-ಶಾಲಿನಿ ಪ್ರದೀಪ್
ರಂಗದ ಮೇಲೆ ಎರಡು ನೂರು ಪ್ರಯೋಗ ಕಂಡ ಹೂಲಿ ಶೇಖರ್ ಅವರ ಜನಪ್ರಿಯ ನಾಟಕ ಹಲಗಲಿ ಬೇಡರ ದಂಗೆ ಈಗ ಇಪ್ಪತೈದು ವರ್ಷಗಳ ಹಿಂದೆ ಶ್ರೀ ಹೂಲಿ ಶೇಖರರು ಜಾನಪದ ಶೈಲಿಯಲ್ಲಿ ಬರೆದ ”ಹಲಗಲಿ ಬೇಡರ ದಂಗೆ” ನಾಟಕ ಇದೀಗ ಇನ್ನೂರು ಪ್ರದರ್ಶನಗಳನ್ನು ಕಂಡು ಇನ್ನಷ್ಟು ರಂಗಾಭಿಮಾನಿಗಳನ್ನು ಸೆಳೆಯಲು ಅಣಿಯಾಗುತ್ತಿದೆ. ಅಂಬಿಕಾನಗರದ [ಉ.ಕ.] ಜೋಕುಮಾರ ಸ್ವಾಮಿ ಕಲಾಬಳಗಕ್ಕಾಗಿ ಇಪ್ಪತೈದು ವರ್ಷಗಳ ಹಿಂದೆ ರಚಿಸಿದ ಈ ನಾಟಕ ಅನೇಕ ತಂಡಗಳಿಂದ ಪ್ರಯೋಗ ಕಂಡು ಜನಪ್ರಿಯವಾಗಿದೆ.
೧೮೬೦ ರಲ್ಲಿ ಮುಧೋಳ ತಾಲೂಕಿನ ಹಲಗಲಿ ಎಂಬ ಊರಲ್ಲಿದ್ದ ಬೇಡರು ಆಗ ಬ್ರಿಟಿಷರ ವಿರುದ್ಧ ಬಂಡೆದ್ದ ಕತೆಯಿರುವ ಈ ನಾಟಕ ತನ್ನ ಪ್ರಯೋಗ ಗುಣಗಳಿಂದಾಗಿ ತಂಡಗಳ ಮೆಚ್ಚಿನ ನಾಟಕವಾಗಿದೆ. ಮೋಹನ ಬಡಿಗೇರ, ಹೂಲಿ ಶೇಖರ್, ಮಾಲತೇಶ ಬಡಿಗೇರ, ಪೂರ್ಣಚಂದ್ರ ತೇಜಸ್ವಿ, ಎಸ್. ಶಾಮಮೂರ್ತಿ, ಎಂ. ಲಕ್ಷ್ಮೀಪತಿ ಮತ್ತು ಇನ್ನೂ ಅನೇಕರು ವಿವಿಧ ತಂಡಗಳಿಗೆ ಈ ನಾಟಕವನ್ನು ನಿರ್ದೇಶಿಸಿದ್ದಾರೆ. ಜೋಕುಮಾರ ಸ್ವಾಮಿ ಕಲಾ ಬಳಗ, ಬೆಂಗಳೂರಿನ ಕೆ.ಪಿ.ಟಿ.ಸಿಲ್ ಕಲಾವಿದರ ತಂಡ. ಬೆಂಗಳೂರಿನ ಚಿತ್ರಕಲಾ ಪರಿಷತ್ತು, ನವೋದಯ ಬೆಂಗಳೂರು, ಸಂಯುಕ್ತ ತಂಡ ಭದ್ರಾವತಿ, ಮುಂತಾದ ತಂಡಗಳು ಹೊಸ ರೀತಿಯಲ್ಲಿ ನಾಟಕವನ್ನು ರಂಗಕ್ಕೆ ತಂದಿವೆ. ಅಂಬಿಕಾನಗರ, ಕಾರವಾರ, ಉಡುಪಿ, ಹುಬ್ಬಳ್ಳಿ, ದಾವಣಗೆರೆ, ಬೆಂಗಳೂರು, ದೆಹಲಿ, ಮುಂಬಯಿ, ಹೀಗೆ ಅನೇಕ ಕಡೆಯಲ್ಲಿ ಈ ನಾಟಕ ಪ್ರಯೋಗ ಕಂಡಿದೆ.
ಜಡಗಾ, ಬಾಲಾ,ಹನಮಾ, ರಾಮಾ ಎಂಬ ಬೇಡರು ಅಂದು ಬ್ರಿಟಿಷರು ಹೇರಿದ ನಿಶ್ಶಸ್ತ್ರೀಕರಣ ಕಾಯ್ದೆಯನ್ನು ವಿರೋಧಿಸಿ ಹೋರಾಟಕ್ಕೆ ಇಳಿಯುತ್ತಾರೆಯ ಈ ಹೋರಾಟದಲ್ಲಿ ಬೇಡರ ಇಡೀ ಹಳ್ಳಿಯನ್ನು ಬ್ರಿಟಿಷರು ನಾಶ ಮಾಡುತ್ತಾರೆ. ಈ ಕರುಣಾಜನಿಕ ಕತೆಯೇ ಈ ನಾಟಕದ ವಸ್ತುವಾಗಿದೆ. ಕುರ್ತುಕೋಟಿಯ ಅನಾಮಧೇಯ ಲಾವಣಿಕಾರನೊಬ್ಬ ಬರೆದ ಲಾವಣಿಯನ್ನು ಈ ನಾಟಕದಲ್ಲಿ ಬಳಸಿಕೊಳ್ಳಲಾಗಿದೆ.
ಪುಸ್ತಕ ರೂಪವಾಗಿಯೂ ಇದು ಪ್ರಕಟವಾಗಿದ್ದು ಮೂರು ಮುದ್ರಣಗಳನ್ನು ಕಂಡಿದೆ. ಅಂಬಿಕಾನಗರದ ನಂದಿನಿ ಪ್ರಕಾಶನ ಮತ್ತು ಬೆಂಗಳೂರಿನ ಶ್ರೀನಿವಾಸ ಪ್ರಕಾಶನ ಹಾಗೂ ಕಲಬುರ್ಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಈ ನಾಟಕವನ್ನು ಪ್ರಕಟಿಸಿವೆ. ”ಹಲಗಲಿ ಬೇಡರ ದಂಗೆ” ನಾಟಕವನ್ನು ತಾನೇಕೆ ಬರೆದೆನೆಂದು ನಾಟಕಕಾರ ಹೂಲಿಶೇಖರ್ ಇಲ್ಲಿ ವಿವರಿಸಿದ್ದಾರೆ.
೫೩ ನೇ ಪ್ರಯೋಗ. ಪೂರ್ಣ ಚಂದ್ರ ತೇಜಸ್ವಿ ತಂಡದವರಿಂದ.
ನಾಟಕದ ಕೆಲವು ದೃಶ್ಯಗಳು
#ನಟಕ