‘ಅವನೊಲವೇ ಎನ್ನ ಎದೆಯ ಹಣತೆ’…ಕವಿಯತ್ರಿ ಡಿ.ಶಬ್ರಿನಾ ಮಹಮದ್ ಅಲಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಅಂದು
ಮನಸಾರೆ
ನೆಚ್ಚಿದ ನನ್ನೊಲವನು
ಮಗುವಿನಂತೆ
ಅಪ್ಪಿದವ
ಇಂದು…!
ಶಶಿಯ ಆಗಮನಕೆ
ಚಕೋರ……
ಹಂಬಲಿಸುವಂತೆ
ಅವನೊಲವಿಗಾಗಿ
ಹಂಬಲಿಸುವ
ನನ್ನೀ ಮನವನು
ಅಡ್ಡಗಟ್ಟಿ…….
ತಡೆಯಬೇಕಂತೆ!
ಆಕಾಶಕ್ಕೆ ಏಣಿ
ಹಾಕುವ ಸಾಹಸ
ಮಾಡುವುದ್ಹೇಗೆ ಸಖಿ?
ಸಾಗರದ ಅಲೆಯಂತೆ
ದುಮ್ಮಿಕ್ಕುವ
ಅವನ ಮೇಲಿನ
ನನ್ನೊಲವನು ತಡೆಹಿಡಿದರೆ…
ಹುಟ್ಟುಗೋಲಿಲ್ಲದ ದಿಕ್ಕೆಟ್ಟ
ಅಂಬಿಗಳಾಗುವೆ…
‘ಅವನೊಲವೇ
ಎನ್ನ ಎದೆಯ ಹಣತೆ’!
ಇದ ಅವಗೆ ಓಲೈಸುವುದ್ಹೇಗೆ ಸಖಿ?
- ಡಿ.ಶಬ್ರಿನಾ ಮಹಮದ್ ಅಲಿ – ಚಳ್ಳಕೆರೆ.
