ಎಲ್ಲರಂತಲ್ಲ ನನ್ನಮ್ಮನಂತೆ ಸುಮಂಗಲ ಲಕ್ಷ್ಮಣ ಕೋಳಿವಾಡ ಅವರ ಒಂದು ಕವನವನ್ನು ತಪ್ಪದೆ ಮುಂದೆ ಓದಿ…
ಎಲ್ಲರಂತಲ್ಲ ನನ್ನಮ್ಮನಂತೆಯೇ ನನ್ನ ಅತ್ತೆ
ನನ್ನ ಕಂಡ್ರೆ ಅವರಿಗೆ ಎಲ್ಲಿಲ್ಲದ ಅಕ್ಕರೆ
ಅವರಿಗೆಂದೇ ಶೃಧ್ಧೆಯಲಿ ಮಾಡಿ ತಂದಿಟ್ಟಿದ್ದೆ ಮುಂದೆ
ರಸಭರಿತ ಮಾವಿನ ರಸಾಯನದ ಸೀಕರಣೆ
ಅವರಿಗೆ ಹಿಡಿಸಿಲ್ವೇನೋ ನಾ..
ನಂದ್ಕೊಂಡೆ
ಮುದ್ದೆ-ಚಪಾತಿಯೊಂದಿಗೆ ನಾ..
ಸವಿದೆ
ಯಾಕೋ ಹೊಟ್ಟೆಯೊಳ ಸದ್ದು ಗುದ್ದು ನಾಕಾಣೆ
ಶೌಚಕೆ ತಿರುತಿರುಗಿ ಆಯಾಸದಿ ಬಿದ್ದೆ ನಿದ್ದೆಗೆ
ರಾತ್ರಿ ಕನಸಲಿ ಕಂಡು ನಾಲ್ಕು ಮಾತ ನುಡಿದರು ನನ್ನತ್ತೆ
ನಿನಗೆಂದೇ ಕಳಿಸಿರುವೆ ಬಿಳಿಸೀರೆ – ಮಲ್ಲಿಗೆ – ಗಂಧದಮಾಲೆ
ಕಾಗೆಯಾಗಲು ನನಗಿಷ್ಟವಿಲ್ಲ ನನ್ನ ಮುದ್ದಿನ ಸೊಸೆಯೇ
ಸೀಕರಣೆ ಹಿಡಿದು ನೇರ ಸ್ವರ್ಗಕ್ಕೆ ನೀನೇ ಬಾರೆ…
- ಸುಮಂಗಲ ಲಕ್ಷ್ಮಣ ಕೋಳಿವಾಡ – (ಎಸ್ ಬಿ ಹೂಲಿ). ಸುಳ್ಯ
