲು ಮನಸನ್ನು ಕರಗಿಸಿ ಮೋಹನ್ ಮನಸ್ಸಿನಲ್ಲಿ ಪ್ರೀತಿ ಹುಟ್ಟಿಸಿದ್ದು ರಾಧೆಯೋ…? ಮಂದಾಕಿನಿಯೋ..? ಸಾಯಿಸುತೆಯವರ ಕಾದಂಬರಿಗೆ ವಿಮರ್ಶೆ ಮಾಡಲು ಸಾಧ್ಯವೇ ಇಲ್ಲ ವಿಮರ್ಶೆಗೂ ಮೀರಿದ ಭಾವನೆಗಳು ಇರುತ್ತದೆ. ಮೌನ ಆಲಾಪನ ನಮ್ಮಲ್ಲಿ ಯಾವುದೋ ಹೊಸ ಭಾವ ಹುಟ್ಟು ಹಾಕುತ್ತದೆ ಅರ್ಥವಾಗುವುದಿಲ್ಲ. ಮುಗಿದೆ ಹೋಯಿತು ಎಂಬ ಭಾವ ಕಾಡುತ್ತದೆ ಇನ್ನೇನೋ ಬೇಕು ಎಂಬ ಯೋಚನೆ ಹೇಳಲಾಗದು ವಿವರಿಸಲಾಗದು.

ಒಂದು ಅದ್ಭುತ ಕಾದಂಬರಿ..


  • ಅರ್ಚನಾ ರವಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading