ಸುಧಾ ಮೂರ್ತಿಯವರ ಮದುವೆಗೆ ಎಂಟುನೂರು ರೂಪಾಯಿ ಖರ್ಚು !ನನ್ನ ಮದುವೆಗೆ ಮುನ್ನೂರಾ ಐವತ್ತು ರೂಪಾಯಿ ಖರ್ಚು !

ಜೀವನ ಎಂಬುದು ತುಂಬ ಕೌತುಕದ್ದು. ಕೈಗೆ ಸಿಕ್ಕದ್ದು ಮರಕ್ಷಣವೇ ಕೈಯಿಂದ ಜಾರಿರುತ್ತದೆ. ನಮಗೇ ಗೊತ್ತೇ ಇರುವುದಿಲ್ಲ. ನಾವು ನಿರೀಕ್ಷೆ ಮಾಡದೇ ಇದ್ದದ್ದು ನಮ್ಮ ಅಂಗೈಯಲ್ಲಿರುತ್ತದೆ. ತಿಪ್ಪೆ ಹೋಗಿ ಉಪ್ಪರಿಗೆ, ಉಪ್ಪರಿಗೆ ಹೋಗಿ ತಿಪ್ಪೆ ಆಗುತ್ತದೆ ಅನ್ನುತ್ತಾರಲ್ಲ ಹಾಗೆ. ಕಾ ನೋಡುತ್ತಿದ್ದಂತೆ. ಕೋಗಿಲೆಯಾಗುತ್ತದೆ. ಕೋಗಿಲೆ ಕಾಗೆಯಾಗಿಬಿಡುತ್ತದೆ. ಗೆಜೀವನವೇ ಒಂದು ಆಕಸ್ಮಿಕಗಳ ಸರ ಮಾಲೆ.

ನಾನು ಮತ್ತು ನನ್ನ ಶ್ರೀಮತಿ ಮದುವೆಯಾದ ನಲವತ್ಮೂರು ವರ್ಷಗಳ ನಂತರ ಹುಟ್ಟೂರಿನ ಸೀಮೆಗೆ ಹೋಗಿದ್ದೆವು. ಇತ್ತೀಚೆಗೆ ಸವದತ್ತಿ, ಯಲ್ಲಮ್ಮನ ಗುಡ್ಡ, ಮುನವಳ್ಳಿ, ನವಿಲುತೀರ್ಥ, ಎಕ್ಕೇರಿ ಕರಿಯಮ್ಮ,, ಸೊಗಲದ ಸೋಮೇಶ್ವರ ಗುಡ್ಡ,.ಹೂಲಿಕಟ್ಟಿ, ಶಿರಸಂಗಿ, ರಾಮದುರ್ಗ, ಸುನ್ನಾಳ ಹನುಮಪ್ಪ, ಗೊಡಚಿ ವೀಭದ್ರೇಶ್ವರ ಹೀಗೆ ತಿರುಗಾಡಿ ಬಂದೆವು.

ಅದಕ್ಕೆ ಕಾರಣ ನಾವಿಬ್ಬರೂ ಜೀವನದ ಬುತ್ತಿ ಕಟ್ಟಿಕೊಂಡದ್ದೇ ಈ ಸೀಮೆಯಲ್ಲಿ. ನಾವಿಬ್ಬರೂ ಹುಟ್ಟಿದ್ದು ಈ ತಾಲೂಕಿನ ಹೂಲಿ ಗ್ರಾಮದಲ್ಲಿ. ಇಬ್ಬರ ಬಾಲ್ಯ, ಓಡಾಟ, ಆಡಾಟ ಪರಸ್ಪರ ನೋಡಾಟ ಕಳೆದದ್ದು ಇಲ್ಲಿಯೇ.

ಇಬ್ಬರೂ ಅಕ್ಷರಾಭ್ಯಾಸ ಆರಂಭ ಮಾಡಿದ್ದೂ ಇದೇ ಊರಲ್ಲಿ. ಇಲ್ಲಿಯೇ ಇಬ್ಬರೂ ಏಳನೇ ತರಗತಿಯವರೆಗೆ ಓದಿದೆವು. ಅಲ್ಲದೇನೋ ಅನ್ನುತ್ತಾರಲ್ಲ. ಪೂರ್ವ ಜನ್ಮದ ಋಣಾನುಬಂಧ ಅಂತ. ಅದು ಇತ್ತು ಅನಿಸುತ್ತದೆ. ಎರಡೂ ಕಡೆಯ ಹಿರಿಯರು ಕೂತು ಮಾತಾಡದೆಯೇ ನಮ್ಮ ಮದುವೆ ಗೊತ್ತಾಯಿತು. ಅದೂ ಊರಿನ ಮತ್ತು ಸೀಮೆಯ ಪ್ರಸಿದ್ಧ ಸಾಂಭಯ್ಯನವರ ಮಠದ ಅಜ್ಜನವರಾದ ಒಂದು ನೂರಾ ಎಂಟು ವರುಷ ಬದುಕಿ ಇತ್ತೀಚೆಗಷ್ಟೇ ಕಣ್ಮರೆಯಾದ ಲೀಲಾ ಮೂರ್ತಿ ಹೂಲಿ ಅಜ್ಜನವರು ನಮ್ಮ ಮದುವೆಗೆ ಮುನ್ನುಡಿ ಬರೆದರು.

ಈ ಹೂಲಿ ಅಜ್ಜನವರು.ಅನೇಕ ಪವಾಡಗಳನ್ನು ಮಾಡಿದ್ದಾರೆ. ಬಾಲಲೀಲಾ ಮೂರ್ತಿಗಳೆಂದೇ ಅವರಿಗೆ ಹೆಸರು. ಊರಿನ ಮತ್ತು ಸೀಮೆಯ ಜನ ಈ ಮಠಕ್ಕೆ ಇಂದಿಗೂ ಭಕ್ತಿ ಭಾವದಿಂದ ನಡೆದುಕೊಳ್ಳುತ್ತಾರೆ. ಶ್ರೀ ಅಜ್ಜನವರು ತಮ್ಮ ಬದುಕಿನಲ್ಲಿ ಅನೇಕ ಪವಾಡಗಳನ್ನು ಮಾಡಿದ್ದಾರೆ. ಅವು ಲೋಕ ಪ್ರಸಿದ್ಧವೂ ಆಗಿವೆ. ಅದೇ ಕಾರಣಕ್ಕೆ ಹೂಲಿ ಅಜ್ಜನ ಮಠಕ್ಕೆ ಬೆಳಗಾವಿ, ಧಾರವಾಡ, ಬಾಗಲಕೋಟೆ ಹೀಗೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಸಾಕಷ್ಟು ಭಕ್ತರಿದ್ದಾರೆ. ಆದರೆ ನನ್ನ ವಯಕ್ತಿಕ ಜೀವನದಲ್ಲಿ ಈ ಶತಾಯುಷಿ ಅಜ್ಜನವರು ದೊಡ್ಡ ಪವಾಡವನ್ನೇ ಮಾಡಿದ್ದಾರೆ. ಊರಿನ ಉತ್ತರ ದಿಕ್ಕಿನಲ್ಲಿರುವ ಗುಡ್ಡದ ಬಳಿ ಇರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ನೀನು ಮದುವೆ ಆಗಬೇಕು ಎಂದು ಅಪ್ಪಣೆ ಕೊಡಿಸಿದವರೂ ಅಜ್ಜನವರೇ.

ಬನಶಂಕರಿ ದೇವಸ್ಥಾನ ಯಾವಾಗ ನಿರ್ಮಾಣವಾಯಿತೆಂದು ನಿಖರವಿಲ್ಲ. ಆದರೆ ಎಂಟು ನೂರು ವರ್ಷಗಳಾದರೂ ಆಗಿರಬಹುದು. ಈ ದೇವಸೇಥಾನದ ನಿರ್ವಹಣೆಗಾಗಿ ಹಿಂದಿನ ರಾಜರು ಕೊಟ್ಟ ದತ್ತಿ ಭೂಮಿಗಳಿವೆ. ಅವುಗಳಿಗೆ ಮಾನೇದ ಹೊಲಗಳೆಂದು ಹೆಸರು. ಆಗಿನಿಂದ ದೇವಸ್ಥಾನದ ಪೂಜಾ ಕೈಂಕರ್ಯ ವಹಿಸಿಕೊಂಡ ವಿಶ್ವಕರ್ಮ ಮನೆತನದವರು ಈಗಲೂ ನಿತ್ಯ ಪೂಜೆ ಮಾಡುತ್ತಿದ್ದಾರೆ. ದೇವಸ್ಥಾನದ ಮುಂದೆ ದೊಡ್ಡದಾದ ಅರಳೀ ಮರವೊಂದಿದೆ. ಅದಕ್ಕೆ ಐನೂರು ವರ್ಷಗಳಾದರೂ ಆಗಿರಬಹುದೆಂದು ಊರ ಹಿರಿಯರು ಹೇಳುತ್ತಾರೆ. ಈ ದೊಡ್ಡ ಮರದಲ್ಲಿ ಹಿಂಡು ಹಿಂಡಾಗಿ ಬಂದು ಕೂಡುವ ಗುಳಿಗಳನ್ನು ನೋಡುವುದೇ ಚೆಂದ.

ಈ ದೇವಸ್ಥಾನದ ಹೊರ ಪೌಳಿಯಲ್ಲಿ ಗರ್ಭಗುಡಿಯಲ್ಲಿದ್ದ ಬನಶಂಕರಿ ದೇವಿಗೆ ಎದುರಾಗಿ, ಅಂದರೆ ದೇವಿಯ ಸಮಕ್ಷಮ ನಮ್ಮ ಮದುವೆ ಕಾರ್ಯಕ್ರಮಗಳು ನಡೆದವು. ಸುರಿಗೆ ನೀರು, ಬಾಸಿಂಗ ಕಟ್ಟಿಕೊಂದ್ದು, ಮಾಂಗಲ್ಯಧಾರಣ ಮತ್ತು ಅಕ್ಷತಾರೋಪಣ ಮಂಗಲ ಕಾರ್ಯಗಳು ನಡೆದದ್ದು

#ನನಪನಸರಳ

5 1 vote
Article Rating

Leave a Reply

1 Comment
Inline Feedbacks
View all comments
Devarajachar

ದಂಪತಿಗಳಿಬ್ಬರೂ ಆರೋಗ್ಯವಂತರಾಗಿರಲಿ

Home
News
Search
All Articles
Videos
About
1
0
Would love your thoughts, please comment.x
()
x
%d bloggers like this:
Aakruti Kannada

FREE
VIEW