ಅನಿತಾ ಪ್ರಸನ್ನಕುಮಾರ್ ಅವರು ಕಿರು ಚಲನ ಚಿತ್ರಗಳಾದ “ಜೇಮ್ಸ್ ೭” ಹಾಗೂ ” ಕೃಷ್ಣ” ಚಿತ್ರಗಳಿಗೆ ಹಾಡಿನ ಸಾಹಿತ್ಯ ಬರೆದಿದ್ದು, ಅನಿತಾ.ಪಿ.ಕೆ ಅವರ ಕಾವ್ಯನಾಮವಾಗಿದೆ. ಅವರ ಸಾಹಿತ್ಯ ಸೇವೆಯ ಕುರಿತು ಲೇಖಕ, ಕವಿ ನಾರಾಯಣಸ್ವಾಮಿ.ವಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಹಿಂದಿನ ಕಾಲದ ಕನ್ನಡ ಸಾಹಿತ್ಯ ಲೋಕದ ಕಡೆಗೆ ಒಮ್ಮೆ ತಿರುಗಿ ನೋಡಿದಾಗ, ಬೆರಳೆಣಿಕೆಯಷ್ಟು ಮಹಿಳಾ ಲೇಖಕಿಯರು ಮಾತ್ರ ಕನ್ನಡ ಸಾಹಿತ್ಯದ ಬರವಣಿಗೆಯಲ್ಲಿ ಗುರುತಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಮಹಿಳೆಯರು ಕೂಡ ಶಿಕ್ಷಣದಲ್ಲಿ ಹಲವಾರು ಪದವಿಗಳನ್ನು ಪಡೆಯುತ್ತಾ, ಕನ್ನಡದ ಬರವಣಿಗೆಯನ್ನು ಪ್ರವೃತ್ತಿಯಾಗಿ ಬೆಳೆಸಿಕೊಂಡು ಪ್ರಸಿದ್ಧಿಯನ್ನು ಪಡೆದರು. ನವ್ಯ ಕನ್ನಡ ಸಾಹಿತ್ಯಲೋಕದಲ್ಲಿ ಮಹಿಳಾ ಲೇಖಕಿಯರ ಪ್ರಮಾಣ ಹೆಚ್ಚಾಯಿತು. ಇಂದಿನ ಅಧುನಿಕ ಯುಗದಲ್ಲಿ ತಾಂತ್ರಿಕತೆ ಹೆಚ್ಚಾದಂತೆ ತಮ್ಮ ಪ್ರತಿಭೆಯನ್ನು ಪ್ರದಶಿ೯ಸಲು ಮುಖಪುಟವೆಂಬ ವೇದಿಕೆಯೂ ಕೂಡ ವರದಾನವಾಗಿ ಸಿಕ್ಕಿತು. ಇಂದು ಕನ್ನಡ ಸಾಹಿತ್ಯಲೋಕದಲ್ಲಿ ಚರಿತ್ರೆಯಲ್ಲಿ ಹಿಂದೆಂದೂ ಕಾಣದಂತಹ ರೀತಿಯಲ್ಲಿ ಕನ್ನಡದ ಬರವಣಿಗೆಯಲ್ಲಿ ತೊಡಗಿಸಿಕೊಂಡು ಕವಿತೆ,ಕವನ,ಲೇಖನ ಕಾದಂಬರಿಗಳನ್ನು ಬರೆಯುತ್ತಿದ್ದಾರೆ. ಇಂತಹ ಲೇಖಕಿಯರಲ್ಲಿ ಅನಿತಾ.ಪಿ.ಕೆ ಕಾವ್ಯನಾಮದಿಂದ ಕವಿತೆ, ಭಾವಗೀತೆ, ಲೇಖನಗಳನ್ನು ಬರೆಯುತ್ತಾ ಲೇಖಕಿಯಾಗಿ ಗುರುತಿಸಿಕೊಳ್ಳುವ ಲೇಖಕಿಯರಲ್ಲಿ ಶ್ರೀಮತಿ ಅನಿತಾ ಪ್ರಸನ್ನ ಕುಮಾರ್ ಕೂಡ ಒಬ್ಬರಾಗಿದ್ದಾರೆ.

ಶ್ರೀಮತಿ ಅನಿತಾ ಪ್ರಸನ್ನಕುಮಾರ್ ರವರು ದಿನಾಂಕ ೨೧/೫/೧೯೭೪ ರಲ್ಲಿ ಮೈಸೂರು ಜಿಲ್ಲೆಯ ಪಾಂಡವಪುರದಲ್ಲಿ ಶ್ರೀ ಎನ್ ಸತ್ಯನಾರಾಯಣ ಇ.ಎಸ್.ಹೇಮಲತಾರವರ ಮಗಳಾಗಿ ಜನಿಸಿದರು. ಇವರ ತಂದೆ ಸಕಾ೯ರಿ ನೌಕರರಾಗಿದ್ದರು. ಇವರ ಪ್ರಾಥಮಿಕ ಶಿಕ್ಷಣ ಸಿದ್ದರಾಮನ ಹುಂಡಿ ಗರ‍್ನಮೆಂಟ್ ಸ್ಕೂಲ್ ನಲ್ಲಿ ನಡೆಯಿತು ನಂತರ ಮಾದ್ಯಮಿಕ ಶಿಕ್ಷಣ ಕೃಷ್ಣರಾಜ ಸಾಗರದ ಪೇಪರ್ ಟೌನ್ ಸ್ಕೂಲ್ ನಲ್ಲಿ ಮತ್ತು ಹೈಸ್ಕೂಲು ಶಿಕ್ಷಣವನ್ನು ಕೃಷ್ಣರಾಜಪೇಟೆಯ ನವಜೀವನ ಹೈಸ್ಕೂಲ್ ಮುಗಿಸಿ, ಪದವಿಪೂರ್ವ ಶಿಕ್ಷಣ ಮೈಸೂರಿನ ಗರ‍್ನಮೆಂಟ್ ಕಾಲೇಜ್ ಪಡೆದು, ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿಯನ್ನು ಪಡೆದರು.
ನಂತರದಲ್ಲಿ ಬೆಂಗಳೂರಿನ ಪ್ರಸನ್ನ ಕುಮಾರ್ ರವರನ್ನು ವಿವಾಹವಾಗಿ ಸಂಸಾರಿಕ ಜೀವನದತ್ತ ಪಯಣ ಆರಂಭಿಸಿದ ಇವರು ಗೃಹಿಣಿಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಶಾಲಾ ದಿನಗಳಲ್ಲಿಯೇ ಸಾಹಿತ್ಯದ ಗೀಳನ್ನು ಬೆಳೆಸಿಕೊಂಡಿದ್ದ ಶ್ರೀಮತಿ ಅನಿತಾ ಪ್ರಸನ್ನಕುಮಾರ್ ರವರು ಹವ್ಯಾಸಿ ಬರಹಗಾತಿ೯ಯಾಗಿ, ದೇವರ ನಾಮ, ಭಜನೆ, ಭಾವಗೀತೆಗಳನ್ನು ಹಾಡುವ ಹಾಡುಗಾತಿ೯ಯಾಗಿ ಕಥೆ, ಅಂಕಣ ಬರಹ, ಲೇಖನಗಳನ್ನು ಬರೆಯುವುದು ವಿವಿಧ ಪ್ರಾಕಾರಗಳಲ್ಲಿ ಕವನಗಳ ರಚನೆ. ಹಾಡುಗಳಿಗೆ ರಾಗ ಸಂಯೋಜನೆ. ಭಕ್ತಿಗೀತೆ ಸಾಹಿತ್ಯ ರಚನೆ, ಚಲನಚಿತ್ರಗಳಿಗೆ ಹಾಡಿನ ಸಾಹಿತ್ಯ ರಚನೆ. ಗಾಯನ ಮುಂತಾದ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಶ್ರೀಮತಿ ಅನಿತ ಪ್ರಸನ್ನಕುಮಾರ್ ರವರು ೨೦೨೧ ರಲ್ಲಿ ಭಾವ ಪುಷ್ಕರ ಎಂಬ ಚೊಚ್ಚಲ ಕವನಸಂಕಲನ ಹೊರತಂದು ಲೋಕಾರ್ಪಣೆ ಮಾಡಿ ಕನ್ನಡ ಸಾಹಿತ್ಯ ಲೋಕದಲ್ಲಿ ಕವಯಿತ್ರಿಯಾಗಿ ಗುರುತಿಸಿಕೊಂಡಿದ್ದಾರೆ.
೨೦೨೩ ಜುಲೈನಲ್ಲಿ ನನ್ನ ಎರಡನೇ ಕೃತಿ ” ಅಂತಯ೯ ಲಹರಿ ” ಎಂಬ ಅಂಕಣ ಲೇಖನ ಮಾಲಿಕೆಗಳ ಹೊತ್ತಿಗೆಯನ್ನು ಲೋಕರ‍್ಪಣೆ ಮಾಡಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಯಶಸ್ಸನ್ನು ಕಂಡಿದ್ದಾರೆ.

ರಾಜು ಅನಂತ ಸ್ವಾಮಿ ರವರ ಹತ್ತಿರ ಸುಗಮ ಸಂಗೀತ ಕಲಿಕೆ ಸಂಗೀತಾಭ್ಯಾಸ ಮಾಡಿರುವ ಇವರು.”ಕರ ಮುಗಿವೆ ಚಾಮುಂಡಿ ತಾಯೆ” ಹಾಗೂ “ಬಾಲಕೃಷ್ಣ” ಇವರ ಸಾಹಿತ್ಯದಲ್ಲಿ ಬರೆದ ಎರಡು ಭಕ್ತಿಗೀತೆಗಳನ್ನು ಸಿಡಿಗಳ ರೂಪದಲ್ಲಿ ಹೊರತಂದಿದ್ದಾರೆ… ಕಿರು ಚಲನ ಚಿತ್ರಗಳಾದ “ಜೇಮ್ಸ್ ೭” ಹಾಗೂ ” ಕೃಷ್ಣ” ಚಿತ್ರಗಳಿಗೆ ಹಾಡಿನ ಸಾಹಿತ್ಯ ಬರೆದಿದ್ದಾರೆ. ಮುಖಪುಟ ಬಳಗಗಳ ಹತ್ತಾರು ಕವನ ಸಂಕಲನಗಳ ಕೃತಿಗಳಲ್ಲಿ ಅಂದರೆ ಸಂಪಾದಕತ್ವದಲ್ಲಿ ಹೊರಬಂದ ೧೧ ಕೃತಿಗಳಲ್ಲಿ ಇವರ ಕವಿತೆಗಳು ಪ್ರಕಟವಾಗಿವೆ…
ನಿಮ್ಮ ಸಾಹಿತ್ಯದ ಬರವಣಿಗೆಗೆ ಪ್ರೇರಣೆ ಯಾರು? ಎಂಬ ಪ್ರಶ್ನೆಗೆ ಕವಯಿತ್ರಿ ಶ್ರೀಮತಿ ಅನಿತಾ ಪ್ರಸನ್ನ ಕುಮಾರ್ ಉತ್ತರಿಸಿದ್ದು ಹೀಗೆ.. “ನಮ್ಮ ತಂದೆಯೇ ನನ್ನ ಸಾಹಿತ್ಯ ಇತರೇ ಚಟುವಟಿಕೆಗಳಿಗೆ ಮೊದಲ ಪ್ರೇರಣೆ” ನಾನು ತೀರ ಚಿಕ್ಕವಳಿದ್ದಾಗ ತಂದೆಯ ಜೊತೆಯಲ್ಲಿ ವಾಯು ವಿಹಾರಕ್ಕೆ ಹಾಗೂ ಸಮಯ ಕಳೆಯಲು ಹೋದಾಗ ಚಿಕ್ಕ ಚಿಕ್ಕ ಪದಗಳ ಸೇರಿಸಿ ಪದ್ಯ ಹೇಳಿ ಕೊಡುತ್ತಿದ್ದರು. ಆಗಲೇ ನನಗೆ ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿದ್ದು.. ನಾನು ಎರಡನೇ ತರಗತಿಯಲ್ಲಿರುವಾಗಲೇ ಪುಸ್ತಕಗಳ ಓದುವ ಗೀಳು ಇತ್ತು..ಓದಿದ್ದನ್ನು ನನ್ನ ಪದಗಳಲ್ಲಿ ಸೇರಿಸಿ ಬರೆಯುವುದು ಅಭ್ಯಾಸ ಆಯ್ತು.. ಪದ ಪದ ಸೇರಿಸಿ ಪದ್ಯ ಬರೆದು ಮೂರನೇ ತರಗತಿಯಲ್ಲಿಯೇ ಬಹುಮಾನ ಗಳಿಸಿದೆ ನಾನು ವೇದಿಕೆ ಹತ್ತಿದ್ದು ಮೂರನೇಯ ತರಗತಿಯಲ್ಲಿಯೆ. ನಾಲ್ಕನೇ ತರಗತಿಯಲ್ಲಿರುವಾಗಲೇ ಭಾಷಣ ಮಾಡುವ ಕಲೆ ರೂಢಿಸಿಕೊಂಡೆ… ಮೈಸೂರಿನ ಸಿದ್ದರಾಮನ ಹುಂಡಿಯಲ್ಲಿ ನಾಲ್ಕನೇ ತರಗತಿಯಲ್ಲಿದ್ದಾಗ ಮೊದಲಿಗೆ ಸ್ವಾತಂತ್ರ‍್ಯ ದಿನದಂದು ಭಾಷಣ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದೆ. ಮತ್ತು ಈಗಿನ ಮುಖ್ಯಮಂತ್ರಿಯಾದಂತಹ ಶ್ರೀ ಸಿದ್ದರಾಮಯ್ಯನವರು ಆ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಗ ಅವರು ಆ ಕ್ಷೇತ್ರದ ಎಂ ಎಲ್ ಎ ಆಗಿದ್ದರು. ಅವರು ಬಹಳ ಮೆಚ್ಚಿ ಈ ಹುಡುಗಿಯ ಭಾಷಣದ ಮುಂದೆ ನಮ್ಮ ಮಾತು ಏನೂ ಉಳಿದಿಲ್ಲ ಎಂದು ಶ್ಲಾಘಿಸಿ, ಆ ಕಾಲಕ್ಕೆ ಅವರ ಸ್ವಂತ ಪೆನ್ ಬಹುಮಾನವಾಗಿ ಕೊಟ್ಟಿದ್ದರು..ಇದು ಮರೆಯಲಾಗದ ಕ್ಷಣ ನನ್ನ ಜೀವನಯಾನದಲ್ಲಿ ಮತ್ತು ನವಜೀವನ ಹೈಸ್ಜೂಲ್ ನಲ್ಲಿ ೯ನೇ ತರಗತಿಯಲ್ಲಿ ಓದುತ್ತಿದ್ದಾಗ ಟಿ ಎ ಪಿ ಸಿ ಎಂ ಎಸ್ ನಿಂದ ರಾಜ್ಯಮಟ್ಟದ ಸ್ವಧೆ೯ಯಲ್ಲಿ ಭಾಗವಹಿಸಿ ಕೆ ಆರ್ ಪೇಟೆ ತಾಲ್ಲೂಕಿಗೆ ಮೊದಲ ಬಹುಮಾನ ತಂದುಕೊಟ್ಟು ಇಡೀ ತಾಲ್ಲೂಕಿಗೆ ಮತ್ತು ನಮ್ಮ ಶಾಲೆಗೆ ಕಿತಿ೯ ಬಂದಿತ್ತು.. ಪದವಿಯಲ್ಲಿ ಓದುತ್ತಿದ್ದಾಗ ಕಾಲೇಜು ಮ್ಯಾಗಜೀನ್ ಗಳಲ್ಲಿ ನನ್ನ ಅನೇಕ ಲೇಖನಗಳು ಪ್ರಕಟಗೊಂಡಿತು …ಓದಿದ ವಿಷಯ ವಿಜ್ಞಾನ ವಿಭಾಗದದ್ದಾದರೂ. .ಕನ್ನಡದ ಭಾಷೆ ಮತ್ತು ಕನ್ನಡದ ಸಾಹಿತ್ಯದ ಸೆಳೆತ ನನ್ನನ್ನು ಆವರಿಸಿಬಿಟ್ಟಿತ್ತು ಎಂದು ಹಳೆಯ ದಿನಗಳನ್ನು ಮೆಲುಕು ಹಾಕುತ್ತಾರೆ.

ರಾಜ್ಯಾದ್ಯಂತಾ ಸುಮಾರು ೬೦ ರಿಂದ ೭೦ ಕವಿಗೋಷ್ಟಿ ಗಳಲ್ಲಿ ಭಾಗವಹಿಸಿರುವ. ಶ್ರೀಮತಿ ಅನಿತಾ ಪ್ರಸನ್ನ ಕುಮಾರ್ ರವರು ಹಲವಾರು ಸನ್ಮಾನ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಹತ್ತಾರು ಫೇಸ್ ಬುಕ್ ಸಾಹಿತ್ಯ ಗ್ರೂಪ್ ಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ, ಕೆಲವು ಸಾಹಿತ್ಯ ಬಳಗಗಳಲ್ಲಿ ನಿವಾ೯ಹಕಿಯಾಗಿಯೂ ಸಾಹಿತ್ಯದ ಸೇವೆ ಮಾಡುತ್ತಿದ್ದಾರೆ.. ಹಲವು ಬಳಗದಲ್ಲಿ ಅಂಕಣಗಾತಿ೯ಯಾಗಿ ಬರೆಯುತ್ತಿದ್ದಾರೆ. ರಾಜ್ಯದ ಹಲವಾರು ಕನ್ನಡ ದಿನಪತ್ರಿಕೆಗಳಲ್ಲಿ ಇವರ ಕವಿತೆಗಳು ಲೇಖನಗಳು ಪ್ರಕಟಗೊಂಡಿವೆ…
ರಾಜ್ಯಮಟ್ಟದ ಹಲವಾರು ಸಂಘಸಂಸ್ಥೆಗಳು ಶ್ರೀಮತಿ ಅನಿತಾ ಪ್ರಸನ್ನ ಕುಮಾರ್ ರವರ ಪ್ರತಿಭೆ ಮತ್ತು ಸೇವೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿ ಸನ್ಮಾನಿಸಿವೆ. ೨೦೨೨ ರಲ್ಲಿ India star Republic award for writing Kannada poems ಲಭಿಸಿದೆ ಪ್ರಶಸ್ತಿ ಲಭಿಸಿದೆ. ೨೦೨೩ ಚೇತನಾ ಫೌಂಡೇಷನ್ ರವರಿಂದ ” ಕರುನಾಡ ಚೇತನ ಪ್ರಶಸ್ತಿ ” ದೊರೆತಿದೆ. ೨೦೨೩ ಜುಲೈ ನಿಂದ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಹಿರಿಯ ಸಾಹಿತ್ಯ ಸಂಸ್ಥೆಯಾದ ಮಂದಗೆರೆ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ನಿವಾ೯ಹಕಿ ಹಾಗೂ ಕಾಯ೯ದಶಿ೯ಯಾಗಿ ಸಾಹಿತ್ಯದ ಕಾರ್ಯಕ್ರಮಗಳನ್ನು ಎಪ೯ಡಿಸುತ್ತಾ ಕನ್ನಡ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ.
ಇವರ ಸಾಹಿತ್ಯ ಸೇವೆ ಈಗೇ ಸಾಗುತಿರಲಿ ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಪ್ರವೃತ್ತಿಯಾದ ಕನ್ನಡದ ಬರವಣಿಗೆಯ ಮೂಲಕ ಕನ್ನಡ ಸಾಹಿತ್ಯಲೋಕಕ್ಕೆ ಇನ್ನಷ್ಟು ಸೇವೆಯನ್ನು ಸಲ್ಲಿಸಲಿ, ಮುಂಬರುವ ಸಾಹಿತ್ಯದ ಬರಹವು ನೊಂದ ಮಹಿಳೆಯರ ಬದುಕಿನ ತಲ್ಲಣಗಳಾಗಲಿ. ಇವರು ಲೇಖಕಿಯಾಗಿ ಸಾಹಿತ್ಯ ಸೇವೆಯ ಪರಿಚಾರಕಿಯಾಗಿ ಕರುನಾಡಿನಲ್ಲಿ ಗುರುತಿಸಿಕೊಂಡು ಇನ್ನಷ್ಟು ಗೌರವ ಪುರಸ್ಕಾರಗಳು ಇವರಿಗೆ ಲಭಿಸಲಿ ಎಂದು ಆಶಿಸುತ್ತಾ ಪತ್ರಿಕೆಯ ಪರವಾಗಿ ಹಾಗೂ ವೈಯಕ್ತಿಕವಾಗಿ ಹಾರೈಸುತ್ತೇನೆ.
ಹಿಂದಿನ ಸಂಚಿಕೆಗಳು :
- ಕನ್ನಡ ಸಾಹಿತ್ಯ ಲೋಕದಲ್ಲಿ ಅರಳುತ್ತಿರುವ ಸುಮಾ
- ಮಾಲೂರಿನ ಉದಯೋನ್ಮುಖ ಲೇಖಕಿ ಸುಮಂಗಳ ಮೂರ್ತಿ
- ಭಾವನೆಗಳ ಮಹಾಪೂರವೇ ಮನೋವಾರಧಿ
- ಕನ್ನಡದ ಸಾಹಿತ್ಯಲೋಕದ ಭಾವಧಾರೆ ವಿದ್ಯಾ ಅರಮನೆ
- ವೃತ್ತಿಯಲ್ಲಿ ಶಿಕ್ಷಕಿ, ಲೇಖಕಿ, ಸಾಮಾಜಿಕ ಹೋರಾಟಗಾತಿ೯
- ಬಹುಮುಖ ಪ್ರತಿಭೆ ಉದಯೋನ್ಮುಖ ಲೇಖಕಿ ಅಭಿಜ್ಞಾ ಪಿ ಎಮ್ ಗೌಡ
- ಅನುವಾದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕವಯಿತ್ರಿ
- ಕನ್ನಡದ ಅಕ್ಷರ ಲೋಕದಲ್ಲಿ ಬೆಳಗುತ್ತಿರುವ ನಂದಾದೀಪ
- ಮನದ ಭಾವನೆಯನ್ನೇ ಭಾವಗೀತೆಯಾಗಿಸುವ ಕವಯಿತ್ರಿ
- ಚಿತ್ರದೊಳಗೆ ಪದವನರಳಿಸುವ ಕಲೆಗಾರ : ಜಬೀವುಲ್ಲಾ ಎಮ್ ಅಸದ್
- ಮಾಲೂರಿನ ಯುವ ಸಾಹಿತಿ ನಾಗೊಂಡಹಳ್ಳಿ ಸುನಿಲ್
- ಯುವ ಬರಹಗಾರ್ತಿ – ನಳಿನಿ ಟಿ. ಭೀಮಪ್ಪ
- ನಾರಾಯಣಸ್ವಾಮಿ.ವಿ – ವಕೀಲರು ಮತ್ತು ಲೇಖಕರು, ಮಾಸ್ತಿ ಕೋಲಾರ ಜಿಲ್ಲೆ.
