ಶ್ರೀ ಗುರು ರಾಘವೇಂದ್ರ ರಾಯರು ಶ್ರಾವಣ ಮಾಸದಲ್ಲಿ ಬೃಂದಾವನವನ್ನು ಸೇರಿ ೩೪೭ ವರ್ಷವಾಯಿತು. ರಾಯರ ಆರಾಧನೆಯ ದಿನದಂದು ಅವರ ದರ್ಶನ ಪಡೆದರೆ ಇಷ್ಠಾರ್ಥಗಳು ಸಿದ್ಧಿಯಾಗುತ್ತದೆ ಎನ್ನುವ ಪ್ರತೀತಿ ಇದೆ. ಶ್ರೀ ಗುರು ರಾಘವೇಂದ್ರ ರಾಯರ ಆರಾಧನೆಯನ್ನು ಮಂತ್ರಾಲಯ ಸೇರಿದಂತೆ ಎಲ್ಲೆಡೆ ವಿಜೃಂಭಣೆಯಿಂದ ಶ್ರದ್ದಾ, ಭಕ್ತಿಯಿಂದ ಆಚರಿಸಲಾಗುತ್ತಿದೆ. ಜೊತೆಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅರಮನೆಯ ನಗರಿ ಎಂದೇ ಖ್ಯಾತಿ ಪಡೆದಿರುವ ಮೈಸೂರಿನಲ್ಲಿಯೂ ರಾಯರ ಆರಾಧನೆ ಜೋರಾಗಿಯೇ ನಡೆದಿದ್ದು, ಭಕ್ತಿಗೀತೆ, ದಾಸವಾಣಿ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ‘ವಾಯ್ಸ್ ಆಫ್ ಮೈಸೂರ’ ಮೊದಲ ರನ್ನರ ಅಪ್ ಆದ ಅಮೂಲ್ಯ ಮತ್ತು ‘ಆದರ್ಶ ಬಾಲ ಪ್ರತಿಭಾ ರತ್ನ ಪ್ರಶಸ್ತಿ’ ವಿಜೇತೆ ಅನನ್ಯ, ಈ ಅಲೆವೂರು ಸಹೋದರಿಯರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಮೈಸೂರಿನ ಶ್ರೀ ಕೃಷ್ಣ ಧಾಮದಲ್ಲಿ ಆಗಸ್ಟ ೨೯ ರಂದು ಸಂಜೆ ೬ ಗಂಟೆಗೆ ಈ ಅಲೆಯೂರು ಜೋಡಿಗಳು ಸಂಗೀತದ ಮೋಡಿ ಮಾಡಲಿದ್ದಾರೆ.
ಶ್ರೀ ಗುರು ರಾಘವೇಂದ್ರ ರಾಯರ ಮತ್ತು ಜನರ ಪ್ರೀತಿ, ಆಶೀರ್ವಾದ ಈ ಅಲೆಯೂರು ಸಹೋದರಿಯರ ಮೇಲೆ ಸದಾಕಾಲ ಇರಲಿ.
ಈ ಸಂಗೀತ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತವನ್ನು ಕೋರಲಾಗಿದೆ.
#ಆಕತನಯಸ #ಪರತಭ #ಮಕಕಳ #ಹಣಣ