‘ಅಮ್ಮ ಅವಳೇಕೆ ಹೀಗೆ?’ ಕವನ

ಬಾನ್ ಬಣ್ಣಗಳ ಹರವಿನಂತೆ… ಕಣ್ ರೆಪ್ಪೆಗಳ ಕಾವಲಿನಂತೆ… ಹೃದಯದ ಉಯಿಲಿನಂತೆ…ಡಾ.ಶ್ವೇತಾ ಪ್ರಕಾಶ್ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಅಮ್ಮ ಅವಳೇಕೆ ಹೀಗೆ?
ಪ್ರಶ್ನೆಗಳು ಕಾಡುವಂತೆ
ಉತ್ತರದ ಅಪೇಕ್ಷೆಯಲ್ಲಿ
ಉತ್ಪ್ರೇಕ್ಷೆಯು ಮೂಡುವಂತೆ.

ಅಮ್ಮ ಅವಳೇಕೆ ಹೀಗೆ?
ಬಾನ್ ಬಣ್ಣಗಳ ಹರವಿನಂತೆ
ಕಣ್ ರೆಪ್ಪೆಗಳ ಕಾವಲಿನಂತೆ
ಹೃದಯದ ಉಯಿಲಿನಂತೆ.

ಅಮ್ಮ ಅವಳೇಕೆ ಹೀಗೆ
ಕಾನನದಿ ಹರಿವ ಸುಧೆಯಂತೆ
ಬಿಸಿಲ ಜಳದಲಿ ಹೊಂಗೆಯ ನೆರಳಂತೆ
ಕಡಲ ತೀರದ ಹಸ್ತಾಕ್ಷರದಂತೆ.

ಅಮ್ಮ ಅವಳೇಕೆ ಹೀಗೆ?
ಪುಟಕಿಟ್ಟ ಹೊನ್ನಿನಂತೆ.
ಬೆಂದು ನೊಂದ ಮೇಲೆ ತನ್ನ
ಮುಗ್ಧತೆಯ ಕಾರುಣ್ಯ ಮೂಡಿಸಿದಂತೆ.

ಅಮ್ಮ ಅವಳೇಕೆ ಹೀಗೆ?
ಸಾಲು ಸರಣಿ ಸೋಲಿನೊಳಗೆ
ತುಸು ಮೆಲ್ಲಗೆ ಗೆಲುವ ಪಾಲುಪಡೆದು
ಅಪ್ಪುಗೆಯ ನೆನಪುಗಳಲ್ಲಿ ಸದಾ ದಾಖಲು.


  • ಡಾ.ಶ್ವೇತಾ ಪ್ರಕಾಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading