ಸಾಹಿತಿ “ವಾಣಿ ಭಂಡಾರಿ” ಅವರ ಕಿರು ಪರಿಚಯ

ವಾಣಿ ಭಂಡಾರಿ ಅವರು ಮೂಲತಃ ಮಲೆನಾಡಿನ ಸಸ್ಯ ಸಮೃದ್ಧ ಮಡಿಲಾದ ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆಯ ಭೈರಾಪುರದಲ್ಲಿ ಜನಿಸಿದ ಇವರು, ಬಾಲ್ಯದಿಂದಲೇ ಸಾಹಿತ್ಯ ಸಂಗೀತ ಪ್ರಿಯರು. ಮನೆಯ ಪರಿಸರವು ಅದಕ್ಕೆ ತಕ್ಕಂತೆ ಇದ್ದ ಪ್ರಯುಕ್ತ ಚಿಕ್ಕಂದಿನಿಂದಲೇ ಆಟಪಾಠ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಿಟ್ಟಿಸಿ ಕೊಳ್ಳುತ್ತಿದ್ದರು. ಅವರ ಕಿರುಪರಿಚಯವನ್ನು ತಪ್ಪದೆ ಮುಂದೆ ಓದಿ…

ಪ್ರಾಥಮಿಕ ಪ್ರೌಢ ವಿದ್ಯಾಭ್ಯಾಸವನ್ನೆಲ್ಲ ತನ್ನೂರು ರಿಪ್ಪನ್ ಪೇಟೆಯಲ್ಲೆ ಮುಗಿಸಿ ಉನ್ನತ ಶಿಕ್ಷಣವನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದುಕೊಂಡು, ಕನ್ನಡ ಉಪನ್ಯಾಕರಾಗಿ ಸೇವೆ‌ ಸಲ್ಲಿಸುತ್ತಲೇ ತಾವು ಸಹ ಕಲಿಕಾರ್ಥಿಯಾಗಿಯೇ, ವಿದ್ಯಾರ್ಥಿಗಳಿಗೆ ಕಥೆ,ಕವನ ಚುಟುಕು ಭಾವಗೀತೆ ಹೀಗೆ ಹತ್ತಾರು ಪ್ರಕಾರಗಳನ್ನು ವಿದ್ಯಾರ್ಥಿಗಳ ಕೈಯಲ್ಲಿ ಬರೆಸಿ ಅವರ ಸೃಜನಶೀಲತೆಯನ್ನು ಚಿಕಿತ್ಸಕ ಮನೋದೃಷ್ಟಿಗೆ ಒಳಪಡಿಸುತ್ತಿದ್ದರು. ತಮ್ಮ SSCL ವ್ಯಾಸಂಗ ಮುಗಿಯುತ್ತಿದ್ದಂತೆ ಹೆಚ್ಚಿನ ಓದು ಸಂಗೀತ ಸಾಹಿತ್ಯ ಜ್ಯೋತಿಷ್ಯ ಇವುಗಳಿಗಾಗಿ, ಬಹುಮುಖ ಪ್ರತಿಭೆ ಅವಾರ್ಡ್ ಅನ್ನು ನಮ್ಮೂರ್ ಪೌಂಡೇಷನ್ ಹೈದರಾಬಾದ್ ಇವರಿಂದ ೨೦೦೫ ರಲ್ಲಿ ಪಡೆದಿರುವುದು ಇವರ ಸೃಜನಶೀಲತೆಗೆ ಮತ್ತೊಂದು ಗರಿ.

ಸಂತನೊಳಗಿನ ಧ್ಯಾನ ಗಜಲ್ ಕಾವ್ಯ ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ೨೦೨೦ ರಲ್ಲಿ ಆಯ್ಕೆಯಾಗಿದ್ದು, ದ. ಸಾ. ಪ. ಗದಗ ಇವರಿಂದ “ಗಜಲ್ ಕಾವ್ಯ ರತ್ನ ಪ್ರಶಸ್ತಿ”-೨೦೨೨ ಲಭಿಸಿದೆ. ಇದೆ ಕೃತಿಗೆ ೨೦೨೨ ರಲ್ಲಿ ಉಮಾಶಂಕರ ಪ್ರತಿಷ್ಟಾನ ಮುಖಪುಟ ಪ್ರಶಸ್ತಿ ಲಭಿಸಿದೆ. ಅವರ ಹಾಗೂ ಅವರ ನೆಚ್ಚಿನ ಸಾಹಿತ್ಯ ಕೃಷಿ ಕುರಿತು ಕುವೆಂಪು ವಿಶ್ವವಿದ್ಯಾಲಯವು ಕಿರು ಸಂಪ್ರಬಂಧ ಮಂಡಿಸಿರುವುದು ಸಂತಸದ ವಿಷಯ. ಇವರ ಸಾಹಿತ್ಯ ಕೃಷಿಗಾಗಿ “ಅಖಿಲ ಭಾರತ ಕವಯಿತ್ರಿಯರ ಸಂಸ್ಥೆ” ಯ ೨೦೨೪ ರ ‘ಸುಧಾ ಅನಂತ ಅಪರಂಜಿ ದತ್ತಿ’ ಪ್ರಶಸ್ತಿ ಸಹ ಲಭಿಸಿದೆ.

ರಾಜ್ಯಮಟ್ಟದ ಗಜಲ್ ಸ್ಪರ್ಧೆ ಪ್ರಥಮ ( ಹ.ಹ.ಇಬ್ಬನಿ) ಸಾ.ಬಳಗದ ವತಿಯಿಂದ ೩ ದಿನದ ಸತತ ಸ್ಪರ್ಧೆಯ ಸುತ್ತಿನಲ್ಲಿ ಪ್ರಥಮ ವಿಜೇತರಾಗಿ ತುಮಕೂರು ‌ವಿವಿ.ಯ ಕುಲಸಚಿವರಿಂದ ಬಹುಮಾನ ಪಡೆದದ್ದು‌ ಅವಿಸ್ಮರಣೀಯ.
“ರಾಜ್ಯ ಮಟ್ಟದ ಭಾವಗೀತೆ ಪ್ರಥಮ “(ಹ.ಹ.ಇಬ್ಬನಿ), ಕವನ ಸ್ಪರ್ಧೆ (ಭಾ.ಸಂಗಮ), ದಸರ ಕಥಾಸ್ಪರ್ಧೆ, ಪ್ರಬಂಧ ಸ್ಪರ್ಧೆ ಹೀಗೆ ಹತ್ತಾರು ವಿಭಾಗಗಳಲ್ಲಿ ತಮ್ಮ ಸಾಹಿತ್ಯದ ಛಾಪನ್ನು ಮೂಡಿಸಿ ಪ್ರಶಸ್ತಿ ಬಹುಮಾನ ಪಡೆದಿರುವ ಇವರು ಹಲವಾರು ತಾಲೂಕು ಮತ್ತು ಜಿಲ್ಲಾ ಕ.ಸಾ.ಪ.ಸಮ್ಮೇಳನಗಳು, ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯಕ್ರಮ, ಲೇಖಕಿಯರ ಸಂಘ ಕಾರ್ಯಕ್ರಮ, ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ, ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಾಚನ ಮತ್ತು ಉಪನ್ಯಾಸಗಳನ್ನು ನೀಡಿರುತ್ತಾರೆ ಹಾಗೂ “ಆಕಾಶವಾಣಿ ಯುವವಾಣಿ” ಕಾರ್ಯಕ್ರಮದಲ್ಲಿ ರೆಡಿಯೋ ಸಂದರ್ಶನದ ಮೂಲಕ ಇವರ ಮಾತಿನ ಮೋಡಿ ಸಹ‌ ಕೇಳಬಹುದು.
ಈಗಾಗಲೇ ನಾಡಿನ ಹಲವಾರು ಪತ್ರಿಕೆಯಲ್ಲಿ ತಮ್ಮ ಸತ್ಯವಾಣಿ ಕಟೋಕ್ತಿ – ನಿತ್ಯ ಸುಭಾಷಿತ, ವ್ಯಕ್ತಿತ್ವ ವಿಕಸನ – ಸಾವನ್ನು ಮುಂದೂಡಿ, ಅಂತರ್ ದೃಷ್ಟಿ- ವಿಮರ್ಶೆ, ಮಲ್ನಾಡು ಕವಳ- ಲಲಿತ ಪ್ರಬಂಧ, ಮಾನಸ ಸಂಜಾತೆ, ತುಂಗೆ ತಪ್ಪಲಿನ ತಂಬೆಲರು ಹೀಗೆ ಮುಂತಾದ ಅಂಕಣಗಳು, ಬರಹಗಳು ನಾಡಿನ ವಿವಿಧ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದು, ಸಹೃದಯರ ಮನೆ ಮನ ತುಂಬಿದೆ. ತಮ್ಮನ್ನು ಕೇವಲ ಒಂದು ವಿಚಾರಕಷ್ಟೆ ಸೀಮಿತಗೊಳಿಸಿಕೊಳ್ಳದೆ ಮನುಷ್ಯ ಪ್ರೀತಿ‌ ಹಂಚುತ್ತಾ, ಭಾವೈಕ್ಯತೆಯನ್ನು ಬಿತ್ತುವ ಇವರು ಸಾಹಿತ್ಯ ಸಂಗೀತ ತನ್ನ ಉಸಿರು ಜೀವನಾಡಿ ಎಂದು ಸದಾ ಧ್ಯಾನಸ್ಥರಾಗಿ ಅದರೊಳಗೆ‌ ತನ್ಮಯರಾಗಿ ಬಿಡುತ್ತಾರೆ.

ಇನ್ನೂ ಹತ್ತಾರು ಕೃತಿಗಳನ್ನು ಬಿಡುಗಡೆಗೆ ಕೈಯಲ್ಲಿರಿಸಿ ಕಾಯುತ್ತಿರುವ ಇವರು “ಸಂತನೊಳಗಿನ ಧ್ಯಾನ” ಚೊಚ್ಚಲ ಗಜಲ್ ಕೃತಿಯು ಕನ್ನಡ ಪುಸ್ತಕ‌ ಪ್ರಾಧಿಕಾರಕ್ಕೆ ಆಯ್ಕೆಗೊಂಡು ಜನಮನ ಸೂರೆಗೊಂಡ ಅದರ ವಿಮರ್ಶಾಕೃತಿಯೇ “ಸಂತ ಮತ್ತು ಸಮೀಕ್ಷೆ” ಎಂಬ ಖುಷಿಯನ್ನು ವ್ಯಕ್ತ ಪಡಿಸಿ ನಾಡಿನ ಜನರ ಬೊಗಸೆ ತುಂಬಿಸಿದ್ದಾರೆ.


  • ಆಕೃತಿ ಕನ್ನಡ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW