ದೇಹದ ತೂಕ ಸೆಟ್ ಪಾಯಿಂಟನಿಂದ ಕೆಳಗೆ ಇಳಿಯುವುದಿಲ್ಲ ಯಾಕೆ? ಇಲ್ಲಿದೆ ಅದಕ್ಕೆ ಉತ್ತರ. ಅರುಣ್ ಪ್ರಸಾದ್ ಅವರು ಆರೋಗ್ಯಕರ ವಿಷಯದ ಕುರಿತು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಇದಕ್ಕೆ ವಿಜ್ಞಾನಿಗಳ ಉತ್ತರವಿದೆ ಏನೆಂದರೆ ನಿರ್ದಿಷ್ಟ ತೂಕ ಇಳಿದ ಮೇಲೆ ದೇಹದ ಕೊಬ್ಬು ಇಳಿದಂತೆ ದೇಹದ ಸ್ನಾಯುಗಳು ಬೆಳೆಯಲು ಪ್ರಾರಂಭವಾಗುತ್ತದೆ. ಆಗ ದೇಹದ ತೂಕ ನಿರ್ದಿಷ್ಟವಾಗಿ ಸೆಟ್ ಪಾಯಿಂಟ್ ನಲ್ಲಿ ಹೆಚ್ಚು ಆಗದೆ, ಕಡಿಮೆ ಆಗದೆ ನಿಂತು ಬಿಡುತ್ತದೆ.
ನಾನು ನನ್ನ ಸ್ಥೂಲಕಾಯ ನಿವಾರಣೆಯಲ್ಲಿ ಧಾರ್ಮಿಕ ಆಚರಣೆಯ ದಿನಗಳನ್ನು ಬಳಸುತ್ತೇನೆ ಕಾರಣ ವರ್ಷದಿಂದ ವರ್ಷಕ್ಕೆ ತುಲನೆ ಮಾಡಲು ಇದು ಉಪಯುಕ್ತ. ಉದಾಹರಣೆ 2025ರ ಶಿವರಾತ್ರಿ ಬಂದರೆ ನಾನು ರಾತ್ರಿ ಊಟ ತ್ಯಜಿಸಿ ಐದು ವರ್ಷ ಅಂತ ಗೊತ್ತಾಗುತ್ತದೆ.
ಪ್ರತಿ ವರ್ಷ ಶ್ರಾವಣ ಮಾಸ ಪ್ರಾರಂಭವಾದಾಗ ನಾನು ವರ್ಷ ಪೂರ್ತಿ ಸೇವಿಸುವ ಕಾಫಿ-ಟೀ ಕುಡಿಯುವುದಿಲ್ಲ. ಇದರಿಂದ ಕಾಫಿ, ಟೀ ಚಟವಾಗಿರುವುದು ನಿವಾರಣೆ ಆಗುತ್ತದೆ. ಅನೇಕರು ಇದನ್ನು ಧಾರ್ಮಿಕ ಆಚರಣೆ ಭಾಗವಾಗಿ ಮಾಂಸ ಮಧ್ಯಪಾನ ಧೂಮಪಾನ, ತಂಬಾಕು ಕೂಡ ಈ ಮಾಸದಲ್ಲಿ ತ್ಯಜಿಸುತ್ತಾರೆ .ಇದರಿಂದ ದೇಹ ಡಿಟಾಕ್ಸಿಕ್ ಮಾಡಿದಂತೆ ಮತ್ತು ಚಟಗಳ ನಿಯಂತ್ರಣದ ಸಂಯಮ ಸಿದ್ಧಿಸುತ್ತದೆ ಇದು ಆರೋಗ್ಯ ವೃದ್ಧಿಗೆ ಕಾರಣವಾಗುತ್ತದೆ.
ಮದ್ಯಪಾನ ಒಂದು ತಿಂಗಳು ಸ್ವಯಂ ಸಂಯಮದಿಂದ ನಿಶೇದ ಮಾಡಿದರೆ ಮನುಷ್ಯನ ದೇಹದ ಲಿವರ್ ಕಿಡ್ನಿ ಸ್ವಯ೦ ದುರಸ್ತಿ ಆಗುವುದು ಸುಳ್ಳಲ್ಲ. ನನ್ನ ಅಳಿಯ ನಾಲ್ಕು ವರ್ಷದ ಹಿಂದೆ ತಂದು ಕೊಟ್ಟ weighing machine ನನಗೆ ತುಂಬಾ ಉಪಯೋಗಕ್ಕೆ ಬಂದಿದೆ.

ಕಳೆದ ವಷ೯ ಶ್ರಾವಣ ಮಾಸ ಪ್ರಾರಂಭದಲ್ಲಿ ನನ್ನ ತೂಕ ನೋಡಿದ್ದೆ 108 ಕೇಜಿ ಇತ್ತು (2019 ರಲ್ಲಿ 140 ಕೇಜಿ ದಾಟಿತ್ತು) ಸುಮಾರು 60 ದಿನದ ನಂತರ ತೂಕ 107 ಕೇಜಿ 750 ಗ್ರಾಂ ಅಂದರೆ ಕೇವಲ 250 ಗ್ರಾಂ ಇಳಿದಿದ್ದು ನೋಡಿದೆ!? . ಇದನ್ನು ಓದಿದವರಿಗೂ ಖಂಡಿತಾ ಬೇಸರ ಆಗಿರುತ್ತದೆ ಏಕೆಂದರೆ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿದ 60 ದಿನದಲ್ಲಿ ಕೇವಲ 250 ಗ್ರಾಂ ಇಳಿದಿದೆ ಅಂದರೆ ಈ ಡಯಟ್ ಬೇಕಾ? ಅನ್ನಿಸುವುದು ಸಹಜ.
ಆದರೆ ನನಗೆ ಖಂಡಿತಾ ಬೇಸರ ನಿರಾಶೆ ಇಲ್ಲ… ಯಾಕೆಂದರೆ ಸ್ಥೂಲಕಾಯದ ನಿವಾರಣೆಯಲ್ಲಿ ಕೊಬ್ಬು ಖಂಡಿತಾ ಕರಗುತ್ತಿರುತ್ತದೆ, ಸೊಂಟದ ಸುತ್ತಳತೆ ಕಡಿಮೆ ಆಗಿರುತ್ತದೆ, ಉತ್ಸಾಹ ಚಟುವಟಿಕೆ ಹೆಚ್ಚಾಗಿರುತ್ತದೆ, ಬಿಪಿ ಶುಗರ್ ನಾರ್ಮಲ್ ಆಗಿರುತ್ತದೆ ಆದರೆ ತೂಕ ಯಾಕೆ ಕಡಿಮೆ ಆಗಲಿಲ್ಲ?.
140 ಕೇಜಿಯಿಂದ 110 ಕೇಜಿ ತೂಕ ಇಳಿದಿದ್ದ ವೇಗದಲ್ಲಿ 110 ಕೇಜಿಯಿಂದ ತೂಕ ಯಾಕೆ ಇಳಿಯುತ್ತಿಲ್ಲ ಎಂಬ ನನ್ನ ಸ್ವಂತ ಅನುಭವದಂತೆ ಅನೇಕರ ಅನುಭವದಲ್ಲಿ ಈ ಪ್ರಶ್ನೆ ಸಹಜ.
ಅದಕ್ಕೆ ವಿಜ್ಞಾನಿಗಳ ಉತ್ತರವಿದೆ ಏನೆಂದರೆ ನಿರ್ದಿಷ್ಟ ತೂಕ ಇಳಿದ ಮೇಲೆ ದೇಹದ ಕೊಬ್ಬು ಇಳಿದಂತೆ ದೇಹದ ಸ್ನಾಯುಗಳು ಬೆಳೆಯಲು ಪ್ರಾರಂಭವಾಗುತ್ತದೆ ಆಗ ದೇಹದ ತೂಕ ನಿರ್ದಿಷ್ಟವಾಗಿ #ಸೆಟ್_ಪಾಯಿಂಟ್ ನಲ್ಲಿ ಹೆಚ್ಚು ಆಗದೆ ಕಡಿಮೆ ಆಗದೆ ನಿಂತು ಬಿಡುತ್ತದೆ. ದೇಹದ ಮೆಟಬಾಲಿಸಂ,ಹಾರ್ಮೋನು ಮತ್ತು ಮೆದಳು ದೇಹದ ನಿರ್ದಿಷ್ಟ ತೂಕಕ್ಕೆ ಸೆಟ್ ಮಾಡಿ ಬಿಡುತ್ತದೆ ಇದರಿಂದ ತೂಕ ಇಳಿಕೆಯ ವೇಗ ಸ್ಥಗಿತವಾಗಿ ದೇಹದ ಸ್ನಾಯುಗಳ ಬೆಳವಣಿಗೆಗೆ ಕಾರಣವಾಗುತ್ತದೆ.
ಈ ರೀತಿಯಲ್ಲಿ ಸ್ನಾಯುಗಳು ಬೆಳವಣಿಗೆ ಪೂರಕವಾಗಿ ಆದನಂತರ ಪುನಃ ದೇಹದ ಮೆಟಬಾಲಿಸಂ, ಹಾರ್ಮೋನು ಮತ್ತು ಮೆದಳು ದೇಹದ ತೂಕ ಇಳಿಸಲು ಸಂದೇಶ ನೀಡುತ್ತದೆ ಇದು ಕೆಲ ತಿಂಗಳಿಂದ ಕೆಲ ವರ್ಷಗಳ ಕಾಲ ನಿರ್ದಿಷ್ಟ ತೂಕ (set point) ನಿಂತಲ್ಲೇ ನಿಂತಿರುತ್ತದೆ. ಈ ಕಾರಣದಿಂದ ಈ ಹಂತದಲ್ಲೇ ಅನೇಕರು ತಮ್ಮ ಸ್ಥೂಲಕಾಯ ನಿವಾರಣೆಯ ಪ್ರಯತ್ನದಿಂದ ಹತಾಶರಾಗಿ ನಿರಾಸೆಯಿಂದ ವಾಕಿಂಕ್ ವ್ಯಾಯಾಮ ಡಯಟ್ ಬಿಟ್ಟುಬಿಡುತ್ತಾರೆ, ಏನು ಮಾಡಿದರೂ ಪ್ರಯೋಜನ ಆಗಲಿಲ್ಲ ಎಂದು ಸಮರ್ಥನೆಗೆ ಇಳಿದು ಬಿಡುತ್ತಾರೆ.
ಕಳೆದ ವರ್ಷದ 60 ದಿನದ ಶ್ರಾವಣ ಮಾಸದ ನನ್ನ ಡಯಟ್ ಕೇವಲ 250 ಗ್ರಾಂ ತೂಕ ಮಾತ್ರ ಕಡಿಮೆ ಮಾಡಿದ್ದಕ್ಕೆ ನನಗೆ ಇದೆಲ್ಲ ಮಾಹಿತಿ ಗೊತ್ತಿದ್ದರಿಂದ ನಿರಾಸೆ ಬೇಸರ ಆಗಲೇ ಇಲ್ಲ.
ನನ್ನ ದೇಹದ ಮೆಟಬಾಲಿಸಂ, ಹಾರ್ಮೋನು ಮತ್ತು ಮೆದಳು 108 ಕಿಲೋಗೆ ಸೆಟ್ ಪಾಯಿಂಟ್ ನಿರ್ದಿಷ್ಟಗೊಳಿಸಿದೆ ಸೊಂಟದ ಅಳತೆ 80 ಸೆ.ಮಿ.ಗೆ ಇಳಿದಿದೆ ಅಂದರೆ ದೇಹಕ್ಕೆ ಬೇಡವಾದ ಕೊಬ್ಬು ಇಳಿಯುತ್ತಿದೆ ಮತ್ತು ನನ್ನ ದೇಹದ ಸ್ನಾಯುಗಳು ಬೆಳೆಯುತ್ತಿದೆ ಅಂತ ಅರ್ಥ ಹಾಗೆಯೇ ನಾನು ಮುಂದಿನ ತೂಕ ಇಳಿಕೆಗೆ ದೇಹದ ಆಜ್ಞೆಗೆ ತಾಳ್ಮೆಯಿಂದ ಕಾಯಬೇಕು ಎಂಬ ಸೂಚನೆ ಇದಾಗಿದೆ.
ಇದನ್ನು ನಿಮ್ಮ ಜೊತೆ ಹಂಚಿಕೊಳ್ಳುವ ಮನಸ್ಸಾಯಿತು ಇದು ನನ್ನ ರೀತಿ ಸ್ಥೂಲ ಕಾಯ ನಿವಾರಣೆಯ ಪ್ರಯತ್ನದಲ್ಲಿರುವವರಿಗೆ ಸಹಾಯವೂ ಆಗಬಹುದೆಂದು ಇಲ್ಲಿ ದಾಖಲಿಸಿದ್ದೇನೆ.
2024ರ ಶ್ರಾವಣ ಮಾಸ ಒಂದು ತಿಂಗಳಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ತೂಕ ಇಳಿಯುತ್ತಿದೆ ಅಂದರೆ ಸೆಟ್ ಪಾಯಿಂಟ್ ಬದಲಾವಣಿಗೆ ದೇಹ ತಯಾರಾಗಿದೆ.
- ಅರುಣ್ ಪ್ರಸಾದ್ – ಖ್ಯಾತ ಹೋಟೆಲ್ ಉದ್ಯಮಿ, ಲೇಖಕರು
