ಕಲಿಕೆಯ ಜೊತೆಗೆ ಆಟಕ್ಕೆ ಪ್ರೋತ್ಸಾಹ ನೀಡಿದ ಶಿಕ್ಷಣ ಸಚಿವರು ಮಾನ್ಯ ಸುರೇಶ ಕುಮಾರ್ . ಮಕ್ಕಳು ಮತ್ತು ಪೋಷಕರು ಖುಷಿಯಾದ ಸಂದರ್ಭದ ಚಿತ್ರ…
ಶಿವರಾತ್ರಿ ಪ್ರಯುಕ್ತ ತಮ್ಮ ಸಭೆ, ಸಮಾರಂಭಗಳಿಗೆ ಬಿಡುವಾಗಿದ್ದರಿಂದ ಮಾನ್ಯ ಶಿಕ್ಷಣ ಸಚಿವರು ಸುರೇಶ ಕುಮಾರ್ ಎಸ್ ಅವರು ನೈಸ್ ರಸ್ತೆಯಲ್ಲಿ ವಾಕಿಂಗ್ ಹೊರಟಾಗ ಅಲ್ಲಿ ಸ್ಕೇಟಿಂಗ್ ಮಾಡುತ್ತಿದ್ದ ಮಕ್ಕಳನ್ನು ನೋಡಿ ಪ್ರೋತ್ಸಾಹಿಸಿದ್ದಷ್ಟೇ ಅಲ್ಲ, ಅಲ್ಲಿಯ ಅನಾನುಕೂಲತೆಯನ್ನು ಆಲಿಸಿ…ನಿರ್ಜನ ಪ್ರದೇಶದಲ್ಲಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುಲು ಸಂಬಂಧ ಪಟ್ಟಂತಹ ಸಿಬ್ಬಂದಿ ಹಾಗು ಅಧಿಕಾರಿಗಳಿಗೆ ಆದೇಶ ನೀಡಿದರು.ಓದಿನ ಜೊತೆಗೆ ಆಟಕ್ಕೆ ಪ್ರೋತ್ಸಾಹ ಸಿಕ್ಕ ಮಕ್ಕಳು ಮತ್ತು ಮಕ್ಕಳ ಪೋಷಕರು ಹಿರಿ ಹಿರಿ ಹಿಗ್ಗುತ್ತಾ ಸಂತೋಷಪಟ್ಟರು.
ಸಚಿವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿದ್ದಾರೆ.


”ಇಂದು ಮುಂಜಾನೆ ಶಿವರಾತ್ರಿ ಪ್ರಯುಕ್ತ ಒಂದು ದೀರ್ಘ ವಾಕಿಂಗ್ ಹೋಗೋಣವೆಂದು ನೈಸ್ ರೋಡ ಅಂಚಿಗೆ ಹೋದೆ. ಓರ್ವ ಗೆಳೆಯರೊಂದಿಗೆ ವಾಕ್ ಮತ್ತು ಟಾಕ್ ಎರಡು ಸೊಗಸಾಗಿ ನಡೆದವು. ಅಲ್ಲಿ ಹೆಮ್ಮಿಗೆಪುರದ ನಿರ್ಜನ ರಸ್ತೆಯಲ್ಲಿ ವಾಕ್ ಮಾಡುತ್ತಿದ್ದಾಗ ಈ ಪುಟ್ಟ ಮಕ್ಕಳು ಕಣ್ಣಿಗೆ ಬಿದ್ದರು. ಸ್ಕೇಟಿಂಗ್ ಮಾಡಲು ತಯಾರಾಗುತ್ತಿದ್ದ ವಿವಿಧ ವಯೋಮಾನ ಅವರ ಪೋಷಕರು. ಇಂದು ಸ್ಕೇಟಿಂಗ್ ಮಾಡಲು ಆಗುತ್ತಿದ್ದ ತೊಂದರೆಗಳನ್ನು ತಿಳಿಸಿದರು. ಇವೆಲ್ಲರಿಗೂ ಏಪ್ರಿಲ್ ನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ರೋಡ ಸ್ಕೇಟಿಂಗ್ ಸ್ಪರ್ಧೆಗೆ ತಯಾರಾಗುವವರು. ಸಂಬಂಧಪಟ್ಟವರೊಂಗಿದೆ ಮಾತನಾಡಿ ಈ ಮಕ್ಕಳಿಗೆ ನಿರ್ಜನ ಭಾಗದಲ್ಲಿ ಸೆಕೆಟಿಂಗ್ ಮಾಡಲು ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಿ ಎಂದು ತಿಳಿಸಿದೆ. ನಂತರ ಮಕ್ಕಳೆಲ್ಲರೂ ರಸ್ತೆಯ ಮೇಲಿನ ಹಕ್ಕಿಗಳ ರೀತಿಯಲ್ಲಿ ಹರ್ಷದಿಂದ ಉಲ್ಲಾಸದಿಂದ ಸ್ಕೇಟಿಂಗ್ ಮಾಡುತ್ತಿರುವ ದೃಶ್ಯವನ್ನು ಕಣ್ತುಂಬ ಕಂಡೆ.”- ಸುರೇಶ ಕುಮಾರ್ .ಎಸ್ (ಶಿಕ್ಷಣ ಸಚಿವರು)
