‘ಯುವ ಸಂತೆ- ವಿಶಮುಕ್ತ ಆಹಾರದಿಂದ ಸ್ವಾತಂತ್ರ್ಯ’ ಎನ್ನುವ ವಿಷಯದಡಿ ಪರಿಸರಕ್ಕೆ ಪೂರಕವಾದ ಮತ್ತು ವಿಷಮುಕ್ತ ಆಹಾರೋತ್ಪಾದನೆ ಮತ್ತು ಉದ್ಯಮದಲ್ಲಿ ತೊಡಗಿರುವ ಸಂವಾದ ಬದುಕು ಸಂಸ್ಥೆಯಲ್ಲಿ ತರಬೇತಿ ಪಡೆದ ಯುವಜನರು ‘ಗ್ರೀನ್ ಪಾತ್ ಆರ್ಗಾನಿಕ್ ರೆಸ್ಟೋರೆಂಟ್’ ನಲ್ಲಿ ಮಳಿಗೆಗಳನ್ನು ತೆರೆಯಲಿದ್ದಾರೆ. ಎಲ್ಲರಿಗೂ ಸ್ವಾಗತ, ಹೆಚ್ಚಿನ ವಿವರ ಕೆಳಗಿನಂತೆ ಇದೆ, ತಪ್ಪದೆ ಮುಂದೆ ಓದಿ…
ದಿನಾಂಕ : ಆಗಸ್ಟ್ 8, 2025 ರಿಂದ ಆಗಸ್ಟ್ 10, 2025
ಸ್ಥಳ : ಗ್ರೀನ್ ಪಾತ್

ಸಂವಾದ – ಬದುಕು- ಸೆಂಟರ್ ಪಾರ್ ಲೈವ್ಲಿಹುಡ್ಸ್ ಲರ್ನಿಂಗ್ ‘ ಸಂಸ್ಥೆಯು ಸುಸ್ಥಿರ ಕೃಷಿ, ಪರಿಸರಕ್ಕೆ ಪೂರಕವಾದ ಅಭಿವೃದ್ಧಿ ಮತ್ತು ಯುವ ಜನರ ಘನತೆಯುಕ್ತ ವೃತ್ತಿ ಮತ್ತು ಸಾಮಾಜಿಕ ಬದಲಾವಣೆಯಂತಹ ವಿಷಯಗಳಲ್ಲಿ ಯುವ ಜನರೊಟ್ಟಿಗೆ ಕಾರ್ಯನಿರ್ವಹಿಸುತ್ತಿದೆ.
ಯುವ ಜನರಲ್ಲಿ ಸುಸ್ಥಿರ ಅಭಿವೃದ್ದಿಗೆ ಪೂರಕವಾದ ಉದ್ಯಮಗಳನ್ನು ಸ್ಥಾಪಿಸಲು ಮತ್ತು ಸುಸ್ಥಿರ ಜೀವನೋಪಾಯಗಳನ್ನು, ವೃತ್ತಿಗಳನ್ನು ರೂಪಿಸಿಕೊಳ್ಳುವ ಸಲುವಾಗಿ ಕಾರಣ ದಿನಾಂಕ 8 ಆಗಸ್ಟ್ 2025ರ ಶುಕ್ರವಾರದಿಂದ ರಿಂದ 10ಆಗಸ್ಟ್ 2025ರ ಭಾನುವಾರದವರೆಗೆ ‘ಯುವ ಸಂತೆ- ವಿಶಮುಕ್ತ ಆಹಾರದಿಂದ ಸ್ವಾತಂತ್ರ್ಯ’ ಎನ್ನುವ ವಿಷಯದಡಿ ಪರಿಸರಕ್ಕೆ ಪೂರಕವಾದ ಮತ್ತು ವಿಷಮುಕ್ತ ಆಹಾರೋತ್ಪಾದನೆ ಮತ್ತು ಉದ್ಯಮದಲ್ಲಿ ತೊಡಗಿರುವ ಸಂವಾದ ಬದುಕು ಸಂಸ್ಥೆಯಲ್ಲಿ ತರಬೇತಿ ಪಡೆದ ಯುವಜನರು ‘ಗ್ರೀನ್ ಪಾತ್ ಆರ್ಗಾನಿಕ್ ರೆಸ್ಟೋರೆಂಟ್’ ನಲ್ಲಿ ಮಳಿಗೆಗಳನ್ನು ತೆರೆಯಲಿದ್ದಾರೆ. ಇದು ಪರಿಸರಕ್ಕೆ ಪೂರಕವಾದ ಉದ್ಯಮದಲ್ಲಿ ತೊಡಗಿರುವ ಯುವಜನರ ಪ್ರಯತ್ನವಾಗಿರುತ್ತದೆ.
ಈ ಮಳಿಗೆಗಳಲ್ಲಿ ಪರಿಸರ ಸ್ನೇಹಿ ಜೀವನಶೈಲಿಯ ಉತ್ಪನ್ನಗಳು, ಕರಕುಶಲ ಉತ್ಪನ್ನಗಳು, ವಿಶಮುಕ್ತ ಆಹಾರ ಪದಾರ್ಥಗಳು, ಗೃಹೋತ್ಪನ್ನ ಮನೆ ಬಳಕೆಯ ವಸ್ತುಗಳು ಮಾರಾಟವಾಗಲಿವೆ. ಪರಿಸರ ಸ್ನೇಹಿ ಜೀವನ ಶೈಲಿಯನ್ನು, ಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸುವವರೆಲ್ಲ ನಮ್ಮ ಯುವಜನರ ಪ್ರಯತ್ನವನ್ನು ಬೆಂಬಲಿಸಲು ಬನ್ನಿ….
ನಿಮ್ಮ ನಿರೀಕ್ಷೆಯಲ್ಲಿ
- ಡಾ.ಮುರಳಿ ಮೋಹನ್ ಕಾಟಿ – ಸಂವಾದ- ಬದುಕು
