ತಾಮ್ರಿ ಕುಂಡ್

ತಾಮ್ರಿ ಕುಂಡ್ ಭಾರತದ ಉತ್ತರಾಖಂಡ್‌ನ ಪಿಥೋರಗಢ್ ಜಿಲ್ಲೆಯ ಸುಂದರವಾದ ಗಿರಿಧಾಮವಾದ ಮುನ್ಸಿಯಾರಿಯಲ್ಲಿರುವ ಎತ್ತರದಲ್ಲಿರುವ ಸುಂದರವಾದ ಸರೋವರವಾಗಿದೆ. ವಸಂತ ಗಣೇಶ್ ಅವರು ತಾಮ್ರಿ ಕುಂಡ್ ದ ಬಗ್ಗೆ ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….

ತಾಮ್ರಿ ಕುಂಡ್ ಇದು ಹಿಮಾಲಯದ ತಪ್ಪಲಿನ ಕಾಡಿನ ನಡುವೆ ಇದೆ. ಹಿಮದಿಂದ ಆವೃತವಾದ ಶಿಖರಗಳು ಮತ್ತು ಹಚ್ಚ ಹಸಿರಿನಿಂದ ಕೂಡಿರುವ ಈ ಪ್ರದೇಶ ಕಣ್ಣಿಗೆ ಆನಂದ ಮನಸ್ಸಿಗೆ ಚೈತನ್ಯ ನೀಡುವಂತಹ ಸ್ಥಳವಾಗಿದೆ. ತಾಮ್ರಿ ಕುಂಡ್‌ಗೆ ಚಾರಣಿಗರಿಗೆ, ಸಾಹಸ ಪ್ರಿಯರಿಗೆ ಮತ್ತು ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ತಾಣವಾಗಿದ್ದು, ಇದನ್ನು ತಲುಪುವ ದಾರಿಯುದ್ದಕ್ಕೂ ಹಸಿರಿನ ಸಿರಿ, ಹಿಮಾವೃತವಾದ ದೃಶ್ಯಗಳು ಕಂಡು ಬರುತ್ತದೆ.

ತಾಮ್ರಿ ಕುಂಡ್ ಸರೋವರವು ಅದರ ಪ್ರಶಾಂತ ಪರಿಸರ, ಸ್ವಚ್ಛವಾದ ತಿಳಿ ನೀರಿನಿಂದ ತುಂಬಿದೆ. ಹಿಮಾಲಯದ ಸುತ್ತಮುತ್ತಲಿನ ಹಿಮದಿಂದ ಆವೃತವಾದ ಶಿಖರಗಳ ನಡುವೆ ಇದ್ದು, ಸುತ್ತ ಮುತ್ತಲೂ ಓಡಾಡುವ ಕಾಡು ಪ್ರಾಣಿಗಳಿಗೆ, ಇಲ್ಲಿಗೆ ಬರುವ ಪ್ರವಾಸಿಗರಿಗೆ ದಾಹವನ್ನು ತಣಿಸುವ ಸಿಹಿ ನೀರಿನ ಸರೋವರವಾಗಿದೆ.

ತಾಮ್ರಿ ಕುಂಡ್ ಚಾರಣಿಗರಿಗೆ ಒಂದು ಅದ್ಭುತವಾದ ತಾಣವಾಗಿದೆ. ಸರೋವರಕ್ಕೆ ಹೋಗಲು ವಿವಿಧ ಟ್ರೆಕ್ಕಿಂಗ್ ಮಾರ್ಗಗಳಿವೆ. ಸರೋವರದ ಬಳಿ ಸಣ್ಣ ಸಣ್ಣ ಶಿಬಿರವನ್ನು ಹಾಕಿಕೊಂಡು ಜನರು ಒಂದೆರಡು ರಾತ್ರಿಗಳನ್ನು ಕಳೆಯಯಬಹುದಾಗಿದೆ. ಸುತ್ತಲಿನ ಸುಂದರ ಪರಿಸರ, ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳ ಬೆಳಕಿನಲ್ಲಿ ಮಾಡಬಹುದಾದ ಕ್ಯಾಂಪಿಂಗ್ ವಿಶೇಷ ಅನುಭವವನ್ನು ನೀಡುತ್ತದೆ.

ಇದು ಛಾಯಾಗ್ರಾಹಕರಿಗೆ, ಪ್ರಾಣಿ ಪಕ್ಷಿಗಳ ವೀಕ್ಷಕರಿಗೆ, ಧ್ಯಾನ ಮಾಡುವವರಿಗೆ ಅತ್ಯಂತ ಸಮರ್ಪಕ ತಾಣವಾಗಿದೆ. ಇಲ್ಲಿನ ಸ್ವಚ್ಚ ಗಾಳಿ, ಪರಿಸರ ದೇಹಕ್ಕೆ ಚೈತನ್ಯ ನೀಡಿದರೆ ಕಣ್ಣಿಗೆ ಕಾಣುವ ನೋಟ ಮನಸ್ಸಿಗೆ ಮುದ ನೀಡುವ ಪ್ರದೇಶವಾಗಿದೆ.


  • ವಸಂತ ಗಣೇಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading