ಈ ಅಮ್ಮಂದಿರಿಗೆ ಮುಕ್ತವಾದ ಪತ್ರ

amma

ಫೋಟೋ ಕೃಪೆ : inshorts

ಸಾಲು ಮರದ ತಿಮ್ಮಕ್ಕ ಅಮ್ಮ ಮತ್ತು ತುಳಸಿ ಗೌಡ ಅಮ್ಮ,

ನಿಮಗೆ ಸಾಷ್ಟಾಂಗ ನಮಸ್ತಾರಗಳು….

ನಿಮಗೊಂದು ಮುಕ್ತವಾದ ಪತ್ರವೊಂದನ್ನು ಬರೆಯುತ್ತಿದ್ದೀನಿ…

ನಿಮ್ಮ ಬಗ್ಗೆ ಸಾಕಷ್ಟು ಲೇಖಕರು ಸಾಕಷ್ಟು ಲೇಖಕನಗಳನ್ನು ಬರೆದಿದ್ದಾರೆ. ಅದನ್ನು ನಾನು ದೂರದಲ್ಲಿ ಕೂತು ಓದಿ ನಿಮ್ಮ ಬಗ್ಗೆ ತಿಳಿದುಕೊಂಡಿದ್ದೇವೆ. ಅಮ್ಮ, ನೀವುಗಳು ಗಿಡದ ಮೇಲೆ ಯಾವುದೇ ಸಂಶೋಧನೆ ಮಾಡಿದವರಲ್ಲ. ನಿಮ್ಮ ಮುಂದೆ ಪಿ ಎಚ್ ಡಿ ಕೂಡ ಸಣ್ಣದೇ.  ಗಿಡ ಬೆಳೆಸಲು ಜ್ಞಾನವೊಂದಿದ್ದರೆ ಸಾಲದು, ಪ್ರೀತಿಯು ಇರಬೇಕು ಎಂದು ಜಗಕ್ಕೆ ತೋರಿಸಿಕೊಟ್ಟ ಮಹನೀಯರು ನೀವು.

ಯಾವ ವಿಶ್ವವಿದ್ಯಾಲಯವು ನಿಮಗೆ ಸಾಟಿಯಿಲ್ಲ. ವೃಕ್ಷ ವಿಶ್ವಕೋಶವೇ ನೀವಾಗಿದ್ದಿರಿ. ವೃಕ್ಷ ಮಾತೆಯರು. ನೀವು ನೆಟ್ಟ ಮರಗಳು ಕೋಟಿ ಕೋಟಿ ಬಾಳುತ್ತವೆ ಎನ್ನುವುದು ನಿಮಗೆ ಅರಿವಿಲ್ಲ. ದುಡ್ಡಿಗಾಗಿ ಮರವನ್ನು ನೆಟ್ಟವರಲ್ಲ. ನಿಮ್ಮ ಮರಗಳಲ್ಲಿ ಕೋಟಿಯ ಲೆಕ್ಕ ಹಾಕಿದವರೇ ಬೇರೆ. ಮಕ್ಕಳಂತೆ ಮುದ್ದಾಗಿ ಅವುಗಳನ್ನು ಸಾಕಿ ಬೆಳೆಸಿದ್ದೀರಿ.

amma

ಫೋಟೋ ಕೃಪೆ : ಭಾಸ್ಕರ್

ಜೂನ್ ೫ ಪರಿಸರ ದಿನವೆಂದು ನಿಮಗೆ ತಿಳಿದಿರಲಿಲ್ಲ. ನಿಮಗೆ ನಿತ್ಯವೂ ಪರಿಸರ ದಿನವೇ ಆಗಿತ್ತು ಅಲ್ಲವೇ? ಅಮ್ಮ. ಕೋಟಿ ಮರಗಳ ಒಡತಿಯರು ನೀವೆಂದ ಮೇಲೆ ನಿಮ್ಮ ಮನೆಯ ತುಂಬಾ ಸಾಗವಾನಿ (ಟೀಕ್) ಪೀಠೋಪಕರಣದಿಂದ ತುಂಬಿ ಹೋಗಿರಬೇಕು. ಮನೆಯ ಆವರಣದಲ್ಲಿ ಆಡಿ, ಬೆಂಜ್ ಕಾರ್ ಗಳದ್ದೇ ಕಾರುಬಾರು ಎಂದು ನಾನು ಭಾವಿಸಿದ್ದೆ. ಆದರೆ ಆಮೇಲೆ ತಿಳಿಯಿತು. ಸಾಲು ಮರಗಳನ್ನು ನೆಟ್ಟರು ಮತ್ತು ಕಾಡಿನ ವಿಶ್ವಕೋಶವೇ ನೀವಾದರೂ, ಪದ್ಮಶ್ರೀ ಸೇರಿದಂತೆ ದೊಡ್ಡ ದೊಡ್ಡ ಪ್ರಶಸ್ತಿಗಳು ನಿಮ್ಮನ್ನು ಅರಸಿ ಬಂದರೂ ಸಾಲು ಮರದ ತಿಮ್ಮಕ್ಕ ಅಮ್ಮ ಇರುವುದು ಬೆಂಗಳೂರಿನ ಬಾಡಿಗೆಯ ಮನೆಯೊಂದರಲ್ಲಿ ಮತ್ತು ತುಳಸಿ ಅಮ್ಮ ಇರುವುದು ಹಂಚಿನ ಮನೆಯಲ್ಲಿ. ಇದನ್ನು ತಿಳಿದಾಗ ನನಗೆ ಬೇಸರವಾಯಿತು. ಆದರೆ ಆ ಬೇಸರ ನಿಮಗಿರಲಿಲ್ಲ. ಏಕೆಂದರೆ ನೀವು ನೆಟ್ಟ ಸಾವಿರಾರು, ಲಕ್ಷಾಂತರ ಮರಗಳಲ್ಲಿ ಪ್ರೀತಿಯನ್ನಷ್ಟೇ ಕಂಡವರು. ಅವುಗಳಿಂದ ನಿರೀಕ್ಷೆ ಪಟ್ಟವರಲ್ಲ.

amma

ಫೋಟೋ ಕೃಪೆ : indi raasta

ನಿಮ್ಮ ಪ್ರೇರಣೆಯಿಂದ ನಾನು ನನ್ನ ಮನೆಯ ಸುತ್ತ ನಾಲ್ಕು ಮರದ ಸಸಿಗಳನ್ನು ನೆಟ್ಟಿದ್ದೆ. ಮುಂದಿನ ಪರಿಸರ ದಿನಾಚರಣೆಯದಂದು ನಾನು ಸಾಲು ಮರದ ಶಾಲಕ್ಕಳಾಗುವೆ ಎಂದು ಕನಸ್ಸು ಕಾಣುತ್ತ ಕೂತಿದ್ದೆ. ಆದರೆ ನನ್ನ ಗಿಡಗಳು ಬೆಸ್ಕಾಂ ಕಣ್ಣಿಗೆ ಬಿದ್ದಿತು. ಮರದ ರಂಬೆ- ಕೊಂಬೆಗಳು ವಿದ್ಯುತ್ ತಂತಿಗೆ ಮುಟ್ಟುವುದೆಂದು ಅರ್ಧಕ್ಕೆ ಕತ್ತರಿ ಹಾಕಿದರು. ಇನ್ನರ್ಧ ರಸ್ತೆಗೆ ಮುಖ ಮಾಡಿಕೊಂಡಿದೆ ಎಂದು ಕತ್ತರಿಯ ಮೇಲೆ ಕತ್ತರಿ ಹಾಕಿ ಬೋಳು ಮರದ ಶಾಲಕ್ಕನ್ನನಾಗಿ ನನ್ನನ್ನು ಮಾಡಿದರು.

ಬರಿ ನಾಲ್ಕೇ ನಾಲ್ಕು ಮರವನ್ನು ಬೆಳೆಸಲು ಹೋಗಿ ಹಣ್ಣು- ಹಣ್ಣಾಗಿ ಕೂತಿದ್ದೇನೆ. ಬೇಗ ಉತ್ಸಾಹ ಕಳೆಯಿತು. ಸಾವಿರಾರು-ಲಕ್ಷ ಮರಗಳನ್ನು ನೆಡುವಾಗ ನಿಮ್ಮಗಿದ್ದ ತಾಳ್ಮೆ, ಗಿಡವನ್ನು ದೊಡ್ಡದು ಮಾಡುವಾಗ ಜನರಿಂದ ಪಟ್ಟ-ಕಷ್ಟಗಳು ಸಾಕಷ್ಟಿರಬೇಕಲ್ಲವೇ?. ಅಜ್ಞಾನಿಗಳು ಮರವನ್ನು ಕಡೆದಾಗ ಮಗುವಿನಂತೆ ತಬ್ಬಿಕೊಂಡು ಅತ್ತಿದ್ದಿರಿ ಅಂತೇ. ಆ ಬೇಸರವನ್ನು ಮರೆತು ಮತ್ತೆ ಮತ್ತೆ ಮರವನ್ನು ನೆಟ್ಟಿದ್ದೀರಿ. ಅಷ್ಟೇ ಅಲ್ಲ, ಈ ಇಳಿಯ ವಯಸ್ಸಿನಲ್ಲೂ ಮರ ನೆಡುವ ಕಾಯಕವನ್ನು ಮಾತ್ರ ನೀವು ಬಿಟ್ಟಿಲ್ಲ ಎಂದು ತಿಳಿದೆ.

ಇಲ್ಲ…ನಾನು ಉತ್ಸಾಹವನ್ನು ಕಳೆದುಕೊಳ್ಳಬಾರದು. ಮತ್ತೆ ಗಿಡ ನೆಡುತ್ತೇನೆ. ಈ ವರ್ಷ ಅಲ್ಲದಿದ್ದರೂ, ಮುಂದಿನ ವರ್ಷದಲ್ಲಿ ಸಾಲು ಮರದ ಶಾಲಕ್ಕ ಆಗೇ ಆಗುತ್ತೇನೆ. ನಾನಷ್ಟೇ ಅಲ್ಲ ಬಹುತೇಕ ಯುವ ಪೀಳಿಗೆಗೆ ನೀವು ಸ್ಫೂರ್ತಿಯಾಗಿದ್ದೀರಿ.

ನಿಮ್ಮಂತೆ ಎಲ್ಲರೂ ವೃಕ್ಷ ರಕ್ಷಕರಾಗಲಿ. ನೀವು ನಾಡಿನ ಆಸ್ತಿ. ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳು ನಿಮಗೆ ಸಿಗಲೇ ಬೇಕು. ಆ ಭಗವಂತ ನಿಮಗೆ ಆಯಸ್ಸು,ಆರೋಗ್ಯವನ್ನು ಕರುಣಿಸಲಿ. ನಾಡಿನ ತುಂಬಾ ವೃಕ್ಷ ಮಾತೆಯರು ಇನ್ನಷ್ಟು ಹುಟ್ಟಲಿ ಎಂದು ಆಶಿಸುತ್ತೇನೆ.

ಇಂತಿ ನಿಮ್ಮ ಮಗಳು

ಭವಿಷ್ಯತ್ತಿನ ಸಾಲು ಮರದ ಹಾಗು ವೃಕ್ಷ ವಿಶ್ವಕೋಶ

ಶಾಲಕ್ಕ

bf2fb3_c5eaf523bb1e481493169ef2aac381a9~mv2.jpg

( ಸೂಚನೆ :  ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)

ಇತರೆ ಲೇಖನಗಳು : 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW