ಹಲ್ಲು ನೋವಿಗೆ ಮನೆ ಮದ್ದು

ಹಲ್ಲಿನ ನೋವಿನ ಕಾರಣ ತಿಳಿದುಕೊಳ್ಳುವುದು ಮುಖ್ಯ.  ನೋವು ಯಾಕೆ ಬರುತ್ತಿದೆ ಎಂದು ನೋಡಿದರೆ ನೋಡಿದ ಮೇಲೆ ಮನೆ ಮದ್ದನ್ನು ಮಾಡಿ ಎನ್ನುತ್ತಾರೆ ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು. ತಪ್ಪದೆ ಮುಂದೆ ಓದಿ…

  •  ಹಲ್ಲು ಹರಿದು ಹೋದಿರಬಹುದು / ಕavity
  • ಗಮ್ ಇನ್ಫೆಕ್ಷನ್ (Pyorrhea)
  • ಚಳಿ-ಬೆಚ್ಚಿಗೆ ಸೆನ್ಸಿಟಿವಿಟಿ
  • ವಿಸ್‌ಡಮ್ ಟೂತ್ (ಅಕ್ಕಿಹಲ್ಲು)
  • ನರವ್ ಉರಿಯೂತ
  • ಕಲ್ಲು ಜಮಾವಣೆ (Tartar)

ಪರಿಹಾರ :

ಮುಚ್ಚುಗದ ಎಲೆ, ಕಾಳುಮೇಣಸು ಉಪ್ಪು ಹಾಕಿ ಚೆನ್ನಾಗಿ ಅರೇದು ಉಂಡೆ ಮಾಡಿ ಹಲ್ಲು ನೋವಿನ ಜಾಗದಲ್ಲಿ ಒತ್ತಿ ಕಚ್ಚಿ ಹಿಡಿದಿಟ್ಟುಕೊಂಡರೆ ಹಲ್ಲು ನೊವು ಮಾಯವಾಗುತ್ತದೆ.ಹಲ್ಲು ಹುಳುತಿಂದು ಆಳವಾಗಿದ್ದರೆ ನೋವು ನಿವಾರಣೆ ಆದನಂತರ ಕಿಳಿಸುವುದು ಉತ್ತಮ.

ಹಲ್ಲು ಗಟ್ಟಿಯಾಗಿ ಹುಳುಕಾಗದೇ ಇರಲು ಹಲ್ಲುಪುಡಿ ತಯಾರಿಕಾ ವಿಧಾನ ;

ಮುಚ್ಚುಗ, ಪೆಪ್ಪರ್ ಮಿಂಟ್, ಪಚ್ಚೆ ಕರ್ಪುರ ಅಜ ವಾನ(ಓಂ ಕಾಳು) ಲವಂಗ, ಏಲಕ್ಕಿ, ತೇಜ ಪತ್ರ, ದಾಲ್ಚಿನ್ನಿ, ಚಂದನ, ಜಾಪತ್ರೆ ಜಾಯಿಕಾಯಿ, ಕರಿ ಮೆಣಸು, ಕಮಲದ ಹೂ, ಅಶ್ವಗಂಧ, ಸೋಮ ಲತಾ, ಪುನರ್ನವಾ, ಆಡುಸೋಗೆ, ಶುದ್ಧ ಮಾಡಿದ ಚಿತ್ರ ಮೂಲಾ, ಅಮೃತ ಸತ್ವ, ನೆಲನೆಲ್ಲಿ, ಶ್ವೇತ ಚಂದನ, ಹಿಪ್ಪಲಿ, ಚಿಕ್ಕ ಹಿಪ್ಪಲಿ,ಚವ್ಯ, ಶುಂಠಿ, ಕೊನ್ನಾರಿ ಗಡ್ಡೆ, ಸೋಂಪು, ಬಿಳಿ ಮತ್ತಿ, ಶಂಖ ಪುಷ್ಪ, ಜಾಲಿ, ಬೇವು, ಬಕುಳ, ನೇಪಾಳಿ ಧನಿಯಾ, ಪಟಿಗಾರ, ಕರಿಉಪ್ಪು, ಸಮುದ್ರ ನೊರೆ, ಸೈದವಲವಣ ಇಷ್ಟೆಲ್ಲಾ ವಸ್ತು ಗಳನ್ನು ಪುಡಿ ಮಾಡಿ ಡಬ್ಬಿ ತುಂಬಿ ಗಾಳಿ ಆಡಿದಂತೆ ಇಡಿ.

ಹೋತ್ತಿಗೆ ಒಂದು ಚಿಟಿಕೆ ಕೈಗೆತ್ತಿಕೊಂಡು ಬ್ರಶ್ ಅಥವಾ ತೋರುಬೆರಳಿನಿಂದ ದಿನಕ್ಕೆ ಎರಡು ಬಾರಿ ಹಲ್ಲು ತಿಕ್ಕಿದರೆ ಸುಂದರ ಆರೋಗ್ಯ ವಂತ ಹಲ್ಲು ನಿಮ್ಮದಾಗುತ್ತದೆ.ತಯಾರಿಕೆ ಕಷ್ಟಸಾಧ್ಯ ಎನಿಸಿದರೆ ನನ್ನಲ್ಲಿ ತಯಾರಿಕೆ ಇದೆ ತರಿಸಿ ಕೊಳ್ಳಬಹುದು.


  • ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯರು

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading