ಅಜಿನೋಮೊಟೋವನ್ನು ಬಳಸುವ ಚೈನಾದಲ್ಲಿ ಜೀರ್ಣಾಂಗದ ಕ್ಯಾನ್ಸರ್ ನಿಂದ ಸಾಯುವವರ ಸಂಖ್ಯೆ ಹೆಚ್ಚಿದ್ದು , ಅಮೇರಿಕಾಗಿಂತ ಚೈನಾದಲ್ಲಿ ಒಂದೂವರೆ ಪಟ್ಟು ಹೆಚ್ಚು ಜನ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಾರೆಂಬ ಸಮೀಕ್ಷೆ ವರದಿ ಮಾಡಿದೆ. ಅಜಿನೋಮೊಟೋ ಕುರಿತು ಇನ್ನಷ್ಟು ವಿಷಯವನ್ನು ಉದ್ಯಮಿ ಅರುಣ್ ಪ್ರಸಾದ್ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…
ಸಕ್ಕರೆಯ ಹರಳಿನಂತಹ ಈ ಅಜಿನೋ ಮೋಟೋ, ಎಂ ಎಸ್ ಜಿ ಅಥವಾ ಟೇಸ್ಟಿಂಗ್ ಪೌಡರ್ ಬಳಸದ ಹೋಟೆಲ್ ವಿರಳ. ಇದನ್ನು ಬಳಸದೆ ಅಡುಗೆ ಮಾಡಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಅಡುಗೆ ಭಟ್ಟರು ಬಂದಾಗಿದೆ. ಇದನ್ನು ಬಳಸಿದರೆ ಅಡುಗೆಯಲ್ಲಿ ಹೇಗೆ ಕೊರತೆ ಆದರೂ ಇದು ನೀಡುವ ವಿಶೇಷ ರುಚಿ, ಖಾರಾ,ಪರಿಮಳದಿಂದ ಊಟ ತಿಂಡಿ ನಾಲಿಗೆಗೆ ಕ್ಷಣಿಕವಾಗಿ ರುಚಿ ನೀಡುತ್ತದೆ. ಪದೇ ಪದೇ ತಿನ್ನಲೇ ಬೇಕೆಂಬ ವಾಂಚೆ ಮೂಡಿಸುತ್ತದೆ.
ಇದನ್ನು ಹೆಚ್ಚು ಬಳಸುವ ಸ್ಥಳಕ್ಕೆ ಹೆಚ್ಚು ಗ್ರಾಹಕರು ಬರುತ್ತಾರೆ. ಆದ್ದರಿಂದ ಅಜಿನೋಮೊಟೋ ಬಳಸದ ಹೋಟೆಲ್ ತುಂಬಾ ಕಡಿಮೆ. ಆದರೆ ಅಜಿನೋಮೋಟೋ ನಿರಂತರ ಸೇವನೆಯಿಂದ ಇದು ಮನುಷ್ಯನ ಅಪದಮನಿಗಳನ್ನು ನಿರ್ಬಂಧಿಸುತ್ತದೆ, ಇದರಿಂದ ಹೃದಯಾಘಾತಗಳು ಹೆಚ್ಚು.
ಎದೆ ನೋವು, ಉಸಿರಾಟದ ಸಮಸ್ಯೆ, ಡಯಾಬಿಟಿಸ್, ಹೃದ್ರೋಗ ಮಕ್ಕಳಲ್ಲಿ ಬುದ್ದಿಶಕ್ತಿ ಕುಂಟಿತ ಮತ್ತು ದೈಹಿಕ ಬೆಳವಣಿಗೆಯಲ್ಲಿ ಸ್ಥೂಲಕಾಯಕ್ಕೆ ಕಾರಣ ಆಗುತ್ತಿದೆ. ಸಣ್ಣ ವಯಸ್ಸಲ್ಲಿ ಹೃದಯ ಸ್ಥಂಬನದಿಂದ ಮೃತರಾಗುತ್ತಿರುವ ಈಗಿನ ಯುವ ಜನಾಂಗದಲ್ಲಿ ಈ ಅಜಿನೋಮೋಟೋ ಕಾರಣವಾದರೂ ಇದರ ಬಳಕೆಯ ದುಷ್ಪರಿಣಾಮದ ಅರಿವೇ ಇಲ್ಲದ ಹೋಟೆಲ್ ಮಾಲಿಕರಿಂದ ಗ್ರಾಹಕರಿಗೆ ಈ ನಿಧಾನ ವಿಷ ನಿರಂತರವಾಗಿ ಉಣ ಬಡಿಸಲಾಗುತ್ತಿದೆ.

