‘ಉರಿವ ಕೆಂಡವಾದ ಧರೆ’ ಕವನ

ಕೆರೆ ಕಟ್ಟೆಗಳು ಬತ್ತಿ ದನ ಕರುಗಳು ನೀರಿಲ್ಲದೆ ಒದ್ದಾಡುತ್ತಿರುವವಲ್ಲ ! ಅಯ್ಯೋ ಎಂದು ಮೊರೆಯಿಟ್ಟರೂ ನಮ್ಮನ್ನು ಯಾರೂ ಕೇಳುವರಿಲ್ಲ !…ಪ್ರೊ. ಸಿದ್ದು ಸಾವಳಸಂಗ ಅವರ ಬರಗಾಲದ ಕುರಿತಾದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಬಿಸಿಲಧಗೆ ಹೊಗೆಯಾಗಿ
ಉಸಿರ ಕಟ್ಟುತಿಹುದಲ್ಲ !
ಈ ಧರೆ ಉರಿವ ಕೆಂಡವಾಗಿ
ಮನುಜನ ಸುಡುತಿಹುದಲ್ಲ !!

ಗಿಡ ಮರಗಳ ಎಲೆಗಳು
ಎಲ್ಲಿಯೂ ಅಲುಗಾಡುತ್ತಿಲ್ಲ !
ಪಶು ಪಕ್ಷಿಗಳಿಗೆ ಕುಡಿಯುವ
ನೀರಿಲ್ಲದೆ ಒದ್ದಾಡುತ್ತಿರುವವಲ್ಲ !!

ಹೊಸ್ತಿಲು ದಾಟಿ ಮನುಜ
ಹೊರಗೆ ಕಾಲಿಡಲಾಗುತ್ತಿಲ್ಲ !
ಬಿಸಿಗಾಳಿಗೆ ಜನ ತತ್ತರಿಸಿ
ಹೌಹಾರಿ ಕಂಗೆಟ್ಟಿ ಹೋದರಲ್ಲ !!

ಅಂಗಡಿ ಮುಂಗಟ್ಟುಗಳ ಬಾಗಿಲು
ಮುಚ್ಚಿ ಬೀಕೋ ಎಂದುವಲ್ಲ !
ಮನೆಯಲ್ಲಿ ಸುಮ್ಮನೆ ಕುಳಿತು ಜನ
ಬಿಸಿ ಗಾಳಿಯ ಸೇವಿಸಿ ಉಸಿರು ಬಿಟ್ಟರಲ್ಲ !!

ಕೆರೆ ಕಟ್ಟೆಗಳು ಬತ್ತಿ ದನ ಕರುಗಳು
ನೀರಿಲ್ಲದೆ ಒದ್ದಾಡುತ್ತಿರುವವಲ್ಲ !
ಇದನ್ನು ನೋಡುತ್ತಿರುವ ರೈತ ಕಣ್ಣು ಬಿಟ್ಟು
ಕೈಲಾಗದೆ ಸುಮ್ಮನೆ ಕುಳಿತಿರುವನಲ್ಲ !!

ಅಯ್ಯೋ ಎಂದು ಮೊರೆಯಿಟ್ಟರೂ
ನಮ್ಮನ್ನು ಯಾರೂ ಕೇಳುವರಿಲ್ಲ !
ನಮ್ಮ ಕೂಗು ಬರೀ ಅದು
ಅರಣ್ಯ ರೋಧನವಾಯಿತಲ್ಲ !!

ಮುಂದಿನ ಪೀಳಿಗೆಗಾಗಿ ನಾವು
ಸಸಿಗಳನ್ನು ನೆಟ್ಟು ರಕ್ಷಿಸಬೇಕಲ್ಲ !
ಅವರ ಶಾಪ ನಮಗೆ ತಟ್ಟದಿರಲು
ಇಂದೆ ಕೆಲಸ ಪ್ರಾರಂಭ ಮಾಡಬೇಕಲ್ಲ !!


  • ಪ್ರೊ. ಸಿದ್ದು ಸಾವಳಸಂಗ, ತಾಜಪುರ ( ಕಾವ್ಯನಾಮ – ಚಿರಂಜೀವಿ ) – ಹಿರಿಯ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿಗಳು, ವಿಜಯಪುರ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW