ಬಸವನ ಹುಳು, ಭರಣಿ ಹುಳು ಹಾಗೂ ಮರಾಠಿ ಮೊಗ್ಗು ಈ ಮೂರು ಜೀವಪ್ರಭೇದಗಳ ಬಗ್ಗೆ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಕಿರುಪರಿಚಯ ಮಾಡಿದ್ದಾರೆ, ಮುಂದೆ ಓದಿ…
ಮುಂಗಾರು ಭರಣಿಮಳೆಯ ಸಮಯದಲ್ಲಿ ಬಯಲು ಹೊಲಮಾಳದಲ್ಲಿ ಬಸವನ ಹುಳು, ಭರಣಿ ಹುಳು ಹಾಗೂ ಮರಾಠಿ ಮೊಗ್ಗು- ಈ ಮೂರು ಜೀವಪ್ರಭೇದಗಳು ಕಾಣಿಸುತ್ತವೆ. ಇವುಗಳನ್ನು ಮತ್ತೆ ನೋಡಲು ಮುಂದಿನ ಮುಂಗಾರು ಭರಣಿಮಳೆಯ ಕಾಲವೇ ಬರಬೇಕು.

ಕೆಂಪು ಬಸವನ ಹುಳು ಹೆಚ್ಚು ಕಾಣಿಸಿದ ವರ್ಷ ಸಮೃದ್ಧ ಪಸಲು ಬರುವುದೆಂಬ ನಂಬಿಕೆ ಇದೆ. ಗಿಡಗೆಂಟೆ ಹಾಗೂ ಮರಗಳಲ್ಲಿ ಅಂಟಿ ಕುಳಿತ ಭರಣಿಹುಳುಗಳು ಕಿರ್ರ್ರ್ರ್ರ್ ಎಂದು ಒಂದೇ ಸಮನೆ ಸಂಗೀತ ಹಾಡುತ್ತವೆ. ಸುಗಂಧರಾಜ ಹೂವಿನಂತೆ ನೆಲದಿಂದ ಮೊಳಕೆಯೊಡೆದು ಆಕಾಶಕ್ಕೆ ಮುಖಮಾಡಿ ಕಾಣಿಸುವ ಮರಾಠಿ ಮೊಗ್ಗುಗಳು ಸೀಳುಕ್ಕೆ ಗೇಯುವಾಗ ನೇಗಿಲಬಾಯಿಗೆ ಸಿಕ್ಕಿದ ಮಲ್ಲಿಗೆಯ ಎಳೆಯಂತೆ ಕಾಣಿಸುತ್ತವೆ. ಈಗ ಇವು ನಮಗೆ ಕಾಣಿಸುವುದು ತೀರಾ ಅಪರೂಪ.
- ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು)
