ತವರು ಮನೆಗೆ ಹೋಗಿದ್ದ ಹೆಣ್ಣುಮಗಳೊಬ್ಬಳು ಒಂದು ದೊಡ್ಡ ಕೊಕ್ಕೆಯನ್ನು ಹಿಡಿದುಕೊಂಡು ತೋಟದ ಕಡೆಗೆ ಹೋಗುತ್ತಿದ್ದುದನ್ನು ಗಮನಿಸಿದ ಅಕ್ಕ ತನ್ನ ತವರಿನ ಪ್ರೀತಿಯನ್ನು ಹುಸಿಮುನಿಸಿನಿಂದ ವ್ಯಕ್ತಪಡಿಸಿದ್ದು ಈ ರೀತಿ, ಮುಂದೆ ಓದಿ…
ಬೆಳ್ಳಂಬೆಳಿಗ್ಗೆ ಎಲ್ಲೀಗೆ ಹೊರಟೆವ್ವ ತಂಗಿ
ಅದು ಕೊಕ್ಕೆಯ ಕೈಯಲ್ಲಿ ಹಿಡಿದುಕೊಂಡು
ಕರೆದಿದ್ದರೆ ನಾನಾದರೂ ಬರುತ್ತಿದ್ದೆನಲ್ಲಾ ತಂಗಿ
ಎಳನೀರು ಕೆಡುವುದಕ್ಕೆ ಹೊರಟೆಯಾ ತಂಗಿ…
ಬೆಳ್ಳಂಬೆಳಿಗ್ಗೆ ಎಲ್ಲೀಗೆ ಹೊರಟೆವ್ವ ತಂಗಿ
ಅಣ್ಣನಿಗೆ ಹೇಳಿದ್ದರೆ ತಂದು ಕೊಡುತ್ತಿರಲಿಲ್ಲವೇ ತಂಗಿ
ಹಿಂಗ ಒಬ್ಬಾಕಿ ಮಾಡಬೇಡವ್ವ ತಂಗಿ
#ಭಾವಯ್ಯ ನೋಡಿದರೆ ಏನಂದುಕೊಂಡಾರು…
ಬೆಳ್ಳಂ ಬೆಳಿಗ್ಗೆ ಎಲ್ಲೀಗೆ ಹೊರೆಟೆವ್ವ ತಂಗಿ
ನಮ್ಮ ಮನೆಯ ಮಾನ ಮರ್ವಾದೆ ತಗೀತಿಯಲ್ಲವ್ವ ತಂಗಿ
ಚಿಕ್ಕವನಿಗೆ ಹೇಳಿದ್ದರೆ ತಂದುಕೊಡುತ್ತಿರಲಿಲ್ಲವಾ
ಆ ಚಂದ್ರನ್ನ ಕರೆದುಕೊಂಡು ಹೋಗಾಕಿಲ್ವಾ…
ಬೆಳ್ಳಂ ಬೆಳಿಗ್ಗೆ ಎಲ್ಲಿಗೆ ಹೊರಟೆವ್ವ #ತಂಗಿ
ಅಪ್ಪಯ್ಯ ಕೇಳಿದರೆ ಏನಂತ ಹೇಳಲವ್ವಾ ತಂಗಿ
ಹೋಗ್ಲಿ ನಾಲ್ಕು ಹೆಚ್ಚಿಗೆ ಕಿತ್ಕಂಡ್ ಬಾರವ್ವ ತಂಗಿ
ನಿನ್ನ ಯಜಮಾನಪ್ಪ ಕುಡದು ತಣ್ಣಗಿರಲಿ…
- ದೇವರಾಜ ಚಾರ್ (ನಿವೃತ್ತ ಕೆಪಿಸಿಎಲ್ ಇಂಜೀನಿಯರ್) ಮೈಸೂರು.
