ಕೆಲವೊಂದು ಸಂದರ್ಭಗಳು ಹೇಗಿರುತ್ತದೆ ಎಂದರೆ ವ್ಯಕ್ತಿಗಳು ಅಗಲಿದಾಗ ಅವರೊಂದಿಗೆ ಕಳೆದ ಕೆಲವೇ ಕ್ಷಣಗಳು ನಮ್ಮ ಜೀವನದಲ್ಲಿ ಮುಖ್ಯವಾಗುತ್ತವೆ. ಅದೇ ರೀತಿ ಅಂಬರೀಷ್ ಅವರೊಂದಿಗೆ ಒಂದೇ ವೇದಿಕೆಯನ್ನು ನನ್ನ ಅಪ್ಪ ಹೂಲಿಶೇಖರ ಅವರು ಹಂಚಿಕೊಂಡ ಕೆಲವು ಕ್ಷಣಗಳು ಈಗ ಕಣ್ಣಮುಂದೆ ಕಟ್ಟುತ್ತದೆ.
ಅಪ್ಪ ಅಂಬಿಕಾನಗರದಲ್ಲಿ ಕೆ.ಪಿ.ಸಿ.ಎಲ್ ನಲ್ಲಿ ಕೆಲಸ ಮಾಡುವಾಗ ಅಂಬರೀಷ್ ಅವರ ಹುಟ್ಟುಹಬ್ಬಕ್ಕೆ ನೀಡುವ ಅಂಬರೀಷ್ ಸಾಹಿತ್ಯಪ್ರಶಸ್ತಿಗೆ ಅಪ್ಪ ಬರೆದ ಗಾಂಧಿನಗರ ನಾಟಕ ಆಯ್ಕೆ ಆಗಿತ್ತು. ಆ ಪ್ರಶಸ್ತಿಯನ್ನು ಸ್ವತಃ ಅಂಬರೀಷ್ ಅವರೇ ನೀಡಿದ್ದರು. ಆ ಪ್ರಶಸ್ತಿಯು ಒಂದು ಗಡಿಯಾರ ಅದರಲ್ಲಿ ಅಂಬರೀಷ್ ಅವರ ಭಾವಚಿತ್ರವಿತ್ತು. ಕನ್ನಡ ಚಿತ್ರರಂಗದಲ್ಲಿ ಕುಚುಕು ಗೆಳೆಯರೆಂದೇ ಮಾತಾಗಿದ್ದ ಕಲಾವಿದರಾದ ವಿಷುವರ್ಧನ ಮತ್ತು ಅಂಬರೀಷ್ ಇಬ್ಬರಿಂದಲೂ ನನ್ನ ಅಪ್ಪನಿಗೆ ಪ್ರಶಸ್ತಿ ಸಿಕ್ಕಿದ್ದು ನಿಜಕ್ಕೂ ಸಂತೋಷದ ವಿಷಯ .೨೦೦೪ ರಲ್ಲಿ ವಿಷ್ಣುವರ್ಧನ್ ಅವರಿಂದ ಮೂಡಲ ಮನೆ ಧಾರಾವಾಹಿಗಾಗಿ ಆರ್ಯಭಟ ಪ್ರಶಸ್ತಿ ಲಭಿಸಿತ್ತು. ನಾನು ಕಂಡ ಸಾಹಸ ಸಿಂಹ ವಿಷ್ಣುವರ್ಧನ
ನಮ್ಮ ದುರದೃಷ್ಟವೇನೆಂದರೆ ಅಪ್ಪನಿಗೆ ಬೆಂಗಳೂರಿಗೆ ವರ್ಗವಾದಾಗ ಮನೆಯ ಸಾರಿನ ಸೌಟಿನಿಂದ ಹಿಡಿದು ಎಲ್ಲಾ ಸಾಮಾನುಗಳು ಸುರಕ್ಷಿತವಾಗಿ ಬೆಂಗಳೂರು ಬಾಡಿಗೆ ಮನೆಗೆ ಮಿಸ್ ಆಗದೆ ಬಂದು ಸೇರಿದವು. ಆದರೆ ಅಪ್ಪ ಪಡೆದ ಕೆಲವು ಅಮೂಲ್ಯ ಪ್ರಶಸ್ತಿಗಳು, ಫೋಟೋಗಳು ಕಳೆದು ಹೋದವು. ಅದರಲ್ಲಿ ಅಂಬರೀಷ್ ಅವರು ನೀಡಿದ ಪ್ರಶಸ್ತಿಯು ಇತ್ತು
ಈಗ ನಾಡಿನಲ್ಲೆಡೆ ಶೋಕ ಮಡುಗಟ್ಟಿದೆ. ಮಂಡ್ಯದ ಗಂಡು ಅಂಬರೀಷ್ ಇನ್ನಿಲ್ಲ.ಆದರೆ ಅವರು ನಟಿಸಿದ ಪ್ರತಿಯೊಂದು ಸಿನಿಮಾಗಳು ಮುಂದಿನ ಯುವಪೀಳಿಗೆಗಳಿಗೆ ಮಾರ್ಗದರ್ಶನವಾಗಲಿದೆ. ಅವರ ಕುಟುಂಬಕ್ಕೆ ಮತ್ತು ಈಡೀ ಚಿತ್ರರಂಗಕ್ಕೂ ಅವರ ಅಗಲಿಕೆಯ ನೋವನ್ನು ಹಾಗೂ ದೊಡ್ಡ ನಷ್ಟವನ್ನು ಮತ್ತು ಶೋಕವನ್ನು ತಡೆಯುವ ಶಕ್ತಿಯನ್ನು ಆ ಭಗವಂತನು ನೀಡಲಿ…