ಮುಂದಿನ ಅವತಾರ ಕಲ್ಕಿ ಎಂದು ಜನರಿಗೆಲ್ಲ ಚಿರಪರಿಚಿತವಾಗಿ ಅವರಿಗಾಗಿ ಎದುರು ನೋಡುತ್ತಿದ್ದಾರೆ. ಅಂದರೆ ಇಷ್ಟರಲ್ಲೇ ಮತ್ತೆ ವರಾಹ ಸ್ವಾಮಿಯೂ ಅವತರಿಸಿ ಬರಲಿ ಎಂದು ತವಕದಿಂದ ಕಾಯುತ್ತಿದ್ದಾರೆ – ಹರಿಹರ ಬಿ ಆರ್, ತಪ್ಪದೆ ಮುಂದೆ ಓದಿ…
ಭೂಲೋಕದಲ್ಲಿನ ಜನರೆಲ್ಲ ಅಲ್ಲಲ್ಲೇ ಗುಂಪು ಗುಂಪಾಗಿ ಜನ ಸೇರತೊಡಗಿದರು. ಅದಕ್ಕೂ ಮೊದಲು ಏನಾಯಿತೆಂದರೆ ಇನ್ಮೇನು ಮುಳುಗಬೇಕಾಗಿದ್ದ ಸೂರ್ಯ ಅಲ್ಲಿಯೇ ಮನುಜರ ಸಹವಾಸದಂತೆ ಮುಷ್ಕರ ಹೂಡುವಂತೆಯೋ ಅಥವಾ ಸೋಮಾರಿತನವೋ ಗೊತ್ತಿಲ್ಲ ನಿಂತಲ್ಲಿಯೇ ನಿಂತುಬಿಟ್ಟ. ಕಾಲು ಗಂಟೆಯ ನಂತರ ಸೂರ್ಯ ಇದ್ದಲ್ಲಿಯೇ ಇರುವುದು ಗಮನಕ್ಕೆ ಬಂದಿತು. ಅಂದರೆ ಜನರಿಗೆಲ್ಲ ವಾಸ್ತವದಲ್ಲಿ ಮುಷ್ಕರ ಹೂಡಿರುವ ಅಥವಾ ಸೋಮಾರಿಯಂತೆ ನಿಂತಿರುವ ಭುವಿಯ ಕಡೆ ಗಮನಿಸದೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾತನಾಡಲು ಪ್ರಾರಂಭಿಸಿದರು.
“ಹೇ ಸೂರ್ಯನೇ ನೀನಿಂದು ಪಶ್ಚಿಮದಲ್ಲಿ ಹುಟ್ಟುತ್ತಿರುವೆಯಾ? ಅಪಶಕುನ!! ಅಪಶಕುನ!! ಇಂದೇನೋ ಗಂಡಾಂತರ ಕಾದಿದೆ” ಎಂದು ಒಬ್ಬರು ಹೇಳಿದರು.
“ಪಂಚಾಂಗದ ಜ್ಯೋತಿಷ್ಯಗಳು/ಬರಹಗಳು ಸುಳ್ಳಾಗುತ್ತಿದೆಯಾ?”
“ನಾವುಗಳು ಮಾತಾಡುವಾಗ ಅನೇಕ ಜನರು ವ್ಯಂಗ್ಯವಾಗಿ ಕುಹಕವಾಗಿ ಮಾತನಾಡುತ್ತಿರುವರು. ಅಂತಹ ಜನರು ನಮಗೆ ವಿಶ್ವಾಸ ಪೂರ್ವಕವಾಗಿ ಬೇಕಾದ ಜನರುಗಳು. ಅದಕ್ಕಾಗಿಯೇ ನಾವು ಜನರನ್ನು ಬಿಟ್ಟುಕೊಡದೇ ಜನರು ಸರಿಯಿಲ್ಲವೆನ್ನುವುದಕ್ಕೆ ಬದಲಾಗಿ ಲೋಕವೇ ಕೆಟ್ಟು ಹೋಗಿದೆ ಎಂದು ಬೈದುಕೊಳ್ಳುತ್ತಿರುವುದು, ಇದು ಮುನಿಸ್ಸಿಗೆ ಕಾರಣವಾಗುತ್ತಿದೆಯೇ”
“ಸೂರ್ಯ ನಮಸ್ಕಾರ ಮಾಡುವುದು ಯಾವಾಗ? ಊಟ, ತಿಂಡಿಗಳ ಸಮಯವೇನು? ಇನ್ನು ಮೇಲೆ ಸೂರ್ಯ ಉದಯಾಸ್ತಗಳು ಇರುವುದಿಲ್ಲವೇ?”
ಬ್ರಾಹ್ಮಣರು “ಪೂಜೆ ಪುನಸ್ಕಾರಗಳು ಹೇಗೆ?”
ವೃಧ್ಧರು “ಬಿಸಿಲು ಕಾಯಿಸುವ ಅವಶ್ಯಕತೆಯೇ ಇಲ್ಲ. ಹೀಗೇ ಇದ್ದರೆ ಸೆಖೆಯಾಗುತ್ತಿರುತ್ತದೆ. ಮಳೆ ಚಳಿ ಇರುವುದಿಲ್ಲವೇ? ತಾಯಂದಿರು “ಎಳೆಯ ಮಕ್ಕಳು ಕಪ್ಪು ಕರಕಲಾಗುವರೇ” ಎಂದೆಲ್ಲ ನಾನಾ ವಿಧವಾಗಿ ಯೋಚಿಸುತ್ತಿದ್ದರು.
****
ಹೀಗೆಯೇ ಎರಡು ದಿನವಾಗಿರಲು, ಜನರೆಲ್ಲ ನಿದ್ದೆಯಿಲ್ಲದೆ ದೈನಂದಿನ ಕಾರ್ಯಗಳನ್ನು ಮರೆತು ಆಕಾಶ ನೋಡುವುದು ಮನಸ್ಸಿಗೆ ಬಂದಂತೆ ಮಾತನಾಡಿಕೊಳ್ಳುವುದು, ನಡೆಯುತ್ತಿತ್ತು. ಕೂಡಲೇ ಇದರ ಬಗ್ಗೆ ಯೋಚಿಸದಿದ್ದ ಮತ್ತು ಇದನ್ನೆಲ್ಲ ಕಂಡು ದೂರದರ್ಶನದ ವಾರ್ತೆಯ ಕಲಾಪಗಳು ಪ್ರಾರಂಭ “ಯಾರೂ ಕಂಡರಿಯದ ಅಚ್ಚರಿ ನಾವು ಪ್ರಸ್ತಾಪಿಸುತ್ತಿದ್ದೇವೆ”
“ನಮ್ಮ ತಂಡದಿಂದಲೇ ಸಕಲ ಮಾಹಿತಿ ಲಭ್ಯ. ಹೊಸ ತಾಜಾ ಸುದ್ಧಿಗಳಿಂದ ಬರುತ್ತಲೇ ಇರುತ್ತೇವೆ. ಇಲ್ಲಿಯೇ ಕಾದು ನೋಡುತ್ತಿರಿ.”
“ಇನ್ನು ಕೆಲವೇ ಸಮಯದಲ್ಲಿ ಭೂಮಿಯು ಸಮುದ್ರದಲ್ಲಿ ಮುಳುಗಲಿದೆ.” ಎಂಬ ಪುಕಾರು ಹುಟ್ಟಿಕೊಂಡಿತು.
ಇದನ್ನೇ ನಿಜವೆಂದು ನಂಬಿದ ಮಂದಿ ಸಾವು ಸನ್ನಿಹಿತವಾಗುತ್ತಿದೆಯೆಂದು ನಂಬಿ ಒಬ್ಬರಿಗೊಬ್ಬರು ಅನ್ಯೋನತೆಯಿಂದಿರಲು ಪ್ರಾರಂಭಿಸಿದರು. ಅನ್ನ ದಾನಾದಿಗಳನ್ನು ಮಾಡತೊಡಗಿದರು. ಕುಶಲತೆಗಳನ್ನು ಪರಸ್ಪರರು ವಿಚಾರಿಸಿಕೊಳ್ಳುತ್ತಿದ್ದರು. ಕೊನೆಗೆ ಪೂಜೆ, ಪುನಸ್ಕಾರಗಳನ್ನು ಮಾಡಿ, ಯಜ್ಞ ಯಾಗಾದಿಗಳನ್ನು ಮಾಡತೊಡಗಿದರು. ಪ್ರತಿಯೊಬ್ಬರೂ ಸರ್ವೇ ಜನಾಃ ಸುಖಿನೋ ಭವಂತು ಎಂದು ಆಗಾಗ ಹೇಳಿಕೊಳ್ಳುತ್ತಿದ್ದರು ಹಾಗೂ ಒಮ್ಮನಸ್ಸಿನಿಂದ ದೇವನಲ್ಲಿ ಪ್ರಾರ್ಥಿಸತೊಡಗಿದರು.
****
ಇಂದ್ರನ ಸಭೆಯಲ್ಲಿ ತ್ರಿಮೂರ್ತಿಗಳ ಸಮೇತ ಸೇರಿದ್ದು ಎಲ್ಲರ ಮುಖದಲ್ಲಿಯೂ ಗಾಬರಿ ತಾಂಡವವಾಡುತ್ತಿತ್ತು. ಭೂಲೋಕದಲ್ಲಿರುವ ಭಕ್ತಾದಿಗಳೆಲ್ಲ ಆತಂಕ ವ್ಯಕ್ತಪಡಿಸಿ ತಲ್ಲಣರಾಗಿ ವೈಕುಂಠದಲ್ಲಿ ಒಟ್ಟಾಗಿ ಸೇರಿ ತಮ್ಮ ಸಮಸ್ಯೆಗಳನ್ನು ಈಡೇರಿಸಲು ಕೇಳಿಕೊಂಡಿದ್ದರು.
ಇಂದ್ರನ ಸಭೆ ಪ್ರಾರಂಭವಾಯಿತು. “ಭೂಲೋಕದಲ್ಲಿ ಎಲ್ಲರೂ ಗೊಂದಲದಲ್ಲಿ ಮುಳುಗಿದ್ದಾರೆ. ಆಪ್ತವಾಗಬೇಕಾಗಿದ್ದ ಸೂರ್ಯ ನಿಂತಂತೆ ಭಾಸ. ಆದರೆ ಭೂಮಿ ತಟಸ್ಥವಾಗಿದೆ” ಎಂದರು ಒಬ್ಬರು.
“ಭುವಿಯಲ್ಲಿನ ಜನರು ಕರೋನದ ಹಿನ್ನೆಲೆಯಲ್ಲಿ ಯಜ್ಞ , ಯಾಗಾದಿಗಳನ್ನು ಪೂಜಾ ಕರ್ಮಗಳನ್ನು ಪಾರಾಯಣಗಳನ್ನು ಮಾಡಿ ಪಾವನರಾಗುತ್ತಿದ್ದಾರೆ ಮತ್ತು ಎರಡು ದಿನದಿಂದಲೂ ಮಾಡುತ್ತಿರುವರು” ಎಂದರು ಇನ್ನೊಬ್ಬರು.
“ಬೆಂಗಳೂರು ಮಹಾನಗರದಲ್ಲಿ ಜನಸಂಖ್ಯೆ ಸ್ಪೋಟವಾಗುತ್ತಿದೆ ಮತ್ತು ವಾಹನ ಸಂಚಾರ ಹೆಚ್ಚಾಗಿ ದಟ್ಟಣೆಯಲ್ಲಿ ಕಾಲವ್ಯಯವಾಗುತ್ತಿದೆ. ಕಾಲುವೆಗಳ ಮಾರ್ಗ ಬದಲಿಸಿ ಸುರಂಗ ಮಾರ್ಗಗಳಿಂದ ಮೇಲುದಾರಿ ಹಾಗೂ ಅಧಿಕ ಎತ್ತರದ ರೈಲುಸಂಚಾರ ನಗರದಲ್ಲಿ ನರ ನಾಡಿಯಂತೆ ಹರಿಯುತ್ತಲೇ ಇದೆ. ಇಷ್ಟೆಲ್ಲ ಇದ್ದರೂ ತಿಮ್ಮಕ್ಕರವರಿಂದ ಸಾಲು ಮರಗಳು ಕಂಗೊಳಿಸುತ್ತಿದೆ ಮತ್ತು ಜನರಿಗೂ ಮರ ಗಿಡಗಳ ಮೇಲೆ ವಿಶ್ವಾಸವಾಗುತ್ತಿದೆ” ಎಂದರು ಮಗದೊಬ್ಬರು.
”ಮೊದಲನೇ ಬಾರಿ ಭೂಮಾತೆ ಮುನಿಸಿಕೊಂಡು ಮತ್ತೆ ಕಕ್ಷೆ ಬದಲಿಸುವಂತೆ ವಿಷ್ಣು ಅವತಾರವಾದ ವರಾಹ ಸ್ಮಾಮಿಗಳು ಬಂದು ಕಾಪಾಡಿ ಯಥಾಸ್ಥಿತಿಯಲ್ಲಿರುವಂತೆ ನೋಡಿಕೊಂಡರು. ಭೂದೇವಿ ಇದು ಎರಡನೇ ಬಾರಿ ಮುನಿಸಿಕೊಂಡಂತಿದೆ. ಅಲ್ಲಿನ ಜನರು ಹಗಲು ರಾತ್ರಿಗಳನ್ನು ಕಾಣದೇ ತೊಂದರೆಗೆ ಸಿಲುಕಿದ್ದಾರೆ. ಮೂರು ದಿನಗಳಿಂದ ಹೀಗೇ ಇರುವುದರಿಂದ ಪಂಚಾಂಗಗಳು ಸುಳ್ಳಾಗುತ್ತಿದೆ. ಸಂಕಲ್ಪ ಮಾಡುವಾಗ ಗೊಂದಲಗಳಲ್ಲಿ ಮುಳುಗಿದ್ದಾರೆ” ಎಂದರು ಮೇಲಿನವರು.

“ಮುಂದಿನ ಅವತಾರ ಕಲ್ಕಿ ಎಂದು ಜನರಿಗೆಲ್ಲ ಚಿರಪರಿಚಿತವಾಗಿ ಅವರಿಗಾಗಿ ಎದುರು ನೋಡುತ್ತಿದ್ದಾರೆ. ಅಂದರೆ ಇಷ್ಟರಲ್ಲೇ ಮತ್ತೆ ವರಾಹ ಸ್ವಾಮಿಯೂ ಅವತರಿಸಿ ಬರಲಿ ಎಂದು ತವಕದಿಂದ ಕಾಯುತ್ತಿದ್ದಾರೆ” ಎಂದರು ಮುಂದಿನವರು.
ಸಾಕ್ಷಾತ್ ಶ್ರೀಮನ್ನಾರಾಯಣರು ಎದ್ದು ನಿಂತು ಎಲ್ಲರ ಸಮೂಹದಲ್ಲಿ ಭುವಿಯ ಮುನಿಸ್ಸನ್ನು ಕಡಿಮೆ ಮಾಡಲು ಪುಷ್ಪ ವೃಷ್ಟಿಗೈದು ಅಶರೀರವಾಣಿ ಹೊರಡಿಸಿದರು.
“ಎಲೈ ಭೂಮಾತೆಯೇ ಹಿಂದಿಗಿಂತ ಎಷ್ಟೋ ಉತ್ತಮವಾಗಿದೆ ಈ ಭಾರತದಲ್ಲಿ ಅನೇಕ ಸತ್ಕರ್ಮಗಳು ನಡೆಯುತ್ತಿದೆ. ದೊಡ್ಡ ದೊಡ್ಡ ದೇವರ ವಿಗ್ರಹಗಳು ತಲೆ ಎತ್ತುತ್ತಿವೆ. ಈಗ ಗಂಗಾ ನದಿಯು ತನ್ನ ಪವಿತ್ರತೆಯನ್ನು ಕಾಪಾಡಿಕೊಂಡಿದ್ದಾಳೆ. ಕರೋನಾ ಮತ್ತು ಅಧಿಕ ಮಳೆಗಳಿಂದ ಜನರು ಒಂದು ಹಂತಕ್ಕೆ ಬಂದಂತಾಗಿದೆ. ವಾಹನಗಳ ಸಂಚಾರ ಕಡಿಮೆಯಾಗಲು ಶಿರಸ್ತ್ರಾಣಗಳು ಚತುಷ್ಚಕ್ರ ವಾಹನಗಳಲ್ಲಿ ಪಟ್ಟಿ ಧಾರಣೆ ಅವಶ್ಯ ಸಂಖ್ಯಾ ಹಲಗೆ ಬದಲಿಸುವಿಕೆ, ನಿಯಮ ಪಾಲಿಸುವಿಕೆ ಇರಬೇಕು ಅದಲ್ಲದೆ ಕಂದಾಯಗಳನ್ನು ಕಟ್ಟಿ ವಿಮೆಯನ್ನು ಮಾಡಿಸಲಿ ಇಲ್ಲವೆ ಗಾಡಿಗಳನ್ನು ವಶಪಡಿಸಿಕೊಳ್ಳುವರು. ಈಗಾಗಲೇ ಈ ಕ್ರಮ ಬಂದು ಹತೋಟಿಗೆ ಬರುತ್ತಿದೆ. ಇನ್ನೇನೂ ಯೋಚಿಸಬೇಡ. ನಿನ್ನ ಕಾರ್ಯ ನೀನು ನಿಶ್ಚಿಂತೆಯಿಂದ ನಿರ್ವಹಿಸು. ನಿನಗೆ ಶುಭವಾಗಲಿ”
“ಸಮುದ್ರೇ ವಸನೇ ದೇವಿ ಪರ್ವತ ಸ್ಥನ ಮಂಡಲೇ |
ವಿಷ್ಣು ಪತ್ಮಿ ನಮಸ್ತುಭ್ಯಂ ಪಾದ ಸ್ಪರ್ಶಂ ಕ್ಷಮಸ್ವ ಮೇ ||
ಜೈ ಮಂಗಳಂ
- ಹರಿಹರ ಬಿ ಆರ್
