ಆಕೃತಿಕನ್ನಡ ಪತ್ರಿಕೆಯ ಕುರಿತು ಓದುಗರಲ್ಲಿ ಮತ್ತು ಲೇಖಕರಲ್ಲಿ ವಿನಂತಿ. ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರಕ್ಕೆ ಧನ್ಯವಾದಗಳು …
ಆಕೃತಿ ಕನ್ನಡದ ಮುಖ್ಯ ಉದ್ದೇಶ ಕನ್ನಡ ಬರವಣಿಗೆಯನ್ನು ಉಳಿಸುವುದು ಮತ್ತು ಬೆಳೆಸುವುದು. ಹಿರಿಯ ಲೇಖಕರ ಜೊತೆಗೆ ಅವರ ಮಾರ್ಗದರ್ಶನದಲ್ಲಿ ಹೊಸ ಲೇಖಕರಿಗೆ ಪ್ರೋತ್ಸಾಹಿಸುವುದು ಆಕೃತಿಯ ಇನ್ನೊಂದು ಮುಖ್ಯ ಉದ್ದೇಶ. ಆಕೃತಿಕನ್ನಡ ತನ್ನದೇ ವ್ಯಾಪ್ತಿಯಲ್ಲಿ ಯಾವ ಪ್ರಚಾರ, ಹಣದ ಹಿಂದೆ ಹೋಗದೆ ನಿಸ್ವಾರ್ಥವಾಗಿ ಕೆಲಸ ಮಾಡುತ್ತಾ ಸಾಹಿತ್ಯಾಸಕ್ತರನ್ನು ತನ್ನತ್ತ ಸೆಳೆಯುತ್ತ ಬಂದಿದೆ. ಅದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ನಿರಂತರವಾಗಿದೆ. ಅದಕ್ಕೆ ಧನ್ಯವಾದಗಳು.
ಇದೊಂದು ಬಾಯಿಂದ ಬಾಯಿಗೆ ಹರಡಿ ಬೆಳೆದಂತಹ ಅಂತರ್ಜಾಲ ಪತ್ರಿಕೆ ಎಂದರೆ ತಪ್ಪಲ್ಲ.
ಆಕೃತಿ ಕನ್ನಡ ಕೇವಲ ಫೇಸ್ಬುಕ್ ಪೇಜ್ ಮಾತ್ರವಲ್ಲ. ಇದೊಂದು ಅಂತರ್ಜಾಲ ಪತ್ರಿಕೆಯಾಗಿದ್ದು, ಆಕೃತಿಯಲ್ಲಿ ಪ್ರಕಟವಾಗುವ ಎಲ್ಲ ಲೇಖನಗಳು ಗೂಗಲ್ ನ ಸರ್ಚ್ ಇಂಜಿನ್ ನಲ್ಲಿಯೂ ಸಿಗುತ್ತದೆ. ಹಾಗಾಗಿ ಲೇಖಕರು ಬರೆದ ಅಮೂಲ್ಯ ಲೇಖನಗಳು ಅಳಿಸಿ ಹೋಗದೆ ಒಂದೆಡೆ ಶಾಶ್ವತವಾಗಿ ಉಳಿಯುವಂತೆ ಆಕೃತಿಕನ್ನಡ ಮಾಡಿದೆ. ಇನ್ನೊಂದು ಸಂತೋಷದ ವಿಷಯವೆಂದರೆ ಆಕೃತಿಕನ್ನಡದ App ಸದ್ಯದಲ್ಲೇ ನಿಮ್ಮ ಮುಂದೆ ಬರಲಿದೆ. ಇದರಿಂದ ಆಕೃತಿಕನ್ನಡ ಓದುಗರಿಗೆ ಇನ್ನಷ್ಟು ಹತ್ತಿರವಾಗಲಿದೆ.
ಲೇಖನಗಳನ್ನು ಬರೆಯಲು ಇಚ್ಚಿಸುವವರು ak.shalini@outlook.com ಕಳುಹಿಸಿಕೊಡಿ…
ಲೇಖಕರಲ್ಲಿ ವಿನಂತಿ :
- ರಾಜಕೀಯ, ಧರ್ಮ ವಿಷಯವನ್ನು ಆಕೃತಿ ಕನ್ನಡ ಪ್ರೋತ್ಸಾಹಿಸುವುದಿಲ್ಲ. ಯಾವ ಜಾತಿ, ಧರ್ಮಗಳನ್ನು ನೋಡದೆ ಉತ್ತಮ ಸಾಹಿತ್ಯಕ್ಕಾಗಿ ನಿಂತಂತಹ ಪತ್ರಿಕೆ ಆಕೃತಿಕನ್ನಡ.
- ಇತರೆ ಪತ್ರಿಕೆಯ ಪ್ರಮೋಷನ್ ಇಲ್ಲಿ ಮಾಡಲಾಗದು.
- ಲೇಖಕರ ಬರಹಗಳು ಪ್ರಕಟವಾಗುವಲ್ಲಿ ತಡವಾಗಿದ್ದರೇ ಅಥವಾ ಪ್ರಕಟವಾಗದೆ ಇದ್ದರೇ ಮೇಲ್ ಮುಖಾಂತರ ನಿಮ್ಮ ಸಿಟ್ಟು, ಬೇಸರವನ್ನು ವ್ಯಕ್ತಪಡಿಸಬಹುದು. ಲೇಖಕರಿಗೆ ನೋಯಿಸುವುದು ಆಕೃತಿಯ ಉದ್ದೇಶವಲ್ಲ.
- ಪ್ರಕಟವಾಗುವ ಲೇಖನಗಳು ನಿಮ್ಮ ಕುಟುಂಬದವರ ಲೇಖನಗಳು ಎಂದು ಭಾವಿಸಿ ಒಬ್ಬರಿಗೊಬ್ಬರಿಗೆ ಪ್ರೋತ್ಸಾಹಿಸಿ ನೀಡಿ.
- ಲೇಖಕರ ಲೇಖನದಲ್ಲಿ ಅಕ್ಷರ ಅಥವಾ ಲೋಪದೋಷವಿದ್ದರೆ ಅವರಿಗೆ ವೈಯಕ್ತಿವಾಗಿ ತಿಳಿಸಿ, ನೇರವಾಗಿ ಕಾಮೆಟ್ ಹಾಕಿ ಲೇಖಕರ ಮನಸ್ಸಿಗೆ ನೋಯಿಸಬೇಡಿ.
- ಇಷ್ಟವಾದ ಲೇಖನಗಳನ್ನು ನಿಮ್ಮ ವಾಲ್ ಗಳಲ್ಲಿ ಶೇರ್ ಮಾಡಿ…ಇದರಿಂದ ಲೇಖಕರಿಗೆ ಪ್ರೋತ್ಸಾಹ ಸಿಗುವುದು.
ಆಕೃತಿಕನ್ನಡ ಉತ್ತಮ ಸಾಹಿತ್ಯಕ್ಕೆ ಮೀಸಲಿಟ್ಟಂತಹ ವೇದಿಕೆ. ಇದರ ಸದುಪಯೋಗ ಎಲ್ಲ ಲೇಖಕರಿಗೂ ಸಿಗಲಿ…ಧನ್ಯವಾದಗಳು…
- ಆಕೃತಿಕನ್ನಡ ನ್ಯೂಸ್