‘ಹೆಣ್ಣುಗಳು ನಾವು’ ಕವನ – ಪವಿತ್ರ. ಹೆಚ್.ಆರ್



ನೊಂದ ಹೆಣ್ಣು ಮಕ್ಕಳಿಗೆ ಕವಿಯತ್ರಿ ಪವಿತ್ರ. ಹೆಚ್.ಆರ್ ಅವರು ಬರೆದಂತಹ ಕವನ, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು…

ಈವತ್ತೀನ ದಿನಗಳಲ್ಲಿ ಹೆಣ್ಣು ಎಷ್ಟೇ ಮುಂದುವರಿದ್ದರು ಹೆಚ್ಚಿನ ವಿದ್ಯೆ..ಕಲಿತು ಸ್ವಾವಲಂಬಿ ಆಗಿ ಜೀವನ ನಡೆಸುತ್ತಿದ್ದರೂ…ಕೆಲವು ಕಡೆ ಹೆಣ್ಣುಮಕ್ಕಳ ಶೋಷಣೆ ಮಾತ್ರ ನಿಂತಿಲ್ಲ…ಇಂದಿನ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ನೋಡಿದ್ರೇ…ಈ ಮುಂದುವರಿದ ಸಮಾಜದ ಮೇಲೆ ಅಸಹನೀಯ ಭಾವನೆ ಬರುತ್ತದೆ…‌…

ಹುಟ್ಟುವಾಗ ಹೆಣ್ಣೆಂಬ ತಾತ್ಸರಾದ ನುಡಿ.
ಕೇಳಿದವರು ಬೆಳೆಯುವಾಗ ರೀತಿ ನೀತಿಗಳ ಚೌಕಟ್ಟಿನೊಳಗಿದ್ದವರು
ಇನ್ನೂ ಚಿಕ್ಕ ಮಕ್ಕಳು-ನಾವು ಹೆಣ್ಣುಗಳು

ಹನ್ನೆರಡು ದಾಟಿದರೆ
ಹದಿ ವಯಸ್ಸು ನಮ್ಮದು
ಹದ್ದು ಬಸ್ತಿನ ಗಡಿ ಮೀರಿದರೆ ಸಲ್ಲದು
ಕಿಟಕಿ ಒಳಗಿನ ಕಣ್ಣುಗಳು
ನಾವು #ಹೆಣ್ಣುಗಳು

ನೆಲ ನೋಡಿ ನಡೆದರೆ ನಮಗುಂಟು ಆಚಾರ ತಲೆ ಎತ್ತಿ ನಡೆದರೆ
ನಮ್ಮದೇ ವಿಚಾರ
ಇದೇ ನಮಗೆರಡು ಬಣ್ಣಗಳು-
ನಾವು ಹೆಣ್ಣುಗಳು

ಮನೆಯೊಳಗೇ ಮದುವೆಯ ಮಾತು
ಕೇಳುವೆವು ಮೂಲೆಯಲ್ಲಿ ಕೂತು
ಅಂದೇ..ಹರಕೆಯ ಕುರಿಗಳು –
ನಾವು ಹೆಣ್ಣುಗಳು

ಕೊರಳನೊಡ್ಡುವೆವು ತಂದ ತಾಳಿಗೆ
#ಹೆಜ್ಜೆ ಇಡುವೆವು ಬಂದ ಬಾಳಿಗೆ
ಮುಂದೆ ಜೀತದಾಳುಗಳು-
ನಾವು ಹೆಣ್ಣುಗಳು

ಮನಸ್ಸಿಗೆ ಧಿಕ್ಕಾರ ದೇಹಕ್ಕೆ ಅಧಿಕಾರ
ಕೇಳುವುದಿಲ್ಲ ಪ್ರತೀಕಾರ
ಗಾಡಿಯ ಗಾಲಿಗಳು-
ನಾವು ಹೆಣ್ಣುಗಳು

ಬಿರುನುಡಿಗಳ ಕೇಳುತ್ತಾ
ಸಿಡಿಮಿಡಿಗಳ ಕೇಳುತ್ತಾ
ನಾಲ್ಕು ಗೋಡೆಗಳ ಮಧ್ಯೆ ಸಮಾನತೆ ಯ
ಕನಸು ಕಾಣುವ ಬಂಧಿಗಳು- ನಾವು ಹೆಣ್ಣುಗಳು


  • ಪವಿತ್ರ. ಹೆಚ್.ಆರ್ ( ವೃತ್ತಿಯಲ್ಲಿ ವಕೀಲರು, ಹವ್ಯಾಸಿ ಬರಹಗಾರರು, ಕವಿಯತ್ರಿ)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW