ಹಸಿರಿನ ಪರಿಸರ ನಮ್ಮ ಉಸಿರು

ಪರಿಸರ ಎಂದರೇನು?. ಇದರ ಬಗ್ಗೆ ಯಾರಿಗೂ ಹೆಚ್ಚಿಗೆ ಹೇಳುವ ಅವಶ್ಯಕತೆಯಿಲ್ಲ. ಯಾಕೆಂದರೆ  ನಮ್ಮ ಸುತ್ತಲಿನ ವಾತವರಣವೇ ಪರಿಸರವೆಂಬುದು ಪ್ರತಿಯೊಬ್ಬ ನಾಗರಿಕರಿಗೂ ಗೊತ್ತು. ಆದರೆ ಹೆಚ್ಚಿಗೆ ಹೇಳ ಬೇಕಾಗಿರುವುದು ‘ಪರಿಸರ ಸಂರಕ್ಷಣೆ’ ಬಗ್ಗೆ. ಹೌದು, ಪರಿಸರ ಮತ್ತು ಅದರ ಸಂರಕ್ಷಣೆ ಬಗ್ಗೆ ಎಷ್ಟೇ ತಿಳಿದಿದ್ದರೂ ಕೂಡ ಇವತ್ತು ಅನಾಗರಿಕ ಮಾನವ ಮಾತ್ರ ಬೇಕು ಬೇಕುಂತಲೇ ಅದನ್ನು ಹಾಳು ಮಾಡುವಲ್ಲಿ ಎತ್ತಿದ ಕೈ ನಿಜ.

ಪರಿಸರವೆಂಬುದು ಮನುಷ್ಯನ ಮಾನಸಿಕ, ದೈಹಿಕ ಬೆಳವಣಿಗೆಗೆ ಅತ್ಯಗತ್ಯ. ಆದರೆ ಅದನ್ನು ರಕ್ಷಿಸುವಲ್ಲಿ ಮನುಷ್ಯ ಆಲಸ್ಯವಾಗಿದ್ದಾನೆ ಎನ್ನುವುದೇ ಬೇಸರದ ವಿಷಯ. ಇವತ್ತು ಅತಿಯಾದ ಜನಸಂಖ್ಯೆಯಿಂದ ಎದುರಿಸುತ್ತಿರುವ ಪರಿಸರ ಮಾಲಿನ್ಯವೆಂದರೆ ವಾಯು ಮಾಲಿನ್ಯ, ಶಬ್ಧ ಮಾಲಿನ್ಯ, ಜಲ ಮಾಲಿನ್ಯಗಳು.

amma

ಫೋಟೋ ಕೃಪೆ : Ecofriendly Coffee

ವಾಹನಗಳಿಂದ, ಕಾರ್ಖಾನೆಗಳಿಂದ ಬರುವ ಹೊಗೆಯಿಂದ, ಅತೀಯಾದ ಕಸ, ವಿಷಯುಕ್ತ ತ್ಯಾಜ್ಯಗಳಿಂದ ಮಾಲಿನ್ಯ ಮಾಡುತ್ತಿದ್ದಾನೆ. ಹಾಗೂ ಮಾನವನ ಇನ್ನೊಂದು ಮೂರ್ಖತನ ಹಬ್ಬ- ಮದುವೆ ವಿಶೇಷ ದಿನಗಳ ಹೆಸರಿನಲ್ಲಿ ಪಟಾಕಿ, ಸಿಡಿಮದ್ದು ಸಿಡಿಸಿ ಪರಿಸರಕ್ಕೆ ಮತ್ತು ಪಕ್ಷಿಗಳಿಗೆ, ಅವನ ಅಕ್ಕ-ಪಕ್ಕದವರಿಗೆ ಮನೆಯಲ್ಲೆ ಇರುವ ವಯಸ್ಸದಾವರಿಗೆ, ಚಿಕ್ಕ ಮಕ್ಕಳಿಗೆ ಹಾನಿಯುಂಟಾಗುತ್ತದೆ ಎಂಬುವುದು ಅರಿವೆ ಇಲ್ಲದಂತೆ ವರ್ತಿಸುತ್ತಿದ್ದಾನೆ. ಹೀಗೆ ಮನುಷ್ಯನ ಅವಿವೇಕತನ, ವರ್ತನೆ, ಆಡಂಬರದ ಪರಿಣಾಮವೇ ಇಂದು ನಾವು ಏದುರಿಸುತ್ತಿರುವ ಪ್ರಕೃತಿ ವಿಕೋಪಗಳು.  ಕರೋನಾದಂತಹ  ಭಯಂಕರ ಕಾಯಿಲೆಗಳು.

ತಂತ್ರಜ್ಞಾನದ ಹೆಸರಿನಲ್ಲಿ ಮನುಷ್ಯ ಎಷ್ಟೇ ಮುಂದುವರೆದರೂ ದೇವರ ಸೃಷ್ಠಿಯ “ಪರಿಸರ”ದ ಮುಂದೆ ಅವನ್ನೊಂದು ದೊಡ್ಡ ಸೊನ್ನೆ. ಅವನ ಪ್ರಯೋಗಕ್ಕೆ ಎಲ್ಲವನ್ನೂ ಪರಿಸರದಿಂದಲೇ ಪಡೆಯುತ್ತಾನೆ. ಕೊನೆಗೆ ಅದನ್ನೆ ಮರೆಯುತ್ತಾನೆ. ಅದಕ್ಕೆ ಹಾನಿಯನ್ನುಂಟು ಮಾಡುತ್ತಾನೆ. ದೇವರು ಮನುಷ್ಯ ಜನ್ಮ ಕೊಟ್ಟಿದ್ದು ಬೈಕ್‌, ಕಾರ್‌, ಮೊಬೈಲ್‌ ನೊಂದಿಗೆ ಆಡಂಬರದ ಜೀವನ ನಡೆಸುವುದಕಲ್ಲ.

ಪ್ರಕೃತಿಯೊಂದಿಗೆ ಸುಂದರವಾದ ಜೀವನ ಕಳೆಯುವುದಕ್ಕೆ. ಇವತ್ತಿನ ಮುಂದವರೆದ ತಂತ್ರಜ್ಞಾನದಲ್ಲಿ ಮೊಬೈಲ್‌ ಅನ್ನೋದು ಅವಶ್ಯಕತೆಯಿದೆ ನಿಜ. ಆದರೆ ಎಷ್ಟು ಜನ ಸಮಯದ ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ ಬದಲಾಗಿ ಸಮಯ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಸಮಯ ಬಳಸಿಕೊಳ್ಳುತ್ತಿರುವವರ ಸಂಖ್ಯೆ ಬಹಳ ಕಡಿಮೆ. ನಡೆದರೆ ಆರೋಗ್ಯಕ್ಕೆ ಒಳ್ಳೇದು ಎನ್ನುವುದು ಎಲ್ಲರಿಗೂ ಗೊತ್ತು. ಆದರೂ ಸಹ ಒಂದು ಕಿ.ಮಿ ಪ್ರಯಾಣಕ್ಕೆ ಬೈಕ್ ಕಾರ್ ನ್ನೆ ಅವಲಂಬಿಸುತ್ತಿದ್ದಾರೆ. ಇವತ್ತು ಮನುಷ್ಯ ಅವನ ಅವಶ್ಯಕತೆಗಳಿಗಿಂತ ಹೆಚ್ಚಾಗಿ ಏನು ಮಾಡುತ್ತಿದ್ದಾನೋ ಅದೆಲ್ಲಾ ನಮ್ಮ ಪರಿಸರದ ಮೇಲೆ ಅತೀಹೆಚ್ಚು ದುಷ್ಪರಿಣಾಮ ಬೀರುತ್ತಿದೆ.

ಇದೇ ರೀತಿ ಮುಂದುವರೆದರೆ ಮುಂದೆ ಮಾನವನಿಗೆ ಉಳಿಗಾಲವಿಲ್ಲಾ. ಬರೀ ಪ್ರಾಣಿ, ಪಕ್ಷಿ, ಗಿಡ ಮರಗಳಷ್ಟೆ ಪ್ರಕೃತಿಯಲ್ಲಿ ಜೀವಿಸುತ್ತವೆ. ಕರೋನಾʼವೆಂಬ  ಮಹಾಮಾರಿಗಿಂತ ದೊಡ್ಡದೊಂದು “ವೈರಸ್” ಬಂದರೂ ಆಶ್ಚರ್ಯಪಡಬೇಕಿಲ್ಲ.

ಹಿಂದಿನ ಕಾಲದಲ್ಲಿ ಜನಗಳು ನೊ ನೂರು-ನೂರಾ ಹನ್ನೊಂದು ವರ್ಷಗಳ ಕಾಲ ಆರೋಗ್ಯವಾಗಿ ಜೀವಿಸಿರುವುದನ್ನು ನಾವುಗಳು ಕೇಳಿರುತ್ತೇವೆ. ಅದಕ್ಕೆ ಕಾರಣ ಅವರಲ್ಲಿರುವ ಆಡಂಬರದ ಜೀವನವಲ್ಲ. ಸರಳ, ಶಿಸ್ತಿನ ಜೀವನ ಹಾಗೂ ಸ್ವಚ್ಛ ಪರಿಸರ, ಶುದ್ಧ ಗಾಳಿಯಿಂದ. ಮಲೆನಾಡಿನ ಪ್ರದೇಶಗಳಲ್ಲಿ, ಶಿವಮೊಗ್ಗ, ಸಾಗರ, ಉತ್ತರಕನ್ನಡಗಳಂತಹ ಅರಣ್ಯಪ್ರದೇಶಗಳಲ್ಲಿ ಪ್ರತಿವರ್ಷ ಮುಂಗಾರಿನ ಸಮಯದಲ್ಲಿ ಅರಣ್ಯ ಇಲಾಖೆಯಿಂದಲೇ ಗಿಡಗಳನ್ನು ತಂದು ನೇಡುತ್ತಾರೆ. ಆದರಿಂದ ಅಲ್ಲಿ ಸದಾಕಾಲ ಹಸಿರಿನ ಪರಿಸರ ಕಾಣಬಹುದು. ಆದರೆ ಈಗ ಸಮಸ್ಯೆಯಿರುವುದು ನಗರ ಪ್ರದೇಶಗಳಲ್ಲಿ, ಯೋಚನಾ ಶಕ್ತಿ, ಬುದ್ಧಿವಂತಿಕೆಯಿರುವ ಮನುಷ್ಯ  ಮಾಡುವ ಎಷ್ಟೋ ತಪ್ಪುಗಳಿಂದ ಶಿಕ್ಷೆ ಅನುಭವಿಸುತ್ತಿರುವವರು ಮಾತ್ರ ಏನು ಅರಿಯದ ಮುಗ್ಧ – ಮೂಕ ಜೀವಿಗಳು. ಎಲ್ಲೆಂದರಲ್ಲಿ ಉಗುಳುವುದು, ಬಸ್‌ಲ್ಲಿ, ಕಾರ್‌ಲ್ಲಿ ಹೋಗುವಾಗ ಚಿಪ್ಸ್‌, ಬಿಸ್ಕಟ್‌ ಇತ್ಯಾದಿ ತಿಂಡಿಗಳನ್ನು ತಿಂದು ಕಿಟಕಿಯ ಗ್ಲಾಸ್ ಇಳಿಸಿ ಪ್ಲಾಸ್ಟಿಕ್‌ ಪ್ಯಾಕೆಟ್‌ ಬೀಸಾಡುವುದು. ಇದೆಲ್ಲಾ ಎಷ್ಟರ ಮಟ್ಟಿಗೆ ಸರಿ.

amma

ಫೋಟೋ ಕೃಪೆ : new indian express

ತಪ್ಪು ಅಂತಾ ಗೊತ್ತಿದ್ದರೂ ಕೂಡ ತಮ್ಮ ಮನಸ್ಸಿನ ವಿರುದ್ಧವಾಗಿಯೇ ಮಾಡುವಂತದ್ದು ಏನಿದೆ?. ಇವಾಗ ಪಿಕ್‌ನಿಕ್‌ ಅಥವಾ ಎಲ್ಲಿಗಾದರೂ ಪ್ರಯಾಣ ಮಾಡುವಾಗ ಪ್ರತಿ ಬಸ್‌ ಸ್ಟಾಪ್ ಗಳಲ್ಲಿ, ರಸ್ತೆ ಬದಿಗಳಲ್ಲಿ ಕಸದ ತೊಟ್ಟಿಗಳನ್ನುಇಟ್ಟಿರುತ್ತಾರೆ. ಆದರೆ ಸೋಂಬೇರಿತನ ಮೈ ಬಗ್ಗಿಸಲು ಬಿಡುವುದಿಲ್ಲ. ಅಷ್ಟೊಂದು ಆಲಸ್ಯವಿದ್ದರೆ ಹಣ್ಣುಗಳನ್ನು ತಿನ್ನಿ ಬೀಜಗಳನ್ನು ಬೀಸಾಡಿ ಇದು ಆರೋಗ್ಯಕ್ಕೂ ಒಳ್ಳೇದು. ಪರಿಸರಕ್ಕೂ ಒಳ್ಳೇದು. ಪ್ರಾಣಿ ಪಕ್ಷಿಗಳಿಗೂ ಒಳ್ಳೇದು.

ಇವತ್ತು ನಮ್ಮಲ್ಲಿ ಮಳೆ ಬರುತ್ತಿರುವುದಕ್ಕೆ ಮುಖ್ಯ ಕಾರಣ ಅರಣ್ಯಪ್ರದೇಶಗಳು ಅಂತಾನೆ ಹೇಳಬಹುದು. ಹೀಗೆ ಪರಿಸರ ಮಾಲಿನ್ಯಗಳು ಮುಂದೊರೆದರೆ ʼಓಝೋನ್‌ʼ ಪದರ ಮತ್ತಷ್ಟು ಕ್ಷೀಣಿಸುತ್ತದೆ. ಬಿಸಿಲಿನ ಧಗೆ ಜಾಸ್ತಿಯಾಗುತ್ತದೆ. ಇದರ ಪರಿಣಾಮ ಅರಣ್ಯದ ಮೇಲೆ ಬೀಳುತ್ತದೆ. ಮುಂದೆ ಎಲ್ಲರೂ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಕಳೆದು ಹೋದ ದಿನಗಳನ್ನೆಲ್ಲಾ ಸವಿನೆನಪಿಗಾಗಿ ಆಚರಿಸುತ್ತೇವೆ. ಆದರೆ ಈಗ ಕಳೆಯುತ್ತಿರುವ, ಮುಂದೆ ಕಳೆಯಬೇಕಾದ ದಿನವನ್ನು ಮಾತ್ರ ಕೇವಲ ವಾಟ್ಸಪ್‌, ಫೇಸ್‌ಬುಕ್‌ ಸ್ಟೇಟಸ್‌ಗೆ ಮಾತ್ರ ಸೀಮಿತವಾಗಿಸಿದ್ದೇವೆ. ಇನ್ನು ಮುಂದೆ ಆದರೂ ದಯವಿಟ್ಟು ಜಾಗೃತರಾಗೋಣ ಎಲ್ಲೆಂದರಲ್ಲಿ ಉಗುಳೋದು, ಬೀಸಾಡುವುದು, ಸಿಡಿಸುವುದು ಅನಾವಶ್ಯಕ ಕಾರ್‌, ಬೈಕ್‌ಗಳಲ್ಲಿ ಒಡಾಟ ಮಾಡುವುದು ಬಿಡೋಣ. ಸರಳ, ಶಿಸ್ತಿನ ಜೀವನಕ್ಕೆ ಬೆಲೆ ಕೊಡೋಣ. ಪರಿಸರ ಕಾಳಜಿ ಅನ್ನೋದು ನಮ್ಮೆಲ್ಲರ ಕರ್ತವ್ಯದ ಜೊತೆಗೆ ಜವಬ್ದಾರಿ ಕೂಡ ಹೌದು ನೆನಪಿರಲಿ.ಎಲ್ಲರಿಗೂ ಪರಿಸರ ದಿನದ ಶುಭಾಶಯಗಳು.

ಲೇಖನ : ನಾಗರಾಜ್‌ ಲೇಖನ್‌ (ಹರಡಸೆ, ಹೊನ್ನಾವರ)

amma

( ಸೂಚನೆ :  ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)

ನಾಗರಾಜ್ ಲೇಖನ್ ಅವರ ಹಿಂದಿನ ಬರಹ : 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW