ಬಾಹ್ಯಾಕಾಶದಲ್ಲಿ ಇತಿಹಾಸ ಬರೆದ ಸುನೀತಾ ವಿಲಿಯಮ್ಸ್

ವಿಲಿಯಮ್ಸ್ ಮತ್ತು ವಿಲ್ಮೋರ್ ತಮ್ಮ ಕಾರ್ಯಾಚರಣೆಯ ಸಮಯದಲ್ಲಿ 121,347,491 ಮೈಲುಗಳಷ್ಟು ಪ್ರಯಾಣಿಸಿದ್ದಾರೆ. ಬಾಹ್ಯಾಕಾಶದಲ್ಲಿ 286 ದಿನಗಳನ್ನು ಕಳೆದ ಇವರು, ಭೂಮಿಯ ಸುತ್ತ 4,576 ಕಕ್ಷೆಗಳನ್ನು ಪೂರ್ಣಗೊಳಿಸಿದರು ಎಂದು ನಾಸಾ ಹೇಳಿದೆ. ವಿಲಿಯಮ್ಸ್ ತನ್ನ ಮೂರು ಹಾರಾಟಗಳಲ್ಲಿ 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ ಮತ್ತು ವಿಲ್ಮೋರ್ ತನ್ನ ಮೂರು ಹಾರಾಟಗಳಲ್ಲಿ 464 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ವಿಲಿಯಮ್ಸ್ ಮತ್ತು ವಿಲ್ಮೋರ್ ಅವರ ಕುರಿತು ಇನ್ನಷ್ಟು ರೋಚಕ ವಿಷಯವನ್ನು ಡಾ.ಗುರುಪ್ರಸಾದ ರಾವ್ ಹವಲ್ದಾರ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಬರೋಬ್ಬರಿ 9 ತಿಂಗಳ ಬಳಿಕ  NASA ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್​ ಮತ್ತೊಬ್ಬ ಖಗೋಳ ವಿಜ್ಞಾನಿ ಬುಚ್‌ ವಿಲ್ಮೋರ್  ವಾಪಸ್ ಆಗುತ್ತಿರೋದಕ್ಕೆ ಜಗತ್ತೇ ಸಂಭ್ರಮಿಸಿದೆ.

ಕಳೆದ ವರ್ಷ 2024ರ ಜೂನ್ 5 ರಂದು ಬೋಯಿಂಗ್ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ನಾಸಾ ವಿಜ್ಞಾನಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ರವರು 8 ದಿನಗಳ ಕಾರ್ಯಾಚರಣೆಗಾಗಿ ತೆರಳಿದ್ದ, ಅವರು ಆ ಬಳಿಕ  ಈ ತಂಡ ಎಲ್ಲವೂ ಸರಿಯಾಗಿದ್ದರೆ ಜೂನ್‌ 14ರಂದು ಭೂಮಿಗೆ ಮರಳಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳಿಂದ ಇಬ್ಬರು ಗಗನಯಾತ್ರಿಗಳನ್ನು ಬಾಹ್ಯಾಕಾಶದಲ್ಲೇ ಬಿಟ್ಟು ಸ್ಟಾರ್‌ಲೈನರ್‌ ಭೂಮಿಗೆ ಮರಳಿತ್ತು. ಐಎಸ್‌ಎಸ್‌ ತಲುಪಿದ ಕೆಲವೇ ಸಮಯದಲ್ಲಿ ಸ್ಟಾರ್‌ಲೈನರ್‌ನಲ್ಲಿ ಹೀಲಿಯಂ ಸೋರಿಕೆ ಹಾಗೂ ರಿಯಾಕ್ಷನ್ ಕಂಟ್ರೋಲ್ ಥ್ರಸ್ಟರ್‌ಗಳಲ್ಲಿನ ಸಮಸ್ಯೆಗಳು ಸೇರಿದಂತೆ ಅನೇಕ ತಾಂತ್ರಿಕ ಸಮಸ್ಯೆಗಳನ್ನು ಎಂಜಿನಿಯರ್‌ಗಳು ಪತ್ತೆ ಮಾಡಿದ್ದರು.

ಈ ಅನಿರೀಕ್ಷಿತ ಸನ್ನಿವೇಶ ನಾಸಾಕ್ಕೆ ಇಕ್ಕಟ್ಟು ಉಂಟುಮಾಡಿತ್ತು. ಕೆಲವೇ ದಿನಗಳ ಮಟ್ಟಿಗಾಗಿ ಈ ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರೂ, ಅವರ ಸುರಕ್ಷಿತ ವಾಪಸಾತಿ ನಾಸಾಕ್ಕೆ ತಲೆನೋವು ಉಂಟುಮಾಡಿತ್ತು. ಸ್ಟಾರ್‌ಲೈನರ್‌ನಲ್ಲಿಯೇ ಅವರು ಭೂಮಿಗೆ ವಾಪಸಾಗುವುದು ಸುರಕ್ಷಿತವಲ್ಲ ಎಂಬ ಆತಂಕ ಉಂಟಾಗಿತ್ತು.

ಇದಾದ ಬಳಿಕ ಗಗನಯಾತ್ರಿಗಳನ್ನು ಭೂಮಿಗೆ ಕರೆತರುವ ಪ್ರಯತ್ನ ಹಲವು ಬಾರಿ ನಡೆದಿದ್ದವು. ಆದರೆ, ಅದು ವಿಫಲವಾಗಿತ್ತು. ಹೀಗಾಗಿ ಕಳೆದ 9 ತಿಂಗಳಿಂದ ಅಲ್ಲಿಯೇ ಸಿಲುಕಿ ಒದ್ದಾಡಿದ್ದರು. ನಾಸಾ ಮತ್ತು ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಜಂಟಿ ಕಾರ್ಯಾಚರಣೆಯು ಗಗನಯಾತ್ರಿಗಳನ್ನು ಯಶಸ್ವಿಯಾಗಿ ಭೂಮಿಗೆ ಕರೆ ತರುವ ನಿರೀಕ್ಷೆ ಸಫಲವಾಯಿತು.

9 ಮಾಸಗಳ ಬಾಹ್ಯಾಕಾಶ ವಾಸ

ನಾಸಾ ಹಾಗೂ ಮತ್ತು ದೈತ್ಯ ವಿಮಾನ ತಯಾರಿಕ ಸಂಸ್ಥೆಯಾದ ಬೋಯಿಂಗ್‌ ಜಂಟಿ ಸಹಯೋಗದೊಂದಿಗೆ ಈ ಬಾಹ್ಯಾಕಾಶ ಯೋಜನೆ ಮಾಡಲಾಯ್ತು, ಜನರನ್ನು ಭೂಮಿಯಿಂದ ಬಾಹ್ಯಕಾಶ್ಯಕ್ಕೆ ಕೊಂಡೊಯ್ಯುವ ಟ್ರಿಪ್‌ಗೆ ಮಾಡಿದ ಟ್ರಯಲ್ ಆಗಿತ್ತು, ತುಂಬಾ ಜನರಿಗೆ ಬಾಹ್ಯಾಕಾಶಕ್ಕೆ ಹೋಗಬೇಕೆಂಬ ಆಸೆಯನ್ನು ಈಡೇರಿಸಲು ಸಲುವಾಗಿ ನಾಸಾ ಹಾಗೂ ಬೋಯಿಂಗ್‌ ಸಂಸ್ಥೆ ಮೊದಲಿಗೆ ಗಗನ ಯಾತ್ರಿಗಳನ್ನು ಕಳುಹಿಸಿದೆ, ಅವರು ಈ ರೀತಿ ಹೋಗಿ ಬಂದು ಅವರ ಅನುಭವ ಹೇಳಿದ ಮೇಲೆ ಜನರನ್ನು ಕರೆದುಕೊಂಡು ಹೋಗುವ ಉದ್ದೇಶ ಇದಾಗಿತ್ತು,

ಸುನಿತಾ ವಿಲಿಯಮ್ಸ್ ಮತ್ತೊಬ್ಬ ಖಗೋಳ ವಿಜ್ಞಾನಿ ಬುಚ್‌ ವಿಲ್ಮೋರ್ ಜೊತೆಗೆ ಜೂನ್‌ 5ಕ್ಕೆ ಅಂತರರಾಷ್ಟ್ರೀಯ ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ್ದರು. ಅವರು ಸ್ವಲ್ಪ ಇದ್ದು ಈ ಭೂಮಿಗೆ ಮರಳಬೇಕಾಗಿತ್ತು, ಆದರೆ ದುರಾದೃಷ್ಟವಶಾತ್  ಮರಳಲಿಲ್ಲ. 8 ದಿನಗಳ ಕಾರ್ಯಾಚರಣೆಗಾಗಿ ತೆರಳಿದ್ದ ಅವರು ತಾಂತ್ರಿಕ ಸಮಸ್ಯೆಗಳಿಂದ ಬರೋಬ್ಬರಿ 9 ತಿಂಗಳು ಬಾಹ್ಯಾಕಾಶದಲ್ಲಿ ಕಳೆಯುವಂತಾಯಿತು. ಇದರಿಂದಾಗಿ  ಹೋದಂತಹ ಗಗನ ಯಾತ್ರಿಗಳು ತಾಂತ್ರಿಕ ಕಾರಣದಿಂದಾಗಿ 9 ತಿಂಗಳು ವಾಸಿಸುವ ಸಂದರ್ಭ ಒದಗಿದರಿಂದ ಮಹತ್ವಾಕಾಂಕ್ಷೆಯ ಯೋಜನೆಗೆ ವಿಫಲವಾಯಿತು.

ಸ್ಟಾರ್‌ಲೈನರ್ ಕ್ಯಾಪ್ಸುಲ್ ಪ್ರೊಪಲ್ಷನ್ ಸಮಸ್ಯೆಗಳನ್ನು ಅನುಭವಿಸಿದ ನಂತರ ಅವರು ಅಲ್ಲೆ ಸಿಕ್ಕಿಹಾಕಿಕೊಂಡರು. ಹಾರಲು ಅನರ್ಹವೆಂದು ಪರಿಗಣಿಸಲ್ಪಟ್ಟ ಸೆಪ್ಟೆಂಬರ್‌ನಲ್ಲಿ ಸಿಬ್ಬಂದಿ ಇಲ್ಲದೆ ಬಾಹ್ಯಾಕಾಶ ನೌಕೆ ಹಿಂತಿರುಗಿತು.

45ದಿನಕ್ಕೆ ಮಾತ್ರ ಆಗುವ ಇಂಧನ ಹೊತ್ತೊಯ್ದ ಯಂತ್ರದ ಇಂಧನ 45 ದಿನಗಳವರೆಗೆ ಮಾತ್ರ ಬರುತ್ತದೆ, ಆದರೆ ತಾಂತ್ರಿಕ ದೋಷ ಸರಿಪಡಿಸದೆ ಹೋದರೆ ಇಂಧನ ಖಾಲಿಯಾಗುವುದು. ಇಂಧನ ಖಾಲಿಯಾದರೆ ಮತ್ತೆ ಭೂಮಿಗೆ ಬರಲು ಸಾಧ್ಯವಾಗುವುದಿಲ್ಲ. ಹಿಂದಿರುಗುವ ಪ್ರಯಾಣದ ಬಗ್ಗೆ ಅನಿಶ್ಚಿತತೆಯ ನಡುವೆ, ನಾಸಾ ಸ್ಪೇಸ್‌ಎಕ್ಸ್‌ನ ಕ್ರೂ-9 ಕಾರ್ಯಾಚರಣೆಗೆ ಮರು ನಿಯೋಜಿಸಿತು. ಸಿಕ್ಕಿಬಿದ್ದ ಗಗನಯಾತ್ರಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಸೆಪ್ಟೆಂಬರ್‌ನಲ್ಲಿ ಸಾಮಾನ್ಯ ನಾಲ್ವರು ಸದಸ್ಯರ ಬದಲಿಗೆ ಇಬ್ಬರು ಸದಸ್ಯರ ಸಿಬ್ಬಂದಿಯೊಂದಿಗೆ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಕಳುಹಿಸಲಾಗಿತ್ತು.

ಸಾಕಷ್ಟು ವಿಳಂಬದ ಬಳಿಕ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭಾನುವಾರ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕಿಂಗ್ ಮಾಡಿದೆ. ಅನ್‌ಡಾಕಿಂಗ್ ಪೂರ್ಣಗೊಂಡಿದ್ದು ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್, ವಿಲ್ಮೋರ್, ನಿಕ್ ಹೇಗ್ ಮತ್ತು ರೋಸ್ಕೋಸ್ಮೋಸ್ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಅವರನ್ನು ಹೊತ್ತ ಬಾಹ್ಯಾಕಾಶ ನೌಕೆ ಭೂಮಿಯತ್ತ ಆಗಮಿಸಿದೆ.ಅಂಟಿನ ಉಂಡೆಯ ಆಕಾರದ ಈ ನೌಕೆಯು ಶನಿವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 9.30ರ ಸುಮಾರಿಗೆ ನ್ಯೂ ಮೆಕ್ಸಿಕೋದ ವೈಟ್ ಸ್ಯಾಂಡ್ಸ್ ಸ್ಪೇಸ್ ಹಾರ್ಬರ್‌ಗೆ ಸುಗಮವಾಗಿ ಬಂದು ಇಳಿದಿದೆ. ಐಎಸ್‌ಎಸ್‌ನಿಂದ ಆರು ಗಂಟೆಗಳ ಮುಂಚೆ ಹೊರಟ ನೌಕೆಯು ಪ್ಯಾರಾಚೂಟ್‌ಗಳು ಮತ್ತು ಏರ್‌ಬ್ಯಾಗ್‌ಗಳ ಕುಷನ್ ನೆರವಿನಿಂದ ನಿಧಾನವಾಗಿ ಭೂಸ್ಪರ್ಶ ಮಾಡಿತು ಅಂದಹಾಗೆ ಸುನಿತಾ ವಿಲಿಯಮ್ಸ್ ಅವರು ಭೂಮಿಗೆ ಬರುತ್ತಿದ್ದಂತೆ ನಾಸಾ ಸಂಸ್ಥೆ ವಿಜ್ಞಾನಿ ಬಳಗ ಜಗತ್ತಿನಾದ್ಯಂತ ಕೋಟ್ಯಾಂತರ ಜನ ಸಂಭ್ರಮಿಸಿದರು.

ಗಗನಯಾತ್ರಿಗಳ ಆಹಾರ

ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಏನು ಸೇವಿಸುತ್ತಾರೆ ಎನ್ನುವ ಕುತೂಹಲ ಇದ್ದೇ ಇರುತ್ತದೆ. ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿರುವ ಪ್ರಕಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ನಲ್ಲಿರುವ ನಾಸಾ ಗಗನಯಾತ್ರಿಗಳು ಪಿಜ್ಜಾ, ಹುರಿದ ಕೋಳಿಮಾಂಸ, ಸೀಗಡಿ ಕಾಕ್ಟೈಲ್‌ಗಳು ಮತ್ತು ಟುನಾ ಮೀನುಗಳ ಮಿಶ್ರಣವನ್ನು ತಿನ್ನುವ ಮೂಲಕ ಕಾಲ ಕಳೆದಿದ್ದಾರೆ.

ಗಗನಯಾತ್ರಿಗಳು ಹಾಲಿನ ಪುಡಿ, ಧಾನ್ಯಗಳು, ಬೇಯಿಸಿದ ಮಾಂಸ ಮತ್ತು ಮೊಟ್ಟೆಗಳು ಸೇರಿದಂತೆ ವಿವಿಧ ರೀತಿಯ ಸಂರಕ್ಷಿತ ಆಹಾರವನ್ನು ಹೊತ್ತೊಯ್ದಿದ್ದರು. ಆರಂಭದಲ್ಲಿ ಹಣ್ಣುಗಳು ಲಭ್ಯವಿದ್ದರೂ ಮೂರು ತಿಂಗಳಿನಲ್ಲಿ ಅವು ಖಾಲಿಯಾಗಿದ್ದವು, ಬಳಿಕ ಪ್ಯಾಕ್ ಮಾಡಿದ ಆಹಾರಗಳನ್ನು ತಿನ್ನಬೇಕಾಯಿತು. ಗಗನಯಾತ್ರಿಗಳು ಬಾಹ್ಯಾಕಾಶ ಕೇಂದ್ರದಲ್ಲಿ ಆಹಾರ ಸೇವಿಸುತ್ತಿರುವ ಚಿತ್ರಗಳನ್ನು ನಾಸಾ ಹಂಚಿಕೊಂಡಿತ್ತು.

ಆರೋಗ್ಯದ ಮೇಲೆ ಪರಿಣಾಮ

ಬಾಹ್ಯಾಕಾಶದಲ್ಲಿ ತಂಗುವುದು ಸುಲಭವಾದ ಕೆಲಸವಲ್ಲ, ಅದು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮಾನಸಿಕ ಸ್ಥೈರ್ಯ ಹೆಚ್ಚಿನದಾಗಿ ಇರಬೇಕಾಗುತ್ತದೆ. ಹೆಚ್ಚಿನ ದಿನ ಬಾಹ್ಯಾಕಾಶದಲ್ಲಿ ತಂಗುವುದರಿಂದ ಸ್ನಾಯು ಮತ್ತು ಮೂಳೆ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ. ಹೆಚ್ಚಿನ ದಿನ ಬಾಹ್ಯಾಕಾಶದಲ್ಲಿ ತಂಗಿದರೆ ಮಾನಸಿಕ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ

ಹಾಗೇ ಇನ್ನೂ ಹಲವು ದಿನಗಳ ಕಾಲ ಸುನಿತಾ ವಿಲಿಯಮ್ಸ್ ಅವರು ಕ್ವಾರಂಟೈನ್‌ಗೆ ಒಳಪಡಲಿದ್ದು, ಆ ನಂತರ ಅವರು ಮುಕ್ತವಾಗಿ ಹೊರಗೆ ಓಡಾಡಲಿದ್ದಾರೆ. ಹಲವು ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಇದ್ದ ಕಾರಣಕ್ಕೆ ಅವರಿಗೆ ಚಿಕಿತ್ಸೆ ಅಗತ್ಯತೆ ಇದ್ದು, ಇದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗಿದೆ.

ಗುರುತ್ವಾಕರ್ಷಣೆ ಪ್ರಭಾವ ಇಲ್ಲದ ಕಾರಣ ದೇಹದಲ್ಲಿ ಕೆಲ ಬದಲಾವಣೆ ಆಗುತ್ತದೆ. ದೇಹ ಭಾರವಿಲ್ಲ ಎನ್ನುವಂತೆ ಅವರಿಗೆ ಅನಿಸುತ್ತದೆ. ಜೊತೆಗೆ ಅವರ ದೇಹದ ಚರ್ಮ ಮೊದಲಿನಂತೆ ಇರುವುದಿಲ್ಲ ಸ್ನಾಯು, ಮೂಳೆಗಳ ಸಾಂದ್ರತೆ ಶೇ.30 ಕ್ಷೀಣಿಸುತ್ತದೆ. ಮೂಳೆಗಳು ಬಲ ಮತ್ತು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ. ಈ ಕಾರಣಗಳಿಂದ ಗಗನಯಾನಿಗಳಿಗೆ ಮೂಳೆ ಮುರಿತದ ಸಮಸ್ಯೆ ಎದುರಿಸುತ್ತಾರೆ.

ಗಗನಯಾತ್ರಿಗಳ ದೇಹದ ಮೇಲೆ ಭೂಮಿಯ ಗುರುತ್ವಾಕರ್ಷಣೆಯ ಕೊರತೆಯಿಂದ ಮೂಳೆಯ ಸಾಂದ್ರತೆ ಮತ್ತು ಸ್ನಾಯು ಕ್ಷೀಣತೆ ಅನುಭವಿಸುತ್ತಾರೆ. ಶೂನ್ಯ ಗುರುತ್ವಾಕರ್ಷಣೆ ಮತ್ತು ಹೆಚ್ಚಿನ ವಿಕಿರಣದಲ್ಲಿ ದೀರ್ಘಕಾಲ ಬಾಹ್ಯಾಕಾಶದಲ್ಲಿ ಕಾಲ ಕಳೆದಿದ್ದರಿಂದ ಮೂಳೆಗಳ ದೌರ್ಬಲ್ಯ, ದೃಷ್ಟಿಯ ಮೇಲೆ ಪರಿಣಾಮ ಉಂಟಾಗಬಹುದು. ವಿಕಿರಣವು ಕ್ಯಾನ್ಸರ್ ಮತ್ತು ನರಮಂಡಲದ ಸಮಸ್ಯೆಗಳನ್ನು ಉಂಟುಮಾಡಬಹುದು. ಅಲ್ಲದೆ ರೋಗನಿರೋಧಕ ಶಕ್ತಿ ಕಡಿಮೆಯಾಗಬಹುದು.

ಭೂಮಿಗೆ ವಾಪಸ್ ಆದ ತಕ್ಷಣ ಗಗನಯಾನಿಗಳಿಗೆ ನಡೆದಾಡಲು ಆಗುವುದಿಲ್ಲ. ಕೆಲವು ಕಾಲ ನಿಂತುಕೊಳ್ಳಲೂ ಸಮಸ್ಯೆ ಆಗಲಿದೆ. ಅಧಿಕ ರೇಡಿಯೇಷನ್ ಕಾರಣ ಕ್ಯಾನ್ಸರ್ ಭೀತಿ, ಡಿಎನ್‌ಎಗೆ ಹಾನಿಯಯಾಗುವ ಸಾಧ್ಯತೆಯಿದೆ. ಒಂಟಿತನ, ಮಾನಸಿಕ ಒತ್ತಡ, ನಿದ್ರಾಹೀನತೆ, ದೃಷ್ಟಿ ಕೇಂದ್ರೀಕರಿಸಲು ಸಮಸ್ಯೆ ಅನುಭವಿಸುತ್ತಾರೆ. ಈ ಎಲ್ಲವುಗಳಿಂದ ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯುತ್ತದೆ.

ವಿಲಿಯಮ್ಸ್ ಮತ್ತು ವಿಲ್ಮೋರ್ ತಮ್ಮ ಕಾರ್ಯಾಚರಣೆಯ ಸಮಯದಲ್ಲಿ 121,347,491 ಮೈಲುಗಳಷ್ಟು ಪ್ರಯಾಣಿಸಿದ್ದಾರೆ. ಬಾಹ್ಯಾಕಾಶದಲ್ಲಿ 286 ದಿನಗಳನ್ನು ಕಳೆದ ಇರವು ಭೂಮಿಯ ಸುತ್ತ 4,576 ಕಕ್ಷೆಗಳನ್ನು ಪೂರ್ಣಗೊಳಿಸಿದರು ಎಂದು ನಾಸಾ ಹೇಳಿದೆ. ವಿಲಿಯಮ್ಸ್ ತನ್ನ ಮೂರು ಹಾರಾಟಗಳಲ್ಲಿ 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ ಮತ್ತು ವಿಲ್ಮೋರ್ ತನ್ನ ಮೂರು ಹಾರಾಟಗಳಲ್ಲಿ 464 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ.

ಭಾರತೀಯ ಮೂಲದ ಹೆಮ್ಮೆಯ ಸುನೀತಾ  ಭಾರತೀಯ ಮತ್ತು ಸ್ಲೋವೆನಿಯನ್ ಮೂಲದವರಾದ ಸುನೀತಾ ವಿಲಿಯಮ್ಸ್ ರವರು ಸೆಪ್ಟೆಂಬರ್ 19, 1965ರಂದು ಅಮೆರಿಕಾದ ಯೂಕ್ಲಿಡ್, ಓಹಿಯೋದಲ್ಲಿ ಭಾರತೀಯ ಅಮೆರಿಕನ್ ನರರೋಗಶಾಸ್ತ್ರಜ್ಞ ದೀಪಕ್ ಪಾಂಡ್ಯಾ ಹಾಗೂ ಸ್ಲಾವೀನ್ ಅಮೆರಿಕನ್ ನರ್ಸ್ ಆಗಿದ್ದ ಉರ್ಸುಲಿನ್ ಬಾನೀ ಪಾಂಡ್ಯಾ ಅವರ ಮಗಳಾಗಿ ಜನಿಸಿದರು. ತನ್ನ ತಂದೆ ತಾಯಿಯ ಮೂವರು ಮಕ್ಕಳಲ್ಲಿ ಕಿರಿಯವರಾದ ಸುನೀತಾ ವಿಲಿಯಮ್ಸ್ , ಮಸಾಚುಸೆಟ್ಸ್ ನಲ್ಲಿ ಬೆಳೆದರು. ಸುನೀತಾ ವಿಲಿಯಮ್ಸ್ ಅವರು ಮೈಕೇಲ್ ಜೆ ವಿಲಿಯಮ್ಸ್ ಎಂಬ ಫೆಡರಲ್ ಪೊಲೀಸ್ ಅಧಿಕಾರಿಯನ್ನು ವಿವಾಹವಾಗಿದ್ದಾರೆ.

ಇವರ ಪೂರ್ವಜರು ಗುಜರಾತ್​ನ ಮೆಹಸಾನ ಜಿಲ್ಲೆಯ ಜುಲಸಾನಾ ಗ್ರಾಮದವರು. ಜುಲಸಾನಾ ಗ್ರಾಮದ ಜೊತೆ ಅವಿನಾಭಾವ ಸಂಬಂಧ ಇಟ್ಕೊಂಡಿದ್ದಾರೆ. ಈಗಾಗಲೇ 2 ಬಾರಿ ಸುನಿತಾ ಭೇಟಿ ಕೊಟ್ಟು ಹೋಗಿದ್ದಾರೆ.

ಅವರು 1983ರಲ್ಲಿ ನೀಧಮ್ ಹೈಸ್ಕೂಲ್‌ನಲ್ಲಿ ವ್ಯಾಸಂಗ ಪೂರ್ಣಗೊಳಿಸಿ, ಅನಾಪೊಲಿಸ್, ಮೇರಿಲ್ಯಾಂಡ್‌ನ ಯುಎಸ್ ನೇವಲ್ ಅಕಾಡೆಮಿಗೆ ಸೇರ್ಪಡೆಯಾದರು. ಅಲ್ಲಿ ಅವರು 1987ರಲ್ಲಿ ಭೌತಿಕ ವಿಜ್ಞಾನದಲ್ಲಿ ಪದವಿ ಪಡೆದರು. ಅವರು 1995ರಲ್ಲಿ ಫ್ಲೋರಿಡಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಅವರು 1989ರಲ್ಲಿ ನೌಕಾಪಡೆಯ ವಿಮಾನ ಚಾಲಕಿಯಾಗಿ ಸೇರ್ಪಡೆಗೊಂಡು, ವಿವಿಧ ಚಕಮಕಿ ಹಾಗೂ ಪರಿಹಾರ ಕಾರ್ಯಾಚರಣೆಗಳಲ್ಲಿ ಹೆಲಿಕಾಪ್ಟರ್‌ಗಳು, ವಿಮಾನಗಳನ್ನು ಚಲಾಯಿಸಿದರು. ಅವರು ಓರ್ವ ಟೆಸ್ಟ್ ಪೈಲಟ್ ಬೋಧಕಿಯಾಗಿ, 2,700 ಗಂಟೆಗಳಿಗೂ ಹೆಚ್ಚು ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ. ಅವರನ್ನು ನಾಸಾ 1998ರಲ್ಲಿ ಗಗನಯಾತ್ರೆಯ ಯೋಜನೆಗೆ ಆಯ್ಕೆ ಮಾಡಿತು. ಅವರಿಗೆ ರೋಬೋಟಿಕ್ಸ್ ಹಾಗೂ ಇತರ ಐಎಸ್ಎಸ್ ಚಟುವಟಿಕೆಗಳು, ತಂತ್ರಜ್ಞಾನಗಳ ಕುರಿತು ಮಾಸ್ಕೋದಲ್ಲಿ ರಷ್ಯಾದ ಮಾಸ್ಕೋದಲ್ಲಿ ಸರ್ಕಾರಿ ಸ್ವಾಮ್ಯದ ಬಾಹ್ಯಾಕಾಶ ಸಂಸ್ಥೆ ರಾಸ್‌ಕಾಸ್ಮೋಸ್ ಮೂಲಕ ತರಬೇತಿ ನೀಡಲಾಯಿತು.

ಸುನೀತಾ ವಿಲಿಯಮ್ಸ್ ಮೊತ್ತಮೊದಲ ಬಾರಿಗೆ ಡಿಸೆಂಬರ್ 9, 2006ರಂದು ಡಿಸ್ಕವರಿ ಸ್ಪೇಸ್ ಶಟಲ್ ಮೂಲಕ, ಎಸ್‌ಟಿಎಸ್-116 ಯೋಜನೆಯ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದರು. ಅವರು 14 ಹಾಗೂ 15 ಯೋಜನೆಗಳ ಅಂಗವಾಗಿ ಅಲ್ಲಿ ಉಳಿದುಕೊಂಡು, ನಾಲ್ಕು ಬಾಹ್ಯಾಕಾಶ ನಡಿಗೆಯನ್ನು ಪೂರೈಸಿದರು. ಅವರು ಬಾಹ್ಯಾಕಾಶ ನೌಕೆಯ ಹೊರಗಡೆ 29 ಗಂಟೆಗಳನ್ನು ಕಳೆದಿದ್ದರು. ಅವರು ಬಾಹ್ಯಾಕಾಶ ನಿಲ್ದಾಣದ ಟ್ರೆಡ್‌ಮಿಲ್‌ನಲ್ಲಿ ಬೋಸ್ಟನ್ ಮ್ಯಾರಥಾನ್ ಸಹ ಓಡಿದ್ದರು! ಅವರು ಅತ್ಯಧಿಕ ಬಾಹ್ಯಾಕಾಶ ನಡಿಗೆ ಪೂರೈಸಿದ ಮಹಿಳೆ (ಏಳು) ಹಾಗೂ ಅತಿಹೆಚ್ಚು ಸಮಯ ಬಾಹ್ಯಾಕಾಶ ನಡಿಗೆ ಕೈಗೊಂಡ ಮಹಿಳೆ (50 ಗಂಟೆ, 40 ನಿಮಿಷ) ಎಂಬ ಸಾಧನೆ ನಿರ್ಮಿಸಿದರು. ಅವರು ಜೂನ್ 22, 2007ರಂದು ಎಸ್‌ಟಿಎಸ್-117 ಸಿಬ್ಬಂದಿಯೊಡನೆ ಭೂಮಿಗೆ ಮರಳಿದರು.

ಸುನೀತಾ ವಿಲಿಯಮ್ಸ್ ಎರಡನೆಯ ಬಾರಿಗೆ ಜುಲೈ 15, 2012ರಂದು ಸೊಯುಜ್ ಟಿಎಂಎ-05ಎಂ ಬಾಹ್ಯಾಕಾಶ ನೌಕೆಯಲ್ಲಿ ಎಕ್ಸ್‌ಪೆಡಿಷನ್ 32ರ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದರು. ಅವರು ಸೆಪ್ಟೆಂಬರ್ 16, 2012ರಂದು ಎಕ್ಸ್‌ಪೆಡಿಷನ್ 33ರ ಕಮಾಂಡರ್ ಆಗಿ ನೇಮಕಗೊಂಡರು. ಅವರು ಈ ಅವಧಿಯಲ್ಲಿ ಮೂರು ಬಾಹ್ಯಾಕಾಶ ನಡಿಗೆಗಳನ್ನು ಕೈಗೊಂಡರು.ಬಾಹ್ಯಾಕಾಶಕ್ಕೆ ತೆರಳಿದ ಸಂದರ್ಭದಲ್ಲಿ ಎರಡೂ ರಾಷ್ಟ್ರಗಳ ರಾಷ್ಟ್ರಧ್ವಜ ಮತ್ತು ಆಹಾರಗಳನ್ನು ಬಾಹ್ಯಾಕಾಶಕ್ಕೆ ಒಯ್ದು, ತನ್ನ ವೈವಿಧ್ಯಮಯ ಹಿನ್ನೆಲೆಯನ್ನು ಸಾರಿದ್ದರು. ಅವರು ಬಾಹ್ಯಾಕಾಶ ನಿಲ್ದಾಣದ ಉಪಕರಣಗಳನ್ನು ಬಳಸಿ, ಲಂಡನ್ ಒಲಿಂಪಿಕ್ಸ್‌ನ ಓಟ, ಈಜು ಮತ್ತು ಸೈಕ್ಲಿಂಗ್‌ನ ಟ್ರಯಾಥ್ಲಾನ್ ಸ್ಪರ್ಧೆಯಲ್ಲಿ ಭಾಗವಹಿಸಿದರು. ಅವರು ಈ ಎರಡು ಯೋಜನೆಗಳಲ್ಲಿ ಒಟ್ಟಾರೆ 322 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದರು. ಅವರು ಬಾಹ್ಯಾಕಾಶದಲ್ಲಿ ಅತಿಹೆಚ್ಚು ಸಮಯ ಕಳೆದ ಆರನೇ ಅಮೆರಿಕನ್ ಎನಿಸಿಕೊಂಡು, ಮಹಿಳೆಯರ ಪೈಕಿ ಎರಡನೆಯವರೆನಿಸಿಕೊಂಡರು. ಅವರು ನವೆಂಬರ್ 19, 2012ರಂದು ಭೂಮಿಗೆ ಮರಳಿದ್ದರು.

ಭಾರತೀಯ ಮೂಲದವರಾದ ಸುನೀತಾ ವಿಲಿಯಮ್ಸ್ :

ಸುನೀತಾ ವಿಲಿಯಮ್ಸ್ ಹುಟ್ಟಿ ಬೆಳೆದಿದ್ದೆಲ್ಲಾ ಅಮೆರಿಕಾದಲ್ಲಿಯೇ, ಆದರೂ ಅವರು ಪಾಲಿಸುವುದು ಭಾರತದ ಸನಾತನ ಧರ್ಮವನ್ನ. ಇಂದಿಗೂ ಕೂಡ ಹಿಂದೂ ಧರ್ಮದ ಬಗ್ಗೆ ಅವರಿಗೆ ಅಪಾರ ನಂಬಿಕೆ ಹಾಗೂ ಗೌರವವಿರಿಸಿಕೊಂಡಿರುವ ಅವರು ಗಗನಯಾನಕ್ಕೆ ಹೋಗುವಾಗ ತಮ್ಮ ಜೊತೆ ಹಿಂದೂ ಧರ್ಮದ ಪವಿತ್ರ ಗ್ರಂಥವಾದ ಭಗವದ್ಗೀತೆ ಹಾಗೂ ಒಂದು ಗಣೇಶನ ಮೂರ್ತಿಯನ್ನು ಕೊಂಡೊಯ್ದಿದ್ದರಂತೆ. ಪ್ರತಿ ಬಾರಿ ಗಗನಯಾನ ಮಾಡುವ ವೇಳೆ ಸುನೀತಾ ವಿಲಿಯಮ್ಸ್ ಈ ಎರಡು ವಸ್ತುಗಳನ್ನು ತಪ್ಪದೇ ತಮ್ಮ ಜೊತೆ ತೆಗೆದುಕೊಂಡು ಹೋಗುತ್ತಾಈ ಹಿಂದೊಮ್ಮೆ ಬಾಹ್ಯಾಕಾಶಕ್ಕೆ ಹೋದಾಗ ಸುನೀತಾ ವಿಲಿಯಮ್ಸ್ ಭಾರತೀಯರ ನೆಚ್ಚಿನ ತಿಂಡಿಯಲ್ಲಿ ಒಂದಾದ ಸಮೋಸಾವನ್ನು ಕೊಂಡೊಯ್ದಿದ್ದರು.

ಬಾಹ್ಯಾಕಾಶ ಜಗತ್ತಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ, ಗಗನಯಾತ್ರಿಕರನ್ನು ತನ್ನೊಂದಿಗೆ ಕರೆದೊಯ್ದ ನೌಕೆಯೊಂದು ಖಾಲಿ ಭೂಮಿಗೆ ಮರಳಿದ ಇಂತಹ ಘಟನೆ ಹಿಂದೆಂದೂ ನಡೆಯದಿರಲಿಲ್ಲ. ಈ ರೀತಿಯ ಸವಾಲನ್ನು ನಾಸಾ ಕೂಡ ಈ ಹಿಂದೆ ಎದುರಿಸಿರಲಿಲ್ಲ. ಬಾಹ್ಯಾಕಾಶ ಅನ್ವೇಷಣೆಯಲ್ಲಿ ಮಹತ್ವದ ಸಂದರ್ಭಗಳಲ್ಲಿ,, ಹೊಸ ಬಾಹ್ಯಾಕಾಶ ನೌಕಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಾಗಿನ ಸವಾಲುಗಳನ್ನು, ನ್ಯೂನತೆಗಳನ್ನು ಈ ಪ್ರಕರಣ
ಎತ್ತಿ ತೋರಿಸಿದೆ.


  • ಡಾ.ಗುರುಪ್ರಸಾದ ರಾವ್ ಹವಲ್ದಾರ್ – ಲೇಖಕರು, ಪತ್ರಕರ್ತರು, ಉಪನ್ಯಾಸಕರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW