ಅಕ್ಕಮಹಾದೇವಿ ಮತ್ತು ಮೀರಾಬಾಯಿ ಪುಸ್ತಕ

ಪುಸ್ತಕ : ಅಕ್ಕಮಹಾದೇವಿ ಮತ್ತು ಮೀರಾಬಾಯಿ
ಲೇಖಕರು : ಡಾ.ದಾಕ್ಷಾಯಣಿ ಯಡಹಳ್ಳಿ
ಪ್ರಕಾಶಕರು : ಕನ್ನಡ ವಿಭಾಗ , ಮುಂಬೈ ವಿಶ್ವವಿದ್ಯಾಲಯ

ಡಾ.ದಾಕ್ಷಾಯಣಿ ಯಡಹಳ್ಳಿ ಯವರ ಈ ಮಹಾಪ್ರಬಂಧ ಅಕ್ಕಮಹಾದೇವಿ ಮತ್ತು ಮೀರಾಬಾಯಿ ಪುಸ್ತಕದ ಕುರಿತು ಲೇಖಕ ರಘುನಾಥ್ ಕೃಷ್ಣಮಾಚಾರ್ ಅವರು ಬರೆದ ಪುಟ್ಟ ಪರಿಚಯ ಲೇಖನ , ಮುಂದೆ ಓದಿ…

ಮುಂಬಯಿ ಕನ್ನಡ ಲೋಕ: ಶಿಕ್ಷಣ: ವಿದ್ಯಾಪ್ರಸಾರಕ ಮಂಡಳ: ೫೫: ಡಾ.ದಾಕ್ಷಾಯಣಿ ಯಡಹಳ್ಳಿ: ಅವರ ಮಹಾಪ್ರಬಂಧ: ” ಅಕ್ಕಮಹಾದೇವಿ ಮತ್ತು ಮೀರಾಬಾಯಿ: ಒಂದು ತೌಲನಿಕ ಅಧ್ಯಯನ: ಕೃತಿಗೆ ಮಾರ್ಗದರ್ಶಕನಾಗಿ ನಾನು ಬರೆದ ನುಡಿಗಳು: ಭಾರತೀಯ ಭಕ್ತಿ ಸಾಹಿತ್ಯ ದ ಅಧ್ಯಯನ ದಲ್ಲಿ ತೌಲನಿಕ ಅಧ್ಯಯನ ಕ್ಕೆ ಒಂದು ಹೊಸ ಸೇರ್ಪಡೆ ಡಾ.ದಾಕ್ಷಾಯಣಿ ಯಡಹಳ್ಳಿ ಯವರ ಈ ಮಹಾಪ್ರಬಂಧ.

ಇಲ್ಲಿ ಭಕ್ತಿ ಸಾಹಿತ್ಯದ ಅಧ್ಯಯನಕ್ಕೆ ಅಕ್ಕಮಹಾದೇವಿ ಮತ್ತು ಮೀರಾಬಾಯಿಯವರ ಬದುಕು ಮತ್ತು ಸಾಹಿತ್ಯವನ್ನು ಆರಿಸಿಕೊಳ್ಳಲಾಗಿದೆ. ಸಾಮಾನ್ಯವಾಗಿ ಪುರುಷ ಕೇಂದ್ರಿತವಾದ ನಮ್ಮ ಅಧ್ಯಯನ ದಲ್ಲಿ ಇಬ್ಬರು ಭಕ್ತೆಯರನ್ನು ಆರಿಸಿಕೊಂಡು ಅವರ ವ್ಯಕ್ತಿ ತ್ವ ಮತ್ತು ಸಾಹಿತ್ಯಕ್ಕೆ ಸಮಾನವಾದ ನೆಲೆಯಲ್ಲಿ ನ್ಯಾಯ ಸಲ್ಲಿಸಿರುವುದು , ಈ ಮಹಾಪ್ರಬಂಧದ ವೈಶಿಷ್ಟ್ಯವಾಗಿದೆ.

‘ಮನೆಯೇ ಗುಡಿಯಮ್ಮ ಪತಿಯೇ ದೇವರಮ್ಮ’ ಎನ್ನುವ ಸಾಂಪ್ರದಾಯಿಕ ‌ನೆಲೆಯನ್ನು ಗಾಳಿಗೆ ತೂರಿ, ಈ ಇಬ್ಬರೂ ಆರಿಸಿಕೊಂಡದ್ದು ಬಯಲನ್ನು ಮತ್ತು ಗುರಿಯಾಗಿಸಿಕೊಂಡದ್ದು ಇಷ್ಟ ದೈವದ ಹುಡುಕಾಟ ವನ್ನು. ಆಗ ಅವರು ಎದುರಿಸಿದ ಆತಂಕ, ತಲ್ಲಣ, ವಿರಹ, ಮಿಲನೋತ್ಸವಗಳ ಅಭಿವ್ಯಕ್ತಿಯೆ ಅವರ ಸಾಹಿತ್ಯ ದ ಮೂಲದ್ರವ್ಯವಾಗಿದೆ.

ಅಕ್ಕ, ಸಾಕಾರ ನಿರಾಕಾರಗಳೆರಡನ್ನೂ ಒಳಗೊಂಡಿದ್ದರೆ, ಮೀರಾ ಸಾಕಾರದೆಡೆಗೆ ಹೆಚ್ಚು ಒಲಿದಿದ್ದಾಳೆ.ಗಿರಿಧರ ಗೋಪಾಲನ‌ ವರ್ಣನೆ ಅವಳಿಗೆ ಅತ್ಯಂತ ಪ್ರಿಯ. ಇದನ್ನು ಅಕ್ಕಮಹಾದೇವಿಯ ಜತೆಗೆ ಗುರುತಿಸಿದ ಶ್ರೇಯಸ್ಸು ಈ ಸಂಶೋಧಕಿಗೆ ಸಲ್ಲಬೇಕು. ‌ವಿಜ್ಞಾನದ ಶಿಕ್ಷಕಿಯಾಗಿದ್ದ ದಾಕ್ಷಾಯಣಿ ಯಡಹಳ್ಳಿ ತಮ್ಮ ನಿವೃತ್ತಿಯ ನಂತರ ಸಾಹಿತ್ಯ ಅಧ್ಯಯನ ಶೀಲತೆಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡು ಅದನ್ನು ಯಶಸ್ವಿಯಾಗಿ ಪೂರೈಸಿದ ಅವರನ್ನು ಅಭಿನಂದಿಸುತ್ತಾ ತೌಲನಿಕ ಭಕ್ತಿ ಸಾಹಿತ್ಯದ ಅಧ್ಯಯನ ದಲ್ಲಿ ಆಸಕ್ತರಾದವರಿಗೆ ಇದೊಂದು ಆಕರ ಗ್ರಂಥವಾಗಿದೆ ಎಂದು ಸೂಚಿಸಬಯಸುತ್ತೇನೆ.


  • ರಘುನಾಥ್ ಕೃಷ್ಣಮಾಚಾರ್ (ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW