ವೀಕೆoಡ್ ವಿತ್ ಆoಸ್ಟೆರ್ಡಾಮ್ (ಭಾಗ-೧)

ವಿನ್ಸೆಂಟ್ ವ್ಯಾನ್ ಗೊ ವೈಯಕ್ತಿಕ ಸೋಲುಗಳು ಎಲ್ಲದರ ನಡುವೆಯೂ ತನ್ನ 27 ನೇ ವಯಸ್ಸಿನಲ್ಲಿ ಚಿತ್ರ ಕಲಾವಿದನಾಗಲು ನಿರ್ಧರಿಸಿ ಚಿತ್ರಕಲೆಯಲ್ಲಿ ತೊಡಗಿ,ತನ್ನ ಜೀವಿತದಲ್ಲಿ ಸುಮಾರು 900 Oil paintings ಗಳನ್ನು ಒಳಗೊಂಡು 2100 ಕಲಾ ಕೃತಿಗಳನ್ನು ಹುಕಿಗೆ ಬಿದ್ದವನಂತೆ ರಚಿಸುತ್ತಾನೆ. ಲೇಖಕರಾದ ರವೀಂದ್ರ ಕೆ. ಆರ್ ಅವರು ವಿನ್ಸೆಂಟ್ ವ್ಯಾನ್ ಗೊ ಮ್ಯೂಸಿಯಂ ಭೇಟಿ ನೀಡಿದ ಸಂದರ್ಭವನ್ನು ಇಲ್ಲಿ ಲೇಖನದ ಮೂಲಕ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಸೋತ ಹೃದಯಕ್ಕೆ ಸಾಂತ್ವನವಾಗಿ ಅರಳಿದ ಕಲೆ….

ವಿನ್ಸೆಂಟ್ ವ್ಯಾನ್ ಗೊ ಮ್ಯೂಸಿಯಂ.

( Vincent Van Gogh Museum )

ಕೃಷಿ ಕಾಲೇಜಿಗೆ ಸೇರುವವರೆಗೂ ಯಾವುದೇ ಸಾಹಿತ್ಯ ಕೃತಿ ಓದಿರದ ನನ್ನನ್ನು ಸಾಹಿತ್ಯದ ಓದಿಗೆ ಪ್ರೇರೇಪಿಸಿದವರು ನಮಗೆ ಇಂಗ್ಲಿಷ್ ಗುರುಗಳಾಗಿದ್ದ ಹಾಗೂ ಶಿಷ್ಯರನ್ನು ಸ್ನೇಹಿತರಂತೆ ಕಾಣುತ್ತಿದ್ದ ಶ್ರೀಯುತ ಅಕುಮಲ್ ರಾಮಚಂದ್ರರವರು. ಜೊತೆಗೆ, ಮಹಾನ್ ಕಲಾ ಪೋಷಕರು ಹಾಗೂ ಪ್ರೇಮಿಯಾಗಿದ್ದ ಅವರು ಓದಲು ಹೇಳಿ, ಅದರಂತೆ ನಾನು ಓದಿದ ಕೃತಿ, ಇರ್ವಿಂಗ್ ಸ್ಟೋನ್ ( Irving Stone ) ಬರೆದ Post – impressionist ಡಚ್ ಕಲಾವಿದ ವಿನ್ಸೆಂಟ್ ವ್ಯಾನ್ ಗೊ ನ ಜೀವನ ಚಿತ್ರ – Lust for Life. ಓದಿದ ನಂತರ, ಅಬ್ಬಾ…. What a distressful life, what a tragedy and yet what a creatve genius…! ಬದುಕು ಹೀಗಿರಲೂ ಸಾಧ್ಯವೇ ಎಂಬ ವಿಷಾದ ವಿಸ್ಮಯ ಮನದಲ್ಲಿ ತುಂಬಾ ದಿನಗಳ ಕಾಲ ಕಾಡಿತ್ತು. ಬಹುಶಃ, ಈ ವಿನ್ಸೆಂಟ್ ವ್ಯಾನ್ ಗೊ ನ ಅಮೂಲ್ಯ ಕಲಾಕೃತಿಗಳನ್ನು ಮುಂದೊಂದು ದಿನ ಎದುರಿಗೇ ನಿಂತು ಮುಖಾ ಮುಖಿ ನೋಡುವೆ ಎಂಬ ಕಲ್ಪನೆಯು ಮನದ ಹತ್ತಿರವೂ ಸುಳಿಯದ ದಿನಗಳವು.

ಮೊನ್ನೆ ವಾರಾoತ್ಯಕ್ಕೆ ಮಗಳು ಆoಸ್ಟೆರ್ಡಾಮ್ ಗೆ ಪ್ರವಾಸ ಮಾಡಿಸಲಾಗಿ, ವಿನ್ಸೆಂಟ್ ವ್ಯಾನ್ ಗೊನನ್ನು ಅವನ ಅನನ್ಯ ಕಲಾಕೃತಿಗಳ ಮೂಲಕ ಕಾಣುವ ಭಾಗ್ಯ ಲಭಿಸಿತು.

ವಿನ್ಸೆಂಟ್ ವ್ಯಾನ್ ಗೊ ನ ಯಾತನಾಮಯ ಬದುಕು, ಅಂದಿನ ಕಲಾ ಇತಿಹಾಸ, ಸಂದರ್ಭ, ಅವನ ಕಲಾ ಯಾತ್ರೆ, ಅವನ ಕಲಾ ಕೃತಿಗಳು, ಅವುಗಳಿಗೆ ಅವನ ಮರಣಾನಂತರ ಲಭಿಸಿದ ಮನ್ನಣೆ, ಹೀಗೆ ಒಟ್ಟಾರೆ ಆತನ ಜೀವನದ ಯಾವುದೇ ಒಂದು ಸಣ್ಣ ಅಂಶವನ್ನೂ ಸಹಾ ಬಿಡದೇ, ತುಂಬಾ ವ್ಯಾಪಾಕವಾಗಿ ಹಾಗೂ ಕಲಾತ್ಮಕವಾಗಿ ಕಾಣಿಸುವ ಒಂದು ಅದ್ಭುತವಾದ ಮ್ಯೂಸಿಯಂ ಇದು.

ಅದರಲ್ಲೂ ಅವನು ಬಳಸುತ್ತಿದ್ದ ಬಣ್ಣಗಳು, ಆ ಬಣ್ಣಗಳ ಮಿಶ್ರಣ, ಸಂಯೋಜನೆ, ಸoರಚನೆ ಹಾಗೂ ಅದು ಅಂತಿಮವಾಗಿ ಪಡೆಯುತ್ತಿದ್ದ ಕಲಾ ಕೃತಿಯ ರೂಪಗಳ ಬಗ್ಗೆ ಇಲ್ಲಿ ಪ್ರದರ್ಶಿಸಿರುವ ಸಚಿತ್ರ ಮಾಹಿತಿಯoತೂ ಅನನ್ಯವಾಗಿದೆ. Ultimately, ಈ ಬಣ್ಣಗಳೇ ಕಲಾವಿದನ ಕಲ್ಪನೆ, ದೃಷ್ಠಿ ಹಾಗೂ ಸೃಷ್ಠಿಯ ವಾಹಕಗಳು ಹಾಗೂ ಅಸೀಮ ಸಾಧ್ಯತೆಗಳಲ್ಲವೇ?

ಜೀವನ ಪೂರ್ತಿ ಅವನನ್ನು ಕಾಡಿದ ಮಾನಸಿಕ ಅಸ್ವಸ್ಥತೆ, ಸಂಕಷ್ಟಗಳು, ವೈಯಕ್ತಿಕ ಸೋಲುಗಳು ಎಲ್ಲದರ ನಡುವೆಯೂ ತನ್ನ 27 ನೇ ವಯಸ್ಸಿನಲ್ಲಿ ಚಿತ್ರ ಕಲಾವಿದನಾಗಲು ನಿರ್ಧರಿಸಿ ಚಿತ್ರಕಲೆಯಲ್ಲಿ ತೊಡಗುವ ವಿನ್ಸೆಂಟ್ ವ್ಯಾನ್ ಗೊ, ತನ್ನ ಜೀವಿತದಲ್ಲಿ ಸುಮಾರು 900 Oil paintings ಗಳನ್ನು ಒಳಗೊಂಡು 2100 ಕಲಾ ಕೃತಿಗಳನ್ನು ಹುಕಿಗೆ ಬಿದ್ದವನಂತೆ ರಚಿಸುತ್ತಾನೆ. ಆದರೆ ಅವನ ಕಲಾ ಕೃತಿಗಳಲ್ಲಿನ ಕಡು ಬಣ್ಣಗಳ ಬಳಕೆ, ಸಂಯೋಜನೆ, ಅಂದಿಗೆ ಅಸಾಂಪ್ರದಾಯಕವಾಗಿ ಕಂಡ ಶೈಲಿ, ಮಾರುಕಟ್ಟೆ ಕೌಶಲ್ಯದ ಕೊರತೆ ಹಾಗೂ ಪ್ರಕ್ಷುಬ್ದ ವೈಯಕ್ತಿಕ ಬದುಕಿನ ಕಾರಣಗಳಿಂದ, ಅವನ ಕಲಾ ಕೃತಿಗಳಿಗೆ ನಿರೀಕ್ಷಿತ ಹೆಸರು, ಮಾನ್ಯತೆ, ಮಾರುಕಟ್ಟೆಯ ಬೇಡಿಕೆ ಬರುವುದೇ ಇಲ್ಲ. ಅವನ ಕೆಲವು ಕಲಾ ಕೃತಿಗಳು ಮಾತ್ರಾ ಮಾರಾಟವಾಗುತ್ತವೆ. ಇದು ಆಗಲೇ ತೀವ್ರ ದುಡಿದು ದಣಿದು ನಿತ್ರಾಣನಾಗಿದ್ದ ಅವನನ್ನು ಜರ್ಜರಿತನನ್ನಾಗಿಸುತ್ತದೆ. ಜೊತೆಗೆ, ತನ್ನ ಕಲೆಯ ಸೃಜನಶೀಲತೆಗೆ ತಾನೇ ವಿಧಿಸಿಕೊಂಡ ಶ್ರೇಷ್ಠತೆಯ ಅತೀ ಉನ್ನತ ಗುಣಮಟ್ಟವನ್ನು ತಾನೇ ಸಾಧಿಸಲಾಗುತ್ತಿಲ್ಲವೆಂಬ ಹತಾಶೆಯೂ ಸೇರಿ, ತನ್ನ 37 ನೇ ವಯಸ್ಸಿನಲ್ಲಿ, ತನಗೆ ತಾನೇ ಪಿಸ್ತೂಲಿನಿಂದ ಎದೆಗೆ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ಅವನ ಕಲಾಕೃತಿಗಳು ಅವನ ನಿಧಾನ ನಂತರ ಹೆಚ್ಚಿನ ಗಮನ ಸೆಳೆದು ಹೆಸರು, ಮನ್ನಣೆ, ಮಾರುಕಟ್ಟೆ ಪಡೆಯುತ್ತವೆ. ವಿನ್ಸೆಂಟ್ ವ್ಯಾನ್ ಗೊ ವಿಶ್ವವಿಖ್ಯಾತನಾಗುತ್ತಾನೆ. ಅವನ ಕೃತಿಗಳ ಮೂಲಕ ಕಲಾ ಜಗತ್ತಿನಲ್ಲಿ ಅಮರನಾಗುತ್ತಾನೆ. ಅವನ ಕಲಾಕೃತಿಗಳು ಕೋಟಿ ಕೋಟಿ ಡಾಲರ್ ಗಳ ಲೆಕ್ಕದಲ್ಲಿ ಮಾರುಕಟ್ಟೆ ಮೌಲ್ಯ ಪಡೆಯುತ್ತವೆ. ಅನೇಕ genius ಗಳಂತೆ ಬಹುಶಃ he was much ahead of his times.

ಬಹುಶಃ ನಮ್ಮ ಗುರುಗಳಾದ ಶ್ರೀಯುತ ಅಕುಮಲ್ ರಾಮಚಂದ್ರ ಅವರು ಬದುಕಿದ್ದರೆ, ಅವರ ಹೆಚ್ಚಿನ ಸಂಪರ್ಕ ಹೊಂದಿದ್ದ ನನ್ನ ಅತ್ಮೀಯ ಗೆಳೆಯ ಕೆ. ಪುಟ್ಟಸ್ವಾಮಿಯಿಂದ ಅವರ ನಂಬರ್ ಪಡೆದು ಅವರಿಗೆ ವ್ಯಾನ್ ಗೊ ನ ಮ್ಯೂಸಿಯಂ ಬಳಿಯೇ ನಿಂತು ವಿಡಿಯೋ ಕಾಲ್ ಮಾಡಿ ಹೇಳುತ್ತಿದ್ದೆ. ಅವರು ಕಳೆದ ಡಿಸೆಂಬರ್ 2024 ರಲ್ಲಿ ತೀರಿಕೊಂಡರು.

ಎಂಭತ್ತರ ದಶಕದಲ್ಲಿ ಅಕುಮಲ್ ರಾಮಚಂದ್ರ ಅವರು, ಅದುವರೆಗೂ ಬೆಳಕಿಗೆ ಬಾರದಿದ್ದ ಅಮೇರಿಕಾದ Abstract Expressionist ಕಲಾವಿದ ಹೆರಾಲ್ಡ್ ಶಪಿನ್ಸ್ಕಿ ( Harold Shapinski ) ಯನ್ನು ಬೆಳಕಿಗೆ ತಂದು ಪರಿಚಯಿಸುವ ಮೂಲಕ ಕಲಾ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದ್ದರು. ನಂತರ, British Channel 4 Television ನವರು 1985 ರಲ್ಲಿ ಈ ಕಲಾವಿದನ ಬಗ್ಗೆ ತಯಾರಿಸಿದ ಹಾಗೂ ಸಲ್ಮಾನ್ ರಷ್ದಿಯವರಿಂದ ಪ್ರಸ್ತುತ ಪಡಿಸಲಾದ ” The Painter and the Pest” ಎಂಬ ಸಾಕ್ಷ್ಯ ಚಿತ್ರದ ಮುಖ್ಯ ಪಾತ್ರಧಾರಿಯಾಗಿದ್ದರು.

ಮ್ಯೂಸಿಯಂ ನ ಪುಸ್ತಕ ಮಳಿಗೆಯಲ್ಲಿ ಕೊಂಡ Face to Face with Vincent Van Gogh ಎಂಬ ಪುಸ್ತಕದಲ್ಲಿ, ಅವನು1989 ರಲ್ಲಿ ತನ್ನ ಗೆಳೆಯ ಪಾಲ್ ಗಾಗಿನ್ ( Paul Gaugin)ಗೆ ಬರೆದ ಪತ್ರದಲ್ಲಿ, ತನ್ನ ಕಲೆಯ ಬಗ್ಗೆ ಹೇಳಿರುವ ಒಂದು ಸಾಲಿನ ವ್ಯಾಖ್ಯಾನ ಗಮನ ಸೆಳೆಯಿತು – “a consolatory art for distressed hearts” ಬಹುಶಃ, ಇದು ಅವನ ಬದುಕಿಗೇ ಹೆಚ್ಚು ಅನ್ವಯಿಸುತ್ತದೆ – ಸೋತ ಹೃದಯಕ್ಕೆ ಸಾಂತ್ವನವಾಗಿ ಅರಳಿದ ಕಲೆ.

ಈ ಪೋಸ್ಟ್, ನನ್ನ ಗುರುಗಳಾದ ಅಕುಮಲ್ ರಾಮಚಂದ್ರ ಸರ್ ಅವರ ನೆನಪಿಗೆ ಅರ್ಪಣೆ. ಇದನ್ನು ಸಾಧ್ಯವಾಗಿಸಿದ ಮಗಳು ಸುಭಾಷಿಣಿಗೆ – tons of Thanks.

In art one must give heart and soul
– Vincent Van Gogh.

ವಿನ್ಸೆಂಟ್ ವ್ಯಾನ್ ಗೊ ನ ಕೆಲವು ಕಲಾ ಕೃತಿಗಳು : ನನ್ನ ಮೊಬೈಲ್ ನ ಕ್ಯಾಮೆರಾದಲ್ಲಿ ಕಂಡಂತೆ.


  • ರವೀಂದ್ರ ಕೆ. ಆರ್ – ಬ್ಯಾನ್ಬರಿ ( U K )

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW