ನಮ್ಮ ದೇಶದಲ್ಲಿ ಜನಸಂಖ್ಯೆ ಕಡಿಮೆ ಇದೆಯೇ? ಅಥವಾ ಹೆಚ್ಚಿದೆಯೋ ? ಈ ಪ್ರಶ್ನೆಗಳಿಗೆ ಲೇಖಕರು ಪ್ರೊ. ರೂಪೇಶ್ ಪುತ್ತೂರು ಅವರು ಓದುಗರಿಗೆ ಉತ್ತರಕೊಡುವಂತೆ ಹೇಳಿದ್ದಾರೆ, ಮುಂದೆ ಓದಿ…
” ಮುಸಲ್ಮಾನರ ಅಜಾನ್ ಕೂಗುವುದಕ್ಕೆ ಕರೆಂಟ್ ಬಿಲ್ ಜಾಸ್ತಿ ಮಾಡೋದು ಗೊತ್ತಾ” ಅಂತ ಬೆಳಿಗ್ಗೆ ಹಾಲು ಖರೀದಿಸುವ ನಂದಿನಿ ಕೇಂದ್ರದ ಪಕ್ಕ ಒಬ್ಬ ವ್ಯಕ್ತಿ ಹೇಳ್ಕೊಂಡು ಹೋದ. ಅದೇ ವ್ಯಕ್ತಿ ಮಾರನೇ ದಿನ ” ಈ ಜನಸಂಖ್ಯೆ ಜಾಸ್ತಿ ಇರೋದ್ರಿಂದ ನಮ್ಮ ದೇಶ ಹಾಳಾಗೋದು. ಅಲ್ಲದೆ ವಿಶ್ವಗುರುವಿನಿಂದ ಅಲ್ಲ” ಎಂದ.

ಫೋಟೋ ಕೃಪೆ : google
ನಾ ಹೇಳಿದೆ ” ನೋಡಪ್ಪ ಬೇರೆ ದೇಶಗಳಲ್ಲಿ ಜನಸಂಖ್ಯೆ ಕಮ್ಮಿ ಇರುವುದರಿಂದ ನಮ್ಮ ಭಾರತೀಯರು ಆ ದೇಶದಲ್ಲಿ ದುಡಿಯಲು ಹೋಗುತ್ತಾರಲ್ಲದೆ,ಅಲ್ಲಿನ ಹಣ ವಿನಿಮಯದಿಂದ ದೇಶಕ್ಕೆ ವಿದೇಶಿ ಹಣ ಹಾಗೂ ತೆರಿಗೆಯೂ ಸಿಗುತ್ತಿದೆ. ಅವರು ಅಲ್ಲಿನ ದುಡಿಮೆಯಿಂದ ಭಾರತದಲ್ಲಿ ಮನೆ ಮಹಡಿ ಕಟ್ಟುವುದರಿಂದ, ಬಸ್ಸು ಲಾರಿ ಸಾರಿಗೆ, ವ್ಯವಹಾರಗಳಲ್ಲಿ ತೊಡಗಿಸುವುದರಿಂದ ಇಲ್ಲಿನ ಕೆಲ ಜನರಿಗೆ ಕೆಲಸವೂ ಸಿಗುತ್ತಿದೆ” ಎಂದಂತೆ ಅವನು ವೇಗವಾಗಿ ನಡೆದು ಹೋದ.
ಮತ್ತೊಂದು ದಿನ #ಪೆಟ್ರೋಲ್ ಹಾಕಿಸುತ್ತಾ , ಪಂಪಿನಲ್ಲಿ “ಏನಾಪ್ಪ ಹಿಂಗೆ ಇಂಧನ ದರ ಏರುತ್ತಿದೆ?” ಎಂದು ಗೊಣಗುತ್ತಿದ್ದೆ.
ತಟ್ಟನೆ ಅಲ್ಲಿಗೆ ಎಲ್ಲಿಂದಲೋ ಬಂದ ವ್ಯಕ್ತಿ ”ಇಲ್ಲಿ ಜನಸಂಖ್ಯೆ ಕಮ್ಮಿ ಇದೆ ಗೊತ್ತಾ?” ಎಂದ. ನಾನು ಆಶ್ಚರ್ಯದಿಂದ ಅವನ ಮುಂದುವರಿದ ಮಾತು ಕೇಳಿದೆ ” ಹಿಂದೆ ತುಂಬಾ ಮಕ್ಕಳಿದ್ದರು. ಭಾರತದ ಜನಸಂಖ್ಯೆ ಜಾಸ್ತಿ ಇತ್ತು. ಆ ನೆಹರು ಎರಡು ಮಗು ಸಾಕು ಎಂದ. ಜನ ನೆಹರೂನ ಮಾತು ಕೇಳಿ ಜನಸಂಖ್ಯೆ ನಿಯಂತ್ರಿಸಿದರು. ಇಂದು ಹಲವರಿಗೆ ಒಂದೇ ಮಗು ಗೊತ್ತಾ…… ಅದೂ ಅಲ್ಲದೆ ತುಂಬಾ ಜನ ವಿದೇಶಕ್ಕೆ ಹೋಗಿದ್ದರಿಂದ ಜನರು ಕಡಿಮೆಯಾಗಿ, ಸರಕಾರದ ಬೊಕ್ಕಸಕ್ಕೆ ಕಡೆಮೆ ತೆರಿಗೆ ಬರುತ್ತಿದೆ. ಕಡಿಮೆ ಜನರಿಂದ ಜಾಸ್ತಿ ತೆರಿಗೆ ವಸೂಲು ಮಾಡೋದ್ರಿಂದ ದರ ಏರ್ತಿದೆ.
ನೀವು ………ಅಂತ ಹೇಳ್ತಾ ನನ್ನ ಉತ್ತರಕ್ಕೆ ಕಾಯದೆ ಹೋಗೇ ಬಿಟ್ಟು!!!!!
ಇಂತಹಾ ವ್ಯಕ್ತಿಗಳನ್ನು ನೀವೂ ನೋಡಿದ್ದರೆ ತಿಳಿಸಿ.
ನಿಮ್ಮವ ನಲ್ಲ
ರೂಪು
- ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು)
