ಟರ್ಕಿ ಐಸ್ ಕ್ರೀಮ್ ಯಾರಾದ್ರೂ ತಿಂದಿದ್ದೀರಾ? ತಿಂದಿಲ್ಲ ಅಂದ್ರೆ ಹುಡುಕಿಕೊಂಡು ಹೋಗಿ ತಿನ್ನಿ, ಯಾಕೆಂದರೆ ಇದು ತಿನ್ನೋದಕಷ್ಟೇ ಅಲ್ಲ, ನೋಡೋಕು ಸಖತ್ ಮಜಾವಾಗಿರುತ್ತದೆ. ಇದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ…

(ಟರ್ಕಿ ಐಸ್ ಕ್ರೀಮ್ ಸಂಸ್ಥಾಪಕರು) ಫೋಟೋ ಕೃಪೆ : great big story
ಇದು ಸಾಮಾನ್ಯ ಐಸ್ ಕ್ರೀಮ್ ನಂತೆ ಕರಗಿ ಹೋಗುವುದಿಲ್ಲ, ರಬ್ಬರ್ ತರ ಎಳೆದು ತಿನ್ನಬಹುದು. ಟರ್ಕಿ ಐಸ್ ಕ್ರೀಮ್ ವ್ಯಾಪಾರಿ ಮಾಡುವ ಕರಮತ್ ಒಮ್ಮೊಮ್ಮೆ ತಮಾಷೆ ಅನ್ನಿಸಿದರೆ, ಇನ್ನು ಕೆಲವೊಮ್ಮೆ ಸಿಟ್ಟು ತರಿಸುತ್ತದೆ, ಇನ್ನೇನ್ನು ಕೈಯಲ್ಲಿ ಐಸ್ ಕ್ರೀಮ್ ಬಂತು ಅಂತ ಹಿಡಿಯೋಕೆ ಹೋದ್ರೆ ಅಲ್ಲಿಂದ ಮಂಗಮಾಯಾ…
ನಮ್ಮ ತಲೆಮೇಲೆ, ಮುಖದ ಕೆಳಗೆ ಓಡಾಡಿ ಬರುತ್ತದೆ, ಸಾಕು…ಈ ಐಸ್ ಕ್ರೀಮ್ ಸಹವಾಸ ಅನ್ನುವಷ್ಟು ಸಿಟ್ಟು ಬಂದು ಅಲ್ಲಿಂದ ಜಾಗ ಖಾಲಿ ಮಾಡೋನ ಅಂತ ಅನಿಸಿದಾಗ ಐಸ್ ಕ್ರೀಮ್ ಕೈಗೆ ಬರುತ್ತದೆ.

ಫೋಟೋ ಕೃಪೆ : great big story
ಟರ್ಕಿ ಐಸ್ ಕ್ರೀಮ್ ಮಾಡುವ ಪ್ರಮುಖ ಫ್ಯಾಕ್ಟರಿ ಟರ್ಕಿಯ ಕಹ್ರಾಮನ್ ಮರಸ್ ನಲ್ಲಿದೆ. ಸಾಕಷ್ಟು ದೊಡ್ಡದಾಗಿರುವ ಈ ಫ್ಯಾಕ್ಟರಿಯನ್ನು ನಾಲ್ಕನೆಯ ತಲೆಮಾರಿನವರಾದ ಅಟಿಲ್ಲಾ ಕಂಬುರ್ ಅವರು ನೋಡಿಕೊಂಡು ಹೋಗುತ್ತಿದ್ದಾರೆ.

(ಐಸ್ ಕ್ರೀಮ್ ಸಂಸ್ಥಾಪಕ) ಫೋಟೋ ಕೃಪೆ : great big story
ಈ ಫ್ಯಾಕ್ಟರಿಯಲ್ಲಿ ಒಂದು ತಾಸಿಗೆ ೫ ಟನ್ ಐಸ್ ಕ್ರೀಮ್ ನ್ನು ತಯಾರಿಸಲಾಗುತ್ತದೆ. ಇಲ್ಲಿ ಎಲ್ಲಾ ಬಗೆಯ ಹಣ್ಣಿನ ಐಸ್ ಕ್ರೀಮ್ ಗಳು ತಯಾರಿಸಲಾಗುತ್ತದೆ.
ಈ ಐಸ್ ಕ್ರೀಮ್ ನಲ್ಲಿ ಮೂರೂ ಬಗೆಯ ಪದಾರ್ಥಗಳನ್ನು ಬಳಸಲಾಗುತ್ತದೆ. ಅದರಲ್ಲಿ ಮುಖ್ಯವಾದದ್ದು ಮೇಕೆ ಹಾಲು, ಸಕ್ಕರೆ, ಸಲಿಪ್ ಎನ್ನುವ ಪದಾರ್ಥ. ಸಲಿಪ್ ಪದಾರ್ಥವು ನೆಲದಲ್ಲಿ ಹುಟ್ಟುವ ಒಂದು ರೀತಿಯ ಕಾಡು ಆರ್ಕಿಡ್ ನ ಬೇರು ಆಗಿದ್ದು, ಟರ್ಕಿ ಐಸ್ ಕ್ರೀಮ್ ನಲ್ಲಿ ಇದರ ಪಾತ್ರ ಮುಖ್ಯವಾಗಿದೆ, ಇದನ್ನು ಬಳಸುವುದರಿಂದ ಐಸ್ ಕ್ರೀಮ್ ಎಲಾಸ್ಟಿಕ್ ನಂತೆ ಹಿಗ್ಗುತ್ತದೆ, ರುಚಿಯೂ ಸಾಕಷ್ಟಿರುತ್ತದೆ.

(ಮರಸ್ ಐಸ್ ಕ್ರೀಮ್ ನ ನಾಲ್ಕನೆಯ ತಲೆಮಾರಿನರು ಅಟಿಲ್ಲಾ ಕಂಬುರ್) ಫೋಟೋ ಕೃಪೆ : great big story
ಇತ್ತೀಚಿಗೆ ಅಕ್ಕನ ಮಗಳು ಕುಹೂ ದೆಹಲಿಯ DLF ಮಾಲ್ ನಲ್ಲಿ ಟರ್ಕಿ ಐಸ್ ಕ್ರೀಮ್ try ಮಾಡಿದಳು. ಅವಳ ಅನುಭವವನ್ನು ಈ ವಿಡಿಯೋದಲ್ಲಿ ನೋಡಬಹುದು.
ಮಕ್ಕಳ ಬಾಯಿ ಮತ್ತು ಕಣ್ಣಿಗೆ ಈ ಟರ್ಕಿ ಐಸ್ ಕ್ರೀಮ್ ಹಬ್ಬವವನ್ನುಂಟು ಮಾಡುವುದಂತೂ ಗ್ಯಾರಂಟಿ. ನಮ್ಮ ದೇಶದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಮಾಲ್ ಗಳಲ್ಲಿ ಹೆಚ್ಚಾಗಿ ಟರ್ಕಿ ಐಸ್ ಕ್ರೀಮ್ ಕಾಣಸಿಗುತ್ತದೆ, ಒಮ್ಮೆ ನೀವು ಕೂಡಾ ಟ್ರೈ ಮಾಡಿ…ನಿಮ್ಮ ಅನುಭವವನ್ನು ಹಂಚಿಕೊಳ್ಳಿ.
- ಶಾಲಿನಿ ಹೂಲಿ ಪ್ರದೀಪ್
