ಸಾಧಿಸದವರೆಲ್ಲ ಲೂಸರ್ಗಳಲ್ಲ – ಸಂಜಯ್ ಏತಿಸ್ಟ

ಬುದ್ದಿವಂತಿಕೆ ಮತ್ತು ಶ್ರಮ ಎರಡು ಇದ್ದರೂ ಅವಕಾಶಗಳು ಸಿಗದಿದ್ದಾಗ ಅದರಲ್ಲಿ ಅವನ ತಪ್ಪೇನು?…ಸಂಜಯ್ ಏತಿಸ್ಟ ಅವರ ಲೇಖನಿಯಲ್ಲಿ ಮೂಡಿಬಂದ ಸಾಧಿಸದವರೆಲ್ಲ ಲೂಸರ್ಗಳಲ್ಲ ಒಂದು ಚಿಂತನ ಲೇಖನ.ತಪ್ಪದೆ ಓದಿ…

ಶ್ರಮಕ್ಕೆ ಫಲ ದೊರಕದೆ ಹೋಗಬಹುದು. ಅವಕಾಶಗಳ ಸೃಷ್ಠಿ ನಿಮ್ಮ ಹೆಸರಿಗೆ ಬರೆದಿರದೆ ಇರಬಹುದು. ಹಾಗಂದ ಮಾತ್ರಕ್ಕೆ ಸಾಧಿಸದವರೆಲ್ಲ ಲೂಸರ್ಗಳಲ್ಲ. ಬುದ್ದಿವಂತಿಕೆ ಇಂದ ಕೆಲಸ ಮಾಡಿದರೆ ಮತ್ತು ಅತಿ ಹೆಚ್ಚು ಶ್ರಮ ಹಾಕಿದರೆ ಗೆಲುವು ದಕ್ಕುತ್ತದೆ. ಇದೊಂದು ಮೂಡ ನಂಬಿಕೆ. ನಮ್ಮ ನಡುವೆ ಅತ್ಯಂತ ಬುದ್ದಿವಂತರು ಸಹ ಕಷ್ಟದ ಬದುಕು ನಡೆಸುತ್ತಿದ್ದಾರೆ.

ಶ್ರಮ ಜೀವಿಗಳು ಸಹ ಬುದ್ದಿವಂತಿಕೆ ಮತ್ತು ಶ್ರಮ ಎರಡನ್ನು ಉಪಯೋಗಿಸುವವರು ಸಹ ಬಹಳಷ್ಟು ಜನ ಅದೇ ಸ್ಥಿತಿಯಲ್ಲಿದ್ದಾರೆ. ಅದೆಷ್ಟೇ ಬುದ್ದಿವಂತಿಕೆ ಇರಲಿ, ಪರಿಶ್ರಮ ಇರಲಿ ಅವಕಾಶ ಅನ್ನುವುದು ಬರಬೇಕು. ಅವಕಾಶ ಬರಲ್ಲ ನಾವೇ ಸೃಷ್ಠಿಸಿಕೊಳ್ಳಬೇಕು ಅನ್ನುವುದು ಸತ್ಯವೇ ಆದರೂ ಪೂರ್ತಿ ಸತ್ಯ ಅಲ್ಲ .ಅವಕಾಶ ಸೃಷ್ಠಿಸಿಕೊಳ್ಳುವುದು ಇಡ್ಲಿ ಮಾಡಿದಷ್ಟು ಸುಲಭ ಅಲ್ಲ.
ನಮ್ಮ ನಡುವೆ ಇರುವ ಅನೇಕ ಜನ ಏನನ್ನೂ ಸಾಧಿಸಲಾಗದ ಅನೇಕರನ್ನ ಸಮಾಜ ಅಳಿಯತ್ತೆ ಅಪ್ರಯೋಜಕ ಅಂತಲೋ ದಂಡ ಪಿಂಡ ಅಂತಲೋ ..ಸಮಾಜ ಏಕೆ ಮನೆಯವರೇ ನಿಕೃಷ್ಟವಾಗಿ ಕಾಣುತ್ತಾರೆ. ಪಕ್ಕದ ಮನೆಯವರ ಮಗ ಏನೋ ದಬ್ಬಾಕಿದ್ದು ಕಂಡು.

ಫೋಟೋ ಕೃಪೆ : stock.adobe

ಅಸಲಿಗೆ ಅವರಿಗೆ ಗೊತ್ತೇ ಇರಲ್ಲ. ತಮ್ಮ ಮಗ ಅವರ ಮಗನಿಗಿಂತ ಬುದ್ದಿವಂತ. ಅವರ ಮಗನಿಗಿಂತ ಹೆಚ್ಚು ಶ್ರಮ ಜೀವಿ. ಆತನಿಗೊಂದು ಅವಕಾಶದ ಸೃಷ್ಟಿ ಆಗುತ್ತಿಲ್ಲವೆಂದು. ಆತ ಬುದ್ದಿವಂತ ಮತ್ತ ಶ್ರಮಜೀವಿ ಆಗಿದ್ದು ತನ್ನಿಂದ ಏನು ಸಾಧಿಸಲೂ ಆಗ್ತಿಲ್ಲ ಅನ್ನುವ ಒಂದಿಷ್ಟು ಹತಾಶೆಯಲ್ಲಿ ತನ್ನೊಳಗೆ ಸುಡುತ್ತಿರುತ್ತಾನೆ. ಅದೇ ಸಂದರ್ಭದಲ್ಲಿ ಮನೆಯವರು ಸಹ ಅಣಕಿಸುವಂತೆ ಇಲ್ಲ. ಅವರಿಗೆ ಅರಿವಿಲ್ಲದೆ ಕಡೆಗಣಿಸಿದ ರೀತಿಯಲ್ಲಿ ನಡೆದುಕೊಂಡರೆ ಖಂಡಿತ ಅದು ತೀರ ಕೆಟ್ಟ ಪರಿಣಾಮ ಬೀರತ್ತೆ. ಎಲ್ಲರಿಗೂ ಬೆಳೆಯಬೇಕೆನ್ನುವ ಆಸೆ ಇರತ್ತೆ. ಒಂದಷ್ಟು ಜನಕ್ಕೆ ಶ್ರಮವಿಲ್ಲದೆ ಬೆಳೆಯಬೇಕು ಅನ್ನುವ ಆಸೆ ಇದ್ದರೆ, ಒಂದಷ್ಟು ಜನ ನಿದ್ದೆಯನ್ನು ಮಾಡದೆ ಶ್ರಮ ಹಾಕೋಕೆ ರೆಡಿ ಇರ್ತಾರೆ ಬೆಳೆಯಲೇ ಬೇಕು ಅನ್ನೋ ಹುಚ್ಚಿಗೆ … ಅವಕಾಶ ದಕ್ಕದೇ ಹೋದರೆ ಅದವರ ತಪ್ಪೇ ?

ಅವಕಾಶಗಳು ದಕ್ಕೊಲ್ಲ ನಾವೇ ಸೃಷ್ಟಿಸಬೇಕು ಅನ್ನುವವರು ಮುಂದೆ ಬಂದು ಒಂದೆರಡು ಅವಕಾಶ ಸೃಷ್ಟಿಸಿ ತೋರಿಸಿ ನೋಡೋಣ ? ಅವಕಾಶಗಳು ಲಾಟರಿಯ ಹಾಗೆ ,ಕೆಲವು ಅವಕಾಶಗಳು ಮಾತ್ರವೇ ನಮಗೆ ಅರಿವಿಲ್ಲದೆ ನಮ್ಮನ್ನು ಎಲ್ಲಿಯೋ ತಲುಪಿಸಿ ಬಿಡುತ್ತವೆ. ಅವಕಾಶ ಸಿಕ್ಕಾಗ ಅದನ್ನು ಚಾಕಚಕ್ಯತೆಯಿಂದ ಶ್ರಮ ವಹಿಸಿ ನಿರ್ವಹಿಸುವ ಶಕ್ತಿ ಇದ್ದರೆ. ಕೆಲವು ಸಹ ಅವಕಾಶಗಳ ಹಾಗೆ ಕಂಡು ನಮ್ಮನ್ನ ಸುಳಿಯ ಕೆಡೆಗೆ ಸೆಳೆದು ಪಾತಾಳಕ್ಕೆ ತಳ್ಳಿ ಬಿಡುತ್ತವೆ. ಅವಕಾಶಗಳು ಒಂಥರ ನದಿಯ ದೋಣಿ ವಿಹಾರದ ಹಾಗೆ . ಸುಳಿಗೆ ಸಿಕ್ಕಿ ಸತ್ತವ ಈಜು ಬಾರದವ ,ಈಜುವ ಪ್ರಯತ್ನವನ್ನೇ ಮಾಡದವ ಅಂತಲ್ಲ.ಅಲ್ಲಿ ಆತ ತನ್ನೆಲ್ಲ ಪ್ರಯತ್ನ ಮಾಡಿದ್ದರೂ ಪಾತಾಳ ಸೇರುವ ಅಂತ ಅವಕಾಶದ ಹಿಂದೆ ಹೋಗಿದ್ದ ಅವನಿಗೆ ಅರಿವಿಲ್ಲದೆ ಈಜಲು ಬಾರದವ ದೋಣಿ ವಿಹಾರ ಮಾಡಿದ ಸೌಂದರ್ಯ ಸವಿದ ಎಂದರೆ ಆಟ ಬುದ್ದ್ದಿವಂತ ಈಜಿ ಗೆದ್ದು ಬಂದ ಅಂತಲ್ಲ ಅವನಿಗೆ ಸಂಧರ್ಭ ಕೈ ಹಿಡಿದು ಸುಗಮ ದಾರಿಯ ಸಾಥ್ ಸಿಕ್ಕಿತ್ತು ಅಂತ ಅವಕಾಶಗಳು ಕೆಲವೊಮ್ಮೆ ಯಾವ ದಾರಿಯಲ್ಲಿ ಎಳೆದು ಒಯ್ಯುತ್ತವೆ ಅನ್ನುವುದು ಅರಿವಿಗೆ ಬಾರಲ್ಲ.

ಫೋಟೋ ಕೃಪೆ : istock

ಕೆಲ ವರ್ಷದ ಹಿಂದೆ ಕೆರೆಯಲ್ಲಿ ಮುಳುಗಿ ಸತ್ತ ಸಿನಿಮಾ ಖಳ ನಟರಾದ ಅನಿಲ್ ಮತ್ತು ಉದಯ್ ಗೆ ಸಿಕ್ಕಿದ್ದು ಒಳ್ಳೆ ಅವಕಾಶಗಳೇ ಅವರ ಜೊತೆಯಲ್ಲೇ ನಟನ ಕ್ಲಾಸ್ ಗೆ ಹೋದವರು ಇವರಿಬ್ಬರು ಹೋಗುತ್ತಿದ್ದ ಸ್ಪೀಡ್ ನೋಡಿ ನೊಂದಿರಬಹುದು ಸಹ ನಾವು ಏನು ಸಾಧಿಸಲು ಆಗ್ತಿಲ್ಲ ಅನ್ನೋ ಸಂಕಟಕ್ಕೆ. ಜೀವನ ಹಾಗೆಯೇ ಯಾರು ನಿರೀಕ್ಷಿಸದ ತಿರುವಿಗೆ ಕಾರಣ ಆಗತ್ತೆ ಅವರ ಆ ಅವಕಾಶದ ಆಯ್ಕೆಯೇ ಎತ್ತರಕ್ಕೆ ಒಯ್ದು ಮೇಲಿಂದ ನೀರಿಗೆ ಒಗೆದು ಜಲ ಸಮಾಧಿ ಮಾಡಿತು. ನನ್ನ ಜೀವನ ನನಗೇನು ಕೊಟ್ಟಿದೆ ಅನ್ನುವುದಷ್ಟೇ ನಮ್ಮ ಜೀವನದ ಭಾಗ ಆಗಲಿ. ಶ್ರಮ ಕೂಡ ಇರಲಿ ಆದರೆ ಪಕ್ಕದ ಮನೆಯವನ ಜೀವನ ಅವನಿಗೇನು ಕೊಟ್ಟಿದೆ ಅನ್ನೋದು ನಮ್ಮ ಜೀವನದ ಭಾಗ ಆಗೋದು ಬೇಡ ಯಾಕೆಂದರೆ ಪಕ್ಕದ ಮನೆಯವನಿಗೆ ಭರಪೂರ ಸಿಹಿಯನ್ನೇ ಕೊಟ್ಟ ಜೀವನ ನಲವತ್ತನೇ ವಯಸ್ಸಿಗೆ ಶುಗರ್ ಅನ್ನೋ ಕಾಯಿಲೆಯನ್ನು ಕೊಟ್ಟಿರಬಹುದು ,ಅವನಲ್ಲಿದ್ದು ನನ್ನಲ್ಲಿ ಇಲ್ಲದ ಸಂಪತ್ತನ್ನ ನೆನೆದು ಕೊರಗುವ ಮಂದಿ,ಅವನಲ್ಲಿ ಇಲ್ಲದ ನನ್ನಲ್ಲಿ ಇರುವ ಅರೋಗ್ಯ ನೆನೆದು ಖುಷಿ ಪಡೋದು ಕಲಿಯಬೇಕಿದೆ.

ನನ್ನಲ್ಲಿ ಇರುವುದರ ಕಡೆ ನಾ ಹೆಚ್ಚು ಗಮನ ಕೊಟ್ಟರೆ ಕೊನೆ ಪಕ್ಷ ನನ್ನಲ್ಲಿ ಇರುವುದರ ಸದ್ಬಳಕೆಯಾದರೂ ಆದೀತು ಪರರಲ್ಲಿರುವುದು ನನ್ನಲ್ಲಿ ಇಲ್ಲದೆ ಇರುವುದರ ಬಗ್ಗೆ ಚಿಂತಿಸಿದರೆ ಸದ್ಬಳಕೆ ಮಾಡಲು ಏನು ಇರುವುದಿಲ್ಲ. ಅವಕಾಶ ಸೃಷ್ಟಿಸಿಕೊಳ್ಳಲು ಆಗಲ್ಲಿಲ್ಲ ,ಅವಕಾಶ ದಕ್ಕಲೇ ಇಲ್ಲ. ಗೋಲಿ ಮಾರ್ ..ಮನುಷ್ಯನಾಗಿ ಬದುಕುವುದಕ್ಕೆ ಅವಾಕಾಶ ಸಿಕ್ಕಿದೆಯಲ್ಲ. ಇಂದಿನ ಎಲ್ಲವೂ ನಾಳೆಯ ಒಳಿತಿಗೆ ಇರಬಹುದು. ಇಡಿ ಸಮಾಜದ ಮಾತು ಹಾಗಿರಲಿ ಇಪ್ಪತ್ತೆರಡನೆ ವಯಸ್ಸಿನ ವರೆಗೂ ನಮ್ಮ ಮನೆಯವರ ಕಣ್ಣಿಗೆ ನಾನೊಬ್ಬ ಲೂಸರ್ ,ನಾನೊಬ್ಬ ಅಪ್ರಯೋಜಕನಾಗಿದ್ದೆ ಆದರೆ ನನ್ನದು ಗಟ್ಟಿ ವ್ಯಕ್ತಿತ್ವ ಅದ್ಯಾವುದು ನನ್ನನ್ನ ವಿಚಲಿತಗೊಳ್ಳುವ ಹಾಗೆ ಮಾಡಲಿಲ್ಲ ,ನನ್ನ ಜೀವನದ ಬಗ್ಗೆ ಅಷ್ಟೇ ಗಮನ ನನ್ನದಾಗಿತ್ತು.

ನಾ ಯಾರನ್ನೂ ಕೇವಲವಾಗಿ ನೋಡೋಲ್ಲ. ಶ್ರಮ ಹಾಕುವ ಎಲ್ಲರೂ ನನ್ನ ಸಮಾನರು ಅನ್ನೋ ಭಾವನೆಯೇ ನನ್ನದು. ಆತ ಹಾಕುವ ಶ್ರಮ ನನಗಿಂತ ಹೆಚ್ಚಿದ್ದರೆ ಆತ ನನಗಿಂತ ದೊಡ್ಡವನೇ ಹೊರತು ಆತ ಎಷ್ಟು ಗಳಿಸಿದ್ದಾನೆ ಅನ್ನೋದಂತೂ ಅಲ್ಲ


  • ಸಂಜಯ್ ಏತಿಸ್ಟ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading