ಆಕೃತಿಕನ್ನಡದಲ್ಲಿ ದಿನಕ್ಕೊಂದು ಸವಿರುಚಿಯನ್ನು ಪರಿಚಯಿಸುವ ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಾ, ಅವರ ಕೈರುಚಿಯ ತರಕಾರಿ ಪಿಜ್ಜಾವನ್ನು ಓದುಗರೊಂದಿಗೆ ಮಾಡುವ ಬಗೆಯನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮಾಡಿ ಸವಿಯಿರಿ…
ಬೇಕಾಗುವ ಪದಾರ್ಥಗಳು :
- ಪಿಜ್ಜಾ ಬೇಸ್
- ಈರುಳ್ಳಿ 1
- ಟೊಮೆಟೊ 1
- ದಪ್ಪ ಮೆಣಸಿನ ಕಾಯಿ 1
- ಸ್ವೀಟ್ ಕಾರ್ನ್ 1 ಕಪ್
- ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅರ್ಧ ಸ್ಪೂನ್
- ಚಿಲ್ಲಿ ಪೇಸ್ಟ್ ಅರ್ಧ ಸ್ಪೂನ್
- ಉಪ್ಪು
- ಚಿಲ್ಲಿ ಫ್ಲೆಕ್ಸ
- ಒರಿಗೇನೋ.
- ಪಿಜ್ಜಾ ಪಾಸ್ತ ಸಾಸ್

ಮಾಡುವ ವಿಧಾನ :
ಒಂದು ಬಾಣಲಿಗೆ ಬೆಣ್ಣೆ , ತುಪ್ಪ ಹಾಕಿ ಮೇಲೆ ಹೇಳಿದ ಸಾಮಗ್ರಿಗಳನ್ನು ಒಂದೊಂದಾಗಿ ಹಾಕಿ ಬಾಡಿಸಿ ಕೊಳ್ಳಿ . ಪಿಜ್ಜಾ ಬೇಸ್ ಮೇಲೆ ಬೆಣ್ಣೆ ಸವರಿ ಕಾದ ತವಾ ಮೇಲೆ ಹಾಕಿ 2 ಕಡೆ ಬ್ರೌನ್ ಕಲರ್ ಬರುವ ಹಾಗೆ ಕಾಯಿಸಿ.
ಒಂದು ಪ್ಲೇಟ್ ಮೇಲೆ ಬೇಸ್ ಇಟ್ಟು ಈಗ ಅದರ ಮೇಲೆ ಸಾಸ್ ಸ್ಪ್ರೆಡ್ ಮಾಡಿ ಮಿಶ್ರಣವನ್ನು ನೀಟಾಗಿ ಸ್ಪ್ರೆಡ್ ಮಾಡಿ ಚಿಲ್ಲಿ ಫ್ಲೆಕ್ಸ್, ಒರಿಗ್ಯಾನೋ ಉದುರಿಸಿ. ಈಗ ಪಿಜ್ಜಾ ಕಟ್ ಮಾಡಿ. ಸವಿಯಿರಿ. ಪನ್ನೀರ್, ಚೀಸ್ ಕೂಡ ಬಳಸ ಬಹುದು.. ಇನ್ನೂ ರಿಚ್ ಆಗಿರುತ್ತದೆ.
- ಶಕುಂತಲಾ ಸವಿ – ನಳಪಾಕ ಪ್ರವೀಣೆ , ಮೈಸೂರು
