‘ಪುಟ್ಟ ಹಕ್ಕಿ’… ಕವನ – ಅನಂತ ನಾಯಕ್

‘ಚಿಕ್ಕ ಚಿಕ್ಕ ಹೂಗಳನ್ನು, ಕೊಕ್ಕಿನಲ್ಲಿ ಹೆಕ್ಕಿ ತಂದು, ಸಿಂಗಾರ ಮಾಡುತಿತ್ತು.. ‘ ಕವಿ ಅನಂತ ನಾಯಕ್ ಅವರ ಲೇಖನಿಯಲ್ಲಿ ಮೂಡಿ ಬಂದ ಸುಂದರ ಸಾಲುಗಳು, ಮುಂದೆ ಓದಿ….

ಇತ್ತ ಕಡೆಯೇ ಹಾರಿಬಂದ
ಪುಟ್ಟಾಣಿ ಹಕ್ಕಿಯೊಂದು
ನನ್ನತ್ತ ನೋಡುತ್ತಿತ್ತು..
ಕೆಂಪಾದ ಬಾಯಿಂದ
ಇಂಪಾದ ರಾಗ ಹಾಡಿ

ತಂಪನ್ನು ಮಾಡುತಿತ್ತು‌|೧|

ಚಿಕ್ಕ ಚಿಕ್ಕ ಹೂಗಳನ್ನು
ಕೊಕ್ಕಿನಲ್ಲಿ ಹೆಕ್ಕಿ ತಂದು
ಸಿಂಗಾರ ಮಾಡುತಿತ್ತು..
ರೆಕ್ಕೆಯನ್ನು ಹಾರಿಸುತ್ತಾ
ತೆಕ್ಕೆಯಲ್ಲಿ ಸೇರಿಸುತ್ತಾ

ಪಕ್ಕದಲ್ಲೇ ಕೂರುತಿತ್ತು|೨|

ಕಾಡನೆಲ್ಲ ಸುತ್ತಿ ಬಂದು
ಕಡ್ಡಿ ಕಸವ ಸೇರಿಸುತ್ತ
ಗೂಡನ್ನು ಕಟ್ಟುತಿತ್ತು..
ನಡುನಡುವೆ ಇಣುಕುತ್ತ
ಚಿಲಿಪಿಲಿಯ ಮಾಡುತ್ತ

ಕತ್ತೆತ್ತಿ‌ ಕುಣಿಯುತಿತ್ತು|೩|

ಹಸಿರಾದ ವನದಲ್ಲಿ
ನೇಸರದ ಜೊತೆಯಲ್ಲಿ
ಬೇಸರವ ಕಳೆಯುತಿತ್ತು|
ಅಂತರಾಳದಲ್ಲಿ‌ ಬೆಸೆದ
ಚಿಂತೆಗಳ ದೂರಸರಿಸಿ
ಸಂತಸವ ತುಂಬುತಿತ್ತು|೪|

  • ಅನಂತ ನಾಯಕ್ (ಹಿರಿಯ ಲೇಖಕರು, ಕತೆಗಾರರು) ಬೆಂಗಳೂರು. 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW