ದುಬಾರಿ ವಸ್ತುವೆಂದರೆ ಹೃದಯ ಶ್ರೀಮಂತಿಕೆ



ಸಹಾಯ ಮಾಡಬೇಕು ಎನ್ನುವ ಮನಸ್ಥಿತಿ ಎಲ್ಲರಲ್ಲೂ ಇರವುದಿಲ್ಲ, ಬೆರೆಣಿಕೆಯಷ್ಟೇ ಜನರಲ್ಲಿ ಮಾತ್ರ ಆ ಪರೋಪಕಾರ ಗುಣ ಇರುತ್ತದೆ, ಹಾಗಾಗಿ ಅಪರೂಪಕ್ಕೆ ಸಿಗುವುದೆಲ್ಲ ದುಬಾರಿ ವಸ್ತುವಲ್ಲವೇ?, ಲೇಖಕ ಅನಂತ ನಾಯ್ಕ ಅವರ ಲೇಖನಿಯಲ್ಲಿ ಮೂಡಿ ಬಂದ ನೀತಿಪಾಠ, ಮುಂದೆ ಓದಿ…

ಅಂದು, ಸಾಕಷ್ಟು ಸಮಯ ಕಾದ ಬಳಿಕ ಸಾರಿಗೆ ಬಸ್ಸು ಬಂದಿತ್ತು. ಒಳಗೆ ಹತ್ತಿದ ನಂತರ ಅರಿವಾಯಿತು, ಸೀಟ್ ಯಾವುದೂ ಖಾಲಿ ಇರಲಿಲ್ಲ.

ತಕ್ಷಣವೇ ಒಬ್ಬ ಮಧ್ಯ ವಯಸ್ಕರು ಎದ್ದು ತಮ್ಮ ಜಾಗವನ್ನು ಬಿಟ್ಟುಕೊಟ್ಟರು. ವಂದನೆ ಹೇಳಿ ಕುಳಿತೆ, ಅವರ ಸೌಜನ್ಯಕ್ಕೆ ಮಾರು‌‌ಹೋದೆ. ಮುಂದಿನ ನಿಲ್ದಾಣದಲ್ಲಿ ಅವರಿಗೂ ಸ್ಥಳ ಸಿಕ್ಕಿತ್ತು. ಮರುಕ್ಷಣದಲ್ಲೇ ಮತ್ತೋರ್ವರಿಗೆ ಸ್ಥಳದ ಅವಶ್ಯಕತೆಯನ್ನು ಗಮನಿಸಿದ ನಮ್ಮ ಕಥಾನಾಯಕ ಅವರಿಗೂ ಸ್ಥಳವನ್ನು ಕೊಟ್ಟು ತಾವು ಮತ್ತೆ ನಿಂತರು. ನಾನು ಗಮನಿಸುತ್ತಲೇ ಇದ್ದಂತೆ ಈ ಘಟನೆ ಪುನರಾವರ್ತನೆ ಆಗುತ್ತಲೇ ಇತ್ತು..!

ನಾನು ಇಳಿಯುವ ನಿಲ್ದಾಣದಲ್ಲಿ ಇಳಿಯುವ ವೇಳೆ, ಅದೇ ವ್ಯಕ್ತಿಯು ಕೂಡ ಇಳಿದು ಹೊರಟರು. ಕುತೂಹಲವನ್ನು ತಡೆಯಲಾಗದೆ ನಾನು ‘ಈ ಬಿಟ್ಟುಕೊಡುವ ಪ್ರಕ್ರಿಯೆ’ ಗೆ ಕಾರಣವನ್ನು ಕೇಳಿದೆ.

ಅವರು ನಕ್ಕು ತಮ್ಮ ಉತ್ತರವನ್ನು ಹೇಳಿದರು. “ದಿನವಿಡೀ ದುಡಿದರೂ ನನಗೆ ಇನ್ನು ಸ್ವಲ್ಪ ಹೊತ್ತು ನಿಲ್ಲುವ ತ್ರಾಣ ಇರುತ್ತದೆ. ನಿಮಗೆ ಕಿಂಚಿತ್ ಸಹಾಯವಾದಾಗ ನಿಮ್ಮಿಂದ ಬರುವ ಸದ್ಭಾವನೆ, ನನಗೆ ಹೆಚ್ಚು ಮನಃ ತೃಪ್ತಿಯನ್ನು ಕೊಡುತ್ತದೆ. ನಾನು ಪ್ರತಿದಿನ ಯಾರಿಗಾದರೂ ಏನೋ ಒಂದು ಕೊಟ್ಟೆ ಎಂಬ ಭಾವ ಉಳಿಯುತ್ತದೆ. ಇದೇ ಕಾರಣಕ್ಕಾಗಿ ನಾನು‌ ಈ ಕೆಲಸವನ್ನು ಅನಪೇಕ್ಷಿತನಾಗಿ ಮಾಡುತ್ತಿದ್ದೇನೆ.. .”

ನೀತಿ : ಸಹಾಯವೆನ್ನುವುದು ಅತ್ಯಂತ ದುಬಾರಿಯಾದ ವಸ್ತು, ಏಕೆಂದರೆ ಕೆಲವೇ ಮಂದಿಯಲ್ಲಿ ಈ ಹೃದಯ ಶ್ರೀಮಂತಿಕೆ ಇರುತ್ತದೆ‌…


  • ಅನಂತ ನಾಯ್ಕ (ಹಿರಿಯ ಲೇಖಕರು, ಕತೆಗಾರರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading