ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನವರಾದ ವಿಕ್ರಮ ವಿಸಾಜಿ ಅವರ ‘ತಮಾಷ’ ಕವನ ಸಂಕಲನದಲ್ಲಿ ಜಿ ಎಸ್ ಶಿವರುದ್ರಪ್ಪನವರ ಮುನ್ನುಡಿಯಿದೆ. ಈ ಕೃತಿಯ ಕುರಿತು ರಮೇಶ ಬಿರಾದಾರ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬೀದರ ಜಿಲ್ಲೆಯ ಮಣ್ಣಿಗೂ ಕಾವ್ಯದ ಹಣ್ಣಿಗೂ ಅವಿನಾಭಾವ ಸಂಬಂಧ ಇತಿಹಾಸವು ಕೆದರಿದಷ್ಟು ದೈತ್ಯ ಪ್ರತಿಭೆಗಳು ಮುತ್ತು ರತ್ನ ವಜ್ರಗಳು ಸಿಗುತ್ತವೆ ಎಂದರೆ ಸಾಹಿತ್ಯದ ಆಳ ಅರಿಯದವರಿಗೆ ಕುಳಬಾನ ಸುತ್ತ ಕುಳ್ಳು ಆಯುವವರಿಗೆ ಆಶ್ಚರ್ಯಕರ ಎನ್ನಿಸಬಹುದು ಸತ್ಯ. ಯಾವತ್ತಿಗೂ ಸತ್ಯವೇ ಅಲ್ಲವೇ, ವಡ್ಡಾರಾಧನೆ ಗದ್ಯದ ಮೊದಲ ಗ್ರಂಥ ಕೊಟ್ಟ ನೆಲ ಹತ್ತನೇಯ ಶತಮಾನದಲ್ಲಿ ಕಾವ್ಯದ ಚಂದಸು ಅಲಂಕಾರ ಬಗ್ಗೆ ಬರೆದ ಬಿಲ್ಹಣ ವಚನ ಸಾಹಿತ್ಯ ಕೊಟ್ಟದ್ದು ಅಲ್ಲದೆ ವಿಜ್ಞಾನೇಶ್ವರರಿಂದ ಕಾನೂನು ಪುಸ್ತಕ ಸಹ ಕೊಟ್ಟ ಹೆಮ್ಮೆ ಬೀದರಿನದು , ತದನಂತರ ತತ್ವಪದಕಾರರ ಸಾಲು ಸಾಲು ತತ್ವ ಸಾಹಿತ್ಯ ಹರಿದು ಬಂತು ಆದರೂ ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪ ಷಣ್ಮುಖ ಶಿವಯೋಗಿಗಳು ಕನಕದಾಸ ಪುರಂದರ ದಾಸರಂತೆ ಇಲ್ಲಿನವರಿಗೆ ಪ್ರಚಾರ ಸಿಗಲಿಲ್ಲ.
ವಿಕ್ರಮ ವಿಸಾಜಿ ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನವರು, ೭೦- ೮೦ ದಶಕದಲ್ಲಿ ಬೀದರ ಜಿಲ್ಲೆಯಲ್ಲಿ ಕವಿಗಳೆಂದರೆ ಜಿ ಬಿ ವಿಸಾಜಿ ವೀರೇಂದ್ರ ಸಿಂಪಿ ೬೦ ರಲ್ಲಿ ಮಾಣಿಕರಾವ ಧನಶ್ರೀ ಮೊದಲ ಕವನ ಸಂಕಲನ ತಂದರಾದರು ಬೀದರನಲ್ಲಿ ನೆಲಸಲಿಲ್ಲ, ಜಿ ಬಿ ವಿಸಾಜಿಯ ಕುವರ ಈ ವಿಕ್ರಮ.

ವಿಕ್ರಮ ವಿಸಾಜಿ ತಂದೆಗೆ ಮೀರಿಸಿದ ಮಗನಾಗಿ ಬೆಳೆದರು ಸಾಹಿತ್ಯ ಲೋಕದಲ್ಲಿ ತಂದೆಯ ಕನಸು ನನಸು ಮಾಡಿದ ಸುಪುತ್ರರಿವರು, ವರ್ತಮಾನದ ಬೀದರ ಜಿಲ್ಲೆಯ ಸಾಹಿತ್ಯ ಕ್ಷೇತ್ರದ ಗಟ್ಟಿ ಬೀಜ ಬೀದರಿನ ಕೀರ್ತಿ ಪಾತಾಕೆ ನಾಡಿನುದ್ದಗಲಕ್ಕು ಹರುವಿದ ಧೀರ ಪ್ರಸ್ತುತ ಕಲಬುರಗಿಯ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಕನ್ನಡ ಹಿರಿಯ ಪ್ರಾಧ್ಯಾಪಕರು ಸೇವೆ ಸಲ್ಲಿಸುತ್ತಿಹರು.
ಜೊತೆಗೆ ನಾಡಿನ ಸಾರಸ್ವತ ಲೋಕಕ್ಕೆ ಬೀದರಿನ ಮಣ್ಣಿನ ವಾಸನೆಯ ಹಿರಿತನದ ಪಾಲುದಾರಿಕೆ ಸಲ್ಲಿಸುತ್ತಿಹರು ಎಂಬ ಹೆಮ್ಮೆಯ ಸಂಗತಿ, ವಿಕ್ರಮನ ಈ ತಮಾಷ ಕವನ ಸಂಕಲನ ಹೊರ ಬಂದದ್ದು 1999 ರಲ್ಲಿ ಜಿ ಎಸ್ ಶಿವರುದ್ರಪ್ಪನವರ ಮುನ್ನುಡಿ. ಡಾ ವೀರಣ್ಣ ದಂಡೆಯವರ ಬೆನ್ನುಡಿ, ಲೋಹಿಯಾ ಪ್ರಕಾಶನದಲ್ಲಿ ಚೆನ್ನಬಸವಣ್ಣನವರ ನೇತ್ರತ್ವದಲ್ಲಿ ಮುದ್ರಣಗೊಂಡು ಪ್ರಕಟವಾದ ಹಿರಿಮೆಯ ಕವನ ಸಂಕಲನ. ಇಪ್ಪತೆರಡರ ಹರೆಯ ಪೊರ ಆಗಲೇ ತಮಾಷ ೧೯೯೯ ಇದು ನಾಲ್ಕನೇ ಕವನ ಸಂಕಲನ ಗಾಳಿಪಟ ೧೯೮೮, ಶಿಶು ೧೯೯೦, ನೀವೆಕೆ ಕತ್ತಲ ಕಡೆ ೧೯೯೪, ಈ ತಮಾಷದಲ್ಲಿ ಇರೊದು ಬರಿ ಇಪ್ಪತೈದು ಕವನಗಳು.
ಈ ಕವಿಗೂ ಕಾವ್ಯಕ್ಕೂ ಅಂಟಿದ ನಂಟು , ಇದೊಂದು ಸಹಜ ಕವಿತೆಯ ಸೆಲೆ , ಎಲ್ಲೊ ಆಕಸ್ಮತ್ ಪುಟಿದು ಅನಂತರ ಇಂಗಿ ಹೋಗುವಂಥದ್ದಲ್ಲ, ಎಂಬ ಕಾರಣಕ್ಕೆ ಈ ಹುಡುಗನ ಮೈ ಮನಸು ಕಣ್ಣುಗಳು ಚುರುಕಾಗಿವೆ ಎನ್ನಿಸಿತ್ತು. ಬೀದರ್ ನ ಪರಿಸರದಲ್ಲಿ ಹೊಮ್ಮುವ ವಿಕ್ರಮ ವಿಸಾಜಿಯ ಕವಿತೆಯ ದನಿ, ತನ್ನ ಹೊಸತನ ಹಾಗೂ ಲವಲವಿಕೆಯಿಂದ ನಾಳಿನ ಕವಿತೆಯ ಬಗ್ಗೆ ಭರವಸೆಯನ್ನು ಮುಡಿಸುವಂಥದಾಗಿದೆ. ಜಿ ಎಸ್ ಶಿವರುದ್ರಪ್ಪ ನವರು ಮುನ್ನುಡಿಯಲ್ಲಿ ವಿಕ್ರಮನ ಬಗ್ಗೆ ಬರೆದದ್ದು ಇಂದು ಅಕ್ಷರಶಃ ಸತ್ಯವೆನ್ನಿಸುತ್ತದೆ.
ಜಿ ಎಸ್ ಶಿವರುದ್ರಪ್ಪನಂತಹ ಧಿಗ್ಗಜರು ಹೇಳಿದ ಮೇಲೆ ನಾನೇನಾದರು ಹೇಳಿದರೆ ಸೂರ್ಯನ ಮುಂದೆ ದೀಪ ಇಟ್ಟಂತೆ ಎಂಬ ಪ್ರಜ್ಞೆ ಇದ್ದುದರಿಂದ ನಾನೇನು ಹೇಳುತ್ತಿಲ್ಲ, ನಮ್ಮೂರಿನ ಪೋರನ ಬಗ್ಗೆ, ೧೯೯೩ ರಲ್ಲಿ ನಾನು ಮೊಟ್ಟ ಮೊದಲ ಸಲ ಜಿಲ್ಲೆಯಲ್ಲಿ #ಮಕ್ಕಳ_ಕವಿಗೋಷ್ಠಿ ಎರ್ಪಡಿಸಿದ ಶ್ರೇಯ ನನ್ನ ಹೆಸರಿಗೆ ಅಂಟಿಕೊಳ್ಳುತ್ತದೆ, ಆ ಕವಿ ಗೋಷ್ಠಿಯಲ್ಲಿ ಸುಮಾರು ೨೦ ಮಕ್ಕಳು ಕವನ ವಾಚನ ಮಾಡಿದರು ಅರೆಂಟು ಜನ ಭರವಸೆ ಮುಡಿಸಿದರು ಅವರಲ್ಲಿ #ಮೂವರು #ದೈತ್ಯರಾಗಿ_ಬೆಳೆದಿಹರು ಆ ದೈತ್ಯರ ಮೊದಲ #ಹೆಸರು_ವಿಕ್ರಮ_ವಿಸಾಜಿ, ಎರಡನೆಯದು ಟಿ ಎಸ್ ರಶ್ಮಿ , ಮೂರನೆಯವರು ಬಿಜೆ ಪಾರ್ವತಿ ವಿ ಸೋನಾರೆ ಎಂಬ ಖುಷಿ ನನಗಿದೆ. ವಿಕ್ರಮನ ತಾಮಾಷದಲ್ಲಿನ ಒಂದು ಕವನ
ಅವಳೆದುರಿಗೆ
ಹೊನ್ನ ಸೂರ್ಯನ ವಿಕಿರಣಗಳ ಸ್ಪರ್ಶ
ಹಸಿರು ಸವರಿದ ಬೆಟ್ಟಗಳ ಸೊಗಸು
ನೀಲಿ ಬಾನಿನೊಳು ಹಿಂಡುಹಕ್ಕಿಗಳ ಸಂಭ್ರಮ
ಏನೂ ಅಲ್ಲ
ಏನೂ ಅಲ್ಲವೇ ಅಲ್ಲ
ಅವಳೆದುರಿಗೆ.
ಸಾಹಿರನ ಕಾವ್ಯದೊಳಗರಳಿಕೊಂಡ ಕನ್ಯೆ
ಡಾವಿನ್ಸಿಯ ಮುಗುಳ್ನಗುವ ಮೋನಾಲೀಸಾ
ಹಣತೆ ಹಿಡಿದ ರಾಜಾರವಿವರ್ಮನ ಹುಡುಗಿ
ಏನು ಅಲ್ಲ
ಏನೂ ಅಲ್ಲವೇ ಅಲ್ಲ
ಅವಳೆದುರಿಗೆ.
ನೀರ ಮೇಲಿನ ಜೋಡಿಹಂಸಗಳ ನಲಿವು
ಧುಮ್ಮಿಕ್ಕುವ ಜೋಗದ ಜಲಧಾರೆಯ ಮೈಸಿರಿ
ದಟ್ಟಕಾಡಿನಲ್ಲಿ ಸುರಿಯುವ ಚಂದಿರನ ಚೆಲುವು
ಏನೂ ಅಲ್ಲ
ಏನೂ ಅಲ್ಲವೇ ಅಲ್ಲ
ಅವಳೆದುರಿಗೆ.
ಹಣ್ಣಿಗೊಂದೊಂದು ಗಿಳಿಕುಳಿತು-
ಉಯ್ಯಾಲೆಯಾಡುವಾಟ
ಗೂಡಿನೊಳಗಿಂದ ಹಣಿಕಿಕ್ಕಿ ನೋಡುವ ಹಕ್ಕಿಮರಿಗಳ ನೋಟ
ಹಸಿಹಸಿ ಹುಲ್ಲುಗಳ ನಡುವಿನ ಹಿಂಡುಮೊಲಗಳ ಓಟ
ಏನೂ ಅಲ್ಲ
ಏನೂ ಅಲ್ಲವೇ ಅಲ್ಲ
ಅವಳೆದುರಿಗೆ.
ಆಕಾಶದಂಗಳದಲ್ಲಿ ತೂಗಿಬಿಟ್ಟ ಕಾಮನಬಿಲ್ಲು
ತುಂತುರು ಮಳೆಹನಿಗೆದ್ದ ಮಣ್ಣುವಾಸನೆ
ಮಮಜಾವಿನ ಆ ಮಧುರ ಕನಸುಗಳು
ಏನೂ ಅಲ್ಲ
ಏನೂ ಅಲ್ಲವೇ ಅಲ್ಲ
ಅವಳೆದುರಿಗೆ.
ಓಡೋಡಿ ಬರುವ ತಲೆಗಳ ಉಲ್ಲಾಸ
ತಿಳಿನೀರಿನೊಳಗಿದಾಡುವ ಚಂದಿರಿನ ಬಿಂಬ
ಹಲವು ವಿಸ್ಮಯಗಳ ಸೃಷ್ಟಿಕರ್ತ ಓ ದೇವರೆ
ನೀನೂ ಕೂಡ
ಏನೂ ಅಲ್ಲ
ಏನೂ ಅಲ್ಲವೇ ಅಲ್ಲ
ಅವಳೆದುರಿಗೆ.

೨೨ ರ ಹರೆಯಲ್ಲಿ ವಿಕ್ರಮ ಬರೆದ ಈ ಕವಿತೆ ಇಂದಿಗೂ ಎಂದಿಗೂ ಎಲ್ಲರಿಗೂ ಮಾದರಿಯಾಗುವ ಮನಸೂರೆಗೊಳ್ಳುವ ಕಾವ್ಯದ ಗುಚ್ಚ. ಕೆಂಪು ಮಣ್ಣಿನ ವಾಸನೆ ಸಾರುತ್ತದೆ. ಧರಿನಾಡಿನ ಕಲ್ಯಾಣ ನಾಡಿನ ನಂಟು ಗಂಟು ಎಂಬುದು ಜಿ ಎಸ್ ಹೇಳಿದ ಮೇಲೆ ನಾನು ಬೇರೆ ಹೇಳುವುದೆನು, ಬೀದರನಲ್ಲಿ ಈಗಾ ನೂರಾರು ಜನ ಕವಿಗಳು ಅರಳುತ್ತಿಹರು ಕೆಲವರು ಭರವಸೆ ಮೂಡಿಸುತ್ತಿಹರು, ಇನ್ನೂ ಕೆಲವರಿಗೆ ಅಧ್ಯಯನದ ಕೊರೆತೆ ಎದ್ದು ಕಾಣುತ್ತಿದೆ ಅಂತವರು ನಮ್ಮಗಿಂತ ಒಂದು ಹೆಜ್ಜೆ ದೊಡ್ಡವರಾದ #ವಿಕ್ರಮ್_ರಶ್ಮಿ ಯ ಬರಹವನ್ನಾದರು ಓದಬೇಕು ಎಂಬ ಕಳಕಳಿಯೊಂದಿಗೆ, ಬೇಂದ್ರೆಯವರ ನಾಕುತಂತಿಯಲ್ಲಿ ಇಪ್ಪತೆಂಟು ಕವನಗಳಿವೆ.
ಬಹಳ ಬರೆದರೆ ದೊಡ್ಡವರಾಗಲ್ಲ ದಾಣಿ ಆಗದ ತೆನಿ ಎಷ್ಟು ದಪ್ಪವಾದರು ಅದು ಉಪಯೋಗ ಆಗಲ್ಲ ಎಂಬ ತಿಳುವಳಿಕೆ ಇದ್ದರೆ ಸಾಹಿತ್ಯ ಸುಗಂಧವಾಗುವುದರಲ್ಲಿ ಎರಡು ಮಾತಿಲ್ಲ ಎಂಬುದಕ್ಕೆ ತಾಮಾಷ ಸಾಕ್ಷಿಯಾಗುತ್ತದೆ.
ಧನ್ಯವಾದಗಳೊಂದಿಗೆ
- ರಮೇಶ ಬಿರಾದಾರ
