‘ಏಳಿ ಮಕ್ಕಳೇ ಎದ್ದೇಳಿ’ ಕವನ

ಆಕೃತಿಕನ್ನಡ ಶಿಕ್ಷಕಿ, ಲೇಖಕಿ ಸರ್ವಮಂಗಳ ಜಯರಾಂ ಅವರಿಗೆ ಹುಟ್ಟುಹಬ್ಬಕ್ಕೆ ಶುಭಕೋರುತ್ತಾ ಅವರ ರಚನೆಯ ಒಂದು ಕವಿತೆ, ತಪ್ಪದೆ ಮುಂದೆ ಓದಿ…

ಆಲಸ್ಯ ತೊರೆದು ಚೇತನರಾಗಿ
ನವೋಲ್ಲಾಸದಿ ಜಾಗೃತರಾಗಿ.

ಕಳೆಯಿತು ಬೇಸಿಗೆ…
ಮುಗಿಯಿತು ರಜೆಯ ಮಜೆ
ಬನ್ನಿ ಎಲ್ಲಾ ಮಕ್ಕಳೇ ಶಾಲೆಗೆ.

ಶಿಕ್ಷಣವೇ ಶಕ್ತಿ ಅರಿಯಿರಿ
ಆತ್ಮವಿಶ್ವಾಸದಿ ಮುನ್ನುಗ್ಗಿ
ಸುಜ್ಞಾನದಿ ಬಲವರ್ಧನೆಗೊಳ್ಳಿ.

ಬಾಳೆಗೆ ಒಂದೇ ಗೊನೆಯಂತೆ
ಬಾಳಿಗೆ ಒಂದು ಗುರಿ ಇರಲಿ
ಸತತ ಅಭ್ಯಾಸದಿ ಸಾಧನೆಗೈಯಿರಿ

ಅಜ್ಞಾನ ಅಂಧಕಾರ ತೊರೆಯಿರಿ
ಜ್ಞಾನ ಜ್ಯೋತಿಯೆಡೆಗೆ ನಡೆಯಿರಿ
ಹೆತ್ತವರಿಗೆ ಆಶಾಕಿರಣವಾಗಿರಿ.


  •  ಸರ್ವಮಂಗಳ ಜಯರಾಂ – ಶಿಕ್ಷಕಿ. ಗೌರಿಬಿದನೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading