ಅಮ್ಮಾ ನಿನ್ನಯ ಹಿರಿಮೆ

– ರೇಶ್ಮಾಗುಳೇದಗುಡ್ಡಾಕರ್

Screenshot (11)

ಲೇಖನ :  ರೇಶ್ಮಾಗುಳೇದಗುಡ್ಡಾಕರ್

ಪರಿಚಯ : ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ. ಗೃಹಿಣಿಯಾಗಿದ್ದು,  ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಅವರು ರಚಿಸಿದ ‘ಗಾಂಧಿ ಕವನ’ ವು ಕೇಂದ್ರ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪುಸ್ತಕದಲ್ಲಿ ಪ್ರಕಟಗೊಂಡಿದೆ. ಅವರ ಇನ್ನೊಂದು ಕವನ  ‘ನನ್ನೊಳಗಿನ ನಾನು ಋಜುವಾತು ಮಾಡಬೇಕಿದೆ’ ಆಕೃತಿಯಲ್ಲಿ ಪ್ರಕಟಿಸಲಾಗಿತ್ತು. ಅದನ್ನು ೧,೦೦೦ಕ್ಕೂ ಹೆಚ್ಚು ಜನ ಓದಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.

ಹೆಣ್ಣೊಂದು ತಾಯಿಯಾಗುವ ಘಳಿಗೆ ನೊರೆಂಟು ಕನಸುಗಳ ಮಿಲನ ತನ್ನ ಕಲ್ಪನೆಯ ಕಂದನ ಚಿತ್ರವ ಮನದಲ್ಲಿ ಚಿತ್ರಿಸಿ ತೆಲುತಾ ದೈಹಿಕ ಬದಲಾವಣೆಯಗಳಿಗೆ ಒಗ್ಗುತಾ ಮನದಲ್ಲಿ ಕಾತರ ಭಯದ ಛಾಯೆ ಮೂಡಿದರು ದಿನದಿಂದ ದಿನಕ್ಕೆ ತಾನೆ ಗಟ್ಟಿಯಾಗುತ ಮಗುವಿನ ಆಗಮನಕ್ಕೆ ಕಾಯುವಳು ಶಬರಿಯಂತೆ .

ಒಮ್ಮೊಮ್ಮೆ ಈ ತಾಯ್ತನದ ಪಯಣ ಸಾವಿನ ಬಾಗಿಲನ್ನು ಬಡಿದು ಬಂದಿರುತ್ತದೆ.  ಮಗುವಿನ ಮುದ್ದು ನಗುವಿಗೆ ಎಲ್ಲ ನೋವು ಮಾಯವಾಗಿರುತ್ತದೆ . ಮಗು ಮಡಿಲಿಗೆ ಬಂದಕ್ಷಣ ಬದುಕು ಮತ್ತೊಂದು ಮಗ್ಗುಲು ಬದಲಿಸಿರುತ್ತದೆ. ಹೊಸ ಜವಾಬ್ದಾರಿಯ ಅಣಿಮಾಡಿರುತ್ತದೆ . ತಾಯ್ತನದ  ಪಯಣ ಮುಗಿಯದ ಯಾನ. ಅಮ್ಮನಿಲ್ಲದ ಕ್ಷಣ  ಸಾಧ್ಯವಿಲ್ಲ. ತನ್ನ ಎಲ್ಲ ಸಮಯವು ಸದ್ದಿಲ್ಲದೆ ಕಂದನ ಪಾಲಾಗಿರುತ್ತದೆ. ಅದರ ಆಟ , ನೋಟ , ತೊದಲು ಮಾತುಗಳು , ಅಂಬೆಗಾಲಿನ ನಡಿಗೆ, ಪುಟ್ಟ ಹೆಜ್ಜೆಯ ನಿಟ್ಟು ಬರುವ ಕಂದನ ನೋಡಿದಾಗ ತಾಯಿಯ ಮನವು ಸಂಭ್ರಮದ ಬೀಡಾಗುತ್ತದೆ. ಅಮ್ಮನ ಹೃದಯದಲ್ಲೇ ಕಂದನು ಹೆಜ್ಜೆ ಹಾಕಿದಂತೆ ಭಾಸವಾಗುತ್ತದೆ . ಹೆಣ್ಣಿಗೆ ಅಮ್ಮನೆಂಬ ಪರಿಕಲ್ಪನೆಯೇ ಸೃಷ್ಟಿಯ ಅನನ್ಯ ಕೊಡುಗೆ .

ಕಂದನ ಆಗಮನ ಬದುಕಿಗೆ ವಸಂತಾಗಮನ. ಕಂದನ ಲಾಲನೆ- ಪಾಲನೆ ಅವಳಿಗೆ ಅದಮ್ಯ ಆಸಕ್ತಿ. ಆದರೆ ಮಗುವಿಗೆ ಇದರ ಅರಿವು ಇರುವದಿಲ್ಲ. ಅನು ದಿನವು ಅವಳಿಗೆ ಅಮ್ಮನ ದಿನ. ಮಗು ಬೆಳೆದಂತೆ ಜಾವಾಬ್ದಾರಿಗಳು ಬೆಳೆಯುತ್ತವೆ . ಮಗುವಿನ ಪಾಲನೆ ಇಂದಿನ ತಾಯಂದಿರಿಗೆ ಸಾವಾಲೇ ಸರಿ . ಇಗ ದೇಶಾದ್ಯಂತ ಲಾಕ್ಡೌನ್ ಇದೆ ಹೊಸ ಬಗೆಯ ಅಮ್ಮನ ದಿನ. ಎಲ್ಲಾ ತಾಯಂದಿರಿಗೆ ಬಂದಿದೆ . ಒಂದು ಕಡೆ ಮಕ್ಕಳೊಂದಿಗೆ ಸಮಯ ಕಳೆಯುವ ಅವಕಾಶ. ಜೊತೆಗೆ “ವರ್ಕ ಫ್ರಮ್ ಹೋಮ್ ” ಸಾಂಗತ್ಯ . ಇದು ಉದ್ಯೋಗಸ್ಥ ತಾಯಂದಿರ ಪಾಡು. ಗೃಹಿಣಿಯರಿಗೆ ತಮ್ಮ ಮಕ್ಕಳು ಮನೆಗೆ ಅಗಮಿಸಿರುವ (ಸಂಬಂಧಿಕರ) ಮಕ್ಕಳೊಂದಿಗೆ ಸಮಯ ಕಳೆಯುವದು, ಹೊಸ ರುಚಿಗಳ ಪರಿಚಯ ಮಾಡುವದು . ಮಕ್ಕಳೊಂದಿಗೆ ಸಾಮರಸ್ಯ ಕಾಪಾಡುವ ನೇರ ಹೊಣೆಗಾರಿಗೆ ತಾಯಿಯ ಮೇಲೇ ಇರುತ್ತದೆ. ಇಲ್ಲವಾದಲ್ಲಿ ಕುಟುಂಬದ ಸ್ವಾಸ್ತ್ಯ ಕದಡುತ್ತದೆ ! .

amma(ಸಾಂದರ್ಭಿಕ ಚಿತ್ರ)

ಜಗತ್ತಿನಾದ್ಯಂತ ಅಮ್ಮನ ದಿನದ ಸಡಗರ ಪಸರಿಸಿದೆ. ಕೊರೊನಾದ ಕರಿ ನರಳ  ಆತಂಕದಲ್ಲಿ .
ವಲಸೆ ಕಾರ್ಮಿಕರ ಬದುಕು ದೇಶದಲ್ಲಿ ಶೋಚನೀಯ ಸ್ಥಿತಿಗೆ ಬಂದಿದೆ . ಅಲ್ಲಿಯೂ ತಾಯಿ ಇರುವಳು. ಅವಳಿಗೂ ಮಕ್ಕಳು ಇರುವರು. ಆ ಕಂದಮ್ಮಗಳು ದಿನದ ರೊಟ್ಟಿಗೆ ಕ್ಷಣದ ಸೂರಿಗೆ ಪರಿತಪಿಸುವಾಗ “ಎದೆಯಲ್ಲಿ ಕೊಸಿಗೆ ಹಾಲಿಲ್ಲ. ಬುದ್ದಿ …ಹೊಟ್ಟೆ ಹಸಿದಿದೆ. ಉಂಡು ಮೂರುದಿನವಾಯಿತು ” ಎಂಬ ಕಾರ್ಮಿಕ ತಾಯಿ ಮಾತುಗಳು ಕೇಳಿದಾಗ ಪ್ರತಿ ಹೆಣ್ಣಿನ ಅಂತಕರಣ ಒದ್ದಾಡುತ್ತದೆ . ತಾಯಂದಿರಿಗೆಲ್ಲಾ ಗೊತ್ತಿಲ್ಲವೆ ಅವಳ ನೋವು. ಎಲ್ಲರು ಒಮ್ಮೆ ಆ ಸಂಕಟವನ್ನು ಬದುಕಿನಲ್ಲಿ ದಾಟಿ ಬಂದಿರುತ್ತಾರೆ ಅಲ್ಲವೆ?. ದೇಶಾದ್ಯಂತ ವರದಿಯಾಗುತ್ತಿರುವ ಕಾರ್ಮಿಕರ ಬದುಕಿನ ಚಿತ್ರಣ. ಆ ಮುಗ್ದ ಮಕ್ಕಳ ಅತಂತ್ರ ಭವಿಷ್ಯ , ಮಗುವನ್ನು ಎತ್ತಕೊಂಡು ಮೈಲಿಗಟ್ಟಲೆ ನಡೆದು ಸಾಗುತ್ತರುವ ಕಾರ್ಮಿಕ ತಾಯಿಯ ಬದುಕು ನೋಡಿದಾಗ ಕಂಗಳು ತುಂಬಿಬರುತ್ತವೆ.

“ಉಳ್ಳವರು ಶಿವಾಲಯ ಮಾಡುವರು ನಾ ಎನು ಮಾಡಲಿ ಬಡವನಯ್ಯ ” ಎಂಬ ಬಸವಣ್ಣನ ವಚನದ ಸಾಲು ಮನದಲ್ಲಿ ಮಿಂಚುತ್ತದೆ . ತಾಯ್ತನದ ಸಂಭ್ರಮ. ಪ್ರತಿ ಹೆಣ್ಣಿನ ನೈಸರ್ಗಿಕ ಹಕ್ಕು. ಆದರೆ  ಅದು ಎಲ್ಲ ತಾಯಂದಿರಿಗೆ , ಕಂದಮ್ಮಗಳಿಗೆ ಲಭ್ಯವಿರುವುದಿಲ್ಲ.

ಬಡತನದ ಬದುಕು. ಬಿಸಿಲಿನಲ್ಲಿ ಸಾಗುತ್ತಿರುವಾಗ ಮಗುವಿನ ಸಾಂಗತ್ಯಕ್ಕೆ ಅವಳಿಗೆ ಸಮಯವೇಲ್ಲಿ ಹೊಂದಿಸುವಳು ?. ಇಂತಹ ಸ್ಥತಿಯಲ್ಲಿ ಇದ್ದವರನ್ನು ಕೊರೊನ  ಕಂಗೆಡಿಸಿದೆ . ಹಸಿವು ಅನಾಥ ಪ್ರಜ್ಞೆಗೆ ಅವರನ್ನು ದೊಡಿದೆ . ಸಮಾಜದ ಎಲ್ಲ ವಲಯದ ನಾಗರಿಕರಿಗೆ ಒಂದು ರೀತಿಯ ವಿಭಿನ್ನ ಅನುಭವಗಳು. ಅವರದ್ದೆ ಆದ ಬದುಕನ್ನು ಕೊರೊನ ದಯ ಪಾಲಿಸಿದೆ . ಕಾರ್ಮಿಕರ ಬದುಕಿಗೆ ಕಂಟಕವಾಗಿದೆ. ಇತ್ತ ಕೆಲಸ ಇಲ್ಲ . ಅತ್ತ ಊರಿಗೆ ಹೋಗಲು ದಾರಿ ಇಲ್ಲ. ಮುದ್ದು ಮಕ್ಕಳ , ತಾಯಿಯರ ಪಾಡು ಹೇಳತೀರದಾಗಿದೆ .

amma(ಸಾಂದರ್ಭಿಕ ಚಿತ್ರ)

ಇದರೊಂದಿಗೆ ವಿಶಾಖಪಟ್ಟಣಂ ನ ವಿಷ ಅನಿಲ ಸೋರಿಕೆ. ಗಾಯದ ಮೇಲೆ ಬರೆ ಎಳೆದಂತೆ ಗೋಚರವಾಗುತ್ತಿದೆ. ಆ ಪುಟ್ಟಮಕ್ಕಳ ಒದ್ದಾಟ, ತಾಯಂದಿರ ನರಳಾಟ. ವರದಿಯಾಗುತ್ತಿರುವ ಸಾವು  ನೋವಿನ ಸುದ್ದಿ ಇನ್ನಷ್ಟು ಆತಂಕವನ್ನು ಹುಟ್ಟಿಸಿದೆ.

ಇವುಗಳೆಲ್ಲದರ ನಡುವೆ ಅಮ್ಮಂದಿರ ದಿನದ ಆಗಮನವಾಗಿದೆ. ಪ್ರತಿ ವರ್ಷದಂತೆ  ನೋವುಗಳು ಸಾವಿರ ಇದ್ದರೂ ಮನ ಮನಗಳಲ್ಲಿ ಪ್ರೀತಿ ಎಂದೂ ಬತ್ತದಿರಲಿ. ಹಸಿವು , ಬಡತನ ಕಲಿಸುವ ಪಾಠ ಯಾವ ವಿಶ್ವವಿದ್ಯಾಲಯವು ಕಲಿಸಲಾರದು.  ಉಮ್ಮಳಿಸಿ ಬರುವ ದುಃಖವನ್ನು ತಡೆದು ಬರುವ ದಿನಗಳಲ್ಲಿ ನೆಮ್ಮದಿಯ ಬಯಸೋಣ . ಭರವಸೆಯ ಕಂಗಳಿಂದ ಕಾಯೋಣ. ಹೆಣ್ಣಿಗೆ ಸಾವಾಲು , ಸಂಕಷ್ಟ, ಸಂದಿಗ್ಧ ಸ್ಥಿತಿಯೇನು ಹೊಸದಲ್ಲ. ಧೈರ್ಯಕ್ಕೆ ಮತ್ತು ಹೆಸರು ಹೆಣ್ಣು . ನಂಬಿಕೆಗೆ ಮತ್ತೊಂದು ಹೆಸರು “ಅಮ್ಮ”

ಸಂಕಟದ ಕಾರ್ಮೋಡ ಕರಗಲಿ. ಸ್ವಚ್ಛಂದ ಬದುಕು ಸಿಗಲಿ ಎಂಬ ಹಾರೈಕೆಗಳೊಂದಿಗೆ ವಿಶ್ವ ಅಮ್ಮಂದಿರ ದಿನಕ್ಕೆ ಶುಭವಾಗಲಿ‌.

( ಸೂಚನೆ :  ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್  aaakrutikannada@gmail.com ಮಾಡಬಹುದು.ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)

ರೇಶ್ಮಾಗುಳೇದಗುಡ್ಡಾಕರ್ ಅವರ ಹಿಂದಿನ ಕವನಗಳು : 

1 1 vote
Article Rating

Leave a Reply

1 Comment
Inline Feedbacks
View all comments
ಅಮೃತ ಎಂ ಡಿ

ಅಕ್ಕ ಸೂಪರ್ ನಿಮ್ಮ ಬರಹ

Home
News
Search
All Articles
Videos
About
1
0
Would love your thoughts, please comment.x
()
x
%d
Aakruti Kannada

FREE
VIEW