ಕತ್ತಲೊಳಗಿನ ಬೆಳಕು …!

ನೀನೆಂದರೆ ಭಯ ಅಲ್ಲ, ಒಳಗಣ್ಣು ತೆರೆಯಲು ಕತ್ತಲೊಳಗಿನ ಬೆಳಕು ಕವಿಯತ್ರಿ ರೇಷ್ಮಾ ಗುಳೇದಗುಡ್ಡಾಕರ್ ಅವರು ಅಂತರಂಗದ ಬಗ್ಗೆ ಚಂದವಾಗಿ ವರ್ಣಿಸಿದ್ದಾರೆ.

ಪ್ರಖರ ಬೆಳಕು ಕಾಣಿಸದು
ನನ್ನ ರೂಪವ ಅಂತರಂಗದ
ಪ್ರಲಾಪವ.

ಗಾಢ ಕತ್ತಲೆ ಕಾಣಿಸುವುದು
ನನ್ನೂಳಗಿನ
ಅಲ್ಲಿನ ಬೆರಗನ್ನು!
ಅಬ್ಬಾ …… ಎನಿದು
ನನ್ನೂಳಗಿನ  ಸ್ವಾರ್ಥ, ಸೇಡು
ಕೋಪ,ತಾಪದ ಬೆಂಕಿ
ಜಗತ್ತಿಗೆಲ್ಲಾ ಹಂಚಿದರು ಉಳಿಯುವುದು !
ಆದರೂ ನಾನು ಎಂಬದು
ಈ ಜಗದ ಕಣ ….!!? ಹೊರಗೆ
ಗಾಂಧಿ , ಬುದ್ದನ ಬಣ್ಣ

ನನ್ನೂಳಗಿನ ಮಾತು
ಜಗದೇಲ್ಲ ಶಬ್ದಗಳನು ಸರಿಗಟ್ಟಿ
ನಿಲ್ಲುವವು…!?
ಆದರೂ ನಾನು ಏಕಾಂಗಿ
ವ್ಯಕ್ತಿ ಒಂದು ಒಳಗಿನ
ಅಭಿವ್ಯಕ್ತಿ ಹಲವು ….
ಕತ್ತಲೊಳಗಿನ ಬೆಳಕು
ದರ್ಶಿಸುವುದು ಅಂತರಾಳವ
ಅಲ್ಲಿನ  ನೈಜತನವ

ಕಪ್ಪುಕತ್ತಲೆಯ ಮುಂದೆ
ಬಣ್ಣ ಬಣ್ಣದ, ದಿವ್ಯ
ಬೆಳಕು ಮಂಕಾಯಿತು
ಸತ್ಯವ ಅರಿಯಲು ಸೋತಿತು …
ಕಪ್ಪು ಎಂದರೆ ಅಜ್ಞಾನ, ನಿರಾಶೆಯ ಕೋಪ
ಎಂಬ ಹಲವು ಮೂದಲಿಕೆಗಳು …
ಇದ್ದರು ಅಂಧಕಾರ ನಿನಗೆ ಸಾಟಿ ಇಲ್ಲ
ನೀನೆಂದರೆ ಭಯ ಅಲ್ಲ
ಒಳಗಣ್ಣು ತೆರೆಯಲು ಕತ್ತಲೊಳಗಿನ ಬೆಳಕು
ಕಾಣುವದಲ್ಲ…..


  •   ರೇಷ್ಮಾ ಗುಳೇದಗುಡ್ಡಾಕರ್ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading