ಈಗಿನ ಕಾಲದ ಹೆಣ್ಣು- ರಾಘವೇಂದ್ರ.ಕೆ

ಆಧುನಿಕ ಹೆಣ್ಣುಮಕ್ಕಳು ಧರಿಸುವ ಬಟ್ಟೆ ಕಾಮಕ್ಕೆ ಪ್ರಚೋದನೆ ನೀಡುತ್ತಿದೆಯೆ? ಎನ್ನುವ ಕುರಿತು ರಾಘವೇಂದ್ರ.ಕೆ ಅವರ ಒಂದು ಚಿಂತನ ಲೇಖನ. ತಪ್ಪದೆ ಓದಿ…

ನಾವು ಹೇಗೆ ಬೇಕಾದ್ರೂ ಬಟ್ಟೆ ಧರಿಸ್ತೀವಿ ನೀವು ನೋಡುವ ದೃಷ್ಟಿಕೋನವನ್ನು , ಮನದಲ್ಲಿ ಮೂಡುವ ಭಾವನೆ ಮತ್ತು ಕಾಮನೆಗಳಿಗೆ ಬ್ರೇಕ್ ಹಾಕಿಕೊಳ್ಳಿ ಅಥವಾ ಬದಲಾಯಿಸಿಕೊಳ್ಳಿ ಎನ್ನುತ್ತದೆ ಕೆಲವು ಹುಡುಗೀರು.

ಆದರೆ ಯಾವ ಮನುಷ್ಯನಿಗೆ ತಾನೇ ಸುವಾಸನೆ ಭರಿತ ಬಿರಿಯಾನಿಯನ್ನು ತೆರೆದಿಟ್ಟು ನೋಡ್ಬೇಡಿ, ಮುಟ್ಟಬೇಡಿ, ತಿನ್ನಲೂ ಬೇಡಿ ಅಂದ್ರೆ ಹೇಗೆ ಕಂಟ್ರೋಲ್ ಮಾಡೋದು ಎಂತ ಹುಡುಗುರು ಹೇಳುತ್ತಾರೆ.

ಫೋಟೋ ಕೃಪೆ : peakpx

ನಾವು ಪ್ರತಿನಿತ್ಯದ ಬದುಕಿನಲ್ಲಿ ಎಷ್ಟೋ ಜನರನ್ನು ನೋಡುತ್ತೇವೆ. ಹೆಣ್ಣು ಅರೆ ಬೆತ್ತಲೆ ಅಂದ್ರೆ ಯಾವ್ದು ಮುಚ್ಚಿರಬೇಕೋ ಅದನ್ನ ತೆರೆದು ಚುರು ಪಾರು ತೋರಿಸುತ್ತ ಸೆಳೆಯುವಂತಹ ವಸ್ತ್ರಗಳನ್ನು ಧರಿಸಿದರೆ ಕಾಮುಕರಿಗೆ ಪ್ರಚೋದನೆಯನ್ನು ನೀಡಿದಂತೆ. ನಮ್ಮ ಅಕ್ಕ- ತಂಗಿಯರು ಅಥವಾ ಮಡದಿ ಆ ರೀತಿಯಾಗಿ ಧರಿಸಿದರೆ ನಾವು ಒಪ್ಪುವುದಿಲ್ಲ. ಆದ್ರೆ ಈಗ ಸ್ವಲ್ಪ ಕಾಲ ಬದಲಾಗಿದೆ. ಪಕ್ಕದಲ್ಲಿ ಗಂಡ ತೋಳು ತೋರಿಸ್ಕೊಂಡು ಜೊತೆಗೆ ಮಡದಿ ಇನ್ನೇನೋ ತೋರುವ ಹಾಗೆ ವಸ್ತ್ರಗಳನ್ನು ಧರಿಸಿ ಹೋಗುವುದು ಅದನ್ನ ನೋಡಿ ಬರಗೆಟ್ಟ ಮನಗಳು ಒಳಗೊಳಗೇ ಗುಳಿಗೆ ನುಂಗುವುದನ್ನ ನಾವೆಲ್ಲರೂ ಬಲ್ಲೆವು ಯಾಕೆಂದರೆ ಇದು ನಮಗೂ ಆಗುವ ಅನುಭವವೇ ಆಗಿದೆ.

ಇಷ್ಟಾದರೂ ಏಕೆ ಹೀಗೆ ಎಂಬುದು ಅರ್ಥವಾಗತ್ತಿಲ್ಲ. ಈ ರೀತಿಯ ತೋರಿಸುವ ಮನಸ್ಥಿತಿಗೆ ಕಾರಣ ಗೊತ್ತಿಲ್ಲ. ಕಸ ಗುಡಿಸುವಾಗ ಬಗ್ಗಿ ತೋರಿಸಿ ಗುಡಿಸುವವರು ಒಂದೆಡೆ, ಕೈ ಅಡ್ಡ ಇಟ್ಟು ಬಗ್ಗುವವರು ಇನ್ನೊಂದೆಡೆ , ಇನ್ನೊಂದು ವಸ್ತ್ರದಿಂದ ಮುಚ್ಚಿ ಬಗ್ಗುವವರು ಮತ್ತೊಂದೆಡೆ . ಎಲ್ಲವೂ ಮಾಯೆ ಯಾರು ಏನೇ ಹೇಳಿದರೂ ಕಂಡಾಗ ಮನ ಕೆಂಡವಾಗೋದು ಉಪ್ಪು ಕಾರ ತಿನ್ನುವ ಪ್ರತಿಯೊಬ್ಬ ಮನುಷ್ಯನಿಗೂ ಸಹಜ, ನಮ್ಮ ಮನೆಯ ಮಕ್ಕಳನ್ನ, ಬಲ್ಲವರನ್ನ ಸರಿಯಾಗಿ ನೋಡಿಕೊಳ್ಳುವುದು ಪ್ರತಿಯೊಬ್ಬ,ಮಗ ,ಅಣ್ಣ, ತಮ್ಮ ಹಾಗೂ ಪತಿ,ತಂದೆ ತಾಯಿಯ ಕರ್ತವ್ಯ . ಆದರೆ ಎನು ಮಾಡೋಣ ಅವರೆಲ್ಲ ಮಾತು ಕೇಳ್ಬೇಕಲ್ವಾ? ಉದಾಹರಣೆಗೆ ನನ್ನ ತಂಗಿಯರೆ ನನ್ನ ಮಾತು ಕೇಳಲ್ಲ ಹಣೆಗೆ ಇಡಿ ಅಂದ್ರೆ ಇಡಲ್ಲ ಯಾವಾಗ್ಲೂ ಧುಪ್ಪಟ್ಟ ಹಾಕಿ ಅಂದ್ರೆ ಹಾಕಲ್ಲ ಯಾರಿಗೆಳೋಣ ಈ ಪ್ರಾಬ್ಲೆಮ್ಮು .

ಸೀರೆ ಉಟ್ರು ಹೆಚ್ಚಿನ ಭಾಗ ಮೈ ಕಾಣುತ್ತೆ. ಚೂಡಿದಾರ ಹಾಕಿ ವೇಲ್ ಹಾಕದೆ ಹೋದ್ರೆ ಕೆಲವು ಬಾಗ ಕಾಣುತ್ತೆ. ಹಾಗಾದ್ರೆ ಯಾವ್ದು ಬೆಸ್ಟ್ . ಓದುವಾಗ ನಿಮ್ಗೆ ಎನ್ ಅನ್ನಿಸ್ತು ಅನ್ನೋದು ನಿಮ್ಗೆ ತಿಳಿದರೆ ಅಷ್ಟೇ ಸಾಕು. ಬೆಳೆಯುತ್ತಿರುವ ಕುಡಿಗಳಿಗೆ ಸರಿ ತಪ್ಪುಗಳ ಹಾಗೂ ಅದರಿಂದ ಆಗುವ ಪರಿಣಾಮಗಳ ಅರಿವು ಮೂಡಿಸುವ ಕೆಲಸ ನಮ್ಮಿಂದ ಆಗಬೇಕಿದೆ .


  • ರಾಘವೇಂದ್ರ.ಕೆ  (ಸಮಾಜ ಸೇವಕರು, Kannadigana Creations ಸಂಸ್ಥಾಪಕರು, ಹವ್ಯಾಸಿ ಬರಹಗಾರರು) ನೊಣಬೂರು. 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW