ಕ್ಷಯವಾಗದಿರಲಿ ಅಕ್ಷಯ

ಅಕ್ಷಯ ತೃತೀಯ ದಿನ ‘ಪಾಂಡವರಿಗೆ ಅಕ್ಷಯಪಾತ್ರೆ’ ದೊರೆತಿರುವುದೆಂದೂ, ಶುಭದಿನ ಲಕ್ಷೀಕೃಪೆ ಇರುವುದೆಂಬ ನಂಬಿಕೆಯಿದೆ. ಆದರೆ ‘ಅಕ್ಷಯ’ ಅನ್ನುವುದು ಕೇವಲ ಹಣ ಬಂಗಾರಕ್ಕಷ್ಟೇ ಸೀಮಿತಗೊಳಿಸದೆ ಆರೋಗ್ಯವೇ ಚನ್ನಾಗಿ ನೋಡಿಕೊಳ್ಳಬೇಕು  ಶೀತಲ್ ಹೆಗಡೆ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ನಮಸ್ತೇಸ್ತು ಮಹಾಮಾಯೆ ಶ್ರೀ ಪೀಠೇ ಸುರಪೂಜಿತೆ ॥
ಶಂಕಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೆ॥ಅಕ್ಷಯ

ಅಕ್ಷಯ ತೃತೀಯ ದಿನ ಜನರು ತಮ್ಮ ಕೈಲಾದಮಟ್ಚಿಗೆ ಚಿನ್ನವನ್ನೋ ಬೆಳ್ಳಿಯನ್ನೋ ತಂದು ಪೂಜೆ ಮಾಡುವ ಪದ್ಧತಿ ನಡೆಸಿಕೊಂಡು ಬಂದಿರುವರು. ಅಂದು ನಾವು ಅದೆಷ್ಟು ಖರೀದಿ ಮಾಡಿರುವಿರೋ ಅದರ ದುಪ್ಪಟ್ಟು ಜಾಸ್ತಿಪಟ್ಟು ನಿಮ್ಮದಾಗುವುದೆಂಬ ಅಚಲ ನಂಬಿಕೆ. ಅಂದು ದಿನ ನಾವೇನು ಮಾಡುವೆವೋ ಅದು ಶುಭವಾಗುವುದು. ಸನ್ಮಂಗಳವನ್ನುಂಟು ಮಾಡುವುದೆಂಬ ವಿಶ್ವಾಸ ಬಹಳ ಹಿಂದಿನ ಕಾಲದಿಂದಲೂ ನಡೆದುಬಂದಿದೆ.

ಭಾರತ ಅಖಂಡ ದೇಶ. ಇದು ಜಗತ್ತಿನಾದ್ಯಂತ ವಿಸ್ಮಯಗಳಿಂದ ಕೂಡಿದ ಐತಿಹಾಸಿಕ ಭೌಗೋಳಿಕ ಹಾಗೂ ಪರಂಪರೆ ಸಂಸ್ಕೃತಿ ಆಚರಣೆ ಎಲ್ಲವನ್ನೂ ತನ್ನದೇ ವಿಶಿಷ್ಠವಾದ ರೀತಿಯಲ್ಲಿ ಬೆಳೆಸಿಕೊಂಡು ಬೆಳೆದು ಇಂದು ತನ್ನ ಅಸ್ತಿತ್ವವನ್ನು ಜಗದುದ್ದಗಲಕ್ಕೂ ಜನರು ತಲೆಯೆತ್ತಿ ನೋಡುವಂತೆ ಮಾಡಿದೆ.

  • ಭಾರತ ದೇಶದ ಭೌಗೋಲಿಕ ನಕ್ಷೆಯನ್ನು ನೋಡಿದಾಗ ೩ ಕಡೆ ನೀರು ೧ ಕಡೆ ನೆಲವಿದ್ದು ನಮ್ಮನ್ನು ರಕ್ಷಿಸಲು ಪ್ರಕೃತಿಯೇ ಕೈಕಟ್ಟಿ ಸಿದ್ಧವಾಗಿ ನಿಂತಂತಿದೆ. ಒಳಭಾಗದಲ್ಲಿ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಜವಾರಿ ಹವೆ, ಉತ್ತರ ಪ್ರದೇಶದಂತಹ ವಿಭಿನ್ನ ಹವಾಮಾನಗಳಿಂದ ಕೂಡಿದ ಭೂಮಿ, ಹಿಮಾಲಯ ಪರ್ವತ ಶಿಖರಗಳು, ಕಾಶ್ಮೀರ ಭೂಮಿಯಲ್ಲೇ ಸ್ವರ್ಗಧರೆಗಿಳಿದವೋ ಎಂಬಂತೆ ಹೀಗೆ ವೈವಿಧ್ಯ ಪರಿಸರಗಳಿಂದ ಕೂಡಿದ ಭೂಮಿ ಮತ್ಯಾವ ದೇಶದಲ್ಲೂ ಕಾಣಸಿಗದು.
  •  ಐತಿಹಾಸಿಕವಾಗಿಯೂ ನಮ್ಮ ದೇಶ ಬಲು ವಿಭಿನ್ನ ಹಾಗೂ ಶ್ರೀಮಂತಿಕೆಯಿಂದ ಕೂಡಿದೆ. ಗತಕಾಲದ ವೈಭವಗಳು, ಶಿಲಾ ಶಾಸನಗಳು, ನಾಣ್ಯಗಳು, ಸ್ಥಳೀಯ ಸ್ಮಾರಕಗಳು ಅವುಗಳ ಮೂಲವನ್ನು ಅಧ್ಯಯನ ಮಾಡುವುದು. ಭೌದ್ಧ ಸ್ತೂಪಗಳು, ತಾಳೆಯ ಗರಿಗಳು, ತಾಮ್ರ ಫಲಕಗಳು ಹಾಗೂ ಪ್ರವಾಸಿ ತಾಣಗಳು ಹೀಗೆ ಹತ್ತು ಹಲವು ವಿಭಿನ್ನವಾದ ಅಧ್ಯಯನ ಸಾಮಗ್ರಿಗಳು.
  •  ಬಹು ಮುಖ್ಯವಾಗಿ ಭರತ ಖಂಡದ ಪರಂಪರೆ ಸಂಸ್ಕೃತಿ ಮತ್ಯಾವ ದೇಶದಲ್ಲೂ ಕಂಡು ಬರುವುದಿಲ್ಲ. ‘ಹೆಣ್ಣನ್ನು ದೇವತೆಯೆಂದು ತಿಳಿದು ನಡೆವುದು. ಹೆತ್ತವರನ್ನು ಕಣ್ಣಿಗೆ ಕಾಣುವ ದೇವರೆಂದು ನಂಬುವುದು. ಅತಿಧಿ ದೇವೋಭವ… ಅತಿಥಿಯನ್ನು ದೇವರೆಂದು ತಿಳಿದು ಉಪಚಾರ ಮಾಡುವುದು. ಗುರುಹಿರಿಯರಿಗೆ ಗೌರವ ನೀಡುವುದು. ಸದಾ ತಗ್ಗಿಬಗ್ಗಿ ನಡೆಯುವುದು. ಹೀಗೆ ಹತ್ತುಹಲವಾರು ರೀತಿಯಲ್ಲಿ ಮೊದಲಿನಿಂದಲೂ ನಡೆದುಬಂದ ಮೌಲ್ಯಗಳೇ ಇಂದಿಗೂ ನಮ್ಮನ್ನು ಕಾಪಾಡುತ್ತ ಬೇರೆ ದೇಶದೊಂದಿಗೆ ನಮ್ಮನ್ನು ಭಿನ್ನವಾಗಿ ಉಚ್ಛವಾಗಿ ವಿಂಗಡಿಸುತ್ತ ಬಂದಿರುವುದು.
  • ಅಕ್ಷಯ… ಎಂಬ ಪದವು ಚೌಕಟ್ಚಿಗೆ ಸಿಗದ ಎಣಿಕೆಗೆ ಬಾರದಾಗಿದ್ದು ಇಮ್ಮಡಿ ನೂರ್ಮಡಿಯಾಗುತ್ತಲೇ ಇರುವುದು ಸಮೃದ್ಧಿ ಎಂದರ್ಥ.
  • ಮನುಷ್ಯನಿಗೆ ಬದುಕಲು ಕೆಲವು ಅತ್ಯಾವಶ್ಯಕ ಸೌಲಭ್ಯಗಳಿದ್ದರೆ ಸಾಕು ಆದರೆ ಬದುಕಲೆಂದೇ ಭೂಮಿಯಲ್ಲಿ ಹುಟ್ಟಿಬರುವುದಕ್ಕೆ ಅರ್ಥವಿಲ್ಲ ಬದುಕಿದರೆ ಅದಕ್ಕೊಂದು ಅರ್ಥ ಮೌಲ್ಯ ಇದ್ರೆನೇ ಜೀವನಕ್ಕೊಂದು ಬೆಲೆ. ಈ ಬೆಲೆಯ ಅರ್ಥವೇ, ಉದ್ದೇಶ, ಗುರಿ ಹಾಗೂ ಸಾಧನೆಯು ಯಾವತ್ತೂ ಕ್ಷಯವಾಗದಂತೆ ಅಕ್ಷಯವಾಗಿಡುವುದು ನಮ್ಮೆಲ್ಲರ ಕರ್ತವ್ಯ ಹಾಗೆಯೇ ಜವಾಬ್ದಾರಿ ಕೂಡ.

ಕೊನೆಗೊಂದು ಅನಿಸಿಕೆ

‘ಅಕ್ಷಯ’ ಅನ್ನುವುದು ಕೇವಲ ಹಣ ಬಂಗಾರಕ್ಕಷ್ಟೇ ಸೀಮಿತಗೊಳಿಸದಿರಿ. ಜೀವನದಲ್ಲಿ ಹಣವೊಂದೇ ಪ್ರಾಮುಖ್ಯತೆ ಅಲ್ಲ. ಇದ್ದುದರಲ್ಲಿಯೇ ತೃಪ್ತಿಪಡುವ ಗುಣ ರೂಢಿಸಿಕೊಂಡಾಗ ನಮ್ಮ ಗುಣದಲ್ಲಿ ಸ್ವಭಾವದಲ್ಲಿ ಅಕ್ಷಯ ಕಾಣಬಹುದು. ಎಲ್ಲಕ್ಕಿಂತ ಮಿಗಿಲಾಗಿ ಆರೋಗ್ಯಭಾಗ್ಯವೇ ಇಲ್ಲದಿದ್ರೆ ಹಣ ಎನ್ಮಾಡೀತು? ಎಲ್ಲಕ್ಕಿಂತ ಮಿಗಿಲು ಆರೋಗ್ಯ. ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ಹಣ ಗಳಿಸುವ ಮಾರ್ಗ ಉಪಾಯ ಯೋಜನೆ ರೂಪಿಸುವುದು ಕಷ್ಟವಲ್ಲ.

ಭಾರತದಂತಹ ದೇಶದಲ್ಲಿ ಹುಟ್ಟಿ ಬದುಕುತ್ತಿರುವ ನಾವೇ ಧನ್ಯರು. ಇಲ್ಲಿನ ಮಣ್ಣಲ್ಲಿ ಸಾಧಕರ ಸಂತರ ಮಹಾನುಭಾವರ ಸದ್ಗುರುಗಳ ಪಾದದ ಧೂಳಿದೆ. ಅವರ ಪರಿಶ್ರಮ ಮಾರ್ಗದರ್ಶನದ ಪ್ರೇರಣೆಯಿದೆ. ಮಾನವೀಯತೆಯ ಘಮಲಿದೆ. ಶೂರತನದ ದೃಷ್ಟಾಂತಗಳಿವೆ. ಎಲ್ಲಕ್ಕೂ ಮಿಗಿಲಾಗಿ ‘ಹೆಣ್ಣನ್ನು ದೇವತೆಯೆಂದು ಪೂಜಿಸುವ ಮನಸ್ಸಿದೆ.

ನಮ್ಮ ದೇಶ ಸಂಪತ್ತಿನಿಂದ ತುಂಬಿತುಳುಕುತ್ತಿರುವದಕ್ಕೆ ಬ್ರಿಟೀಷರು ಕೊಳ್ಳೆ ಹೊಡೆದ ಉದಾಹರಣೆಯೇ ಸಾಕಲ್ಲವೇ?
‘भगवान देता है तो छप्पर फाड़ के देता है ‘… ( ದೇವರು ಕೊಟ್ಟರೆ ಅತಿಯಾಗಿ ನೀಡುವನು) ಎನ್ನುವಂತೆ ಎಲ್ಲವೂ ನಮ್ಮಲ್ಲಿರುವಾಗ ಇಲ್ಲದನ್ನು ಹುಡುಕಿಕೊಂಡು ಹೋಗುವುದಾಗಲಿ, ಇರುವುದನ್ನು ನಿರ್ಲಕ್ಷಿಸುವುದಾಗಲೀ ಮಾಡದೇ ಅದನ್ನು ಸರಿಯಾಗಿ ಉಪಯೋಗಿಸಿದಲ್ಲಿ ಅದರ ದುಪ್ಪಟ್ಟು ನೂರ್ಮಡಿಯಷ್ಟು ಗಳಿಕೆ ಮಾಡುವ ಬುದ್ದಿ ನಮ್ಮಲ್ಲಿರಬೇಕು ಅಂದಾಗಲೇ ದೇಶದಲ್ಲಿ ತನ್ಮೂಲಕ ವ್ಯಕ್ತಿಗತ ಹಾಗೂ ಸಮಾಜದ ದೇಶದಲ್ಲಿ ಅಕ್ಷಯವಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ.


  • ಶೀತಲ್ ಹೆಗಡೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading