ಓ ಅನ್ನದಾತನೇ ನೀನ್ಯಾಕೆ ಹೀಗೆ ?

ಬಸವಳಿದ ದೇಹದಲು ಬೆವರೊರೆಸಿ ದುಡಿಯುತಿರೆ…ಕವಿ ಅಪ್ಪಯ್ಯಯು ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಪಟ್ಟಣದ ವ್ಯಾಮೋಹ
ನಿನಗ್ಯಾಕೆ ಇಲ್ಲ

ಕಷ್ಟದಲೆ ಕಾಯಕವ
ಮಾಡುತಿಹೆಯಲ್ಲ

ಎತ್ತುಗಳ ಜತೆಯಲ್ಲಿ
ಹಾಡುತ್ತ ಹೊಲದಲ್ಲಿ
ನೇಗಿಲನು ಹಿಡಿದುನೀ
ಉಳಲು ತೊಡಗಿದರೆ
ಹೊತ್ತುಹೋದರು ನಿನಗೆ
ಮನೆಯ ನೆನಪಿಲ್ಲ

ಬಸವಳಿದ ದೇಹದಲು
ಬೆವರೊರೆಸಿ ದುಡಿಯುತಿರೆ
ಒಂದಿನಿತು ಆರಾಮ
ದೇಹಕೇಕಿಲ್ಕ

ಮಡದಿಮಕ್ಕಳ ಮರೆತು
ಗದ್ದೆಹುಣಿಯಲಿ ಕುಳಿತು
ದಿನವೆಲ್ಲ ದಡಿಯುವುದು
ಯಾರಿಗಾಗಿ

ಹೊಟ್ಟೆ ಬಟ್ಟೆಯ ಕಟ್ಟಿ
ಲೋಕಕನ್ನವಕೊಡುವೆ
ನಿನ್ನ ಅನ್ನವ ಮರೆತು
ತ್ಯಾಗಿಯಾಗುವೆಯಾ

ಲೋಕದಾ ಜನರ ಹೊಟ್ಟೆ
ತುಂಬುವ ನೀನು

ನಿನ್ನಮನೆ ನಿನ್ನವರ
ಮರೆತೆಯೇನು

ಬೆನ್ನಿಗಂಟಿದೆಹೊಟ್ಟೆ
ಕೃಷವಾಗಿಹುದು ಕಾಯ

ನಿನ್ನ ಋಣ ತೀರಿಪುದು
ಯಾವ ಜನ್ಮದಲಿ

ನಿನ್ನ ಬಲ್ಲವರಿಲ್ಲ
ನೀನಿಲ್ಲದೆ ಜಗವಿಲ್ಲ
ನೀನಿದ್ದರೆ ಜಗದ ಹೊಟ್ಟೆ ತುಂಬುವುದು


  • ಅಪ್ಪಯ್ಯಯು – ಕಾಸರಗೋಡು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading