ಮುಂಗಾರಿನ ಆಗಮನ
ಅಂಗಳದಿಂದಲೇ ಆರಂಭವಾಗಲಿ ವನಮಹೋತ್ಸವ
ಆಗುವುದು ಸುತ್ತೆಲ್ಲವೂ ಸಸಿರುಮಯ
ಸ್ವಚ್ಚ ಸುಂದರ ಪರಿಸರ ಆರೋಗ್ಯಕ್ಕೆ ಲಾಭಕರ
ಕಣ್ಮನಗಳಿಗೆ ಸೊಬಗಿನ ಆಗರ
ಪ್ರಕೃತಿ ವಿಕೃತಿಯಾಗುತಿಹುದು ವಿದ್ಯಾವಂತರಾದಂತೇ
ಆಗಬೇಕಿದೆ ನಮ್ಮಲ್ಲಿ ಪರಿಸರ ಜಾಗೃತಿ
ಮೊದಲ ಹೆಜ್ಜೆಯೇ ಆಗಲಿ ಪ್ಲಾಸ್ಟಿಕ್, ಟಿಶ್ಯೂ, ನೀರು, ವಿದ್ಯುತ್ ಮಿತ ಬಳಕೆ
ಅಳಿಲು ಸೇವೆ ಸಲ್ಲಿಸೋಣ ಭೂ ತಾಯಿಯ ಚರಣಕ್ಕೆ
ಪ್ರಕೃತಿಯೇ ನೀನೇ ಸಕಲ ಜೀವ ಸಂಕುಲಗಳ ಆಶ್ರಯದಾತ
ಆದರೂ ತೆಗೆಯುತಿಹರು ನಿನ್ನಯ ಜೀವವ,
ತೀರಿಸಲಾಗದು ನಿನ್ನಯ ಋಣ
ಮಾಡಬೇಕಿದೆ ಈ ಪೃಥ್ವಿಯಲ್ಲಿ
ಕಂಗೊಳಿಸುವ ಹಚ್ಚ ಹಸಿರಿನ ತಾಣ
ಎಲ್ಲವನ್ನೂ ಸಹಿಸಿಕೊಳ್ಳುವ ಪರಿಸರ ಮಾತೆಯೇ
ಇಳೆಯನ್ನು ತಂಪಾಗಿಸುತ
ಪ್ರತಿಫಲ ಬಯಸದೇ
ಸಲಹುವ ನಮ್ಮನ್ನು
ನಿನಗಿದೋ ಸಾವಿರ ಸಾವಿರ ನಮನ
ಕವನ : ವಾಣಿರಾಜ್ ಜೋಶಿ
( ಸೂಚನೆ : ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)
ಇತರೆ ಲೇಖನಗಳು :