೧೬ ವರ್ಷವಿರುವಾಗ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುವ ಸುನೀತಾ ಕೃಷ್ಣನ್ ಅವರು ಆ ದುರ್ಘಟನೆಯಿಂದ ಧೈರ್ಯವಾಗಿ ಎದ್ದುನಿತ್ತು NGO ಒಂದನ್ನು ಸ್ಥಾಪಿಸಿ, ಕೆಂಪು ದೀಪದ ಕೆಳಗಿರುವ ೨೨,೦೦೦ ಕ್ಕೂ ಹೆಚ್ಚು ಮಹಿಳೆಯರನ್ನು ಸೌರಕ್ಷಿಸಿ,ಅವರಿಗೆ ಆಸರೆ ನೀಡುವುದಷ್ಟೇ ಅಲ್ಲ,ಉದ್ಯೋಗವನ್ನು ನೀಡಿ ಅವರ ಕಾಲಿನ ಮೇಲೆ ನಿಲ್ಲುವಂತೆ ಮಾಡಿದ್ದಾರೆ. ಅವರ ಸೇವೆ ಲಿಮ್ಕಾ ದಾಖಲೆಯೂ ಆಗಿದೆ. ಸುನೀತಾ ಕೃಷ್ಣನ್ ಬಗ್ಗೆ ಇನ್ನಷ್ಟು ವಿಷಯಗಳಿವೆ. ಮುಂದೆ ಓದಿ…
ಸುನೀತ ಕ್ರಿಷ್ಣನ್ ಅವರಿಗೆ ೨೦೧೬ ರಲ್ಲಿ ಭಾರತ ಸರ್ಕಾರ #ಪದ್ಮಶ್ರೀ_ಪ್ರಶಸ್ತಿ ಕೊಟ್ಟಾಗ ಬಹಳಷ್ಟು ಜನಕ್ಕೆ ಇವರ ಬಗ್ಗೆ ಗೊತ್ತಿರಲಿಲ್ಲ. ಆದರೆ ಅವರು ಮಾಡಿರುವ ಸಾಮಾಜಿಕ ಕಾರ್ಯಗಳು ತಿಳಿದರೆ ಮೂಕ ಮಿಸ್ಮಿತರನ್ನಾಗಿ ಮಾಡುತ್ತದೆ.
ಇವರು ೧೯೭೨ ರಲ್ಲಿ ಬೆಂಗಳೂರಿನಲ್ಲಿ ಜನಸಿದರು. ತಂದೆ ಶ್ರೀ ರಾಜು ಕ್ರಿಷ್ಣನ್ ಮತ್ತು ತಾಯಿ ಶ್ರೀಮತಿ ನಳಿನಿ ಕ್ರಿಷ್ಣನ್. ಎವರು ಮೂಲತಃ ಕೇರಳದವರು. ತಂದೆಯವರು ಸರ್ವೇಯರ್ ಆಗಿ ಕೆಲಸಮಾಡುತ್ತಿದ್ದರಿಂದ ಭಾರತದ ಎಲ್ಲ ಕಡೆ ವರ್ಗಾವಣೆ ಆಗುತ್ತಿತ್ತು. ಹಾಗಾಗಿ ಇವರು ಅವರ ಜೊತೆ ಎಲ್ಲ ಕಡೆ ಓಡಾಡಿದರು.
ಆಕೆ ಎಂಟು ವರ್ಷಗಳ ಹುಡುಗಿ ಆಗಿದ್ದಾಗ, #mentally_challenged ಮಕ್ಕಳಿಗೆ ಡ್ಯಾನ್ಸ್ ಹೇಳಿ ಕೊಡಲು ಪ್ರಾರಂಭ ಮಾಡಿದರು. ೧೨ ವರ್ಷದ ಹುಡುಗಿ ಆದಾಗ ಕೊಳೆಗೇರಿ ಮಕ್ಕಳಿಗೆ ಶಾಲೆಯೊಂದನ್ನು ಪ್ರಾರಂಭ ಮಾಡಿದರು. ಆಕೆಗೆ ೧೫ ವರ್ಷವಾದಾಗ ದಲಿತರ ಕೇರಿಯಲ್ಲಿ ವಯಸ್ಕರ ವಿದ್ಯಾಭ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿದರು. ಇವರ ಕಾರ್ಯಗಳನ್ನು ಇಷ್ಟ ಪಡದ ೮ ಜನ ಸೇರಿ ಇವರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದರು. ಅವರುಗಳು ಹೊಡೆದ ಹೊಡತಗಳಿಂದ ಒಂದು ಕಿವಿ ಈಗಲೂ ಸರಿಯಾಗಿ ಕೇಳುವುದಿಲ್ಲ. ಈ ಘಟನೆ ಅವರು ಈಗ ಮಾಡುತ್ತಿರುವ ಕೆಲಸಕ್ಕೆ ಪ್ರೇರಕವಾಯಿತು.
ಬೆಂಗಳೂರಿನ ಕೇಂದ್ರೀಯ ವಿದ್ಯಾಲಯಗಳಲ್ಲಿ ಓದಿದ ಇವರು ಬೆಂಗಳೂರಿನ St.Joseph’s College ನಲ್ಲಿ ಪದವಿ ಪಡೆದು, ಮಂಗಳೂರಿನ ರೋಶನಿ ನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ನಂತರ ಹೈದರಾಬಾದ್ ಗೆ ತೆರಳಿದರು. ಅಲ್ಲಿ Brother Jose Vetticatilರವರ ಪರಿಚಯ ಆಯಿತು. ಇವರು ಆಶಕ್ತರಿಗೆ ತರಬೇತಿ ಮತ್ತು ಪುನರ್ವಸತಿ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು. ೧೯೯೬ ರಲ್ಲಿ ಕೆಂಪು ದೀಪದ ಪ್ರದೇಶದಲ್ಲಿ ಕೆಲಸ ಮಾಡುವ ಮಹಿಳೆಯರು ಸಂಕಷ್ಟದಲ್ಲಿ ಇದ್ದಾಗ Jose ರವರ ಜೊತೆ ಸೇರಿ ಅಲ್ಲಿ ಒಂದು ಶಾಲೆ ಪ್ರಾರಂಭ ಮಾಡಿದರು. ಅದೇ “ಪ್ರಜ್ವಲ” ಶಾಲೆ. ಇದಕ್ಕೆ ಇವರ ಬಳಿ ಇದ್ದ ಆಭರಣ ಮತ್ತು ಪಾತ್ರೆಗಳನ್ನು ಕೂಡ ಮಾರಾಟ ಮಾಡಿದರು.
ಇಂದು #ಪ್ರಜ್ವಲ ದೊಡ್ಡ ಸಂಸ್ಥೆ ಆಗಿ ಬೆಳೆದಿದೆ. ಹೆಣ್ಣು ಮಕ್ಕಳ ಕಳ್ಳಸಾಗಾಣಿಕೆ ನಿಲ್ಲಿಸಲು ಪ್ರಯತ್ನ ಮಾಡುತ್ತಿದೆ. ಕಳ್ಳರ ಕೈಯಿಂದ ಬಿಡಿಸಿದವರಿಗೆ ಆಶ್ರಯ, ತರಬೇತಿ, ಪುನರ್ವಸತಿಗೆ ಪ್ರಯತ್ನ ಮಾಡುತ್ತಿದೆ. ಈವರೆಗೆ ೧೨೦೦೦ ಕ್ಕೂ ಹೆಚ್ಚು ಜನರಿಗೆ ಈ ಸಂಸ್ಥೆಯಿಂದ ಸಹಾಯ ಮಾಡಲಾಗಿದೆ. ಈಗಾಗಲೇ ತೊಂದರೆಗೆ ಒಳಗಾಗಿರುವ ಹೆಣ್ಣು ಮಕ್ಕಳ ಮುಂದಿನ ಜನಾಂಗದ ಮಕ್ಕಳು ಮತ್ತೆ ಆ ಜೀವನಕ್ಕೆ ಹೋಗದಂತೆ ತಡೆದು ಅವರಿಗೆ ವಿವಿಧ ರೀತಿಯ ಕೆಲಸಗಳನ್ನು ಮಾಡಲು ತರಬೇತಿ ನೀಡಲಾಗುತ್ತಿದೆ. ಶ್ರೀ ರಾಜೇಶ್ ರವರನ್ನು ವಿವಾಹ ಆಗಿರುವ ಇವರು ತಮ್ಮ ಸಮಯವನ್ನು ಸಂಪೂರ್ಣವಾಗಿ ಪ್ರಜ್ವಲ ಸಂಸ್ಥೆಗೆ ಮೀಸಲಾಗಿರಿಸಿದ್ದಾರೆ.
ಅವರು ಮಾಡುವ ಕೆಲಸ ಅವರಿಗೆ ಸಾಕಷ್ಟು ತೊಂದರೆ ತಂದು ಕೊಟ್ಟಿದೆ. ಇದುವರೆಗೆ ಅವರ ಮೇಲೆ ೧೪ ಬಾರಿ ಹಲ್ಲೆ ಮಾಡಿದ್ದಾರೆ. ಮೂರು ಬಾರಿ ಕೊಲೆ ಮಾಡಲು ಪ್ರಯತ್ನ ಮಾಡಲಾಗಿದೆ. ಇದರ ಬಗ್ಗೆ ಯೋಚನೆ ಮಾಡದೇ ತಮ್ಮ ಕೆಲಸ ಮುಂದುವರೆಸಿದ್ದಾರೆ.
ಕೌನ್ ಬನೇಗಾ ಕರೋಡ್ ಪತಿಯ ನಿರೂಪಕ ಅಮಿತಾಬ್ ಬಚ್ಚನ್ ಬಾಯಿಂದ ಸುನೀತಾ ಅವರ ಸಾಧನೆ ಕೇಳುವಾಗ ಕರ್ನಾಟಕದವರಾಗಿ ನಮಗೆ ಹೆಮ್ಮೆಯಾಗದೆ ಇರದು.
ಇವರು ಮಾಡುವ ಕೆಲಸಕ್ಕೆ ಅನೇಕ ಪ್ರಶಸ್ತಿಗಳು ಬಂದಿವೆ. ಅದರಲ್ಲಿ ಬಹು ಮುಖ್ಯವಾದ ಪ್ರಶಸ್ತಿ ಅಂದರೆ ೨೦೧೪ ರಲ್ಲಿ ಬಂದ Mother Teresa Award For Social Justice. ೨೦೧೬ ರಲ್ಲಿ ಬಂದ ಪದ್ಮಶ್ರೀ ಪ್ರಶಸ್ತಿ.
ಹೆಣ್ಣು ಮಕ್ಕಳ ಜೀವನದಲ್ಲಿ ಅವರು ತರಲು ಪಡುತ್ತಿರುವ ಪ್ರಯತ್ನ ಅತ್ಯಂತ ಶ್ಲಾಘನೀಯ.
- ಎನ್.ವಿ.ರಘುರಾಂ. (ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್ ), ಕ.ವಿ.ನಿ.ನಿ, ಬೆಂಗಳೂರು)
