ಪ್ರಕಾಶನ : ಛಂದ ಪ್ರಕಾಶನ
ಬೆಲೆ : 450.00
ತೇಜೋ ತುಂಗಾ ಭದ್ರಾ ಕೆಲವೊಂದು ಕಾದಂಬರಿಗೆ ವಿಮರ್ಶೆ ಮಾಡುವುದು ತುಂಬಾ ಕಷ್ಟ. ಅದರಲ್ಲೂ ಐತಿಹಾಸಿಕ ಕಾದಂಬರಿಗೆ ವಿಮರ್ಶೆ ಮಾಡಬೇಕು ಎಂದರೆ ಅಷ್ಟೇ ಅದರ ಬಗ್ಗೆ ಆಳವಾದ ಜ್ಞಾನ ಕೂಡ ಇರಬೇಕು. ಐತಿಹಾಸಿಕ ಕಾದಂಬರಿಗಳು ಓದುವುದು ತುಂಬಾ ಇಷ್ಟ ಆದರೆ ಇತಿಹಾಸದ ಬಗೆ ಜ್ಞಾನ ಅಷ್ಟಾಗಿ ಇಲ್ಲದಿದ್ದರೂ ಈ ವಿಮರ್ಶೆ ಪ್ರಯತ್ನ ಅಷ್ಟೇ.
ತೇಜೋ ಆರಂಭವೇ ಪೋರ್ಚುಗೀಸ್. ಲಿಸ್ಟನ್ ನಗರದಿಂದ ಪ್ರಾರಂಭವಾಗುತ್ತದೆ. ಮೆಣಸಿನಕಾಳು ಅಲ್ಲಿನ ಜನರಿಗೆ ಅದೆಷ್ಟು ಪ್ರಾಮುಖ್ಯತೆ ಪಡೆದಿತ್ತು, ಅಲ್ಲೊಂದು ಹೆಣ್ಣಿನ ರಕ್ತದ ಮೇಲೆ ಮೆಣಸಿನಕಾಳು ಆರಿಸಿಕೊಳ್ಳುವಾಗ ಈಗ ಆಗ ಯಾವಾಗಲೂ ಮಾನವೀಯ ಮೌಲ್ಯ ಇಷ್ಟೇನಾ ಎಂಬ ಪ್ರಶ್ನೆ ಕಾಡುತ್ತೆ?. ಹದಿನೈದರ ಶತಮಾನದ ಅಂತ್ಯ 16ನೇ ಶತಮಾನದ ಆರಂಭ ನಡುವೆ ಸಾಗುವ ಕಥೆ ಇದು.
ಬೆಲ್ಲಾ… ಆರಂಭದಲ್ಲಿ ಅದೆಷ್ಟು ಚೆನ್ನಾಗಿ ವಿವರಿಸುತ್ತಾಳೆ. ನದಿ ನೀರಿನಲ್ಲಿ ಒಂದು ಪರಿಮಳ ಇದೆ ಆದರೆ ಭಾರತದ ಮಸಾಲ ಪದಾರ್ಥಗಳು ತೇಜೋ ನದಿಯನ್ನು ಆವರಿಸಿಕೊಂಡಿದೆ ಅಲ್ಲಿ ಗ್ರೇಬಿಯಲ್. ಆಗ ಅವಳ ಮಾತುಗಳು ಒಗಟಾಗಿ, ವಿಚಿತ್ರವಾಗಿ ಕಂಡರೂ ಆದರೆ ಅವನ ಬದುಕಿನ ತಿರುವುಗಳಿಗೆ ಇದೆ ತೇಜೋ ಸಾಕ್ಷಿ ಆಗುತ್ತಾಳೆ ಎಂದು ಅವನಿಗೂ ಆ ಕ್ಷಣ ಗೊತ್ತಿರಲಿಲ್ಲ. ಓದುಗರಾದ ನಮಗೂ ಆದರ ಅರಿವು ಇರುವುದಿಲ್ಲ.

ಆಗಿನಿಂದ ಈಗಿನವರೆಗೂ ರಾಜಕೀಯದ ಆಟಕ್ಕೆ ಬಲಿಯಾಗುವುದು ಸಾಮಾನ್ಯ ಜನಗಳೇ. ವಾಸ್ಕೋಡ ಗ್ರಾಮ ಭಾರತದ ದಾರಿಯನ್ನು ಕಂಡುಹಿಡಿದ ಮೇಲೆ ಇಲ್ಲಿ ಮಾತ್ರ ಹಲವು ಬದಲಾವಣೆಗಳು ಆಗಲಿಲ್ಲ, ಪೋರ್ಚುಗೀಸ್ ಲಿಸ್ಟನ್ ನಗರದಲ್ಲೂ ಹಲವು ಬದಲಾವಣೆಗಳು ಕಂಡವು ಭಾರತ ಎಂಬ ಶ್ರೀಮಂತ ದೇಶಕ್ಕೆ ಕಾಲಿಡಲು ಅಲ್ಲಿನ ಯುವಕರನ್ನು ಉತ್ಸುಕರಾಗಿದ್ದರು.. ಲಿಸ್ಟನ್ ನಗರದಿಂದ ಹೊರಡುವ ನೌಕೆಯಲ್ಲಿ ಮುಂದಿನ ಭವಿಷ್ಯದ ಕನಸುಗಳನ್ನು ಹೊತ್ತು ಸಾಗಿದವರು ಅಷ್ಟೇ ಅಲ್ಲ. ಜೈಲಿನಿಂದ ಬಿಡುಗಡೆಯಾದ ಕೈದಿಗಳು ಇದ್ದರು. ಪೋರ್ಚುಗಲ್ ದೇಶಕ್ಕೆ ಆಗಷ್ಟೇ ಅಂಟಿಕೊಂಡ ಮಾರಕ ಖಾಯಿಲೆ… ಆಗಿನ ರಾಜ ಇಂಥದೊಂದು ನಿಲವು ತೆಗೆದುಕೊಂಡಿದ್ದು.
ಎರಡು ಧರ್ಮಗಳ ನಡುವೆ ಆಂತರಿಕ ಕಲಹ ವಲಸೆ ಬಂದವರ ಮೇಲೆ ಮೂಲ ನಿವಾಸಿಗಳ ಮೂಲ ಧರ್ಮದವರ ಕೋಪ. ವಲಸಿಗರ ಬುದ್ಧಿವಂತಿಕೆ ಅವರ ಶ್ರೀಮಂತಿಕೆ. ಆರಗಿಸಿಕೊಳ್ಳಲು ಸಾಧ್ಯವಾಗದ ಮೂಲ ನಿವಾಸಿಗಳು. ಇಲ್ಲಿ ವಲಸಿಗರು ಯಹೂದಿಗಳು ಅವರದೇ ಸ್ವಂತ ದೇಶ ಸ್ವಂತ ನೆಲೆಯನ್ನು ಕಟ್ಟಿಕೊಳ್ಳಲಾಗದೆ ಅತಂತ್ರದಲ್ಲಿರುವ ಪ್ರಜೆಗಳು. ಮೂಲ ನಿವಾಸಿಗಳು ಕ್ರಿಶ್ಚಿಯನ್ ಅವರನ್ನು ರಾಜ ಆಜ್ಞೆಯನ್ನು ಒಪ್ಪಿಕೊಳ್ಳಲು ಆಗದೆ ಬಿಡಲಾಗದೆ ಗೊಂದಲ ಮನಸ್ಥಿತಿಯಲ್ಲಿ ಬದುಕುತ್ತಿರುವವರು. ನಡುವೆ ದೊಡ್ಡ ಅಂತಾರ.. ರಾಜನ ಸ್ವಾರ್ಥಕ್ಕೆ ಬಲವಂತದ ಮತಾಂತರ ಒಪ್ಪಿಕೊಳ್ಳಲಾಗದೆ ಒದ್ದಾಡುವ ಮನಸ್ಸುಗಳು, ಹೀಗೆ ನಡೆದುಕೊಳ್ಳಬೇಕು ಎಂಬ ಕಾನೂನು, ಒಡೆದು ಆಳುವ ನೀತಿ ಅದನ್ನು ಅರಿಯದ ಮುಗ್ಧ ಜೀವಗಳು.
ಇಲ್ಲಿ ಧರ್ಮಕ್ಕೂ ಮೀರಿದ ಒಂದು ಸುಂದರ ಸ್ನೇಹ ಇದೆ ಆದೆ ಬೆಲ್ಶಾಮ್ ಆಂಟೋನಿಯ ಸ್ನೇಹ. ಒಂದು ಮುಗ್ಧ ಮನಸ್ಸುಗಳ ಪ್ರೇಮಕಥೆ ಗ್ರೇಬಿಯಲ್ ಮತ್ತು ಬೆಲ್ಲಾ ಆ ಪ್ರೇಮ ಕಥೆಯ ನಾಯಕ ನಾಯಕಿ. ಜಾತಿ ಹಣ ಎಂಬ ಎರಡು ಶತ್ರು… ಅದಕ್ಕೆ ಗ್ರೇಬಿಯಲ್ ತೆಗೆದುಕೊಂಡ ನಿರ್ಧಾರ ಬೇಲ್ಲಾ ಅಷ್ಟೆ ಅಲ್ಲಾ ಓದುವ ನಮ್ಮ ಮನಸ್ಸು ಕೂಡ ಒಮ್ಮೆ ನೊಂದಿತ್ತು. ಲಿಸ್ಟನ್ ನಗರದಿಂದ ಭಾರತದ ತನಕ ಪ್ರಯಾಣ ಅಷ್ಟು ಸುಲಭವಲ್ಲ ಅನ್ನೋದು ಅವರಿಬ್ಬರಿಗೂ ಗೊತ್ತಿತ್ತು. ಅದಕ್ಕಾಗಿಯೇ ಬೆಲ್ಲಾ ಕೊನೆಗೆ ಕೇಳಿದ್ದು “ನಿನಗಾಗಿ ಕಾಯಲೇ “ಎಂದು ತುಂಗ ಭದ್ರಾ
ವಿಜಯನಗರ ಸಾಮ್ರಾಜ್ಯ ಶ್ರೀಮಂತಿಕೆ ಸಾಂಸ್ಕೃತಿಕವಾಗಿ, ಆರ್ಥಿಕವಾಗಿಯೂ ಕೂಡ… ಕೃಷ್ಣದೇವರಾಯರು ಈ ಕಾದಂಬರಿಯಲ್ಲಿ ಅಲ್ಲಿ ಇಲ್ಲಿ ಬಂದು ಹೋಗುತ್ತಾರೆ.
ಇಲ್ಲಿ ಆರಂಭವಾಗುವುದೇ ಜಾತ್ರೆ ಸಂಭ್ರಮದ ಮೂಲಕ ರಥೋತ್ಸವ ಜಾತ್ರೆ ಆ ದಿನಗಳ ಸಂಭ್ರಮ ತುಂಬಾ ಅದ್ಭುತವಾಗಿ ಚಿತ್ರಿಸಿದ್ದಾರೆ ಕಣ್ಣ ಮುಂದೆ ಆ ಶತಮಾನದ ರಥೋತ್ಸವ ಬಂದು ಹೋಗುತ್ತದೆ. ವಿಜಯನಗರದಿಂದ ಸ್ವಲ್ಪ ದೂರದಲ್ಲಿರುವ ತೆಂಬಕಪುರ ಎಂಬ ಹಳ್ಳಿಯಲ್ಲಿ ಸಾಮಾನ್ಯ ಜನರ ನೋವು ನಲಿವು ಬದುಕಿನ ಹೋರಾಟ ದೇವಸ್ಥಾನ, ಪದ್ಧತಿ, ಧರ್ಮ ,ಶಾಸ್ತ್ರ ಆಗಿನ ಹೆಣ್ಣು ಮಕ್ಕಳ ಮನಸ್ಥಿತಿ… ಹೆಣ್ಣಿನಿಂದ ಯುದ್ಧವಾಯಿತು ಹಾಗೆ ಅಂದರೆ ಒಂದು ರೀತಿ ನೋವಿನ ನಗುವೇ ಬರುತ್ತೆ ಯುದ್ಧಗಳು ಆಗಿದ್ದು ಹೆಣ್ಣಿನಿಂದ ಅಲ್ಲ ಹೆಣ್ಣಿಗಾಗಿ ಅನ್ನುವುದು ಈ ಕಥೆಯಲ್ಲಿ ನಿಜ ಅನಿಸಿತ್ತು.
ಅಹಂ ಇಂದ ಯುದ್ಧವೇನೋ ಆಗುತ್ತೆ ಆದರೆ ಸೋತವನು ಸಾಯುತ್ತಾನೆ, ಗೆದ್ದವನು ಸಾಯುತ್ತಾನೆ ಮಾನಸಿಕವಾಗಿ. ಎನ್ನುವುದು ಮಾಪಳ, ಕೇಶವ ಹೊಡೆದಾಟದಲ್ಲಿ ಗೊತ್ತಾಗಿದ್ದು. ಅವರಿಬ್ಬರ ಗೆದ್ದವರು ಸೋತಂತೆ ಅಲ್ಲವೇ ಇದ್ದಿದ್ದು. ಹಂಪಮ್ಮ ಅವರಿಬ್ಬರ ಕಾದಾಟ ತಡೆಯುವ ಶಕ್ತಿ ಇತ್ತು ಅನ್ನೋದು ನಿಜ ಗುಣಸುಂದರಿ ಅರ್ಥೈಸಿದ್ದಳು ಕೂಡ. ಗೆದ್ದವನ ಪ್ರೀತಿ ಎಂಬ ಭಾವ ಅದು ಎಲ್ಲಿಗೆ ತಂದು ಮುಟ್ಟಿತು…? ಇಲ್ಲಿ ಚಂಪಕ್ಕ ಗುಣಸುಂದರಿಯ ಪಾತ್ರ ತುಂಬಾ ಇಷ್ಟ ಆಯ್ತು. ಮುಗ್ಧ ಮಗು ಈಶ್ವರಿಯ ಮಾತುಗಳು ಸರಿ ತಪ್ಪುಗಳ ಅನ್ವೇಷಣೆ ಮಾಡುವಂತಿಯೇ ಇತ್ತು.

ಈಶ್ವರಿ ಹಂಪಮ್ಮ ಮಮತೆ ಅವರಿಬ್ಬರ ಒಡನಾಟ ಕಡೆಯವರೆಗೂ ನಮ್ಮನ್ನು ಕಾಡುತ್ತೆ. ಇಲ್ಲಿ ದಿಬ್ಬಕ್ಕನ ಅಸಹಾಯಕತೆ, ಒಂದು ಗಂಡು ಮಗುವಿಗಾಗಿ ಅವಳ ಹೋರಾಟ, ಗಂಡನಿಗೆ ಮತ್ತೊಂದು ಮದುವೆಯಾಗಲಿ ಎಂದು ಯೋಚಿಸುವ ರೀತಿ ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳ ಮನಸ್ಥಿತಿ ಎಂತದ್ದು ಎಂದು ಅರ್ಥವಾಗಿತ್ತು. ಸತಿ ಸಹಗಮನ ಪದ್ಧತಿ ಓದುವಾಗ ಒಂದು ರೀತಿ ವಿಚಿತ್ರ ಸಂಕಟ ಅದು ಕೂಡ ನಮಗೆ ಇಷ್ಟವಾದ ಪಾತ್ರವೇ ಆ ಪದ್ಧತಿಯಲ್ಲಿ ಆ ಬೆಂಕಿಯಲ್ಲಿ ಉರಿದು ಹೋಗುತ್ತಿದ್ದರೆ…? ಕೇಶವ ವೀರ ಹೌದು ಆದರೆ ಪಲಾಯನವಾದಿ, ಮಪಳ ಕೂಡ ಅಷ್ಟೇ.. ಆಗ ಈಗ ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಂಡವರು ತುಂಬಾ ಕಮ್ಮಿ. ಆಗಲು ಕೂಡ ಸಂಬಂಧಗಳು ಸ್ವಾರ್ಥ ತುಂಬಿತ್ತು ಎಂದು ಅರ್ಥವಾಗಿದ್ದು. ಹಂಪಮ್ಮ ದೀಬಕ್ಕನ ಪರಿಸ್ಥಿತಿಯಲ್ಲಿದ್ದಾಗ ಇಲ್ಲಿ ಹಲವು ಪಾತ್ರಗಳು ಇದೆ ಎಲ್ಲಾ ಪಾತ್ರ ಕೂಡ ವೈಶಿಷ್ಟತೆಯಿಂದ ಕೂಡಿದೆ.
ಅಂಣಂಭಟ್ಟರು ಪಾತ್ರ ಇರಬಹುದು ಅಡವಿಸಾಮಿಯ ಪಾತ್ರ ಕೊನೆವರೆಗೂ ಕಾಡುತ್ತೆ ಒಂದು ಊರು ಹೆಸರು ಬದಲಾಯಿಸುತ್ತಾರೆ ಎಂದು ಅವರ ಹೋರಾಟ, ತ್ಯಾಗ ಎಂತದ್ದು ನೀವು ಓದಿದಾಗಲೇ ಗೊತ್ತಾಗುವುದು. ಇಲ್ಲಿ ಲೆಂಕಸೇವೆ ಎಂಬ ಪದ್ಧತಿ ಇತ್ತು ಎಂದು ತಿಳಿದೆ ಆಶ್ಚರ್ಯವಾಯಿತು. ಅರಗಿಸಿಕೊಳ್ಳುವುದಕ್ಕೂ ಆಗಲಿಲ್ಲ… ಮೆಣಸಿನ ಕಾಯಿ ಅದಕ್ಕೆ ಹೆಸರು ಬಂದ ರೀತಿ ಓದಿದಾಗ ಮುಖದಲ್ಲೊಂದು ನಗು ಮೂಡಿತ್ತು.
ಪೋರ್ಚುಗೀಸ್ ನಾವಿಕರು ಅಲ್ಬೂಕರ್ಕ್ ಎಂಬ ವಿಚಿತ್ರ ಮನುಷ್ಯ ಗೋವಕ್ಕೆ ಬಂದು ಅದನ್ನು ವಶಪಡಿಸಿಕೊಳ್ಳಲು ಅವನ ಹೋರಾಟ ಅವನಿಗೆ ಸಮನಾಗಿ ಹೋರಾಟ ಮಾಡಿ ನಿಂತ ಇಲ್ಲಿನ ಸುಲ್ತಾನ, ತನ್ನ ನೌಕೆಯಲ್ಲಿ ಆಹಾರ ಕಮ್ಮಿಯಾದರೂ ಇಲಿಯನ್ನೇ ಬೇಯಿಸಿ ತಿನ್ನಿ ಎಂದು ಹೇಳುವ ಅಲ್ಬೂಕರ್ಕ್ ಮನಸ್ಥಿತಿ ಅಲ್ಲಿಗೆ ಯೋಚಿಸಬಹುದು. ಗ್ರೇಬಿಯಲ್ ಗೆ ತಾನು ತೆಗೆದುಕೊಂಡಿದ್ದು ಎಂಥ ತಪ್ಪು ನಿರ್ಧಾರ ಎಂದು ಅರ್ಥವಾದರು ಕಾಲ ಮುಗಿದು ಹೋಗಿತ್ತು. ತಿಮ್ಮೊಜಿ ಮುಮ್ತಾಜ್ ಪಾತ್ರಗಳು ಮನಸಲ್ಲಿ ಉಳಿದುಬಿಡುತ್ತದೆ.
ಕೊನೆಗೆ ಊಹಿಸಲಾಗದ ತಿರುವು. ಇಲ್ಲಿ ಇತಿಹಾಸ, ಯುದ್ಧ ,ಒಳ ಜಗಳ, ಅಸಹಾಯಕತೆ ಎಲ್ಲವನ್ನು ಈ ಕಾದಂಬರಿಯಲ್ಲಿ ಬರೆದಿದ್ದಾರೆ… ನವಿರಾದ ಪ್ರೇಮ ಕಥೆ ಓದುವಾಗ ಪ್ರೇಮಕಥೆ ಹೀಗೆ ಇರಬೇಕು ಅನ್ಸುತ್ತೆ. ನನಗೆ ತುಂಬಾ ಇಷ್ಟವಾದ ಪಾತ್ರ ಅಮ್ಮದಕಣ್ಣ ಅವನ ಮನಸ್ಥಿತಿ ,ಅವನ ಪರಿಸ್ಥಿತಿ ಒಮ್ಮೆ ಪ್ರೇಮ ಕಳೆದುಕೊಂಡರು ಹಂಪಮ್ಮ ಎಂಬ ಸುಂದರ ಪ್ರೇಮವೋ ಸ್ನೇಹವೋ ಪಡೆದ.. ಆದರೆ ಅದೆಷ್ಟು ದೂರ ನಡೆಸಿಕೊಂಡು ಬಂದ ಒಂದು ಚೂರು ಅವಳನ್ನು ತಪ್ಪಾದ ದೃಷ್ಟಿಯಲ್ಲಿ ನೋಡಲಿಲ್ಲ… ದೈಹಿಕ ಸೌಂದರ್ಯಕ್ಕಿಂತ ಮಾನಸಿಕ ಸೌಂದರ್ಯ ಎಷ್ಟು ಮುಖ್ಯ ಅನ್ನೋದು ಅರ್ಥೈಸಿದ ಪಾತ್ರ. ಸಂಭಾಷಣೆ ಅದ್ಭುತ, ವಿಮರ್ಶೆಗೆ ನಿಲುಕದ ಕಾದಂಬರಿ. ಇಲ್ಲಿ ತುಂಬಾ ವಿಷಯ ಹೇಳದೆ ಬಿಟ್ಟಿದ್ದೀನಿ. ತುಂಬಾ ಪಾತ್ರ ವಿಮರ್ಶೆ ಮಾಡಿಲ್ಲ. ಹೇಳುವುದು ತುಂಬಾ ಇದೆ. ಆದರೆ ವಿಮರ್ಶೆ ಮಾಡೋದು ತುಂಬಾ ಕಷ್ಟ.
ತುಂಬಾ ಕಾಡಿದ್ದು, ಒಂದು ಕಡೆ ಮೆಣಸಿನ ಕಾಳನ್ನು ರಕ್ತ ಮೇಲೆ ಬಿದ್ದರೂ ಆರಿಸಿಕೊಂಡವರು. ಮತ್ತೊಂದು ಕಡೆ ಅದೇ ಮೆಣಸಿನಕಾಳು ರಥಕ್ಕೆ ಎಸೆಯುತಿದ್ದಿದ್ದು. ಮೆಣಸಿನ ಕಾಳನ್ನು ನೈವೇದ್ಯ ಮಾಡುತ್ತಿದ್ದಿದ್ದು.
- ಅರ್ಚನಾ ರವಿ
