” ಓಟಿಗೊಂದು ನೋಟು” ಕವನ – ಡಾ. ಅಶೋಕ ಕುಮಾರ ಎಸ್

ದಾಸರಾದರು ಎಣ್ಣೆಗುಂಡು ತುಂಡಿಗೆ, ಜನ್ಮದಲ್ಲಿ ಬುದ್ಧಿ ಬರುವುದಿಲ್ಲ ಹೆಣ್ಣು ಗಂಡಿಗೆ…ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ ಅವರ ಲೇಖನಿಯಲ್ಲಿ ಮೂಡಿದ ಮತದಾನ ಜಾಗೃತಿ ಕವನವನ್ನು ತಪ್ಪದೆ ಮುಂದೆ ಓದಿ …

ನೋಟು ಹಿಡಿದು ಬಾರಿಗೆ
ಕುಡಿದು ಅಡ್ಡ ನಿಲ್ಲುವರು ದಾರಿಗೆ
ಮತ್ತಿನಲ್ಲಿ ಢಿಕ್ಕಿ ಹೊಡೆಯುವರು ಕಾರಿಗೆ.

ಭಿಕ್ಷೆ ಬೇಡುವರು ಜನರ ಓಟಿಗೆ
ಜನ ಓಟು ಮಾರಿಕೊಂಡರು ನೋಟಿಗೆ
ದಿನ ಕಳೆದಂತೆ ಬೆನ್ನೊಡ್ಡುವರು ಚಾಟಿ ಏಟಿಗೆ.

ಕುಡಿದು ತಿರುಗುವರು ಗಾಳಿಗೆ
ಸೋರುತ್ತಿದ್ದರು ಮನಸಿನ ಮಾಳಿಗೆ
ಕುಡುಕರ ಮನಸು ಹರಿದೋದ ಜೋಳಿಗೆ.

ಭಾರವಾದರು ಬಾಳ ಬಂಡಿಗೆ
ದಾಸರಾದರು ಎಣ್ಣೆಗುಂಡು ತುಂಡಿಗೆ
ಜನ್ಮದಲ್ಲಿ ಬುದ್ಧಿ ಬರುವುದಿಲ್ಲ ಹೆಣ್ಣು ಗಂಡಿಗೆ.

ಮಾರು ಹೋದರು ಬ್ರಾಂಡಿಗೆ
ಬೀರು ಕುಡಿದು ಸೇರಿದರು ಚರಂಡಿಗೆ
ಕುಡಿವುದಿಲ್ಲೆಂದು ಹರಕೆ ಹೊತ್ತರು ಚಾಮುಂಡಿಗೆ.

ಎಣ್ಣೆ ಬತ್ತಿಯಿಲ್ಲ ದೀಪದ ಬುಡ್ಡಿಗೆ
ಹಣ ತಂದುತಂದು ಕುಡಿವರು ಹತ್ತರ ಬಡ್ಡಿಗೆ
ತೂತು ಬಿದ್ದರೂ ಚಿಂತೆಯಿಲ್ಲ ತೊಡುವ ಚಡ್ಡಿಗೆ.

ಮತ್ತೇರಿ ಕುಣಿವರು ಗುಂಡಿನ ಗತ್ತಿಗೆ
ಕುಣಿದು ಕುಪ್ಪಳಿಸುವರು ರಾತ್ರಿ ಹೊತ್ತಿಗೆ
ತಮ್ಮ ಮನೆಯ ಮರೆತರು ಸಾರಾಯಿ ಮತ್ತಿಗೆ.


  • ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ, ಯಾದಗಿರಿ ಜಿಲ್ಲೆ. ಜಿಲ್ಲಾಧ್ಯಕ್ಷರು ಸಿರಿಗನ್ನಡ ವೇದಿಕೆ ಯಾದಗಿರಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading