ಮೈದಾ, ಚಿರೋಟಿ ರವೆ, ಗೋಧಿ ಹಿಟ್ಟಿನಿಂದ ಪೂರಿ ಮಾಡುವುದು ಸರ್ವೇ ಸಾಮಾನ್ಯ. ಆದರೆ ಅಕ್ಕಿ ಹಿಟ್ಟಿನಿಂದ ಒಂದು ಆರೋಗ್ಯಯುತ ಪೂರಿ ತಿಂದಿದ್ದೀರಾ ? ತಿಂದಿಲ್ಲ ಎಂದರೆ ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಹೇಳಿ ಕೊಟ್ಟ ‘ಅಕ್ಕಿ ಹಿಟ್ಟಿನ ಪೂರಿ’ಯನ್ನು ತಪ್ಪದೆ ಮಾಡಿ ನೋಡಿ…
ಬೇಕಾಗುವ ಪದಾರ್ಥಗಳು :
- ಅಕ್ಕಿ ಹಿಟ್ಟು – 1 ಬಟ್ಟಲು
- ನೀರು – 1 ಬಟ್ಟಲು
- ತುರಿದ ತೆಂಗಿನಕಾಯಿ
- ತುರಿದ ಮೂಲಂಗಿ – 2
- ಸಬ್ಬಸಿಗೆ ಸೊಪ್ಪು – 1 ಕಂತೆ
- ಕೊತ್ತಂಬರಿ ಸೊಪ್ಪು 1 ಕಂತೆ
- ಶುಂಠಿ ತುರಿ – ಅರ್ಧ ಸ್ಪೂನ್
- ಹಸಿ ಮೆಣಸಿನಕಾಯಿ ಪೇಸ್ಟ್ – 1 ಸ್ಪೂನ್
- ಚಿಲ್ಲಿ ಫ್ಲೆಕ್ಸ್ – 1 ಸ್ಪೂನ್
- ಉಪ್ಪು – ರುಚಿಗೆ ತಕ್ಕಷ್ಟು
- ತುಪ್ಪ – 3 ಸ್ಪೂನ್
- ಜೀರಿಗೆ – 2 ಸ್ಪೂನ್
- ಅಜುವಾನ/ಓಂ ಕಾಳು – ಅರ್ಧ ಸ್ಪೂನ್
ಮಾಡುವ ವಿಧಾನ :
ಒಂದು ಬಾಣಲಿಗೆ ನೀರು ಹಾಕಿ ಕಾದ ಮೇಲೆ ಮೇಲೆ ಹೇಳಿದ ಪದಾರ್ಥಗಳನ್ನು ಒಂದೊಂದಾಗಿ ಹಾಕಿ ಮಿಕ್ಸ್ ಮಾಡಿ 10 ನಿಮಿಷ ಮುಚ್ಚಿಡಿ. ಬಾಣಲಿಗೆ ಎಣ್ಣೆ ಹಾಕಿ ಕಾಯಲು ಇಡಿ.
ಈಗ ಒಂದೆರಡು ಸ್ಪೂನ್ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ ಚಿಕ್ಕ ಚಿಕ್ಕ ಉಂಡೆ ಮಾಡಿ ಬೆರಳಿನಲ್ಲೇ ಬೇಕಾದ ಸೈಜ್ ಗೆ ಸ್ವಲ್ಪ ದಪ್ಪವಾಗಿ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ.
- ಶಕುಂತಲಾ ಸವಿ – ನಳಪಾಕ ಪ್ರವೀಣೆ , ಮೈಸೂರು
