ಇಂದು ಅಂಬೇಡ್ಕರ್ ಜನ್ಮದಿನ .ಅಂಬೇಡ್ಕರ್ ಚಿಂತನೆ ,ಅವರ ಪಟ ,ಅವರ ನುಡಿಗಳು ಎಲ್ಲೆಡೆ ರಾರಾಜಿಸುತ್ತಿವೆ …..! ಇದು ಹೊಸದಲ್ಲ ಅಲ್ಲವೇ ಅಲ್ಲ ,ಗಾಂಧಿ ಜಯಂತಿ ದಿನ ಅವರ ಚಿಂತನೆಗಳು ಹರಿಯುತ್ತವೆ ಹೊಳೆಯಾಗಿ…
ಬಸವ ಜಯಂತಿ ದಿನ ಬಸವತತ್ವಗಳು ಎಲ್ಲೆಡೆಯೂ ಅವರ ಚಿಂತನೆಗಳು ಗೋಡೆಯ ಪಟಗಳಾಗಿ ಉಳಿದಿವೆ ಗಟ್ಟಿಯಾಗಿ ! ಬರೆಯುವವರು ಬರೆಯುತ್ತಾರೆ ,ಓದುವವರು ಓದುತ್ತಾರೆ , ಈ ಎಲ್ಲ ಪ್ರಕ್ರಿಯೆಗಳು ನಿರಂತರವಾಗಿ ಕಾಲಾನುಕ್ರಮದಲ್ಲಿ ನಡೆದು ತಣ್ಣಗಾಗುತ್ತವೆ.
ಅದರೆ ತುಕ್ಕುಹಿಡಿದರುವ ನಮ್ಮ ಗಳ ತಲೆಗಳಿಗೆ ಜಂಗು ಬಿಡುವದು ಮಾತ್ರ ಇಲ್ಲ .ಎಗ್ಗಿಲ್ಲದೆ ಸಾಗಿದೆ ಕೋಮುಗಲಭೆ ಗಗನ ಮುಟ್ಟಿದೆ ದಿನ ಬಳಕೆ ವಸ್ತುಗಳ ದರ , ನಿರುದ್ಯೋಗ ದ ಮೊರೆತ ,ಅಬ್ಬರಿಸುವ ಭ್ರಷ್ಟಾಚಾರದ ಹಾವಳಿ ,ಅದಕ್ಕಿಲ್ಲ ಯಾವುದೇ ಅಂಕುಶ …. ದುಡಿದವನಿಂಗಿಂತ, ಲಂಚ ಹೊಡೆದವನೇ ನಾಯಕ …!
ಅಂಬೇಡ್ಕರ್ ಚಿಂತನೆ ಕೇವಲ ಭಾಷಣಕ್ಕೆ ಸೀಮಿತ ಮಾಡಿ ಸಂವಿದಾನವ ತಿಳಿಯದೆ ಬಡಿದಾಡುತ್ತಿದ್ದೇವೆ ಹೊರತು ಸಂವಿದಾನದ ಆಶಯವ ತಿಳಿಯುವಲ್ಲಿ ಯಾರಿಗೂ ಉತ್ಸಹಾವಿಲ್ಲ ಸಮಸ್ಯಗಳನ್ನು ನಿರಂತರವಾಗಿ ಕಾಪಿಡುವ ಜನನಾಯಕರು!!?? ಪ್ರತಿಯೊಂದಕ್ಕೂ ಪರದಾಡುವ ಜನಸಮಾನ್ಯರು, ಕಾಲ ಯಾವುದಾದರೇನು ? ಎಂತಹ ಸಂಕ್ರಾಮಿಕ ರೋಗ. ಬಂದು ಹೋದರೇನು ? ನಮಗಳಿಗೆ ಇಲ್ಲ ನೆಮ್ಮದಿಯ ಬದುಕು ಬದಕುಲು.
ಉಕ್ರೇನ್ ಹತ್ತಿ ಉರಿಯಿತು ರಷ್ಯದ ರೋಷದಲ್ಲಿ , ಶ್ರೀ ಲಂಕಾ ಬೆಂದಿತು ಚೀನಾದ ಸಾಲದಲ್ಲಿ ಹೀಗಿರುವಾಗ ನಮ್ಮ ಭಾರತ ದಲ್ಲಿ ಇರುವ ಸಮಸ್ಯಗಳ ಪರಿಹರಿಸುವ ಗೋಜಿಗೆ ಹೋಗದೆ ತಿನ್ನುವ ಊಟ , ಹಾಕುವ ಬಟ್ಟೆ , ವಾಸಿಸುವ ಸ್ಥಳ, ಜಾತಿ ಎಲ್ಲದಕ್ಕೂ ಕದನ ಘೋಷಣೆ ಮಾಡಿಕೊಂಡಿದ್ದೇವೆ.
” ಧರ್ಮ ,ಕುಲ, ಜಾತಿ, ಲಿಂಗ ಅಥವಾ ಜನ್ಮ ಸ್ಥಳ ಆಧಾರದ ಮೇಲೆ ಭೇದ – ಭಾವವನ್ನು ಪ್ರತಿಬಂಧಿಸ ಬೇಕು” ವಿಧಿ (15)ಎಂಬ ಸಮಾನತೆಯ ನಾವು ಸಂವಿಧಾನ ಅನುಷ್ಠಾನಕ್ಕೆ ಬಂದ ದಿನದಿಂದಲೂ ನಿರಂತವಾಗಿ ಧಿಕ್ಕರಿಸಿದ್ದೇವೆ ….!? ನಿಜಕ್ಕೊ ನಮಗಳ ಸಮಸ್ಯ ಗೆ ಇಂದು ನಮಗೆ ಬೇಕಿರುವದು ಸಂವಿಧಾನದ ಅರಿವು …. ಆಳುವವರಿಗೂ ಇದರ ತಿಳಿವಿಲ್ಲ ಇದ್ದರೆ ಅವರು ಮೂದಲಾಗಿ ಸಂವಿಧಾನವ ದಿಕ್ಕರಿಸುತ್ತಿರಲ್ಲ .ಜಾತಿ ಲೆಕ್ಕಾಚಾರವ ಹಾಕಿ ಮತ ಗಳಿಸುವ ನಾಯಕರು ,ಅದನ್ನು ಬಣ್ಣಬಣ್ಣವಾಗಿ ವೈಭವೀಕವಾಗಿ ಬಿತ್ತರಿಸುವ ಮಾದ್ಯಮಗಳು,
ಈ ನಿಟ್ಟಿನಲ್ಲಿ ನೋಡಿದಾಗ .
ಸಾಕ್ರೇಟಿಸ್ ಅವರ ಈ ನುಡಿಗಳು
” ಜನರು ಎಮ್ಮೆ ಎತ್ತು ದನ , ಕತ್ತೆ,ಕುದರೆಗಳ ಅರಿಸುವಾಗ ಕೊಡ ಅವುಗಳ ಗುಣ, ಸ್ವಾಭಾವ ಉಪಯುಕ್ತತೆ ನೊಡುತ್ತಾರೆ ಆದರೆ ದೇಶದ ಆಡಳಿತ ನಡೆಸುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಯಾವ ಚಾರಿತ್ರ್ಯಿ , ಗುಣಲಕ್ಷಣ ನೋಡದೆ ಕೇವಲ ಜಾತಿ ,ಹಣ,ಹೆಂಡಗಳ ಆಸೆಗೆ ಬಲಿಬಿದ್ದು ಅನರ್ಹರನ್ನು ಆರಿಸುತ್ತಾರೆ ” ಸದಾ ಪ್ರಸ್ತುತ ತನಗಾದ ಅವಮಾನ ,ನೋವು ,ಹಿಂಸೆಯ ನಡುವೆಯು ಬಡತನವ ಮೀರಿ ಬೆಳೆದು ದೇಶಕ್ಕೆ ಸಂವಿಧಾನವ ಅರ್ಪಣೆ ಮಾಡಿದ ಮಾಹನ್ ಚೇತನ ಡಾ|| ಬಾಸಾಹೇಬ್ ಅಂಬೇಡ್ಕರ್ ಅವರ ಆಶಯ ಬೆಳಗ ಬೇಕಿದೆ . ಅಸಹಿಷ್ಣತೆಯ ಕಡಲಲ್ಲಿ ನಲುಗುತ್ತಿರುವ ಸಮಾಜಕ್ಕೆ ಚಿಕಿತ್ಸೆ ಬೇಕಿದೆ .
ಜೈ ಬೀಮ್ ..
- ರೇಶ್ಮಾಗುಳೇದಗುಡ್ಡಾಕರ್