ಮಾನವ-ಚಿರತೆ ಸಂಘರ್ಷದಲ್ಲಿ ‘ತುರಹಳ್ಳಿ’ ಅರಣ್ಯ

ಕಾಡು ಬೆಳೆಸಿ, ಪ್ರಾಣಿಗಳನ್ನು ಜೀವಿಸಲು ಬಿಡಿ, ಇಲ್ಲವಾದರೆ ನಾಡಿಗೆ ಆಪತ್ತು ಎನ್ನುವ ಎಚ್ಚರಿಕೆ ಗಂಟೆಯನ್ನು ನಾಡಿನ ಜನತೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಗಿರಿ ವಾಲ್ಮೀಕಿ ಅವರು ತಮ್ಮ ಲೇಖನದ ಮೂಲಕ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…

ತುರಹಳ್ಳಿ ಅರಣ್ಯ ಸುತ್ತ ಬೆಂಗಳೂರು ಬೆಳಸಿ ,ಅರಣ್ಯವನ್ನು ದ್ವೀಪವನ್ನಾಗಿಸಿ,ತುರಹಳ್ಳಿ ಮತ್ತು ಬನ್ನೇರುಘಟ್ಟ ನಡುವೆ ಮುಂಚೆ ಇದ್ದ ಪ್ರಾಣಿಗಳ ಕಾರಿಡಾರ್ ಅನ್ನು ಮಧ್ಯದಲ್ಲಿ ನೈಸ್ ರಸ್ತೆ ನಿರ್ಮಿಸಿ ಹಾಳು ಮಾಡಿ ,ಈಗ ಚಿರತೆ ಬೆಂಗಳೂರಿನ ಒಳಗೆ ಬಂದಿದೆ ಅಂತ ಹೇಳಿದ್ರೆ..?

ಸಿಕ್ಕ, ಸಿಕ್ಕ ಕಡೆ ಅವೈಜ್ಞಾನಿಕ ಯೋಜನೆಗಳನ್ನು ಆರಂಭಿಸೋದು, ಕಾಡು ಸವರವುದು ,ಯಥೇಚ್ಛವಾಗಿ ಬೀಳೋ ಮಳೆ ನೀರನ್ನೇ ಸಂಗ್ರಹಿಸಲು ಆಗದೇ,ಏನೊಂದು ಕ್ರಮ ಕೈಗೊಳ್ಳದೇ ಸಹಜವಾಗಿ ಹರಿಯೋ ನದಿಗಳನ್ನ ವಿರುದ್ದ ದಿಕ್ಕಿಗೆ ತಿರುಗಿಸಿ ಕಾಡುಗಳನ್ನು ಒಣಗಿಸೋದು. ಆಹಾರ ನೀರು ಕಾಣದ ಪಾಪದ ಜೀವಿಗಳು ಊರಿಗೆ,ಹಳ್ಳಿಗೆ ಬಂದಾಗ ನರಭಕ್ಷಕ ಪಟ್ಟ ಕಟ್ಟಿ ಅದನ್ನು ಕೊಲ್ಲಲು ಖುದ್ದು ಪ್ರಭುತ್ವವೇ ನಿಂತು ಫರ್ಮಾನು ಹೊರಡಿಸೋದು.

ಫೋಟೋ ಕೃಪೆ : 365hops

ನೀವೆಲ್ಲಾ ಉದ್ದಾರ ಆಗ್ತೀರಾ, ಕಾಡು ಕಡಿದವನ್ಯಾವನೂ ಉದ್ದಾರ ಆಗಿಲ್ಲಾ, ಪ್ರಾಣಿಗಳ ಸಹಜ ಬದುಕು ಬೀದಿಗೆ ಬಂದಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಾಗರೀಕರ ಪಾಲಿದೆ. ನೀವ್ಯಾರೂ ನಾಗರೀಕರು ಅಂತನ್ನೆಸಿಕೊಳ್ಳುವುದಿಲ್ಲ ಬಿಡಿ.

ಮನುಷ್ಯರಾದವರು ಅರ್ಥ ಮಾಡ್ಕೋಬೇಕು ಈ ಭೂಮಿ ,ಪ್ರಕೃತಿ ,ನದಿ,ಕೆರೆ,ಬಳ್ಳಿ,ಹುಲ್ಲುಗಾವಲು ನಮ್ಮೊಬ್ಬರದ್ದೇ ಸ್ವತ್ತಲ್ಲ. ಇವುಗಳನ್ನು ನಂಬಿ ಬದುಕುವ ಅಸಂಖ್ಯಾತ ಜೀವಜಗತ್ತಿದೆ ಈ ಭೂಮಿಯ ಮೇಲೆ. ಅವುಗಳು ಯಾವತ್ತೂ ನಿಮ್ಮ ಮನೆಗಳಿಗೆ ಬಂದು ನಿಮ್ಮ ಖುಷಿಯಾದ ನಿಮ್ಮ ಮತ್ತು ನಿಮ್ಮ ಕುಟುಂಬದ ಖುಷಿಯನ್ನ ,ನಿಮ್ಮ ನೆಲೆಯನ್ನೆಂದು ಕಿತ್ತುಕೊಂಡಿಲ್ಲಾ.
ಆದ್ರೆ ಮನುಷ್ಯ ಎನ್ನುವ ಮೃಗರೂಪಿ ಏನ್ ಬೇಕಾದ್ರೂ ಮಾಡ್ಬೋದು.ಯಾವ ನದಿಯನ್ನ ಬೇಕಾದ್ರೂ ತಿರುಗಿಸಬೋದು,ಕೆರೆಯನ್ನ ಮುಚ್ಚಿ ಹಾಕಬಹುದು ಅದನ್ನು ನಂಬಿಕೊಂಡು ಬದುಕುವ ಯಾವ ಜೀವಿಯ ಪೂರ್ವಾನುಮತಿ ಕೇಳದೆ ನಾಮಾವಶೇಷ ಮಾಡಬಹುದು.

ಫೋಟೋ ಕೃಪೆ : google

ಆರೋ ದೀಪಾ ಜೋರಾಗಿ ಉರಿಯುತ್ತಂತೆ, ಇನ್ನೂ ನಿಮ್ಮ ಯಕಶ್ಚಿತ್ ಅಧಿಕಾರ, ಕುರ್ಚಿ, ದರ್ಪ,  ನೀಚಮಟ್ಟದ ಕ್ಷುಲ್ಲಕ ರಾಜಕಾರಣ ಎಲ್ಲವೂ ಕ್ಷಣಿಕವಷ್ಟೇ. ಜಗತ್ತು, ಈ ಪರಿಸರ ತುರ್ತು ಪರಿಸ್ಥಿತಿಯಲ್ಲಿದೆ. ಎಲ್ಲರೂ ಹಂತ-ಹಂತವಾಗಿ ನಾಶವಾಗ್ತೀವಿ. ನಾಶವಾಗ್ಬೇಕು ಕೂಡಾ…

“ಬದುಕು ಮತ್ತು ಬದುಕಲು ಬಿಡಿ”(Live and let live ) ಎನ್ನುವ ದಾರ್ಶನಿಕರ ಮಾತಿಗೆ ಅರ್ಥವೇನಾದರೂ ಇದೇಯನ್ರೀ..?

ಮಾನವ-ಚಿರತೆ ಸಂಘರ್ಷ. #ಮಾನವವನ್ಯಜೀವಿಸಂಘರ್ಷ


  • ಗಿರಿ ವಾಲ್ಮೀಕಿ 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW