ಶಿಕ್ಷಕರ ಪಾತ್ರವೇನು? :  ರಾಜೇಶ್ವರಿ ಎಸ್

ಒಬ್ಬ ಉತ್ತಮ ಶಿಕ್ಷಕ ತನ್ನ ಶಿಷ್ಯರ ಮುಖಾಂತರ ಮುಂದಿನ ಪೀಳಿಗೆಯನ್ನೇ ರೂಪಿಸುತ್ತಾನೆ. ಶಿಕ್ಷಕರ ಪರಿಶ್ರಮವನ್ನು ಕೇವಲ ಒಂದು ದಿನದ ಗೌರವಕ್ಕೆ ಸೀಮಿತಗೊಳಿಸದೆ, ಪ್ರತಿದಿನವೂ ಅವರಿಗೆ ಗೌರವ ನೀಡಬೇಕು. ಶಿಕ್ಷಕರ ಕುರಿತು ಯುವ ಲೇಖಕಿ ರಾಜೇಶ್ವರಿ ಎಸ್ ಅವರು ಬರೆದ ವಿಶೇಷ ಲೇಖನವನ್ನು ತಪ್ಪದೆ ಮುಂದೆ ಓದಿ…

ಜೀವನದ ಬದಲಾವಣೆ ಮಾತ್ರವಲ್ಲ, ಸಮಾಜದ ಬದಲಾವಣೆಯಲ್ಲೂ ಶಿಕ್ಷಕರ ಪಾತ್ರವಿದೆ. ಶಿಕ್ಷಕರನ್ನು ನಾವು ಸಾಮಾನ್ಯವಾಗಿ ಜ್ಞಾನ ನೀಡಿದವರು ಎಂದು ಕೊಂಡಾಡುತ್ತೇವೆ. ಆದರೆ ಅವರ ಪಾತ್ರ ಕೇವಲ ವಿದ್ಯಾರ್ಥಿಗಳ ಪಾಠ, ಪುಸ್ತಕದ ಜ್ಞಾನಕ್ಕೆ ಸೀಮಿತವಲ್ಲ. ಶಿಕ್ಷಕರು ವ್ಯಕ್ತಿಯ ಜೀವನ ಬದಲಾವಣೆಯಷ್ಟೇ ಅಲ್ಲ, ಸಮಾಜದ ಬದಲಾವಣೆಯ ಪ್ರಮುಖ ಶಕ್ತಿಯೂ ಆಗಿದ್ದಾರೆ.

ಒಬ್ಬ ವಿದ್ಯಾರ್ಥಿ ಬಾಲ್ಯದಿಂದಲೇ ತನ್ನ ಬದುಕಿನ ದಾರಿಯನ್ನು ಗುರುಗಳ ಮಾರ್ಗದರ್ಶನದಿಂದಲೇ ಕಾಣುತ್ತಾನೆ. ಶಿಸ್ತಿನ ಜೀವನ, ಸತ್ಯನಿಷ್ಠತೆ, ಪರಿಶ್ರಮ, ಮಾನವೀಯತೆ, ಸಹಾನುಭೂತಿ ಇವುಗಳನ್ನು ಶಿಕ್ಷಕರು ಕಲಿಸುತ್ತಾರೆ. ಶಿಕ್ಷಣದ ಮೂಲಕ ವಿದ್ಯಾರ್ಥಿ ಉತ್ತಮ ಉದ್ಯೋಗ ಪಡೆಯಬಹುದು, ಜೀವನದಲ್ಲಿ ಸಫಲರಾಗಬಹುದು. ಆದರೆ ನಿಜವಾದ ಅರ್ಥದಲ್ಲಿ ಶಿಕ್ಷಕರ ಮಾರ್ಗದರ್ಶನವಿಲ್ಲದೆ ಒಬ್ಬ ವಿದ್ಯಾರ್ಥಿ ಸಂಪೂರ್ಣ ವ್ಯಕ್ತಿತ್ವವನ್ನು ಹೊಂದುವುದು ಅಸಾಧ್ಯ.

ವ್ಯಕ್ತಿಯ ಬದುಕು ಬದಲಾದಾಗ ಮಾತ್ರ ಸಮಾಜ ಬದಲಾಗುತ್ತದೆ. ಈ ದೃಷ್ಟಿಯಿಂದ ಶಿಕ್ಷಕರ ಪ್ರಭಾವ ಅತ್ಯಂತ ಮಹತ್ವದಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಪಾಠವನ್ನೇ ಅಲ್ಲ, ಸಮಾನತೆ, ಪ್ರಜಾಸತ್ತಾತ್ಮಕತೆ, ಧರ್ಮನಿರಪೇಕ್ಷತೆ ಮುಂತಾದ ಮೌಲ್ಯಗಳನ್ನು ಬೋಧಿಸುತ್ತಾರೆ. ಅಸ್ಪೃಶ್ಯತೆ, ಜಾತಿ, ಧರ್ಮದ ಬೇಧ, ಅಂಧಶ್ರದ್ಧೆಗಳನ್ನು ತೊಡೆದುಹಾಕುವಲ್ಲಿ ಶಿಕ್ಷಕರ ಬೋಧನೆ ದೊಡ್ಡ ಪಾತ್ರ ವಹಿಸುತ್ತದೆ. ನಮ್ಮ ಕರ್ನಾಟಕದಲ್ಲೂ ಬಸವಣ್ಣನ ವಚನ ಚಳುವಳಿಯ ಸಂದರ್ಭದಲ್ಲಿ ಅವರು ಅನೇಕರಿಗೆ ಗುರುಗಳಾಗಿ ಕಾರ್ಯನಿರ್ವಹಿಸಿದರು. ಅವರಿಂದ ವಚನ ಸಾಹಿತ್ಯ ಕಟ್ಟುವ ಶಿಕ್ಷಣ ಪಡೆದ, ಅನೇಕರು ಸಮಾಜದಲ್ಲಿ ಬದಲಾವಣೆ ತಂದರು.

ಒಬ್ಬ ಉತ್ತಮ ಶಿಕ್ಷಕ ತನ್ನ ಶಿಷ್ಯರ ಮುಖಾಂತರ ಮುಂದಿನ ಪೀಳಿಗೆಯನ್ನೇ ರೂಪಿಸುತ್ತಾನೆ. ಇಂತಹ ಪೀಳಿಗೆಗಳು ಸಮಾಜವನ್ನು ನ್ಯಾಯ ಹಾಗೂ ಸಮಾನತೆಯುತ ಹಾಗೂ ಪ್ರಗತಿಪರ ದಾರಿಯಲ್ಲಿ ಕೊಂಡ್ಹೋಯುತ್ತದೆ.

ಶಿಕ್ಷಕರ ಪರಿಶ್ರಮವನ್ನು ಕೇವಲ ಒಂದು ದಿನದ ಗೌರವಕ್ಕೆ ಸೀಮಿತಗೊಳಿಸದೆ, ಪ್ರತಿದಿನವೂ ಅವರಿಗೆ ಗೌರವ ನೀಡಬೇಕು. ಜೀವನದ ಬದಲಾವಣೆ ಮಾತ್ರವಲ್ಲ, ಸಮಾಜದ ಬದಲಾವಣೆಯಲ್ಲೂ ಶಿಕ್ಷಕರ ಪಾತ್ರ ಅಪ್ರತಿಮ. ಅವರು ವಿದ್ಯಾರ್ಥಿಗಳ ಮೂಲಕ ಭವಿಷ್ಯದ ಸಮಾಜದ ಕನಸು ಕಾಣುತ್ತಾರೆ. ಆದ್ದರಿಂದ ಶಿಕ್ಷಕರಿಗೆ ನೀಡುವ ಗೌರವವೇ ನಿಜವಾದ ಸಮಾಜ ಪರಿವರ್ತನೆಯ ಮೂಲಾಧಾರ.


  •  ರಾಜೇಶ್ವರಿ ಎಸ್ – ದ್ವಿತೀಯ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ, ಮುರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜು, ಹಿರೇಸಿಂದೋಗಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading