ಬೆಂಗಳೂರಿನಲ್ಲಿ ನಮ್ಮದೇ ಸ್ವಂತ ನೆಲೆ ಕಾಣುವುದು ಅಷ್ಟು ಸುಲಭವಲ್ಲ. ಕಂಡರೂ ನಮ್ಮದೇ ಕೈತೋಟ ಮಾಡುವುದು ಕಷ್ಟ. ಆದರೆ ಕವಿಯತ್ರಿ ವಾಣಿ ಜೋಶಿಯವರು ತಮ್ಮ ಅಪಾರ್ಟ್ಮೆಂಟ್ ನಲ್ಲಿ ಹೂ ಕುಂಡದಲ್ಲಿ ಸೂರ್ಯಕಾಂತಿ ಬೆಳೆದು ಅದರ ಮೇಲೆ ಒಂದು ಸುಂದರ ಕವನವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರ ಹುಮ್ಮಸ್ಸನ್ನು ಮೆಚ್ಚಲೇಬೇಕು.ಓದಿ, ಲೈಕ್ ಮಾಡಿ, ಶೇರ್ ಮಾಡಿ…
ಸೂಯ೯ಕಾಂತಿಯು ಬಣ್ಣಿಸಲು ನಾ…
ಇಂದು ಅದರಲ್ಲೇ ತನ್ಮಯಳಾದೆ ನಾ…।
ಶರತ್ಕಾಲದ(ಋತು) ಸೌಂದಯ೯ ದಲ್ಲಿ…
ಅದ್ಭುತ ಹಳದಿ,ಕಿತ್ತಳೆ ಬಣ್ಣದ ಸೃಷ್ಟಿಯಲ್ಲಿ…
ಮೊಗ್ಗರಳಿ ಹೂ ಬಿರಿದಾಗ…
ವೀಕ್ಷಿಸಲು ನನ್ನಲ್ಲಿ ಉದಯಿಸಿದ ಭಾವವೇ ವಿಸ್ಮಯ…
“ರವಿ”ಯ ವೈಭವಕ್ಕೆ…ಮನಸೋತು
ಸಿಹಿಮುತ್ತನಿಟ್ಟ “ಕಾಂತಿ”ಗೆ…
ನಗು ಮುಖದೊಂದಿಗೆ…
ಚಿನ್ನದ ಕಿರೀಟ ತೊಟ್ಟು…
“ಸೂಯ೯”ನನ್ನೇ ಹಿಂಬಾಲಿಸುವ… ಕಾಂತಿ
“ಸೂಯ೯ಕಾಂತಿ”…
ನಮ್ಮ ಕೈತೋಟದಲ್ಲಿ ಅರಳಿಸುವ ಆಸೆ ಹೊತ್ತು…
ಕಂಗಳ ತುಂಬಿಸಿದ ಕಾಂತಿಯೊಂದಿಗೆ…
ನಾ ಕಳೆಯುವೆ ಈ
ಸು ಸಮಯ….
- ವಾಣಿ ಜೋಶಿ