ಅಜಿನೋಮೊಟೋ ಬಳಸುವವರು ಅತಿಯಾಗಿ ಬೆವರುವುದು, ತಲೆ ತಿರುಗುವಿಕೆ ಮತ್ತು ಮೆದುಳಿನ ಪ್ರಾರಂಭಿಕ ಆರೋಗ್ಯ ಸಮಸ್ಯೆಯಿಂದ ಬಳಲುವಾಗಲೇ ಈ ಬಗ್ಗೆ ಜಾಗೃತರಾಗಬೇಕು. ಅಜಿನೋಮೋಟೋ ಅಥವ MSG ಎಂಬ ಇದು ನೈಸರ್ಗಿಕವಾಗಿ ಕಂಡುಬರುವ ಅಮೈನೋ ಆಮ್ಲದ ಒಂದು ರೂಪ ಇದನ್ನು ಕಬ್ಬು, ಸಕ್ಕರೆ, ಸೋಡಿಯಂ ಅಥವ ಜೋಳದಂತ ಸಸ್ಯ ಆದಾರಿತ ಪದಾರ್ಥಗಳಿಂದ ತಯಾರಿಸುತ್ತಾರೆ ಎನ್ನಲಾಗಿದೆ ಆದರೆ ಇದು ಹಂದಿಯ ಪ್ರಾಣಿ ಜನ್ಯದಿಂದ ತಯಾರಿಸಲಾಗುತ್ತಿದೆ ಎಂದು ಇಂಡೋನೇಷಿಯದಲ್ಲಿ ಬಹಿಷ್ಕಾರವೂ ಹಾಕಲಾಗಿತ್ತು.
ಇದನ್ನು ಪ್ರಾರಂಭದಲ್ಲಿ ಚೈನಿಸ್ ಅಡುಗೆ ರೆಸಿಪಿಯಲ್ಲಿ ಕಡ್ಡಾಯವಾಗಿ ಸೂಪ್, ನ್ಯೂಡಲ್ಸ್, ಮಂಚೂರಿಯನ್, ಪ್ರೈಡ್ ಪುಡ್, ಜಂಕ್ ಫುಡ್ ನಲ್ಲಿ ಬಳಸಲು ಪ್ರಾರಂಭವಾಗಿ ಈಗ ದಕ್ಷಿಣ ಭಾರತದ ತಿಳಿಸಾರಿಗೂ ಬಳಸುವ ತನಕ ಪಾಕ ಪ್ರವೀಣರು ಮುಂದಾಗಿದ್ದಾರೆ. ಹಾಗಂತ ಅಜಿನೋಮೋಟೋ ಎಂಬ ಜಪಾನ್ ನ ಬಹುರಾಷ್ಟ್ರೀಯ ಕಂಪನಿ 36 ದೇಶದಲ್ಲಿ 33 ಸಾವಿರ ಕಾರ್ಮಿಕರ ಲಕ್ಷಾಂತರ ಕೋಟಿಯ ವಹಿವಾಟು ಕ೦ಪನಿ ಆಗಿದೆ.

1908 ರಲ್ಲಿ ಜಪಾನಿನ ರಸಾಯನ ಶಾಸ್ತ್ರಜ್ಞ ಕಿಕುನೆ ಇರೆಡ ಇದನ್ನು ಕಂಡು ಹಿಡಿದಿದ್ದು ಇದನ್ನು 1909 ರಿಂದ ವಾಣಿಜ್ಯವಾಗಿ ಉತ್ಪಾದನೆ ಪ್ರಾರಂಬಿಸಿದ್ದು ಜಪಾನಿನ ಅಜಿನೋಮೋಟೋ ಎಂಬ ಬಹುರಾಷ್ಟ್ರೀಯ ಕಂಪನಿ. ಇದು ಕ್ಯಾನ್ಸರ್ ಕಾರಕ ಎಂದು ಮುಂದುವರಿದ ರಾಷ್ಟ್ರಗಳು ಜನ ಜಾಗೃತಿ ಮೂಡಿಸುವ ಕೆಲಸ ಪ್ರಾರಂಬಿಸಿದೆ ಆದರೆ ಭಾರತ ಸರ್ಕಾರದ ಪುಡ್ & ಡ್ರಗ್ ಅಡ್ಮಿನಿಸ್ಟ್ರೇಷನ್ ಇದನ್ನು ಸುರಕ್ಷಿತವೆಂದು ಗುರುತಿಸಿರುವುದು ದುರಂತ.
ನನ್ನ ಆಹಾರ ಉದ್ಯಮದಲ್ಲಿ ಪ್ರಾರಂಭದಿಂದಲೂ ಅಜಿನೋಮೋಟೋ, ಅಪಾಯಕಾರಿ ಕೃತಕ ಬಣ್ಣ ಮತ್ತು ಕೃತಕ ಪ್ಲೇವರ್ ಬಳಕೆ ನಿಷೇದ ಮಾಡಿದ್ದೇನೆ. ಇದರಿಂದ ಜನರಿಗೆ ಈ ನಿಧಾನ ವಿಷ ಉಣಬಡಿಸುತ್ತಿಲ್ಲ ಎಂಬ ಸಮಾಧಾನವಿದೆ. ಆದ್ದರಿಂದ ರುಚಿ ವ್ಯತ್ಯಾಸವಾದರೂ ಪರವಾಗಿಲ್ಲ. ಆರೋಗ್ಯಕರ ಆಹಾರ ಶುಚಿಯಾಗಿ ನೀಡುವ ನನ್ನ ಉದ್ದೇಶ 12 ವಷ೯ದಿಂದ ಸಫಲವಾಗಿದೆ.
ಈ ವಿಧಾನ ವಿಷ ಆಹಾರ ಸೇವಿಸುವವರು ಗೊತ್ತಿಲ್ಲದೇ ಸೇವಿಸುತ್ತಿದ್ದಾರೆ. ಆದರಿಂದ ಸಣ್ಣ ವಯಸ್ಸಿನ ಅನೇಕರು ಹೃದಯ ಸಂಬಂಧಿ ಸಾವಿಗೆ ಹೋಟೆಲ್ ಮಾಲೀಕರು ಕಾರಣವಾಗುತ್ತಿರುವುದು ಮತ್ತು ಇದನ್ನು ಆಹಾರದಲ್ಲಿ ಇದನ್ನ ಸೇರಿಸಿ ಆಹಾರ ತಯಾರಿಸುವ ಅಡುಗೆ ಸಿಬ್ಬಂಧಿಗಳೂ ಶಾಮೀಲಾಗುತ್ತಿರುವುದು ಅಘಾತಕಾರಿ ವಿಷಯವಾಗಿದೆ.
ದಿನೇ ದಿನೇ ಭಾರತದಲ್ಲಿ ಅಜಿನೋಮೋಟೋ ಬಳಕೆ ಹೆಚ್ಚಾಗುತ್ತಿರುವುದು ದುರಂತವೇ.
ಇದನ್ನು ಬಳಸುವ ಚೈನಾದಲ್ಲಿ ಜೀರ್ಣಾಂಗದ ಕ್ಯಾನ್ಸರ್ ನಿಂದ ಸಾಯುವವರ ಸಂಖ್ಯೆ ಹೆಚ್ಚು ಮತ್ತು ಚೈನಾದಲ್ಲಿ ಅಮೇರಿಕಾಗಿಂತ ಒಂದೂವರೆ ಪಟ್ಟು ಹೆಚ್ಚು ಜನ ಕ್ಯಾನ್ಸರ್ ಸಮಸ್ಯೆಯಲ್ಲಿ ಬಳಲುತ್ತಾರೆಂಬ ಸಮೀಕ್ಷೆ ವರದಿ ಮಾಡಿದೆ.
- ಅರುಣ್ ಪ್ರಸಾದ್
