ಆದರ್ಶಪ್ರಿಯ ಗುರು…- ಪ್ರಶಾಂತ ಹೊಸಮನಿ

ನೈತಿಕ ಮೌಲ್ಯಗಳನ್ನೂ ಬಿತ್ತುವ ಮೊದಲ ಶಿಕ್ಷಕಿ ತಾಯಿ, ಮುಂದೆ ಬರುವ ಜೀವನದ ಪಯಣದಲ್ಲಿ ಗುರುವಿನ ಸ್ಥಾನ ಅತ್ಯಮೂಲ್ಯವಾದದ್ದು , ಆ ಗುರುವಿನ ಕುರಿತು ಪ್ರಶಾಂತ ಹೊಸಮನಿ ಅವರು ಬರೆದ ಲೇಖನ. ಮುಂದೆ ಓದಿ….

ಬದುಕಿನ ಜೀವನದ ಪಯಣದಲ್ಲಿ ಹುಟ್ಟು ಸಾವುಗಳ ಮಧ್ಯೆ ಗುರುವಿನ ಸ್ಥಾನ ಅತ್ಯಮೂಲ್ಯವಾದದ್ದು ,ತಾಯಿಯೇ ಜೀವನದ ಮೊದಲ ಶಿಕ್ಷಕಿಯಾಗಿ ನೈತಿಕ ಮೌಲ್ಯಗಳ ಬಿತ್ತುವ ಕೂರಿಗೆಯಾಗುತ್ತಾಳೆ. ನಾವು ಬೆಳೆದಂತೆ ಅಂಗನವಾಡಿಯಲ್ಲಿನ ಹಾಡು ಕಲಿಸುವ ಅಂಗನವಾಡಿಯ ಸಹಾಯಕಿ ಕೂಡ ನಮ್ಮ ಆದರ್ಶಪ್ರಿಯ ಶಿಕ್ಷಕಿಯಾಗುವಳು. ಕಲಿಕೆಯ ವಸ್ತು ಯಾವದೇ ಆಗಿರಲಿ ನಮ್ಮ ಜೀವನದ ಅಂತ್ಯದಲ್ಲೂ ಕಲಿಯುವುದಿದೆ..! ಗೊತ್ತಿಲ್ಲದ ವಿಷಯವನ್ನು ಗೊತ್ತು ಪಡಿಸುವವರು ಶಿಕ್ಷಕರೆನ್ನಿಸಿಕೊಳ್ಳುವರು. ನಮ್ಮ ವೃತ್ತಿ ಬದುಕಿನಲ್ಲಿ ಪ್ರಾಥಮಿಕ, ಪ್ರೌಢಶಾಲಾ ಹಾಗೂ ಪದವಿ ಹಂತಗಳ ಶಿಕ್ಷಣ ಕ್ರಮದಲ್ಲಿ ಪ್ರತಿಯೊಬ್ಬ ಶಿಕ್ಷಕರು ಉಪನ್ಯಾಸಕರು ಆದರ್ಶಪ್ರಿಯರಾಗಿರುತ್ತಾರೆ.

ಈ ಎಲ್ಲಾ ಶೈಕ್ಷಣಿಕ ಹಂತದ ಕಲಿಕಾ ಕ್ರಮದಲ್ಲಿ ಶಿಕ್ಷಕರ ಕಲಿಕಾ ಕ್ರಮಗಳು ನಮ್ಮ ಸ್ಮೃತಿ ಪಟಲದಿಂದ ಮರೆಯಾಗುವದಿಲ್ಲ. ಜೀವನಕ್ಕೆ ಒಂದು ಹಂತ ಕಂಡಾಗ ಮರೆಯದ ಶೈಕ್ಷಣಿಕ ಜೀವನಕ್ಕೆ ಜಾರಿದಾಗ ಮೊದಲು ನೆನಪಾಗೋದು ನಮ್ಮ ಹಳೆಯ ಶಿಕ್ಷಕ ವೃಂದ ,ಹಳೆಯ ಗೆಳೆಯರು ಬೆರೆತರೆ ಮೊದಲು ನೆನಪಾಗೋದು ನಮ್ಮ ಸರ್ ಈಗ ಎಲ್ಲಿದ್ದಾರೋ ..? ಹೇಗಿದ್ದಾರೋ ?ಎಂಬ ಮನೋಭಾವ , ರಕ್ತ ಸಂಬಂಧಕ್ಕಿಲ್ಲದ ನೆನಪು, ಶಿಕ್ಷಕನ್ನೊಮ್ಮೆ ನೆನಪಿಸುತ್ತದೆ.

ಫೋಟೋ ಕೃಪೆ : sarkaripro

ಒಂದು ಕ್ಷಣ ನಮ್ಮ ಬಾಲ್ಯ ಜೀವನೊಮ್ಮೆ ಮೆಲುಕಿಹಾಕಿದಾಗ ಪ್ರಾಥಮಿಕ ಶಾಲೆಯ ಆ ಚಟುವಟಿಕೆಗಳು ಸದಾ ನಮ್ಮ ಕಣ್ಮುಂದೆ ಹಾದು ಹೋಗುತ್ತವೆ. ಶಾಲಾ ಜೀವನದಲ್ಲಿ ನಾವು ತಪ್ಪು ಮಾಡಿದಾಗ ಶಿಕ್ಷಕರು ನಮಗೆ ಶಿಕ್ಷಿಸುವ ಪರಿಯಿಂದ ಅವರ ಮೇಲಿನ ಕೋಪ ಆಗಷ್ಟೇ ಸೀಮಿತಗೊಂಡು ಮತ್ತೆ ಮರೆಸಿಬಿಡುತ್ತಿತ್ತು, ಅಂದಿನ ಶಿಕ್ಷಕರ ಬೆತ್ತದ ರುಚಿಯೇ ಇಂದಿನ ಬದುಕಿನ ಒಳ್ಳೆಯ ಊಟವಾಗಿದೆ . ಇಂದಿನ ಶಿಕ್ಷಣ ವ್ಯವಸ್ಥೆಯ ಶಿಕ್ಷಕರೊನ್ನೋಮ್ಮೆ ಕಂಡಾಗ ಬೇಜಾರಾಗುತ್ತದೆ ,ಒತ್ತಡಪೂರ್ವಕ ಶಿಕ್ಷಣ ,ಶಿಕ್ಷಕ ತಪ್ಪೆಸಗಿದರೆ ಸಾಕು ಇಡೀ ಕುಲವನ್ನೇ ಜಾಲಾಡಿ ಬಿಡುವದು , ಶಿಕ್ಷಕರ ಬೋಧನೆ ಭಯದಿಂದ ಕೂಡಿದೆ, ಶಾಲಾ ಕೋಣೆಯಲ್ಲಿ ಬೆತ್ತ ಕಂಡರೆ ಸಾಕು ಮಕ್ಕಳ ಹಕ್ಕು ಉಲ್ಲಂಘನೆ…!? ಹೀಗಿದ್ದಾಗ ಗುರು ಶಿಷ್ಯರ ಅವಿನಾಭಾವ ಸಂಬಂಧ ಎಲ್ಲಿ ಬೆಳೆಯಲು ಸಾಧ್ಯ.? ಶಿಕ್ಷಣ ಕೇವಲ ವ್ಯಾಪಾರೀಕರಣಗೊಂಡು ಗುರುವಿಗೆ ಬೆಲೆಯಿಲ್ಲದಾಗಿದೆ .

ಫೋಟೋ ಕೃಪೆ : digitallearning

‌ ಪ್ರಸ್ತುತ ಶಿಕ್ಷಣ ವ್ಯವಸ್ಥೆ ತಂತ್ರಜ್ಞಾನಧಾರಿತವಾಗಿದೆ ಹೊರತು ಮೌಲ್ಯಧಾರಿತವಾಗಿಲ್ಲ , ಮಾಧ್ಯಮಗಳ ಪ್ರಭಾವ ವಿದ್ಯಾರ್ಥಿಗಳನ್ನು ಹಾಳುಗೆಡುತ್ತಿದೆ, ಮೊಬೈಲ್ ನಲ್ಲಿನ ಅಂತರ್ಜಾಲದ ಮಾಹಿತಿಯೇ ಗುರುವಾಗಿ, ಜೀವಂತ ಗುರುವಿನ ಹೆಸರು ಮರೆ ಮಾಚುತ್ತಿದೆ. ಮುಂದೊಮ್ಮೆ ಗುರುವಿನ ಅವಶ್ಯಕತೆಯೇ ಇಲ್ಲವೇನೋ.? ಎಂಬಂತೆ ಭಾಸವಾಗುತ್ತದೆ ,ಹೀಗೆ ಹೇಳತ್ತಾ ಹೋದರೆ ಪಟ್ಟಿ ಕೊನೆಯ ಪುಟದಾಟಿ ಹೋಗುತ್ತದೆ .ಅದೇನೆ ಸಂಗತಿಗಳಿರಲಿ ಗುರುವಿಲ್ಲದೇ ಮೋಕ್ಷ ದೊರೆಯದು ಎಂಬ ಮಾತಿನಂತೆ ,ಜೀವನದ ಜನನಕೆ ತಂದೆ ತಾಯಿ ಕಾರಣವಾದರೆ ,ಜೀವನದ ಸುಂದರ ಬದುಕಿಗೆ ನಮ್ಮ ಶಿಕ್ಷಕವೃಂದ ಕಾರಣವಾಗುತ್ತದೆ, ಇಂತಹ ಶಿಕ್ಷಕರನ್ನು ನೆನೆಯಲೋಸುಗ ಒಂದು ದಿನ ಅದು ಸಪ್ಟೆಂಬರ್ 5 ,ಈ ದಿನ ನಾವು ನಮ್ಮ ಜೀವನ ಪ್ರಾರಂಭಗೊಂಡ ಮರು ಕ್ಷಣದಿಂದ ಇಲ್ಲಿಯವರೆಗೂ ಹಲವು ಶಿಕ್ಷಕರು ನಮ್ಮ ಮುಂದೆ ಬಂದು ಹೋಗುವರು ಅಂತಹ ಶಿಕ್ಷಕರನ್ನೊಮ್ಮೆ ಮನದಿ ನೆನದು ಪುನಿತರಾಗೋಣ ………


  • ಪ್ರಶಾಂತ ಹೊಸಮನಿ  (ಕತೆಗಾರರು, ಲೇಖಕರು) ನಾಗಠಾಣ ತಾ.ಜಿ.ವಿಜಯಪುರ.

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW